ಬೋಳಂಗಳದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯದಿಂದ ಸಾಂಕ್ರಾಮಿಕರೋಗ ಭೀತಿ: ಕಸ ತೆರವುಗೊಳಿಸಿ ಶುಚಿಗೊಳಿಸಲು ಡಿಫಿ ಆಗ್ರಹ
ಪೈವಳಿಕೆ: ಪಂಚಾಯತ್‌ನ ಬೋಳಂಗಳದಲ್ಲಿ ಇರುವ ಮಾಲಿನ್ಯ ವಿಲೇವಾರಿ ಕೇಂದ್ರದ ಬಳಿ ರಾಶಿ ಬಿದ್ದ ತ್ಯಾಜ್ಯ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದು, ಸ್ಥಳೀಯರ ಆರೋಗ್ಯದ ಬಗ್ಗೆ ಆತಂಕ ಹುಟ್ಟಿಸಿದೆ. ಮನೆಮನೆಗಳಿಂದ ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಯರು ಸಂಗ್ರಹಿಸುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೋಳಂ ಗಳದಲ್ಲಿರುವ ವಿಲೇವಾರಿ ಕೇಂದ್ರದಲ್ಲಿ ತಂದಿರಿಸಲಾಗುತ್ತಿದೆ. ಇಲ್ಲಿ ಕೇಂದ್ರದೊಳಗೆ ಹಾಗೂ ಹೊರಗೆ ರಾಶಿ ಬಿದ್ದಿರುವ ತ್ಯಾಜ್ಯದಿಂದ ದುರ್ವಾಸನೆ ಪರಿಸರವಿಡೀ ಹರಡುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ನಿರ್ಮಾಣವಾಗಿದೆ. ರಾಜ್ಯದೆಲ್ಲೆಡೆ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪರಿಸರದ ಜನರು ಇನ್ನಷ್ಟು …