ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಕಾಲಿನ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ

ಕುಂಬಳೆ: ಕಾಲಿನ ಮಂಡಿ ಬದಲಾವಣೆ ಶಸ್ತ್ರಕ್ರಿಯೆ ಹಾಗೂ ಲಿಗಮೆಂಟ್ ಪುನರ್ ನಿರ್ಮಾಣ ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ತಿಗೊಳಿಸುವ ಮೂಲಕ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಮತ್ತೊಂದು ಹೆಮ್ಮೆಯ ಸಾಧನೆಗೈದಿದೆ. ನಾಲ್ಕು ಗಂಟೆಗಳಲ್ಲಿ ತಜ್ಞ ವೈದ್ಯರನ್ನೊಳ ಗೊಂಡ ತಂಡ ಈ ಸಾಧನೆಯನ್ನು ನಡೆಸಿದೆ. ಜಿಲ್ಲೆಯಲ್ಲಿ ಇದೇ ಮೊಟ್ಟಮೊದಲಾಗಿ ಬಯೋ ಸಿಂಥೆಟಿಕ್ ಗ್ರಾಫ್ಟ್ ಉಪಯೋಗಿಸಿ ಮಂಡಿಯ ಲಿಗಮೆಂಟ್ ಪುನರ್‌ನಿರ್ಮಾಣ ಶಸ್ತ್ರಕ್ರಿಯೆ ಹಾಗೂ ಮಂಡಿ ಬದಲಾವಣೆ ಶಸ್ತ್ರಕ್ರಿಯೆಯನ್ನು ಏಕಕಾಲದಲ್ಲಿ ಪೂರ್ತಿಗೊಳಿಸಿರುವು ದಾಗಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.ಆಧುನಿಕ ತಾಂತ್ರಿಕ ವಿದ್ಯೆಯ ಸಹಾಯದೊಂದಿಗೆ ನಡೆಸಿದ ಶಸ್ತ್ರಕ್ರಿಯೆಯಿಂದ ರೋಗಿಗೆ  ಅಲ್ಪ ಕಾಲದೊಳಗೆ  ಗುಣಮುಖರಾಗಲು  ಸಾಧ್ಯವಿದೆಯೆಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಚಿಕಿತ್ಸೆಗಾಗಿ ಜಿಲ್ಲೆಯಿಂದ ಹಲವರು ನೆರೆ ರಾಜ್ಯಗಳನ್ನು ಆಶ್ರಯಿಸುವ ಹಿನ್ನೆಲೆಯಲ್ಲಿ ಸಂಕೀರ್ಣ ಶಸ್ತ್ರಕ್ರಿಯೆಯನ್ನು ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಪೂರ್ತಿಗೊಳಿಸಿರುವುದಾಗಿ ಆಸ್ಪತ್ರೆಯ ಆರ್ಥೋ ಪೀಡಿಯಾಟ್ರಿಕ್ ಸರ್ಜನ್ ಡಾ| ಮುಸಾಫಿರ್ ಮುಸ್ತಫ ತಿಳಿಸಿದ್ದಾರೆ.  ಡಾ| ಶರತ್ ಬಾಲಮನೆ, ಡಾ| ಹರಿಕಿರಣ್ ಬಂಗೇರ, ಡಾ| ಶಾಮರಾಜ್ ಎಂಬಿವರ ನೇತೃತ್ವದಲ್ಲಿ  ಶಸ್ತ್ರಕ್ರಿಯೆ ಯನ್ನು ನಡೆಸಲಾಗಿದೆ. ಆಸ್ಪತ್ರೆ ನೌಕರರಾದ ಕೃಷ್ಣಪ್ರಕಾಶ್ ಕೆ ನಾಯರ್, ರತೀಶ್, ಅನು ಮರೀನ, ಅಪರ್ಣ, ನಾಜಿಯ ಎಂಬಿವರು ತಂಡದಲ್ಲಿದ್ದರು.
 

RELATED NEWS

You cannot copy contents of this page