ಉಪ್ಪಳ: ಮರದ ದಿಮ್ಮಿ ಸಾಗಾಟದ ಲಾರಿಯೊಂದು ಬಾಯಾರು ಬಳಿಯ ಕೊಜಪೆಯಲ್ಲಿ ಕೆಟ್ಟು ಹೋಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ. ಮುಳಿಗದ್ದೆ-ಬೆರಿಪದವು ರಸ್ತೆಯ ಕೊಜಪೆ ಎಂಬಲ್ಲಿ ಇಕ್ಕಟ್ಟಾದ ಏರು ರಸ್ತೆಯಲ್ಲಿ ಬೆರಿಪದವು ಭಾಗದಿಂದ ಉಪ್ಪಳ ಭಾಗಕ್ಕೆ ಸಂಚರಿಸುತ್ತಿದ್ದ ಲಾರಿ ರಸ್ತೆ ಮಧ್ಯದಲ್ಲಿ ಕೆಟ್ಟು ಹೋಗಿತ್ತು. ಇದರಿಂದ ವಾಹನ ಸಂಚಾರಕ್ಕೆ ಹರಸಾಹಸ ಪಡಬೇಕಾ ಯಿತು.
ಉಪ್ಪಳದಿಂದ ಪೆರ್ಲ, ಬೆರಿಪದವು, ಬಳ್ಳೂರು ಕಡೆಗಳಿಗೆ ಬಸ್‌ಗಳು ಬಾಯಾರು ಸೊಸೈಟಿ, ಕನಿಯಾಲ ಮೂಲಕ ಸುತ್ತು ಬಳಸಿ ಸಂಚಾರ ನಡೆಸಬೇಕಾದ ಅವಸ್ಥೆ ಉಂಟಾಗಿದೆ. ಇದರಿಂದ ಸಾರ್ವಜನಿಕರು ಸಮಸ್ಯೆಗೀಡಾದರು. ನಿನ್ನೆ ಸಂಜೆ ಲಾರಿಯನ್ನು ದುರಸ್ತಿಗೊಳಿಸಿದ ಬಳಿಕ ಈ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊAಡಿದೆ.







