ನುಳ್ಳಿಪ್ಪಾಡಿಯಲ್ಲಿ ವಲಸೆ ಕಾರ್ಮಿಕನ ಕೊಲೆ ಪ್ರಕರಣ: ಓರ್ವ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ನಗರದ ನುಳ್ಳಿ ಪ್ಪಾಡಿಯ ಬಹು ಅಂತಸ್ತು ಕಟ್ಟಡದಲ್ಲಿ ಲಿಫ್ಟ್ ನಿರ್ಮಿಸಲೆಂದು ತೋಡಲಾಗಿದ್ದ ನೀರು ತುಂಬಿದ ಹೊಂಡದಲ್ಲಿ ಕರ್ನಾ ಟಕದ ವಲಸೆ ಕಾರ್ಮಿಕ ಕೊಲೆಗೈಯ್ಯ ಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಓರ್ವನನ್ನು ಕಾಸರಗೋಡು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆತನನ್ನು ಪೊಲೀಸ್ ತೀವ್ರ ವಿಚಾರಣೆಗೊಳಪಡಿ ಸುತ್ತಿದ್ದಾರೆ. ಪೊಲೀಸರ ಕಸ್ಟಡಿಗೊಳಗಾದ ವ್ಯಕ್ತಿ ಕರ್ನಾಟಕ ನಿವಾಸಿಯಾಗಿರುವು ದಾಗಿ ಹೇಳಲಾಗುತ್ತಿದ್ದರೂ, ಆತನ ಕುರಿತಾದ ಯಾವುದೇ ಮಾಹಿತಿಗಳನ್ನು ಪೊಲೀಸರು ಈ ತನಕ ಬಹಿರಂಗಪಡಿಸಿಲ್ಲ. ಕರ್ನಾಟಕದ ಗದಗ ಜಿಲ್ಲೆಯ ಬಲೇಶ್ವರ ಬಾಲ ಹೊಸೂರು ನಿವಾಸಿ …

ಕುಂಬಳೆಯಲ್ಲಿ ಆಟೋ ಚಾಲಕನಿಗೆ ಸೂರ್ಯಾಘಾತ

ಕುಂಬಳೆ: ಬಿಸಿಲಿನ ಬೇಗೆ ಮುಂದುವರಿಯುತ್ತಿರುವ ಮಧ್ಯೆ ಕುಂಬಳೆಯಲ್ಲಿ ಆಟೋ ಚಾಲಕ  ಸೂರ್ಯಾಘಾತದಿಂದ ಗಾಯ ಗೊಂಡ ಘಟನೆ ನಡೆದಿದೆ. ಕುಂಬಳೆ ಸ್ಟ್ಯಾಂಡ್‌ನ ಆಟೋ ಚಾಲಕ ನೌಶಾದ್ (27) ಗಾಯಗೊಂಡಿ ದ್ದಾರೆ. ಇವರನ್ನು ಕುಂಬಳೆ ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಇವರಿಗೆ ಸೂರ್ಯಾಘಾತ ಉಂಟಾಗಿದ್ದು, ಚರ್ಮದಲ್ಲಿ ಸುಟ್ಟ ಗಾಯಗಳು  ಕಾಣಿಸಿಕೊಂಡಿದೆ.

ರಾಜ್ಯ ಕತ್ತಲಿನತ್ತ: ಪರಾಕಾಷ್ಠೆಗೇರಿದ ವಿದ್ಯುತ್ ಉಪಯೋಗ: ರಾತ್ರಿ 10ರಿಂದ 12ರ ತನಕ ಕಠಿಣ ನಿಯಂತ್ರಣ

ತಿರುವನಂತಪುರ: ಸುಡು ಬೇಸಿಗೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಉಪಯೋಗ ದಿನೇ ದಿನೇ ಪರಾಕಾಷ್ಟೆಗೇರತೊಡಗಿದ್ದು, ಅದಕ್ಕೆ ಹೊಂದಿಕೊಂಡು ಹೊರಗಿನಿಂದ ಅಗತ್ಯದಷ್ಟು ವಿದ್ಯುತ್ ಖರೀದಿಸಲು ವಿದ್ಯುನ್ಮಂಡಳಿ ಇನ್ನೂ ತಯಾರಾಗದೇ ಇರುವುದು ಕೇರಳವನ್ನು ಕತ್ತಲತ್ತ ಸಾಗುವಂತೆ ಮಾಡತೊಡಗಿದೆ. ವಿದ್ಯುತ್ ಉಪಯೋಗ ದಿನೇ ದಿನೇ ಹೆಚ್ಚಾಗುತ್ತಿರುವ ಪರಿಣಾಮ ರಾಜ್ಯದಲ್ಲಿ ತೀವ್ರ ವಿದ್ಯುತ್ ಕ್ಷಾಮ ತಲೆದೋರಿದ್ದು, ಇದರಿಂದಾಗಿ ಅನ್ಯದಾರಿಯಿಲ್ಲದೆ ರಾತ್ರಿ ೧೦ ಗಂಟೆಯಿಂದ ೧೨ರ ತನಕ ವಿದ್ಯುನ್ಮಂಡಳಿ ಕಠಿಣ ನಿಯಂತ್ರಣ ಹೇರಿದೆ. ಇದರಂತೆ ಈ ಅವಧಿಯಲ್ಲಿ ೧೫ರಿಂದ 30 ನಿಮಿಷಗಳ ತನಕ ವಿದ್ಯುತ್ ಲೋಡ್ ಶೆಡ್ಡಿಂಗ್ …

ಗಲ್ಫ್‌ನಲ್ಲಿ ಕುಸಿದುಬಿದ್ದು ಮೃತ್ಯು

ಬದಿಯಡ್ಕ:  ವ್ಯಕ್ತಿಯೊಬ್ಬರು  ಗಲ್ಫ್‌ನಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ.    ಬದಿಯಡ್ಕ ಬಳಿಯ ಕನಕಪ್ಪಾಡಿ ನಿವಾಸಿಯೂ ಪ್ರಸ್ತುತ ತೊಕ್ಕೋಟಿನಲ್ಲಿ ವಾಸಿಸುತ್ತಿದ್ದ ಹೆನ್ರಿ ಡಿ’ಸೋಜಾ (58) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಇವರು ಕಾಸರಗೋಡು-ಬದಿಯಡ್ಕ ರೂಟ್‌ನಲ್ಲಿ ಸಂಚರಿ ಸುವ ಖಾಸಗಿ ಬಸ್ ಚಾಲಕನಾಗಿ ದ್ದರು. ಅನಂತರ ಉದ್ಯೋಗ ನಿಮಿತ್ತ ಗಲ್ಫ್‌ಗೆ ತೆರಳಿದ್ದರು. ನಿನ್ನೆ ಬೆಳಿಗ್ಗೆ ಇವರು  ಗಲ್ಫ್‌ನಲ್ಲಿ ಕುಸಿದು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತದೇಹವನ್ನು ಊರಿಗೆ ತರಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ.  ಮೃತರು ಪತ್ನಿ ಸವಿತಾ, ಮಕ್ಕಳಾದ ಸೋನಲ್, ಸನುನ್, ಸಹೋದರ ವಿನ್ಸೆಂಟ್ …

ನಿಲ್ಲಿಸಿದ್ದ ಲಾರಿಯ ಬ್ಯಾಟರಿ ಕಳವು

ಕುಂಬಳೆ: ನಾಯ್ಕಾಪಿನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಯಿಂದ ಬ್ಯಾಟರಿಗಳನ್ನು ಕಳವುಗೈದ ಬಗ್ಗೆ ದೂರಲಾಗಿದೆ.  ಲಾರಿ ಚಾಲಕ ವಡಗರದ  ಶಾಲು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  ಎರಡು ದಿನಗಳ ಹಿಂದೆ ಪೆರ್ಲ, ಸೀತಾಂಗೋಳಿ ಭಾಗಕ್ಕೆ ಲಾರಿಯಲ್ಲಿ ಸಾಮಗ್ರಿಗಳನ್ನು ತಂದು ವಿತರಿಸಲಾಗಿತ್ತು. ಬಳಿಕ ಕುಂಬಳೆಯಿಂದ ನಿನ್ನೆ ಸಂಜೆ ವಡಗರಕ್ಕೆ ಸರಕು ಸಾಗಿಸಲಿದ್ದ ಕಾರಣ ಲಾರಿಯನ್ನು ಮೊನ್ನೆ ನಾಯ್ಕಾಪಿನಲ್ಲಿ ನಿಲ್ಲಿಸಿ ಚಾಲಕ ಶಾಲು ಊರಿಗೆ ತೆರಳಿದ್ದರೆನ್ನಲಾಗಿದೆ. ನಿನ್ನೆ ಬೆಳಿಗ್ಗೆ ಅವರು ಮರಳಿ ಬಂದು ನೋಡಿದಾಗ ಲಾರಿಯ …

ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮನೆ ಬೆಂಕಿಗಾಹುತಿ

ಬೋವಿಕಾನ: ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮನೆಗೆ ಬೆಂಕಿ ತಗಲಿ ಅದು ಹೆಚ್ಚುಕಡಿಮೆ ಪೂರ್ಣವಾಗಿ ಭಸ್ಮಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ಮುಳಿಯಾರು ಪಂಚಾಯತ್‌ನ ಅಲೂರು ಮೈಕುಳಿ ನಿವಾಸಿ ಹನೀಫಾ (47) ಎಂಬವರ ಮನೆಗೆ  ಈ ರೀತಿ ಬೆಂಕಿ ತಗಲಿದೆ. ಘಟನೆ ವೇಳೆ ಹನೀಫ ಮನೆಯಲ್ಲಿರಲಿಲ್ಲ. ಮನೆಗೆ ಬೆಂಕಿ ತಗಲಿರುವುದನ್ನು ಗಮನಿಸಿದ ನೆರೆಮನೆಯವರು ನೀಡಿದ ಮಾಹಿತಿಯಂತೆ ಗ್ರೇಡ್ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಉಮೇಶನ್, ಗ್ರೇಡ್ ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ರಮೇಶರ ನೇತೃತ್ವದಲ್ಲಿ ಇತರ ಸಿಬ್ಬಂದಿಗಳಾದ ಗೋಪಾಲ್, …

ದಲಿತ ಸಂಘಟನೆಗಳ ಹರತಾಳ : ಕಾಸರಗೋಡಿನಲ್ಲಿ ಅಬಾಧಿತ

ಕಾಸರಗೋಡು: ಅಂಜರಕಂಡಿ ನಿವಾಸಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿತಿನ್‌ರಾಜ್‌ನ ಆತ್ಮಹತ್ಯೆಗೆ ಕಾರಣರಾದವರನ್ನೆಲ್ಲಾ ಬಂಧಿಸಿ ಅವರ ವಿರುದ್ಧ ಕಾನೂನುಪರ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಮುಂದಿರಿಸಿ ಜಸ್ಟೀಸ್ ಫಾರ್ ನಿತಿನ್‌ರಾಜ್ ಆಕ್ಷನ್ ಕೌನ್ಸಿಲ್ ಮತ್ತು ದಲಿತ್ ಆದಿವಾಸಿ (ಬುಡಕಟ್ಟು) ಸಂಘಟನೆಗಳ ನೇತೃತ್ವದಲ್ಲಿ ರಾಜ್ಯದಲ್ಲಿ  ಇಂದು ಹರತಾಳ ಆಚರಿಸಲಾಗುತ್ತಿದೆ. ರಾಜ್ಯದ ಒಟ್ಟು ೫೨ ದಲಿತ ಸಂಘಟನೆಗಳ ಸಹಕಾರದೊಂದಿಗೆ ಇಂದು ಬೆಳಗ್ಗಿನಿಂದ ಹರತಾಳ ಆರಂಭಗೊಂಡಿದ್ದು ಸಂಜೆ ತನಕ ಮುಂದುವರಿಯಲಿದೆ. ಹರತಾಳ ವೇಳೆ ವಾಹನಗಳನ್ನು ತಡೆಯ ಲಾಗುವುದಿಲ್ಲವೆಂದು ಹರತಾಳಕ್ಕೆ ಕರೆ ನೀಡಿದ …

ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ಎರಡನೇ ಹಂತದ ಕಾಮಗಾರಿಗೆ ಚಾಲನೆ, ನೂತನ ಪದಾಧಿಕಾರಿಗಳ ಆಯ್ಕೆ

ಉಪ್ಪಳ: ಮಂಗಲ್ಪಾಡಿ ಪರಂಕಿಲ ಏಕಾಹ ಭಜನಾ ಮಂದಿರದ ಎರಡನೇ ಹಂತದ ಕಾಮಗಾರಿ ಚಾಲನೆಯ ಪೂರ್ವಭಾವಿ ವಿಶೇಷ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಂದಿರದಲ್ಲಿ ನಡೆಯಿತು. ಸಭೆಯಲ್ಲಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಡಾ ಶ್ರೀಧರ ಭಟ್ ಕಾಮಗಾರಿಗೆ ಚಾಲನೆ ನೀಡಿ ಯೋಜನೆಯ ಬಗ್ಗೆ ಮಾರ್ಗದರ್ಶನ ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಕಾರ್ಯವಾಹ ಲೋಕೇಶ್ ಜೋಡುಕಲ್ಲು, ಮಾಜಿ ವಿಧಾನ ಪರಿಸದ್ ಸದಸ್ಯರಾದ ಮೋನಪ್ಪ ಭಂಡಾರಿ, ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೃಷ್ಣ. ಪಿ.ಬಂದ್ಯೋಡು, ಲಿಂಗಪ್ಪ ಶೆಟ್ಟಿಗಾರ್, ಪ್ರಭಾಕರ ಶೆಣೈ, …

ವಿಶೇಷ ಚೇತನ ಮಕ್ಕಳ ಕಲಾಮೇಳ ಸಮಾಪ್ತಿ

ಮಂಜೇಶ್ವರ: ಹಾಸಿಗೆಯಲ್ಲೇ ಇರುವ ವಿಶೇಷಚೇತನ ಮಕ್ಕಳ ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕಾಸರಗೋಡು ಮತ್ತು ಕಾಸರಗೋಡು ಜಿಲ್ಲಾ ಪಂಚಾಯತ್ ಸಂಯುಕ್ತವಾಗಿ ಸ್ಪರ್ಶಂ ವಿಶೇಷ ಚೇತನ ಮಕ್ಕಳ ಕಲಾಮೇಳವನ್ನು ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಸಮಗ್ರ ಶಿಕ್ಷಣ ಕಾಸರಗೋಡು ಡಿ.ಪಿ.ಓ.ಪ್ರಕಾಶನ್ ಟಿ ಕ್ಯಾಂಪ್ ಉದ್ಘಾಟಿಸಿದರು. ಮಂಜೇಶ್ವರ ಎ.ಇ.ಒ ಜಾರ್ಜ್ ಕ್ರಾಸ್ಟ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಶಿಕ್ಷಣಾಧಿಕಾರಿಗಳಾದ ಡಿ.ಡಿ.ಇ ಇಬ್ರಾಹಿಂ ಬಿ, ಎ.ಎಸ್. ಎಸ್.ಕೆ ಯ ಡಿ.ಪಿ.ಓ. ಅಗಸ್ಟಿನ್ ಬರ್ನಾರ್ಡ್ ಮೊಂತೆರೋ ಹಾಗೂ ಮಂಜೇಶ್ವರ ಎ.ಇ.ಒ ಜಾರ್ಜ್ ಕ್ರಾಸ್ತ …

ಹೊಳೆಯ ಹೊಯ್ಗೆ ಕಳವುಗೈದು ಸಾಗಾಟ ಲಾರಿ ಮಾಲಕ ಸೆರೆ

ಕುಂಬಳೆ: ಆರಿಕ್ಕಾಡಿ ಹೊಳೆ ಯಿಂದ ಅನಧಿಕೃತವಾಗಿ ಹೊಯ್ಗೆ  ಸಾಗಿಸುತ್ತಿದ್ದ ವೇಳೆ ಪೊಲೀಸರು ವಶಪಡಿಸಿಕೊಂಡ ಟಿಪ್ಪರ್ ಲಾರಿಯ ಆರ್‌ಸಿ ಮಾಲಕನನ್ನು ಬಂಧಿಸಲಾ ಗಿದೆ. ಆರಿಕ್ಕಾಡಿ ಕಾರ್ಳೆ ನಿವಾಸಿಯಾದ ರಶೀದ್ ಮುಹಮ್ಮದ್ ಯಾನೆ ಕಾರ್ಳೆ ರಶೀದ್ (51)ನನ್ನು ಕುಂಬಳೆ ಎಸ್‌ಐಗಳಾದ ಸಿ. ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ಸೇರಿ ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಎಪ್ರಿಲ್ 25ರಂದು ಮುಂಜಾನೆ ೫.೪೫ಕ್ಕೆ ಶಿರಿಯಾ ಹೊಳೆಯಿಂದ  ಕಳವುಗೈದು ಸಾಗಿಸುತ್ತಿದ್ದ ಹೊಯ್ಗೆ ಸಹಿತ ಟಿಪ್ಪರ್ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.