ಅಕ್ರಮ ಹಣ ವರ್ಗಾವಣೆ ಪ್ರಕರಣ: ಅಪೀಲು ತಿರಸ್ಕೃತ; ತನಿಖೆ ಮುಂದುವರಿಸುವಂತೆ ಹೈಕೋರ್ಟ್ ನಿರ್ದೇಶ

ಕೊಚ್ಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್‌ಫೋರ್ಸ್‌ಮೆಂಟ್ ತನಿಖೆ ಮುಂದುವರಿಸಬಹುದೆಂದು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ.  ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅಪೀಲು ಸಲ್ಲಿಸಲು ಎರಡು ವಾರಗಳ ಸಮಯ ನೀಡಬೇಕೆಂಬ ಸಿಎಂಆರ್‌ಎಲ್ ಕಂಪೆನಿಯ ನ್ಯಾಯವಾದಿಯ ಬೇಡಿಕೆಯನ್ನೂ ಹೈಕೋರ್ಟ್ ತಿರಸ್ಕರಿಸಿದೆ. ಈ ತೀರ್ಪಿನೊಂದಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ರಾಜ್ಯದ ರಾಜಕೀಯದಲ್ಲಿ ಮತ್ತೆ ಚರ್ಚೆಯಾಗಲಿದೆ.  ಇ.ಡಿ ತನಿಖೆ ನಡೆಸಬಹುದೆಂದು ಹೈಕೋರ್ಟ್‌ನ ಏಕ ಸದಸ್ಯ ಪೀಠ ಈ ಮೊದಲು ತೀರ್ಪು ನೀಡಿತ್ತು. ಇದರ ಆಧಾರದಲ್ಲಿ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ …

ಸಿಡಿಲು ಆಘಾತ: ನಾಯ್ಕಾಪಿನಲ್ಲಿ ಎರಡು ಮನೆಗಳಿಗೆ ವ್ಯಾಪಕ ಹಾನಿ

ಕುಂಬಳೆ: ನಿನ್ನೆ ರಾತ್ರಿ  11 ಗಂಟೆ ವೇಳೆ ಸಂಭವಿಸಿದ  ಸಿಡಿಲಿನ ಆಘಾತದಿಂದ ಎರಡು ಮನೆಗಳಿಗೆ ಹಾನಿಯುಂಟಾ ಗಿದೆ. ನಾಯ್ಕಾಪು ರಾಮೇಶ್ವರನಗರದ ಶಕುಂತಲ, ಯಮುನ ಎಂಬಿವರ ಮನೆಗಳಿಗೆ ಸಿಡಿಲಿನ ಆಘಾತವುಂ ಟಾಗಿದೆ.  ಮನೆಗಳ ವಿದ್ಯುತ್ ಮೈನ್‌ಸ್ವಿಚ್, ಫ್ಯಾನ್ ಸಹಿತ ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ.  ಗೋಡೆ ಬಿರುಕುಬಿಟ್ಟಿದೆ. ಶಕುಂತಲರ ಮನೆಯಲ್ಲಿ ಘಟನೆ ವೇಳೆ ಮಕ್ಕಳ ಸಹಿತ ಐದು ಮಂದಿ, ಯಮುನರ ಮನೆಯಲ್ಲಿ ಮೂರು ಮಂದಿ ಇದ್ದರು.  ಶಬ್ದ ಕೇಳಿ ಇವರು ಮನೆಯಿಂದ ಹೊರಗೆ ಓಡಿದುದರಿಂದ ಅಪಾಯ ದಿಂದ ಪಾರಾಗಿದ್ದಾರೆ. ಪಂಚಾಯತ್ …

ಯುವಕ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಏಕಾಂಗಿಯಾಗಿ ವಾಸಿಸುತ್ತಿದ್ದ ಯುವಕ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮಣಿಯಂಪಾರೆ ಬಳಿಯ ಮಂಜೊಟ್ಟಿ ಎಂಬಲ್ಲಿನ ದಿ| ದೇವಣ್ಣ ನಾಯ್ಕ್-ಲಲಿತ ದಂಪತಿಯ ಪುತ್ರ ಪ್ರವೀಣ (41) ಮೃತಪಟ್ಟ ವ್ಯಕ್ತಿ. ಕೂಲಿ ಕಾರ್ಮಿಕನಾದ ಇವರು ಅವಿವಾಹಿತನಾಗಿದ್ದಾರೆ. ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಇವರಿಗೆ ಸಹೋದರಿ ನಿನ್ನೆ ಬೆಳಿಗ್ಗಿನಿಂದ ಹಲವು ಬಾರಿ ಫೋನ್ ಕರೆ ಮಾಡಿದರೂ ಫೋನೆತ್ತಲಿಲ್ಲ ವೆನ್ನಲಾಗಿದೆ. ಈ ಹಿನ್ನೆಲೆಯಲ್ಲ್ಲಿ ನಿನ್ನೆ ಸಂಜೆ ಮನೆಗೆ ಬಂದು ನೋಡಿದಾಗ ಪ್ರವೀಣ ಮೃತಪಟ್ಟ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಬದಿಯಡ್ಕ …

ಮಹಿಳೆಯರಿಗೆ ಉಚಿತ ಪ್ರಯಾಣ ಕೆಎಸ್‌ಆರ್‌ಟಿಸಿ ಆರ್ಡಿನರಿ ಬಸ್‌ಗಳಲ್ಲಿ  ಮಾತ್ರ

ತಿರುವನಂತಪುರ:  ಯುಡಿಎಫ್ ಸರಕಾರದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಗಳಲ್ಲೊಂದಾದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯವನ್ನು ಕೆಎಸ್‌ಆರ್‌ಟಿಸಿಯ ಆರ್ಡಿನರಿ ಬಸ್‌ಗಳಲ್ಲಿ ಮಾತ್ರವಾಗಿ ಸೀಮಿತಗೊಳಿಸಲು ಸರಕಾರ ಮುಂದಾ ಗಿದೆ.  ರಾಜ್ಯ ಸಚಿವ ಸಂಪುಟದ ಮುಂದಿನ ಸಭೆಯಲ್ಲಿ  ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಫಾಸ್ಟ್ ಪ್ಯಾಸೆಂಜರ್ ಮತ್ತು ಅದಕ್ಕಿಂತ ಮೇಲ್ಪಟ್ಟ ಶ್ರೇಣಿಯ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಪ್ರಾಯೋಗಿಕವಲ್ಲವೆಂದು ಈ ಬಗ್ಗೆ  ಅಧ್ಯಯನ ನಡೆಸಿದ ಕೆಎಸ್‌ಆರ್‌ಟಿಸಿ ತಜ್ಞರ ಸಮಿತಿ ಸರಕಾರಕ್ಕೆ ತಿಳಿಸಿದೆ. ರಾಜ್ಯದ ಹೆಚ್ಚಿನ …

ಕಾಸರಗೋಡಿನಲ್ಲಿ ವಿಶ್ವ ಪರಿಸರದಿನಾಚರಣೆ

ಕಾಸರಗೋಡು: ವಿಶ್ವ ಪರಿಸರದಿನದಂಗವಾಗಿ ಸೋಶ್ಯಲ್ ಪೊಲೀಸಿಂಗ್ ಡಿವಿಶನ್, ಎಸ್‌ಪಿಸಿ ಕಾಸರಗೋಡು, ಶ್ರೀ ಕುರುಂಬಾ  ಭಗವತೀ ಕ್ಷೇತ್ರ ಕಡಪ್ಪುರ ಎಂಬಿವುಗಳ ಸಂಯುಕ್ತಾಶ್ರಯ ದಲ್ಲಿ ಇಂದು ಬೆಳಿಗ್ಗೆ ಕಾಸರ ಗೋಡು ಕಡಪ್ಪುರದಲ್ಲಿ ಗಿಡ ನೆಟ್ಟು ಶುಚೀಕರಣ ನಡೆಸಲಾಯಿತು. ಭೂಮಿಯನ್ನು ರಕ್ಷಿಸಿ ಎಂಬ ಸಂದೇಶದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಎಚ್‌ಎಸ್‌ನ  ಸ್ಟುಡೆಂಟ್ ಪೊಲೀಸ್, ನಾಯಮ್ಮಾರ್ ಮೂಲೆ ಟಿಐಎಚ್‌ಎಸ್‌ಎಸ್, ತಳಂಗರೆ ಜಿಎಂವಿಎಚ್ ಎಸ್‌ಎಸ್‌ನ 1975 ಬ್ಯಾಚ್  ಸಹಕಾರ ನೀಡಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಗಿಡ ನೆಟ್ಟು ಕಾರ್ಯಕ್ರಮ …

ಜಿಲ್ಲೆಯ ಮೂರು  ಆರ್.ಟಿ.ಒ ಕಚೇರಿಗಳಿಗೆ ವಿಜಿಲೆನ್ಸ್ ದಾಳಿ: ನಗದು ವಶ, ಅವ್ಯವಹಾರ ಪತ್ತೆ

ಕಾಸರಗೋಡು: ರಾಜ್ಯ ಮೋಟಾರು ವಾಹನ ಇಲಾಖೆ  ಜಿಲ್ಲೆಯ ಮೂರು ಆರ್‌ಟಿಒ ಕಚೇರಿಗಳಿಗೆ ವಿಜಿಲೆನ್ಸ್ ತಂಡ  ಏಕಕಾಲದಲ್ಲಿ  ದಾಳಿ  ನಡೆಸಿದೆ. ಕಾಸರಗೋಡು ವಿಜಿಲೆನ್ಸ್ ಆಂಡ್ ಆಂಟಿ ಕರಪ್ಶನ್ ಬ್ಯೂರೋದ ಡಿವೈಎಸ್ಪಿ ಉಣ್ಣಿಕೃಷ್ಣನ್ ನೇತೃತ್ವದ ತಂಡಗಳು ಈ ದಾಳಿ ನಡೆಸಿವೆ. ಈ ದಾಳಿಯಲ್ಲಿ ಕಾಸರಗೋಡು ಆರ್‌ಟಿಒ ಕಚೇರಿಯ ಆವರಣದ  ಹೂವಿನ ಕುಂಡದಲ್ಲಿ ಬಚ್ಚಿಡಲಾಗಿದ್ದ 17,150 ರೂ.ವನ್ನು ವಿಜಿಲೆನ್ಸ್ ತಂಡ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಕಾಸರಗೋಡು ಮಾತ್ರವಲ್ಲ ಹೊಸದುರ್ಗ ಮತ್ತು ವೆಳ್ಳರಿಕುಂಡು ಆರ್‌ಟಿಒ ಕಚೇರಿಗಳಿಗೂ ವಿಜಿಲೆನ್ಸ್ ದಾಳಿ ಮತ್ತು ಪರಿಶೀಲನೆ ನಡೆಸಿದ್ದು, …

ವೈದ್ಯಶಾಲೆಗೆ ನುಗ್ಗಿ ಮಾಲಕನಿಗೆ ಹಲ್ಲೆ: 3ಮಂದಿ ವಿರುದ್ಧ ಕೇಸು

ಉಪ್ಪಳ: ಆಯುರ್ವೇದ ಮದ್ದಿನಂಗಡಿಗೆ ನುಗ್ಗಿ ಅದರ ಮಾಲಕನಿಗೆ ಹಲ್ಲೆಗೈದ ಆರೋಪದಂತೆ ಮೂರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಉಪ್ಪಳ ರೈಲ್ವೇ ನಿಲ್ದಾಣ ಸಮೀಪ ಕಾರ್ಯಾಚರಿಸುವ ಧನ್ವಂತರಿ ವೈದ್ಯಶಾಲೆಯ ಮಾಲಕ ಕಯ್ಯಾರು ಕುಂಡಚ್ಚಕಟ್ಟೆಯ ಬೀಡು ನಿವಾಸಿ ರವಿಚಂದ್ರ ಕೆ. ನೀಡಿದ ದೂರಿನಂತೆ ಉಪ್ಪಳ ನಿವಾಸಿ ಸವಾದ್ ಸೇರಿದಂತೆ 3 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೊನ್ನೆ ಮಧ್ಯಾಹ್ನ ರವಿಚಂದ್ರರ ವೈದ್ಯಶಾಲೆ ಸಮೀಪ ನಿಲ್ಲಿಸಿದ್ದ ಅವರ ಕಾರಿನ ಸಮೀಪದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಆರೋಪಿಗಳ …

ಚಳ್ಳಂಗಯ ಶಾಲೆಯಲ್ಲಿ ಅಧ್ಯಾಪಕನ ವಿರುದ್ಧ ನಾಗರಿಕರು ರಂಗಕ್ಕೆ

ಕುಂಬಳೆ: ಧರ್ಮತ್ತಡ್ಕ ಚಳ್ಳಂಗಯ ಎಂ.ಐ.ಎ.ಎಲ್.ಪಿ ಶಾಲೆಯ ಅಧ್ಯಾಪಕ ಕೆ.ವಿ. ಜಯಪ್ರಸಾದ್ ವಿರುದ್ಧ ಮಕ್ಕಳ ರಕ್ಷಕರು ಮತ್ತೆ ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿದ್ದಾರೆ. ಡಿಇಒರ ನಿರ್ದೇಶ ಮೇರೆಗೆ ಬದಿಯಡ್ಕ ಪೊಲೀಸರು ತಲುಪಿದ ಬಳಿಕವೇ ಅಧ್ಯಾಪಕನಿಗೆ ಹಾಜರು ದಾಖಲಿಸಲು ಅವಕಾಶ ನೀಡಿರುವುದಾಗಿ ಹೇಳಲಾಗುತ್ತಿದೆ. ಪ್ರವೇಶೋತ್ಸವ ಬಳಿಕ ಈ ಅಧ್ಯಾಪಕ ನಿನ್ನೆ ಶಾಲೆಗೆ ತಲುಪಿರುವುದಾಗಿ ರಕ್ಷಕರು ತಿಳಿಸಿದ್ದಾರೆ. ಮಕ್ಕಳನ್ನು ತರಗತಿ ಕೊಠಡಿಯಲ್ಲಿ ಕೂಡಿಹಾಕುವುದು, ಶೌಚಾಲಯಕ್ಕೆ ತೆರಳಲು ಮಕ್ಕಳಿಗೆ ಅನುಮತಿ ನೀಡದಿರುವುದು ಮೊದಲಾದ ಆರೋಪಗಳ ಹಿನ್ನೆಲೆಯಲ್ಲಿ ಅಧ್ಯಾಪಕನನ್ನು ಅಮಾನತುಗೊಳಿಸಲಾಗಿತ್ತು. ಅಧ್ಯಾಪಕನ ಅಮಾನತು ಕ್ರಮ ಮುಂದುವರಿಸದಿದ್ದಲ್ಲಿ ಮಕ್ಕಳನ್ನು …

ಪೊಡಿಪ್ಪಳ್ಳ -ಬೆಳಿಂಜ ರಸ್ತೆ ಅಭಿವೃದ್ಧಿಗೊಳಿಸುವುದಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಭರವಸೆ

ಕುಂಬ್ಡಾಜೆ: ಪೊಡಿಪ್ಪಳ್ಳ- ಕುಂಬ್ಡಾಜೆ- ಬೆಳಿಂಜ- ನಾಟೆಕಲ್ಲು ಜಿಲ್ಲಾ ಪಂಚಾಯತ್ ರಸ್ತೆ ಅಭಿವೃದ್ಧಿಗೊಳಿಸಲಾಗುವುದೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಎಬ್ರಹಾಂ ಜನಪರ ಅಭಿವೃದ್ಧಿ ಸಮಿತಿಗೆ ಭರವಸೆ ನೀಡಿದರು. ಸಮಿತಿ ಪ್ರತಿನಿಧಿಗಳು ಈ ಬಗ್ಗೆ ನೀಡಿದ ಮನವಿಗೆ ಉತ್ತರವಾಗಿ ಅವರು ಈ ಭರವಸೆ ನೀಡಿದ್ದಾರೆ. ರಸ್ತೆಗೆ ತುರ್ತಾಗಿ ಮಾಡಬೇಕಾದ ಕೆಲಸ ಆರಂಭಗೊಂಡಿತು. ರೀ ಟಾರಿಂಗ್ ನಡೆಸಿ ರಸ್ತೆಯನ್ನು ಸಂಚಾರ ಯೋಗ್ಯಗೊಳಿಸಲಾಗುವುದೆಂದು ಅವರು ತಿಳಿಸಿದರು. ಜನಪರ ಸಮಿತಿ ಸದಸ್ಯರಾದ ನ್ಯಾಯವಾದಿ ಪ್ರಸನ್ನ ಕುಮಾರ್, ಡಾ. ವೇಣುಗೋಪಾಲ್ ಕೆ, ಫಾರೂಕ್ ಕುಂಬ್ಡಾಜೆ, ನಾರಾಯಣ …

ರಾಷ್ಟ್ರೀಯ ಹೆದ್ದಾರಿ: ಸರ್ವೀಸ್ ರಸ್ತೆ ಪ್ರವೇಶಿಸದ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು- ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ

ಕಾಸರಗೋಡು: ಸರ್ವೀಸ್ ರಸ್ತೆಗೆ ಪ್ರವೇಶಿಸದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಸೇವೆ ನಡೆಸುತ್ತಿರುವ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಮೊಗ್ರಾಲ್ ಪುತ್ತೂರು ಘಟಕದ ಮಹಾಸಭೆ ಆಗ್ರಹಪಟ್ಟಿದೆ. ಹಲವು ಬಸ್‌ಗಳು ಸರ್ವೀಸ್ ರಸ್ತೆಗೆ ಪ್ರವೇಶಿಸದೆ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದು ಹೋಗುತ್ತಿವೆ. ಇದು ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ಇತರ ಪ್ರಯಾಣಿಕರನ್ನು ತೀವ್ರ ಸಂಕಷ್ಟದಲ್ಲಿ ಸಿಲುಕಿಸುವಂತೆ ಮಾಡುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಇದಕ್ಕೆ ತುರ್ತು ಪರಿಹಾರ ಕ್ರಮಕೈಗೊಳ್ಳಬೇಕೆಂದು ಸಭೆ ಆಗ್ರಹಪಟ್ಟಿದೆ. ಘಟಕದ ಅಧ್ಯಕ್ಷ ಎಸ್.ಎಂ. …