ವಿಶ್ವ ಪರಿಸರ ದಿನಾಚರಣೆ: ಎಕೆಪಿಎ ಈಸ್ಟ್ ಘಟಕದಿಂದ ಗಿಡ ವಿತರಣೆ
ಕಾಸರಗೋಡು: ವಿಶ್ವ ಪರಿಸರ ದಿನಾಚರಣೆಯಂಗವಾಗಿ ಎಕೆಪಿಎ ಭವನದಲ್ಲಿ ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಈಸ್ಟ್ ಘಟಕದ ನೇತೃತ್ವದಲ್ಲಿ ಗಿಡ ವಿತರಣೆ ನಡೆಯಿತು. ವಲಯಾಧ್ಯಕ್ಷ ವಾಮನ್ ಕುಮಾರ್ ಸಂಜೀವ ರೈಯವರಿಗೆ ಗಿಡ ನೀಡಿ ಉದ್ಘಾಟಿಸಿದರು. ಬಳಿಕ ೫೦ ಗಿಡಗಳನ್ನು ಘಟಕದ ಸದಸ್ಯರಿಗೆ ವಿತರಿಸಲಾಯಿತು. ಕಾರ್ಯದರ್ಶಿ ಅಖಿಲ್ ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಕಾಂತ್, ನೇಚರ್ ಕ್ಲಬ್ ಕೋ-ಆರ್ಡಿನೇಟರ್ ದಿನೇಶ್, ಮನೀಶ್, ಸತೀಶ್ ಭಾಗವಹಿಸಿದರು.