ನಿರಂತರ ಹೋರಾಟ ಫಲ ಬೀರಲಿಲ್ಲ: ಚೆರ್ಕಳ-ಅಡ್ಕಸ್ಥಳ ರಸ್ತೆ ಬೇಸಿಗೆ ಮಳೆಗೆ ಕೆಸರುಗದ್ದೆಯಾಗಿ ಮಾರ್ಪಾಡು

ಬದಿಯಡ್ಕ: ನಿರಂತರ ಜನರ ಪ್ರತಿಭಟನೆ, ಬೇಡಿಕೆ ಉಂಟಾಗಿದ್ದರೂ ಯಾವುದೇ ಫಲವಿಲ್ಲದ ಚೆರ್ಕಳ- ಅಡ್ಕಸ್ಥಳ ರಸ್ತೆ ಈಗ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಗೆ ತಲುಪಿದೆ. ಈ ರಸ್ತೆಯ ಪಳ್ಳತ್ತಡ್ಕದಲ್ಲಿ ಬೃಹತ್ ಹೊಂಡ ಸೃಷ್ಟಿಯಾಗಿ ವಾಹನಗಳಿಗೆ ಸಂಚಕಾರ ಉಂಟುಮಾಡುತ್ತಿದೆ. ಚೆರ್ಕಳ- ಅಡ್ಕಸ್ಥಳ ರಸ್ತೆ ದುರಸ್ತಿಗೊಳಿ ಸಬೇಕೆಂದು ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘಸಂಸ್ಥೆಗಳು ಹಲವು ಬಾರಿ ಹೋರಾಟ ನಡೆಸಿದ್ದವು. ಆದರೆ ಶಾಸಕರಿಂದಾಗಲೀ, ಲೋಕೋ ಪಯೋಗಿ ಇಲಾಖೆಯಿಂದಾಗಲೀ ಸೂಕ್ತ ಕ್ರಮ ಇದುವರೆಗೂ ಉಂಟಾಗಲಿಲ್ಲ.

ರಸ್ತೆ ದುರಸ್ತಿಗೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇದುವರೆಗೂ ಬಹಿರಂಗಗೊಂಡಿಲ್ಲ. ಕರ್ನಾಟಕವನ್ನು ಸಂಪರ್ಕಿಸುವ ಪ್ರಧಾನ ರಸ್ತೆ ಇದಾಗಿದ್ದು, ವಿಟ್ಲ, ಪುತ್ತೂರು, ಧರ್ಮಸ್ಥಳ ಕ್ಷೇತ್ರ ಸಹಿತ ವಿವಿಧ ಪ್ರದೇಶಗಳಿಗೆ ಈ ರಸ್ತೆ ಮೂಲಕ ಸಂಚರಿಸಬೇಕಾಗಿದೆ. ನಿನ್ನೆ ಬೇಸಿಗೆ ಮಳೆ ಸುರಿದ ಹಿನ್ನೆಲೆಯಲ್ಲಿ ಹೊಂಡದಲ್ಲಿ ನೀರು ತುಂಬಿಕೊಂಡು ಪಳ್ಳತ್ತಡ್ಕ ಕೆಸರುಗದ್ದೆಯಾಗಿ ಬದಲಾಗಿದೆ. ರಸ್ತೆಯ ದುರಸ್ತಿ ಶೀಘ್ರ ನಡೆಸಿ ಸುಗಮ ಸಂಚಾರ ಯಾವಾಗ ಸಾಧ್ಯವಾಗಬಹುದೆಂಬ ಬಗ್ಗೆ ಸಾರ್ವಜನಿಕರು ಈಗ ಪ್ರಶ್ನಿಸುತ್ತಿದ್ದಾರೆ.

RELATED NEWS

You cannot copy contents of this page