ಎಡರಂಗ ಮತ್ತು ಐಕ್ಯರಂಗದ ಚುನಾವಣಾ ಪ್ರಣಾಳಿಕೆ ಪ್ರಕಟ: ಸಾಮಾಜಿಕ ಪಿಂಚಣಿ ಮೊತ್ತವನ್ನು 3000 ರೂ.ಗೇರಿಸಲಾಗುವುದೆಂದು ಉಭಯ ಒಕ್ಕೂಟಗಳ ಭರವಸೆ
ತಿರುವನಂತಪುರ: ಕೇರಳ ವಿಧಾನಸಭೆಗೆ ಚುನಾವಣೆಗೆ ಸಂಬಂಧಿಸಿ ಆಡಳಿತ ಒಕ್ಕೂಟವಾದ ಎಡರಂಗ ಮತ್ತು ವಿರೋಧಪಕ್ಷ ಯುಡಿಎಫ್ ಇಂದು ಎರಡೆಡೆಗಳಲ್ಲಾಗಿ ಏಕ ಕಾಲದಲ್ಲಿ ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸಿವೆ. ಸಾಮಾಜಿಕ ಕಲ್ಯಾಣ ಪಿಂಚಣಿ ಮೊತ್ತವನ್ನು 3೦೦೦ ರೂ.ಗೇರಿಸಲಾಗುವು ದೆಂದು ಎಡರಂಗ ಮತ್ತು ಐಕ್ಯರಂಗವು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿವೆ. ಎಡರಂಗದ ಚುನಾ ವಣಾ ಪ್ರಣಾಳಿಕೆಯನ್ನು ಕಲ್ಲಿಕೋಟೆ ಯಲ್ಲಿ ಇಂದು ಬೆಳಿಗ್ಗೆ ನಡೆದ ಎಡರಂಗ ಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಡುಗಡೆಗೊಳಿಸಿದರು. ಯುಡಿಎಫ್ ಚುನಾವಣಾ ಪ್ರಣಾಳಿಕೆ ಯನ್ನು ಕೊಚ್ಚಿಯಲ್ಲಿ ಇಂದು …