­­ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ :ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ಶ್ರದ್ಧಾಭಕ್ತಿಯ ಹಸಿರುವಾಣಿ ಮೆರವಣಿಗೆ

ಬದಿಯಡ್ಕ: ಸಹಸ್ರಾರು ಮಂದಿ ಭಗವದ್ಬಕ್ತರ ಶ್ರದ್ಧಾ ಭಕ್ತಿಯ ಪಾಲ್ಗೊಳ್ಳುವಿಕೆಯೊಂದಿಗೆ ಅದ್ದೂರಿಯ  ಹಸಿರುವಾಣಿ ಮೆರವಣಿಗೆ  ಆಗಮಿಸುವು ದರೊಂದಿಗೆ  ಪೆರಡಾಲ ಶ್ರೀ ಉದನೇ ಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಯಿತು. ನಿನ್ನೆ ಮುಂ ಜಾನೆ ಶ್ರೀ ಕ್ಷೇತ್ರದಲ್ಲಿ ಗಣಪತಿ ಹೋಮ,  ಉಗ್ರಾಣ ಮುಹೂರ್ತ ನಡೆಯಿತು.  ಬಳಿಕ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಆನೆಮಜಲು ದೀಪ ಬೆಳಗಿಸಿದರು. ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನ ದಲ್ಲಿ  ಭಗವದ್ಭಕ್ತರು ಒಟ್ಟುಗೂಡಿ ಪ್ರಾರ್ಥನೆ ಸಲ್ಲಿಸಿ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಸಹಿತ ಭಗವದ್ಬಕ್ತರು ಅಕ್ಕಿಮುಡಿಯನ್ನು ತಲೆಗೇರಿಸಿದರು. ನೂರಾರು ಬುಟ್ಟಿಗಳಲ್ಲಿ ತರಕಾರಿಗಳನ್ನು ಹೊತ್ತ ಮಾತೆಯರು ಮುತ್ತುಕೊಡೆಗಳು, ಚೆಂಡೆಮೇಳ, ವಾದ್ಯ, ಕೋಲಾಟ, ಗೊಂಬೆಗಳ ನರ್ತನದೊಂ ದಿಗೆ ಸಾಗಿಬಂದ ಮೆರವಣಿಗೆ  ಬದಿಯಡ್ಕ ಪೇಟೆಯನ್ನು ಸುತ್ತಿ ವರದಾ ನದಿಯನ್ನು ದಾಟಿ ಪೆರಡಾಲ ದೇವಸ್ಥಾನಕ್ಕೆ ತಲುಪಿತು. ಬಿಸಿಲನ್ನು ಲೆಕ್ಕಿಸದೆ ಮಾತೆಯರು, ಮಕ್ಕಳು ಕುಣಿತ ಭಜನೆಯೊಂದಿಗೆ ಜೊತೆಗೂಡಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ. ವಸಂತ ಪೈ ಬದಿಯಡ್ಕ, ಕೃಷ್ಣರಾಜ ಬಲ್ಲಾಳ್ ಕೊಡ್ಯಮ್ಮೆ ಅರಮನೆ,   ಹಸಿರುವಾಣಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಸಂಚಾಲಕ ಶ್ಯಾಮಪ್ರಸಾದ ಮಾನ್ಯ, ಸದಾಶಿವ ಮರಿಯಂಕೂಡ್ಲು,ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಮೊಕ್ತೇಸರರಾದ ಕೃಷ್ಣ ಬಿ, ಸೀತಾರಾಮ ವಿ,  ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಕೋಶಾಧಿಕಾರಿ ಸೂರ್ಯನಾರಾಯಣ ಬಿ, ಉದ್ಯಮಿ  ಮಧೂಸೂದನ ಆಯರ್ ಮಂಗಳೂರು,  ಗಣೇಶ ಪ್ರಸಾದ ಕಡಪ್ಪು, ಭಾಸ್ಕರ ಪಂಜಿತ್ತಡ್ಕ, ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ. ಶಂಕರ, ವಿವಿಧ ಜನಪ್ರತಿ ನಿಧಿಗಳೂ, ವಿವಿಧ ದೇವಸ್ಥಾನದ ಪ್ರತಿನಿಧಿಗಳು, ನಾಡಿನ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪೆರಡಾಲದ ಬೇತಾಳ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶ್ರೀ ದೇವರ ಬಲಿಯೊಂದಿಗೆ ಬೇತಾಳ ಸುತ್ತು ಬರುವುದು ವಿಶೇಷ ಆಕರ್ಷಣೆಯಾಗಿದೆ. ಅದೇ ರೀತಿ ನಿನ್ನೆ ಹಸಿರುವಾಣಿ ಮೆರವಣಿಗೆಯಲ್ಲೂ ಸಾ ಗಿದ ಬೇತಾಳ ವಿಶೇಷ ಆಕರ್ಷಣೆಯಾಯಿತು.

RELATED NEWS

You cannot copy contents of this page