ಇಂಧನ ಬೆಲೆ ಏರಿಕೆ: ಸಿಪಿಎಂನಿಂದ ಪ್ರತಿಭಟನೆ

ಉಪ್ಪಳ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆದುರಾಗಿ ಸಿಪಿಎಂ ನೇತೃತ್ವದಲ್ಲಿ ರಾಜ್ಯದೆ ಲ್ಲಡೆ ಪ್ರತಿಭಟನೆ ನಡೆಸುವುದರ ಅಂಗವಾಗಿ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿಯ ನೇತೃತ್ವದಲ್ಲಿ ಪೈವಳಿಕೆ ಅಂಚೆ ಕಚೇರಿಗೆ ಧರಣಿ ನಡೆಸಲಾಯಿತು. ಸಿಪಿಎಂ ರಾಜ್ಯ ಸಮಿತಿ ಸದಸ್ಯ ಕೆ.ಪಿ ಸತೀಶ್ಚಂದ್ರನ್ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್ ಜಯಾನಂದ ಮಾತನಾಡಿದರು. ಸಿಪಿಎಂ ಏರಿಯಾ ಸಮಿತಿ ಸದಸ್ಯ ಅಬ್ದುಲï ರಝಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಸಿಜಿ ಮ್ಯಾಥ್ಯು ಸ್ವಾಗತಿಸಿದರು. ಏರಿಯಾ ಸಮಿತಿ ಸದಸ್ಯರಾದ ಬೇಬಿ ಶೆಟ್ಟಿ, ವಿನಯ್ ಕುಮಾರ್, ಸಾದಿಕ್ ಚೆರುಗೋಳಿ, ಭಾರತಿ ಎಸ್, ಕಮಲಾಕ್ಷ ಡಿ, ಪ್ರಶಾಂತ್ ಕನಿಲ ಎಂಬಿವರು ಮಾತನಾಡಿದರು.

RELATED NEWS

You cannot copy contents of this page