ಖ್ಯಾತ ವೈದ್ಯ ಶಂಕರ್‌ರಾಜ್ ಆಲಂಪಾಡಿ ನಿಧನ
ಕಾಸರಗೋಡು: ಕಾಸರಗೋಡು ನಗರದ ಎಸ್‌ವಿಟಿ ರಸ್ತೆ ಬಳಿಯ ವೆಂಕಟೇಶ ಮನೆಯ ಖ್ಯಾತ ಆಯುರ್ವೇದ ವೈದ್ಯರಾಗಿರುವ ಶಂಕರ್‌ರಾಜ್ ಆಲಂಪಾಡಿ (66) ನಿಧನಹೊಂದಿದರು. ಖ್ಯಾತ ಆಲಂಪಾಡಿ ಮನೆತನಕ್ಕೆ ಸೇರಿದ ದಿ| ವೆಂಕಟೇಶ್ ಶ್ಯಾನುಭೋಗ್-ಜಲಜಮ್ಮ ದಂಪತಿ ಪುತ್ರನಾಗಿರುವ ಡಾ| ಶಂಕರ್‌ರಾಜ್ ಆಲಂಪಾಡಿಯವರು ಖ್ಯಾತ ಮೃದಂಗ ವಿದ್ವಾನ್ ಕೂಡಾ ಅಗಿದ್ದರು. ಹಲವು ಸಂಗೀತ ಕಛೇರಿಗಳಲ್ಲೂ ಅವರು ಮೃದಂಗ ವಾದಕರಾಗಿ ಸಹಕರಿಸಿದ್ದಾರೆ. ಇವರು ಅನೇಕ ಮೃದಂಗ ಶಿಷ್ಯವೃಂದದ ವರನ್ನು ಹೊಂದಿದ್ದು ಓರ್ವ ಅಪ್ರತಿಮ ಕಲಾಸಕ್ತರೂ ಆಗಿದ್ದರು. 1983ರಿಂದ ನಾಯಮ್ಮಾರ ಮೂಲೆಯಲ್ಲಿ ಸುಪ್ರಭಾತ ಕ್ಲಿನಿಕ್ ಆರಂಭಿಸಿ …