ಎರಡೂವರೆ ವರ್ಷದ ಮಗುವಿನ ಚಿಕಿತ್ಸೆಗೆ ಸಹಾಯ: ಡಿವೈಎಫ್‌ಐಯಿಂದ  ಬಿರಿಯಾಣಿ ಚಾಲೆಂಜ್

ಕುಂಬಳೆ: ಗಂಭೀರ ಅಸೌಖ್ಯ ಬಾಧಿಸಿದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ರಹೀಫ್ ಎಂಬ ಎರಡೂವರೆ ವರ್ಷದ ಮಗುವಿನ ಚಿಕಿತ್ಸೆ ಖರ್ಚಿಗೆ ಹಣ ಸಂಗ್ರಹಿಸುವ ಅಂಗವಾಗಿ ಡಿವೈಎಫ್‌ಐ ಪೆರ್ಮುದೆ ಟೌನ್ ಕಮಿಟಿ ಬಿರಿಯಾಣಿ ಚಾಲೆಂಜ್ ನಡೆಸಿತು. ಈ ಮೂಲಕ ಲಭಿಸುವ ಹಣವನ್ನು ಕಮಿಟಿ  ಪೆರ್ಮುದೆ ಟ್ರಸ್ಟ್ ಅಕೌಂಟ್‌ಗೆ ಹಸ್ತಾಂತರಿಸಲಾಗುವುದು.

ಪೆರ್ಮುದೆ ನಿವಾಸಿ ರೌಫ್ ಎಂಬವರ ಪುತ್ರನಾದ ರಹೀಫ್‌ಗೆ ಗಂಭೀರ ಅಸೌಖ್ಯ ಬಾಧಿಸಿದ್ದು, ಕಳೆದ ಮೂರು ತಿಂಗಳಿಂದ ಬೆಂಗಳೂರಿನಲ್ಲಿ ಚಿಕಿತ್ಸೆಯಲ್ಲಿದ್ದಾನೆ. ಮುಂದಿನ ಚಿಕಿತ್ಸೆಗೆ ಇನ್ನು ಕೂಡಾ ಭಾರೀ ಮೊತ್ತ ಅಗತ್ಯವಿದೆ. ಆದ್ದರಿಂದ ಪೆರ್ಮುದೆಯಲ್ಲಿ ಎಲ್ಲಾ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳು ಸಹಾಯವೊದಗಿಸಲು ಪ್ರಯತ್ನಿಸುತ್ತಿವೆ. ಇದರಂತೆ ಡಿವೈಎಫ್‌ಐ ಮಂಜೇಶ್ವರ ಬ್ಲೋಕ್ ಸೆಕ್ರೆಟರಿ ವಿನಯ್ ಕುಮಾರ್, ಹಾರಿಸ್ ಪೈವಳಿಕೆ,ಸಿಪಿಎಂಎಲ್‌ಸಿ ಸೆಕ್ರೆಟರಿ ಬಶೀರ್ ಬಿ.ಎ, ಅಸ್‌ಬತ್ ಪೆರಿಯಡ್ಕ, ಸಾದಿಕ್ ಮುನ್ನೂರು, ಹನೀಫ ಪೆರ್ಮುದೆ,ಇಸ್ಮಾಯಿಲ್ ಕುಂಡಲಂ,  ರಾಶಿದ್ ಪೆರ್ಮುದೆ, ರಾಶಿದ್ ಪೆರಿಯಡ್ಕ, ನೌಶದ್, ಹಾರಿಸ್ ಕಂಬಾರು, ಅಂದ್ರು ಕಂಬಾರ್, ಆರಿಫ್ ಮುನ್ನೂರು, ಇಸ್ಮಾಯಿಲ್ ಪೆರ್ಮುದೆ, ರಾಶಿ ಪೆರ್ಮುದೆ ಬಿರಿಯಾಣಿ ಚಾಲೆಂಜ್‌ಗೆ ನೇತೃತ್ವ ನೀಡಿದರು.

You cannot copy contents of this page