ಮುಸ್ಲಿಂ ಲೀಗ್ ಕಾರ್ಯಕರ್ತನ ಬೈಕ್, ಮನೆಗೆ ಕಿಚ್ಚಿಟ್ಟ ಪ್ರಕರಣ: ಓರ್ವ ಸೆರೆ

ಕಾಸರಗೋಡು: ಚೆರ್ಕಳ ಅಳಕ್ಕೆಯ ಮುಸ್ಲಿಂ ಲೀಗ್ ಕಾರ್ಯಕರ್ತ ಬಿ.ಎ. ಸೈಫುದ್ದೀನ್ ಎಂಬವರ ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್‌ಗೆ ಕಿಚ್ಚಿರಿಸಿ ಹಾನಿಗೊಳಿಸಿ ಅದರಿಂದ ಮನೆ ಕಿಟಿಕಿಗೂ ಹಾನಿ ಉಂಟಾದ ಪ್ರಕ ರಣದ ಆರೋಪಿಯನ್ನು ವಿದ್ಯಾ ನಗರ ಪೊಲೀಸರು ಬಂಧಿಸಿದ್ದಾರೆ.  ಚೆರ್ಕಳ ವಿ.ಕೆ.ಪಾರದ ಅಹಮ್ಮದ್ ಅಫ್ರೀದಿ (26) ಬಂಧಿತನಾದ ಆರೋಪಿಯಾಗಿದ್ದಾನ. ಎಪ್ರಿಲ್ 21ರಂದು ಮುಂಜಾನೆ ಸೈಫುದ್ದೀನ್‌ರ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಕಿಚ್ಚಿಟ್ಟು  ನಾಶಗೊಳಿಸಲಾಗಿತ್ತು. ಬೈಕ್‌ನಿಂದ ಬೆಂಕಿ ಹರಡಿ  ಮನೆಯ ಕಿಟಿಕಿಗಳು ಉರಿದು ನಾಶನಷ್ಟ ಉಂಟಾಗಿತ್ತು. ಕಿಚ್ಚಿಟ್ಟ  ಕೃತ್ಯಾದಿಗಳಿಂದ 1,30,000  …

ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ವ್ಯಕ್ತಿಯೊ ಬ್ಬರು ಸೇತುವೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡ್ಲು ತೈವಳಪ್ ಹೌಸ್‌ನ ರಾಮಚಂದ್ರ ಗಟ್ಟಿ (75) ಮೃತ ವ್ಯಕ್ತಿ. ಶಿವಮಂಗಲದ ಸೇತುವೆಯಲ್ಲಿ ಇವರು ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಮಧ್ಯಾಹ್ನ ಪತ್ತೆಯಾಗಿದ್ದಾರೆ. ವಿಷಯತಿಳಿದು ಪೊಲೀಸರು ತಲುಪಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ. ರಾಚಂದ್ರ ಗಟ್ಟಿಯವರ ಪತ್ನಿ ಲೀಲ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಜಯಂತ, ರವಿ, ಹರಿಪ್ರಸಾದ್, ಜಯಶ್ರೀ, ಅಳಿಯ ರಾಜೇಶ, ಸೊಸೆ ರೇವತಿ, ಸಹೋದರ ಕೃಷ್ಣ ಗಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು …

10ರ ಬಾಲಕಿಗೆ ಫಿನಾಯಿಲ್ ಕುಡಿಸಿ ತಾನೂ ಕುಡಿದು ಆತ್ಮಹತ್ಯೆಗೆತ್ನ: ಆರೋಪಿ ಪೋಕ್ಸೋ ಪ್ರಕಾರ ಸೆರೆ

ಬದಿಯಡ್ಕ: 10ರ ಹರೆಯದ ಬಾಲಕಿಗೆ ಫಿನಾಯಿಲ್ ಕುಡಿಸಿ ಬಳಿಕ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಹತ್ಯಾಯತ್ನ ಹಾಗೂ ಪೋಕ್ಸೋ ಪ್ರಕಾರ ದಾಖಲಿಸಿಕೊಂಡ ಪ್ರಕರಣದಲ್ಲಿ ೨೮ರ ಹರೆಯದ ಯುವಕನನ್ನು ಬಂಧಿಸಲಾಗಿದೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ವಾಸಿಸುತ್ತಿದ್ದಾನೆ. ಈತ ಬಾಲಕಿಯ ತಂದೆಯ ಸ್ನೇಹಿತನಾಗಿದ್ದಾನೆಂದು ಹೇಳಲಾಗುತ್ತಿದೆ. ಇದರಿಂದ ಬಾಲಕಿಯ ಮನೆಗೆ ಯುವಕ ನಿರಂತರ ಬರುತ್ತಿದ್ದನೆನ್ನಲಾಗಿದೆ. ಈ ವೇಳೆ ಯುವಕನ ಕೆಟ್ಟ ರೀತಿಯಲ್ಲಿ ವರ್ತಿಸಿದ್ದು, ಅದನ್ನು …

17ರ ಹರೆಯದ ಬಾಲಕಿ ಗರ್ಭಿಣಿ : ಯುವಕನ ವಿರುದ್ಧ ಪೋಕ್ಸೋ ಕೇಸು

ಕುಂಬಳೆ: 17ರ ಹರೆಯದ ಬಾಲಕಿ ಗರ್ಭಿಣಿಯಾದ ಘಟನೆಗೆ ಸಂಬಂಧಿಸಿ 24ರ ಹರೆಯದ ಯುವಕನ ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ. ಬಾಲಕಿ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಯುವಕ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. 18 ವರ್ಷ ಪೂರ್ತಿಗೊಂಡ ಬಳಿಕ ಇವರಿಬ್ಬರ ಮದುವೆ ನಡೆಸಲು ಈ ಇಬ್ಬರ ಮನೆಯವರು ಈ ಹಿಂದೆಯೇ ನಿರ್ಧರಿಸಿರುವುದಾಗಿ ಹೇಳಲಾಗುತ್ತಿದೆ. ಈ ಮಧ್ಯೆ ಕೆಲವು ದಿನಗಳ ಹಿಂದೆ ಬಾಲಕಿಗೆ ಶಾರೀರಿಕ ಅಸ್ವಸ್ಥತೆ ಉಂಟಾಗಿತ್ತೆನ್ನಲಾಗಿದೆ. ಇದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದು, ವೈದ್ಯರು ನಡೆಸಿದ …

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ಮೇ 6ರಂದು ಹೋಟೆಲ್ ಬಂದ್‌ಗೆ ಕರೆ

ತಿರುವನಂತಪುರ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಏರಿಕೆಯನ್ನು ಪ್ರತಿಭಟಿಸಿ ಮೇ ೬ರಂದು ರಾಜ್ಯಾದ್ಯಂತ ಎಲ್ಲಾ ಹೋಟೆಲ್‌ಗಳನ್ನು ಮುಚ್ಚುಗಡೆಗೊಳಿಸಿ ಬಂದ್‌ಗೆ ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್  ಅಸೋಸಿಯೇಷನ್ (ಕೆಎಚ್‌ಆರ್‌ಎ) ಕರೆ ನೀಡಿದೆ. ಬಂದ್‌ನ ಮುನ್ನ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಪ್ರತಿಭಟನೆ ನಡೆಸಲು ಸಂಘಟನೆ ತೀರ್ಮಾನಿಸಿದೆ. ಬಂದ್‌ನ ದಿನದಂದು ಕೇಂದ್ರ, ತೈಲ ಕಂಪೆನಿಗಳ ಮುಂದೆ ಮತ್ತು ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ. ವಾಣಿಜ್ಯ ಬಳಕೆಯ 19 ಕೆಜಿ ಅನಿಲ ಸಿಲಿಂಡರ್ …

ನಾಗರ ಹಾವು ಕಡಿತ : ಚಿಕಿತ್ಸೆಯಲ್ಲಿದ್ದ ಮಗು ಮೃತ್ಯು

ಕಾಸರಗೋಡು: ನಾಗರ ಹಾವಿನ ಕಡಿತಕ್ಕೊಳಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಗು ಮೃತಪಟ್ಟಿದೆ.  ವೆಳ್ಳೆರಿಕುಂಡು ತಾಲೂಕಿನ ನರ್ಕಿಲಕ್ಕಾಡ್ ಎಳೇರಿತಟ್ಟ್ ತೊಟ್ಟಿ ಉನ್ನತಿಯ ಕುರುವಾಟ್ ವೀಟಿಲ್‌ನ ಶರತ್‌ಚಂದ್ರನ್-ಅಜಿತ ದಂಪತಿಯ ಪುತ್ರಿ ಋತುಚಂದ್ರ (ನಾಲ್ಕೂವರೆ ವರ್ಷ) ಮೃತಪಟ್ಟ ಮಗುವಾಗಿದೆ. ಕಳೆದ ಸೋಮವಾರ ಮಗುವಿಗೆ ಮನೆ ಪರಿಸರದಲ್ಲಿ ಹಾವು ಕಡಿದಿತ್ತು. ಆಟವಾಡುತ್ತಿದ್ದಾಗ ದೂರಕ್ಕೆ ಬಿದ್ದ ಚೆಂಡನ್ನು ಹೆಕ್ಕಲು ಹೋದ ವೇಳೆ ಮಗುವಿಗೆ ನಾಗರಹಾವು ಕಡಿದಿತ್ತು. ಇದರಿಂದ ಅಸ್ವಸ್ಥಗೊಂಡ ಮಗುವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ …

ಕುಂಬಳೆ ಬಸ್ ತಂಗುದಾಣ: 4 ದಿನಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ಬಸ್ ತಡೆಯುವುದಾಗಿ ಮರ್ಚೆಂಟ್ಸ್ ಅಸೋಸಿಯೇಶನ್

ಕುಂಬಳೆ: ತಮ್ಮ ಬೇಡಿಕೆಯನ್ನು ನಾಲ್ಕು ದಿನಗಳೊಳಗೆ ಜ್ಯಾರಿಗೊಳಿಸದಿದ್ದರೆ ಬಸ್‌ಗಳನ್ನು ಕುಂಬಳೆಯಲ್ಲಿ ತಡೆಯುವುದಾಗಿ ಮರ್ಚೆಂಟ್ಸ್ ಅಸೋಸಿಯೇಶನ್ ಪ್ರತಿನಿಧಿಗಳು ಪೊಲೀಸರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಹಾಗಿದ್ದರೆ ಕಾನೂನು ಕ್ರಮ ಎದುರಿಸಲು ಬಸ್ ತಡೆಯುವವರು ಸಿದ್ಧರಾಗಿಕೊಳ್ಳಬೇಕೆಂದು ಪೊಲೀಸರು ಸೂಚಿಸಿದ್ದಾರೆ. ಕಳೆದ ಪಂಚಾಯತ್ ಆಡಳಿತ ಸಮಿತಿ ಬದಲಿಸಿದ ಬಸ್ ತಂಗುದಾಣಗಳನ್ನು ಆಂಶಿಕವಾಗಿ ಹಳೆಯ ಸ್ಥಳದಲ್ಲೇ ಪುನರ್ ಸ್ಥಾಪಿಸಬೇಕೆಂಬ ಈಗಿನ ಪಂಚಾಯತ್ ಆಡಳಿತ ಸಮಿತಿಯ ನಿರ್ದೇಶ ಬಸ್ ನೌಕರರು ಅವಗಣಿಸಿದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿದ್ದು, ಪೊಲೀಸರು ಈ ಸಂಬಂಧ ಸಂಬಂಧಪಟ್ಟವರ ಸಭೆ ಕರೆದಿದ್ದರು. ಪಂಚಾಯತ್ ಆಡಳಿತಾಧಿಕಾರಿಗಳು, …

ವಿಶ್ವ ಕಾರ್ಮಿಕರ ದಿನ: ಜಿಲ್ಲೆಯ ವಿವಿಧೆಡೆ ಮೆರವಣಿಗೆ, ಸಾರ್ವಜನಿಕ ಸಭೆ

ಕಾಸರಗೋಡು: ವಿಶ್ವ ಕಾರ್ಮಿಕರ ದಿನದಂಗವಾಗಿ ಕಾರ್ಮಿಕರು ನಿನ್ನೆ ಮೆರವಣಿಗೆ ನಡೆಸಿದರು. 8 ಗಂಟೆ ಕೆಲಸ ಹಾಗೂ 8 ಗಂಟೆ ವಿಶ್ರಾಂತಿ ೮ ಗಂಟೆ ವಿನೋದ ಖಚಿತಪಡಿಸಲು ನಡೆಸಿದ ಐತಿಹಾಸಿಕ ಮುಷ್ಕರದ ಯಶಸ್ಸನ್ನು ಸ್ಮರಿಸಿಕೊಂಡು ಮೇ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ರಾಷ್ಟ್ರೀಯ – ಪ್ರಾದೇಶಿಕ- ಜಿಲ್ಲಾ ಮಟ್ಟಗಳಲ್ಲಿ ಕಾರ್ಮಿಕ ಸಂಘಟನೆಗಳು ದಿನಾಚರಣೆಯಂಗವಾಗಿ ರ‍್ಯಾಲಿ, ಸಾರ್ವಜನಿಕಸಭೆ ನಡೆಸಿವೆ. ಕಾಸರಗೋಡಿನಲ್ಲಿ ನಡೆದ ಸಂಯುಕ್ತ ಟ್ರೇಡ್ ಯೂನಿಯನ್ ಕಾರ್ಯಕ್ರಮವನ್ನು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮಣಿಮೋಹನ್ ಉದ್ಘಾಟಿಸಿದರು. ಎಐಟಿಯುಸಿ ಮುಖಂಡ ಮಧುಸೂದನನ್ …

ಬೋಳಂಗಳ ಸ್ಮಶಾನ ಪರಿಸರದ ರಸ್ತೆ ಬದಿ ವ್ಯಾಪಕ ಪ್ಲಾಸ್ಟಿಕ್  ತ್ಯಾಜ್ಯ: ಶುಚೀಕರಣಕ್ಕೆ ಒತ್ತಾಯ

ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕಳಾಯಿ ರಸ್ತೆಯ ಬೋಳಂಗಳ ಸ್ಮಶಾನದ ಸಮೀಪದ ರಸ್ತೆ ಬದಿಯಲ್ಲಿ ವ್ಯಾಪಕ ಪ್ಲಾಸ್ಟಿಕ್ ತ್ಯಾಜ್ಯ ರಾಶಿಯಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದ್ದು, ಶುಚೀಕರಣಕ್ಕೆ ಒತ್ತಾಯಿಸಿದ್ದಾರೆ. ನೂರಾರು ಮಂದಿ ಸಂಚರಿಸುವ ರಸ್ತೆ ಬದಿಯಲ್ಲಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ಉಪೇಕ್ಷಿಸಗುv್ತದ್ದು ಇದು ಹರಡಿ ಸಂಚಾರಕ್ಕೆ ಸಮಸ್ಯೆ ಸೃಷ್ಟಿಯಾಗಿರುವುದಾಗಿ ದೂರಲಾಗಿದೆ. ತ್ಯಾಜ್ಯ ಉಪೇಕ್ಷಿಸುವವರ ವಿರುದ್ದ ಕಠಿಣ ಕ್ರಮಕ್ಕೆ ಪಂಚಾಯತ್ ಅಧಿಕಾರಿಗಳು ಮುಂದಾಗಬೇಕೆAದು ನಾಗರಿಕರು ಒತ್ತಾಯಿಸಿದ್ದಾರೆ. ಕೂಡಲೇ ಶುಚೀಕರಣಗೊಳಿಸದಿದ್ದಲ್ಲಿ ಮುಂದಿನ ಮಳೆೆಗಾಲದಲ್ಲಿ ಶೋಚನೀಯÁವಸ್ಥೆಗೆ ತಲುಪಿ ಸಂಚಾರಕ್ಕೆ ಇನ್ನಷ್ಟು ಸಮಸ್ಯೆ ಉಂಟಾಗಲಿದೆ. …

ಕನಿಲ ಕ್ಷೇತ್ರಕ್ಕೆ ಕೊಪ್ಪರಿಗೆ ಸಮರ್ಪಣೆ

ಮಂಜೇಶ್ವರ: ಕನಿಲ ಶ್ರೀ ಭಗವತೀ ಕ್ಷೇತ್ರದ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಮಚ್ಚಂಬಾಡಿ ಪಾವೂರು ವಿಭಾಗದ ವತಿಯಿಂದ ಕ್ಷೇತ್ರಕ್ಕೆ ಅಕ್ಷಯಪಾತ್ರೆ (ಕೊಪ್ಪರಿಗೆ) ಸಮರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಗುರಿಕ್ಕಾರರಾದ ಪುರುಷೋತ್ತಮ, ಪ್ರಸಾದ್, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾವೂರು, ಪಾವೂರು ವಿಭಾಗದ ಅಧ್ಯಕ್ಷ ಮನೋಜ್ ಕೊಪ್ಪಳ, ಜಯರಾಜ್ ಬಜಾಲ್, ಶಿವಕುಮಾರ ಬಳ್ಳೂರು, ಸುರೇಶ್ ಬೋಳ್ಯಾಂಗೋಡಿ, ದಿವಾಕರ ಚೌಕಿ, ಸುಧಾಮಣಿ ಅರಿಬೈಲು, ಮಲ್ಲಿಕಾ ಬೇಕರಿ, ಸರಿತಾ ಕುಂಡಾಪು, ಲಲಿತ ತೌಡುಗೋಳಿ, ಚಿರಶ್ರೀ, ಚಂದ್ರಾವತಿ, ನಾರಾಯಣ, ವಿನೋದ್ ಭಾಗವಹಿಸಿದರು.