ಇಂದು ತಡರಾತ್ರಿಯಿಂದ ಟ್ರೋಲಿಂಗ್ ನಿಷೇಧ
ಕಾಸರಗೋಡು: ಮಳೆಗಾಲ ಮೀನುಗಳ ಸಂತಾನೋತ್ಪತ್ತಿಯ ಋತುವಾಗಿದೆ. ಇದರಿಂದಾಗಿ ಮೀನುಗಳ ಸಂತಾನೋತ್ಪತ್ತಿಯನ್ನು ಹೆಚ್ಚಿಸಿ ಆ ಮೂಲಕ ಮತ್ಸ್ಯ ಸಂಪತ್ತನ್ನು ವೃದ್ಧಿಗೊಳಿಸಿ ಸಂರಕ್ಷಿಸುವ ಸಲುವಾಗಿ ಪ್ರತೀವರ್ಷ ಏರ್ಪಡಿಸುವ ರೀತಿಯಲ್ಲಿ ಆಳ ಸಮುದ್ರದಲ್ಲಿ ಮೀನುಗಾ ರಿಕೆಯನ್ನು ತಡೆಗಟ್ಟುವ ಟ್ರೋಲಿಂಗ್ ನಿಷೇಧ ರಾಜ್ಯದಲ್ಲಿ ಇಂದು ತಡರಾತ್ರಿ 12 ಗಂಟೆಗೆ ಜ್ಯಾರಿಗೊಳ್ಳಲಿದೆ. ಇದು ಜುಲೈ 31ರ ತನಕ ಅಂದರೆ 52 ದಿನಗಳ ಕಾಲ ಮುಂದುವರಿಯಲಿದೆ. ಇದರಂತೆ ಮೀನುಗಾರಿಕಾ ಬೋಟ್‌ಗಳು ಇಂದು ರಾತ್ರಿ ದಡ ಸೇರಿ ಸುರಕ್ಷಿತ ತಾಣಗಳಿಗೆ ಸೇರಲಿದೆ. ಟ್ರೋಲಿಂಗ್ ನಿಷೇಧ ಜ್ಯಾರಿಯ ಲ್ಲಿರುವ …