ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್ ಸಹಿತ ವಿಪಕ್ಷಗಳಿಗೆ ಮಹಿಳಾ ಸಮಾಜದಿಂದ ತಿರುಗೇಟು-ಸವಿತಾ ಟೀಚರ್





ಕಾಸರಗೋಡು: ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್, ಸಿಪಿಎಂ ಸಹಿತ ವಿಪಕ್ಷಗಳು  ಪರಾಭವಗೊಳಿಸಲು ಯತ್ನಿಸಿರುವುದು ದೇಶದ 70 ಕೋಟಿಯಷ್ಟಿರುವ ಮಹಿಳಾ ಸಮಾಜವನ್ನಾಗಿದೆ.  ಈ ಮೂಲಕ  ಈ ಪಕ್ಷಗಳ ಮಹಿಳಾ ವಿರುದ್ಧ ನೀತಿ ಬೆಳಕಿಗೆ ಬಂದಿದೆಯೆಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್ ಆರೋಪಿಸಿದ್ದಾರೆ.

ಮಹಿಳಾ ಮೋರ್ಛಾ ಕಾಸರಗೋಡು ಮಂಡಲ ಸಮಿತಿ ಆಶ್ರಯದಲ್ಲಿ ನಡೆಸಿದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಎಲ್ಲಾ ವಲಯದಲ್ಲೂ ಮಹಿಳೆಯರು ಇಂದು ಸಾಧನೆ ಮೆರೆಯುತ್ತಿದ್ದರೂ ಕಾನೂನು ನಿರ್ಮಾಣ ಸಭೆಗಳಲ್ಲಿ ಅರ್ಹವಾದ   ಪ್ರಾತಿನಿಧ್ಯ ಇದುವರೆಗೆ ಲಭಿಸಿಲ್ಲ.  ಮಹಿಳಾ ಮೀಸಲಾತಿಯನ್ನು ವಿರೋಧಿಸಿದ ಕಾಂಗ್ರೆಸ್ ಸಹಿತ ವಿಪಕ್ಷಗಳಿಗೆ ಮಹಿಳಾ ಸಮಾಜ ತಿರುಗೇಟು ನೀಡಲಿದೆಯೆಂದು ಅವರು ತಿಳಿಸಿದರು. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಪರಿಸರದಿಂದ ಆರಂಭಿಸಿದ ಮೆರವಣಿಗೆ ಕರಂದಕ್ಕಾ ಡ್‌ನಲ್ಲಿ ಸಮಾಪ್ತಿಗೊಂಡಿತು.  ಬಳಿಕ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿಯವರ ಪ್ರತಿಕೃತಿ ಯನ್ನು ದಹಿಸಲಾಯಿತು. ಮಹಿಳಾ ಮೋರ್ಛಾ ನೇತಾರೆ ಪುಷ್ಪಲತಾ ಆಳ್ವ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ನಾಯ್ಕ್, ಜಿಲ್ಲಾ ಕೋಶಾಧಿಕಾರಿ ಶ್ರೀಲತಾ, ಮಧೂರು ಪಂ. ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀವಿದ್ಯಾ, ಕಾರ್ಯ ದರ್ಶಿ ಚೇತನ, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ಪುಷ್ಪಾ ಗೋಪಾಲ್, ಪ್ರಮೀಳಾ ಮಜಲ್, ಮಧೂರು ಪಂ. ವೆಸ್ಟ್ ಏರಿಯಾ ಅಧ್ಯಕ್ಷೆ ಧನ್ಯ, ಅಶ್ವತಿ, ಪ್ರಮಿಳಾ ಮೊದಲಾದವರು ಮಾತನಾಡಿದರು.

RELATED NEWS

You cannot copy contents of this page