ಬಾಯಾರು: ಅಖಿಲ ಕೇರಳ ಮೆಲಕುಡಿ- ಕುಡಿಯ ಸೇವಾ ಸಂಘ ಧರ್ಮತಡ್ಕ ಇದರ 23ನೇ ವಾರ್ಷಿಕ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ ಇತ್ತೀಚೆಗೆ ಬೆರಿಪದವು ವಿದ್ಯಾರಣ್ಯ ಎ.ಎಲ್.ಪಿ ಶಾಲೆಯಲ್ಲಿ ನಡೆಯಿತು. ನಿವೃತ ಬ್ಯಾಂಕ್ ಮೆನೇಜರ್ ಕರಿಯ ಕುಡಿಯ ದೀಪ ಬೆಳಗಿಸಿ, ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಶಂಕರ ಕುಡಿಯ ಅಧ್ಯಕ್ಷತೆ ವಹಿಸಿದರು. ಸಮಾರಂಭದಲ್ಲಿ 80 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಐದು ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹ ಧನ ವಿತರಣೆ, ಸಮುದಾಯದ ಬೇರೆ ಬೇರೆ ಇಲಾಖೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಐದು ಜನ ಸಮುದಾಯ ಭಾಂದವರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮ ಸಂಯೋಜಕ ಮಾಧವ ಕೊಜಪ್ಪೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸೌಮ್ಯ, ಪವಿತ್ರ ಪ್ರಾರ್ಥನೆ ಹಾಡಿದರು. ಶಕುಂತಲಾ ನಿರೂಪಿಸಿ, ಮಾಧವ ಕೊಜಪ್ಪೆ ವಂದಿಸಿದರು. ಸಮಿತಿ ಸದಸ್ಯರಾದ ವಿಘೆ್ನÃಶ್, ಹರಿಪ್ರಸಾದ್, ರಾಧಾಕೃಷ್ಣ, ರಮೇಶ್, ಅಣ್ಣಪ್ಪ, ಮಾಲತಿ, ಪವಿತ್ರ, ಸೌಮ್ಯ, ರವಿಚಂದ್ರ, ಸುಬ್ರಹ್ಮಣ್ಯ, ಕೇಶವ, ಗಂಗಾಧರ, ವಿಷ್ಣುಕುಮಾರ್, ಸಂಘದ ಕಾರ್ಯಕರ್ತರು ನೇತೃತ್ವ ವಹಿಸಿದರು. ಈ ವೇಳೆ ಸಂಘದ ವತಿಯಿಂದ ವಿದ್ಯಾರಣ್ಯ ಎ.ಎಲ್.ಪಿ ಶಾಲೆಗೆ ಗೋದ್ರೇಜ್ ನೀಡಲಾಯಿತು.






