ಕಾಸರಗೋಡು ನಿವಾಸಿ ಬೆಂಗಳೂರಿನಲ್ಲಿ ನಿಧನ

ಕಾಸರಗೋಡು: ಕಾಸರಗೋಡು ಅಮೈ ರಸ್ತೆಯ  ದಿ|  ಎನ್.ಪಿ. ಕಾಮತ್‌ರ ಪುತ್ರ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ  ರಾಜೇಶ್ ಕಾಮತ್ (52) ನಿಧನಹೊಂದಿದರು. ಬೆಂಗಳೂರು ಕನಕಪುರ ರೋಡ್ ಆಕ್ಸಿಸ್ ತತ್ವಂ ವೇದಾನಂದ ನಾಲ್ಕು  ಎಂಬಲ್ಲಿ ವಾಸಿಸುತ್ತಿದ್ದರು. ಮೃತರು ತಾಯಿ ಪುಷ್ಪಲತಾ ಕಾಮತ್, ಪತ್ನಿ ಅನಿತಾ ಕಾಮತ್(ಬೆಂಗಳೂರಿನಲ್ಲಿ ಉದ್ಯೋಗಿ), ಪುತ್ರ ರಜತ್ ಕಾಮತ್ (ವಿದ್ಯಾರ್ಥಿ), ಸಹೋದರ -ಸಹೋದರಿಯರಾದ ನಿತ್ಯಾನಂದ ಕಾಮತ್ (ಕಾಸರ ಗೋಡು), ಸುರೇಶ್ ಕಾಮತ್ (ಬೆಂಗಳೂರು), ರಾಧಾ ಕಿಣಿ (ಪೂಕೋಡ್ ತಲಶ್ಶೇರಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್ ಸಹಿತ ವಿಪಕ್ಷಗಳಿಗೆ ಮಹಿಳಾ ಸಮಾಜದಿಂದ ತಿರುಗೇಟು-ಸವಿತಾ ಟೀಚರ್

ಕಾಸರಗೋಡು: ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್, ಸಿಪಿಎಂ ಸಹಿತ ವಿಪಕ್ಷಗಳು  ಪರಾಭವಗೊಳಿಸಲು ಯತ್ನಿಸಿರುವುದು ದೇಶದ 70 ಕೋಟಿಯಷ್ಟಿರುವ ಮಹಿಳಾ ಸಮಾಜವನ್ನಾಗಿದೆ.  ಈ ಮೂಲಕ  ಈ ಪಕ್ಷಗಳ ಮಹಿಳಾ ವಿರುದ್ಧ ನೀತಿ ಬೆಳಕಿಗೆ ಬಂದಿದೆಯೆಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್ ಆರೋಪಿಸಿದ್ದಾರೆ. ಮಹಿಳಾ ಮೋರ್ಛಾ ಕಾಸರಗೋಡು ಮಂಡಲ ಸಮಿತಿ ಆಶ್ರಯದಲ್ಲಿ ನಡೆಸಿದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಎಲ್ಲಾ ವಲಯದಲ್ಲೂ ಮಹಿಳೆಯರು ಇಂದು ಸಾಧನೆ ಮೆರೆಯುತ್ತಿದ್ದರೂ ಕಾನೂನು ನಿರ್ಮಾಣ ಸಭೆಗಳಲ್ಲಿ ಅರ್ಹವಾದ   …

ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಕಾಲಿನ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ

ಕುಂಬಳೆ: ಕಾಲಿನ ಮಂಡಿ ಬದಲಾವಣೆ ಶಸ್ತ್ರಕ್ರಿಯೆ ಹಾಗೂ ಲಿಗಮೆಂಟ್ ಪುನರ್ ನಿರ್ಮಾಣ ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ತಿಗೊಳಿಸುವ ಮೂಲಕ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಮತ್ತೊಂದು ಹೆಮ್ಮೆಯ ಸಾಧನೆಗೈದಿದೆ. ನಾಲ್ಕು ಗಂಟೆಗಳಲ್ಲಿ ತಜ್ಞ ವೈದ್ಯರನ್ನೊಳ ಗೊಂಡ ತಂಡ ಈ ಸಾಧನೆಯನ್ನು ನಡೆಸಿದೆ. ಜಿಲ್ಲೆಯಲ್ಲಿ ಇದೇ ಮೊಟ್ಟಮೊದಲಾಗಿ ಬಯೋ ಸಿಂಥೆಟಿಕ್ ಗ್ರಾಫ್ಟ್ ಉಪಯೋಗಿಸಿ ಮಂಡಿಯ ಲಿಗಮೆಂಟ್ ಪುನರ್‌ನಿರ್ಮಾಣ ಶಸ್ತ್ರಕ್ರಿಯೆ ಹಾಗೂ ಮಂಡಿ ಬದಲಾವಣೆ ಶಸ್ತ್ರಕ್ರಿಯೆಯನ್ನು ಏಕಕಾಲದಲ್ಲಿ ಪೂರ್ತಿಗೊಳಿಸಿರುವು ದಾಗಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.ಆಧುನಿಕ ತಾಂತ್ರಿಕ ವಿದ್ಯೆಯ ಸಹಾಯದೊಂದಿಗೆ ನಡೆಸಿದ ಶಸ್ತ್ರಕ್ರಿಯೆಯಿಂದ …