ಟಿಪ್ಪರ್, ಹೊಯ್ಗೆ ಸೋಸುವ ಯಂತ್ರ ವಶ; ಪರಾರಿಯಾದ ಲಾರಿ ಚಾಲಕ ಸಹಿತ 7 ಮಂದಿ ವಿರುದ್ಧ ಕೇಸು

ಕುಂಬಳೆ: ಇಚ್ಲಂಗೋಡು ಹೊಳೆಯಿಂದ  ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ  ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು,  ಈ ವೇಳೆ ಲಾರಿಯನ್ನು ಉಪೇಕ್ಷಿಸಿ  ಚಾಲಕ ಸಹಿತ ಹಲವರು ಪರಾರಿಯಾಗಿದ್ದಾರೆ.  ಈ ಹಿನ್ನೆಲೆಯಲ್ಲಿ ಪೊಲೀಸರು  ಲಾರಿ ಚಾಲಕ,  ಹೊಯ್ಗೆ ಸಂಗ್ರಹಿಸಿಟ್ಟಿದ್ದ ಸ್ಥಳದ ಮಾಲಕ ಹಾಗೂ ಹೊಯ್ಗೆ ಸಂಗ್ರಹಗಾರರ ಸಹಿತ 7 ಮಂದಿ ವಿರುದ್ಧ    ಕೇಸು ದಾಖಲಿಸಿಕೊಂಡಿ ದ್ದಾರೆ. ಲಾರಿ ಹಾಗೂ ಹೊಯ್ಗೆ ಸೋಸುವ ಯಂತ್ರವನ್ನು ವಶಕ್ಕೆ ತೆಗೆಯಲಾಗಿದೆ. ಆರೋಪಿಗಳ ವಿರುದ್ಧ  ಕಳವು ಪ್ರಕರಣ ದಾಖಲಿಸಿಕೊಂಡಿರು ವುದಾಗಿ ಎಸ್‌ಐ ಅನಂತಕೃಷ್ಣನ್ ಆರ್. ಮೆನೋನ್ ತಿಳಿಸಿದ್ದಾರೆ. …

ಮುಂದುವರಿದ ಕಾಳಧನ ಬೇಟೆ ಕುಂಬಳೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 61.5 ಲಕ್ಷ ರೂ.ವಶ: ಓರ್ವ ಸೆರೆ

ಕಾಸರಗೋಡು: ಕಾಸರ ಗೋಡಿಗೆ  ಕಾಳಧನ ಸಾಗಾಟ ತೀವ್ರಗೊಂಡಿದೆ. ನಿನ್ನೆ ಎರಡು ಬಾರಿಯಾಗಿ ಕಾಸರಗೋಡು ಹಾಗೂ ಕುಂಬಳೆಯಿಂದ ಒಟ್ಟು 72.9 ಲಕ್ಷ ರೂಪಾಯಿಯನ್ನು  ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಕಾರಿನಲ್ಲಿ ಸಾಗಿಸುತ್ತಿದ್ದ  61.5 ಲಕ್ಷ ರೂಪಾಯಿಗಳನ್ನು ಕುಂ ಬಳೆಯಿಂದ ವಶಪಡಿಸಲಾಗಿದೆ.   ಈ ಸಂಬಂಧ  ಓರ್ವನನ್ನು ಬಂಧಿಸ ಲಾಗಿದೆ. ಕಾಸರಗೋಡು ತಳಂ ಗರೆಯ ಮಡನ್ನೂರ್ ಹೌಸ್‌ನ ಶಬೀರ್ ಎಂಬಾತ ಬಂಧಿತ ವ್ಯಕ್ತಿ ಯೆಂದು ಪೊಲೀಸರು ತಿಳಿಸಿದ್ದಾರೆ.  ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸ್ಕ್ವಾಡ್  ಹಾಗೂ ಕುಂಬಳೆ ಪೊಲೀಸರು ಆರಿಕ್ಕಾಡಿ …

ಹಿರಿಯ ಹೋಟೆಲ್ ಮಾಲಕರಾಗಿದ್ದ ಸದಾಶಿವ ಉಡುಪ ನಿಧನ

ಕಾಸರಗೋಡು: ನಗರದ ಏರ್‌ಲೈನ್ಸ್ ವಸತಿಗೃಹದಲ್ಲಿ ನಾಲ್ಕು ದಶಕಗಳ ಕಾಲ ಉಡುಪಿ ಹೋಟೆಲ್ ನಡೆಸುತ್ತಿದ್ದ ಎ. ಸದಾಶಿವ ಉಡುಪ (೯೪) ನಿಧನ ಹೊಂದಿದರು. ಕಟೀಲು ನಿವಾಸಿಯಾದ ಇವರು ಮಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ವಾಸವಾಗಿದ್ದರು. ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಜಿಲ್ಲಾ ಸಮಿತಿಯ ಸ್ಥಾಪಕ ಅಧ್ಯಕ್ಷನಾಗಿದ್ದರು. ಸಂಘಟನೆಯ ರಾಜ್ಯ ಎಕ್ಸಿಕ್ಯೂಟಿವ್ ಸಮಿತಿ ಸದಸ್ಯ, ಜಿಲ್ಲಾ ಗೌರವಾಧ್ಯಕ್ಷ, ಕಾಸರಗೋಡು ವೆಂಕಟ್ರಮಣ ಕ್ಷೇತ್ರ ಸಮೀಪದ ಸ್ವಾಮೀ ರಾಘವೇಂದ್ರ ಮಠ ಸ್ಥಾಪಕ ಅಧ್ಯಕ್ಷ, ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ಇದರ ಸ್ಥಾಪಕ ಸದಸ್ಯ, …

ಪಶುರೋಗತಜ್ಞ ಪದ್ಮನಾಭ ಪೈ ನಿಧನ

ಪೆರ್ಲ:  ಅಮೆಕ್ಕಳ ನಿವಾಸಿ  ಪತ್ತು ಪೈ ಎಂದೇ ಕರೆಯಲ್ಪಡುತ್ತಿದ್ದ ಬಳ್ಳಂಬೆಟ್ಟು ಪದ್ಮನಾಭ ಪೈ (79) ನಿನ್ನೆ ಸ್ವ-ಗೃಹದಲ್ಲಿ ನಿಧನಹೊಂದಿ ದರು. ಅಲ್ಪ ಕಾಲದಿಂದ ಅನಾರೋ ಗ್ಯದಿಂದ ಬಳಲುತ್ತಿದ್ದರು. ಪಶುರೋಗ ತಜ್ಞರಾಗಿದ್ದ ಇವರು ಜಾನುವಾರುಗಳ ವಿವಿಧ ಕಾಯಿಲೆಗಳಿಗೆ ಔಷಧ ನೀಡು ತ್ತಿದ್ದರು. ಪೆರ್ಲ ಬಳಿಯ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ(ಉಳ್ಳಾಲ್ತಿ) ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿಯ ಸದಸ್ಯರಾಗಿದ್ದರು. ಮೃತರು ಪತ್ನಿ ವಿನಯಾ ಪೈ, ಮಕ್ಕಳಾದ ಶ್ರೀಲತಾ, ಅಮಿತ, ಶ್ರೀನಿವಾಸ ಪೈ (ಇಂಜಿನಿಯರ್), ಗಿರೀಶ್ ಪೈ (ಪೆರ್ಲದಲ್ಲಿ ವ್ಯಾಪಾರಿ), ಅಳಿಯಂದಿರಾದ ನಾಗೇಂದ್ರನಾಥ …

ಆಸ್ಟರ್‌ಮಿಮ್ಸ್‌ನಲ್ಲಿ ಅತ್ಯಾಧುನಿಕ ಸೌಲಭ್ಯದ ಸ್ತನ ಚಿಕಿತ್ಸಾಲಯ ಆರಂಭ

ಕಾಸರಗೋಡು: ಮಹಿಳೆಯರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ‘ಸ್ತನ ಚಿಕಿತ್ಸಾಲಯ’ ಕಾಸರಗೋಡಿನ ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಆಸ್ಟರ್ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ| ಸೂರಜ್ ಕೆ.ಎಂ. ಉದ್ಘಾಟಿಸಿದರು. ಜಿಲ್ಲೆಯಲ್ಲಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುವುದು ದೊಡ್ಡ ಸಾಧನೆ ಎಂದು ಡಾ| ಸೂರಜ್ ಕೆ.ಎಂ ಹೇಳಿದರು. ಜಿಲ್ಲೆಯ ಸಾಮಾನ್ಯ ಜನರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದು ಆಸ್ಟರ್ ಮಿಮ್ಸ್ನ ಗುರಿಯಾಗಿದೆ ಮತ್ತು ಮುಂದಿನ ದಿನಗಳಲ್ಲಿ …

ಕಾಸರಗೋಡು ಡಯಲೈಫ್ ಹಾಸ್ಪಿಟಲ್‌ನಲ್ಲಿ ಕಿಡ್ನಿ ಟ್ಯೂಮರ್ ಯಶಸ್ವಿ ಶಸ್ತ್ರಚಿಕಿತ್ಸೆ

ಕಾಸರಗೋಡು:  ಕಾಸರಗೋಡು ಡಯಲೈಫ್ ಹಾಸ್ಪಿಟಲ್‌ನಲ್ಲಿ ಅಪೂರ್ವವಾದ ಕಿಡ್ನಿ ಟ್ಯೂಮರ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ  ತೆರವುಗೊಳಿಸಲಾಯಿತು.  ರೆನಲ್ ಅಂಗ್ಯೋಮ್ಯೋ ಲಿಪೋಮಾ ಎಂಬ ಗಂಭೀರ ಟ್ಯೂಮರ್ ಬಾಧಿಸಿದ್ದ ೫೦ರ ಹರೆಯದ ಮಹಿಳೆಯ ಕಿಡ್ನಿಗೆ ಯಾವುದೇ ಹಾನಿಯುಂಟಾಗದ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಿಡ್ನಿಗೆ ಯಾವುದೇ ಹಾನಿಯುಂಟಾಗದ ರೀತಿಯಲ್ಲಿ   ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ರೋಗಿಗೆ ಪ್ರತ್ಯೇಕವಾಗಿ ಯಾವುದೇ ಲಕ್ಷಣವಿರಲಿಲ್ಲ. ಸಾಮಾನ್ಯ ಆರೋಗ್ಯ ತಪಾಸಣೆಯಂಗವಾಗಿ ನಡೆಸಿದ  ರುಟೀನ್ ಟೆಸ್ಟ್ ಮೂಲಕ ಟ್ಯೂಮರ್ …

ಮಂಜೇಶ್ವರ ಮಂಡಲದ ಅಭ್ಯರ್ಥಿಗಳ  ಬಿರುಸಿನ ಮತಯಾಚನೆ ಮುಂದುವರಿಕೆ

ಮಂಜೇಶ್ವರ: ಮತದಾನಕ್ಕಿನ್ನು  ಕೇವಲ ಏಳೇ ದಿನಗಳು ಬಾಕಿ ಇರು ವಂತೆ ಮಂಜೇಶ್ವರ ವಿಧಾನಸಭಾ ಮಂಡ ಲದ ಪ್ರಮುಖ ಮೂವರು ಅಭ್ಯರ್ಥಿ ಗಳು ಪ್ರಚಾರದ  ತುತ್ತತುದಿಯಲ್ಲಿ ಪರ್ಯಟನೆ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಪರ ಮಂಗ ಲ್ಪಾಡಿ ಪಂಚಾಯತ್‌ನ ಬೇಕೂರು ಸಹಿತ ವಿವಿಧೆಡೆ ಕಾರ್ಯಕರ್ತರು ಎರಡನೇ ಹಂತದ ಮನೆ ಸಂಪರ್ಕ ನಡೆಸಿದರು. ಅಭ್ಯರ್ಥಿ ಕೆ. ಸುರೇಂದ್ರನ್ ನಿನ್ನೆ ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಪರ್ಯಟನೆ ನಡೆಸಿದ್ದು, ಮಧ್ಯಾಹ್ನ ಕುಂಬಳೆ ಬಳಿಯ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದ ಸಾಮೂಹಿಕ …

ಸುಡು ಬಿಸಿಲನ್ನೂ ಲೆಕ್ಕಿಸದೆ ಮುಂದುವರಿಯುತ್ತಿರುವ ಬಿರುಸಿನ ಚುನಾವಣಾ ಪ್ರಚಾರ

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಇನ್ನು ಏಳು ದಿನಗಳು ಮಾತ್ರ  ಬಾಕಿ ಉಳಿದುಕೊಂಡಿ ರುವಂತೆ ಮತ ಯಾಚನೆಗಾಗಿರುವ ಅಭ್ಯರ್ಥಿಗಳ ಪ್ರಚಾರ ಪರ್ಯಟನೆ ಬೇಸಿಗೆಯ ಸುಡು ಬಿಸಿಲನ್ನು ಲೆಕ್ಕಿಸದೆ ಇನ್ನಷ್ಟು ಆವೇಶಭರಿತವಾದ ರೀತಿಯಲ್ಲಿ ಮುಂದಕ್ಕೆ ಸಾಗುತ್ತಿದೆ.ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ನಿನ್ನೆ ಕುಟುಂಬ ಸಭೆಗಳನ್ನು ಕೇಂದ್ರೀಕರಿಸಿ ಪ್ರಚಾರ ನಡೆಸಿದರು. ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತ ವಿಘ್ನೇಶ್ವರ ಭಟ್ ಮತ್ತು  ಕುಟುಂಬವನ್ನು ಪೆರ್ಣೆಯಲ್ಲಿರುವ ಅವರ ಮನೆಯಲ್ಲಿ ಸಂದರ್ಶಿಸಿ ಮತ ಯಾಚನೆ ನಡೆಸಿದರು. ನಂತರ ಅವರು ಪೆರ್ಣೆ ಶ್ರೀ ಮುಚ್ಚಿಲೋಟ್ …

ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ವ್ಯಕ್ತಿಯೊಬ್ಬರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೀರಂತಬೈಲು ಬೂತಗುಡಿ ನಿವಾಸಿ ದಿ| ಬಾಬು ನಾಕ್‌ರ ಪುತ್ರ ಬಿ. ಪ್ರಕಾಶ್ (೪೮) ಮೃತಪಟ್ಟ ವ್ಯಕ್ತಿ. ಇವರು ಕೂಲಿ ಕಾರ್ಮಿಕನಾಗಿದ್ದರು. ನಿನ್ನೆ ರಾತ್ರಿ ಮನೆಯವರು ಅಡ್ಕತ್ತಬೈಲು ಬೈದರ್ಕಳ ನೇಮೋತ್ಸವಕ್ಕೆ ತೆರಳಿದ್ದರು. ಈ ವೇಳೆ ಪ್ರಕಾಶ್ ಮಾತ್ರವೇ ಮನೆಯಲ್ಲಿದ್ದರು. ರಾತ್ರಿ ೧೨ ಗಂಟೆ ವೇಳೆ ಮನೆಯವರು ಮರಳಿದಾಗ ಮನೆ ಹಿಂಭಾಗದ ಮರದಲ್ಲಿ ಪ್ರಕಾಶ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.  ಮೃತರು …

ಹೋಟೆಲ್‌ನಲ್ಲಿ ಆಹಾರ ಸೇವಿಸಿ ಮರಳುವಷ್ಟರಲ್ಲಿ ಬೈಕ್ ನಾಪತ್ತೆ : ಕಳವುಗೈದ ವ್ಯಕ್ತಿಯ ಪತ್ತೆಗಾಗಿ ಶೋಧ

ಕುಂಬಳೆ: ಹೋಟೆಲ್‌ನಲ್ಲಿ ಆಹಾರ ಸೇವಿಸಿ ಮರಳಿದಾಗ ಹೊರಗೆ ನಿಲ್ಲಿಸಿದ್ದ ಬೈಕ್ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಈ ಕುರಿತು ಲಭಿಸಿದ ದೂರಿನಂತೆ  ಕೇಸುದಾಖಲಿಸಿಕೊಂಡ ಕುಂಬಳೆ ಪೊಲೀಸರು ನಡೆಸಿದ ತನಿಖೆಯಲ್ಲಿ ಬೈಕ್ ಕಳವಿಗೀಡಾಗಿರು ವುದಾಗಿ ತಿಳಿದುಬಂದಿದೆ.  ಬೈಕ್ ಕಳವುಗೈದ ವ್ಯಕ್ತಿ ಯಾರೆಂದು ತಿಳಿದುಬಂದಿದ್ದು, ಇದೀಗ ಆತನನ್ನು ಪತ್ತೆಹಚ್ಚಲಿರುವ ಪ್ರಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ.ಕುಂಬಳೆ ಕಂಚಿಕಟ್ಟೆ ನಿವಾಸಿ ಅಜಿತ್ ಕುಮಾರ್ ಎಂಬವರ ಪಲ್ಸರ್ ಬೈಕ್  ಕಳವಿಗೀಡಾಗಿದೆ. ಕಳೆದ ಶನಿವಾರ ಮಧ್ಯಾಹ್ನ 1.30ರ ವೇಳೆ ಅಜಿತ್ ಕುಮಾರ್ ಕುಂಬಳೆ ಪೇಟೆಯ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ …