ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿಗೆ ಸಂಬಂಧಿಸಿ ಚೆರ್ಕಳದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ರಾಶಿ ಹಾಕಿದ್ದ ಮಣ್ಣು ಮಳೆ ನೀರಿನೊಂದಿಗೆ ಕೆಳ ಭಾಗದಲ್ಲಿದ್ದ ಮನೆಗಳಿಗೆ ಹರಿದು ಬಂದು ಉಂಟಾದ ಸಮಸ್ಯೆಗೆ ತುರ್ತು ಪರಿಹಾರ ಕಾಣಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಪರಿಹಾರ ಕ್ರಮ ಉಂಟಾಗುತ್ತಿದೆ. ಚೆಂಗಳ ಪಂಚಾಯತ್‌ನ ಅಧ್ಯಕ್ಷ ವಸಂತ ಅಜಕ್ಕೋಡ್, ವಾರ್ಡ್ ಪ್ರತಿನಿಧಿಗಳು, ಇತರ ಜನಪ್ರತಿನಿಧಿಗಳು ತೀವ್ರ ಬೇಡಿಕೆ ಒಡ್ಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಸಂದರ್ಶಿಸಿ ತುರ್ತು ಕ್ರಮ ಕೈಗೊಳ್ಳಲು ಯೋಜನೆ ಹಾಕಿದ್ದಾರೆ. ಕಾಸರಗೋಡು ಆರ್‌ಡಿಒ ಬಿನು ಜೋಸೆಫ್, ತಹಶೀಲ್ದಾರ್ ಶೆರಿನ್ ಬಾಬು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ನಿರ್ಮಾಣ ಕಂಪೆನಿಯ ಪ್ರತಿನಿಧಿಗಳು ಎಂಬಿವರ ತಂಡ ನೇರವಾಗಿ ಸ್ಥಳಕ್ಕೆ ತಲುಪಿ ಸಮಸ್ಯೆ ಬಗ್ಗೆ ಮನವರಿಗೆ ಮಾಡಿಕೊಂಡಿದೆ. ಇದಕ್ಕೆ ಪರಿಹಾರವಾಗಿ ತಾತ್ಕಾಲಿಕ ಬಂಡ್ ನಿರ್ಮಾಣ, ಮೇಲ್ಸೇತುವೆಯ ಕಂಬಗಳ ಸಮೀಪ ತಾತ್ಕಾಲಿಕವಾಗಿ ಬಂಡ್ ನಿರ್ಮಿಸಿ ಹರಿಯುವ ನೀರನ್ನು ತಡೆದು ನಿಲ್ಲಿಸುವುದು, ಈ ನೀರನ್ನು ಸುರಕ್ಷಿತವಾಗಿ ಚರಂಡಿಗಳ ಮೂಲಕ ಹರಿಯಬಿಡುವುದಕ್ಕೆ ಕ್ರಮ ಕೂಡಲೇ ಆರಂಭಿಸಲಾಗುವುದು.
ರಾಷ್ಟ್ರೀಯ ಹೆದ್ದಾರಿ ನಿರ್ಮಾ ಣಕ್ಕೆ ಸಂಬಂಧಿಸಿ ಮುಂದಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ನಾಳೆ ಕಾಸರಗೋಡು ಆರ್‌ಡಿಒ ಕಚೇರಿಯಲ್ಲಿ ಪ್ರತ್ಯೇಕ ಸಭೆ ನಡೆಯ ಲಿದೆ. ಬ್ಲೋಕ್, ಪಂಚಾ ಯತ್ ಅಧ್ಯಕ್ಷರು, ಸದಸ್ಯರು, ಇತರ ಜನಪ್ರತಿ ನಿಧಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗುತ್ತಿಗೆ ಕಂಪೆನಿ ಪ್ರತಿನಿಧಿಗಳು ಭಾಗವಹಿಸು ವರು ಎಂದು ಆರ್‌ಡಿಒ ತಿಳಿಸಿದ್ದಾರೆ.






