ವಾಹನ ಅಪಘಾತ ಗಾಯಗೊಂಡಿದ್ದ ಯುವಕ ಮೃತ್ಯು

ಕಾಸರಗೋಡು: ಖಾಸಗಿ ಬಸ್-ಸ್ಕೂಟರ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಇರಿಯ ಮಂಡೆಂಗಾನದ ಫಾರೂಕ್ (32) ಮೃತಪಟ್ಟ ದುರ್ದೈವಿ. ಇವರು ಇರಿಯದಲ್ಲಿ ಕೊರಿಯರ್  ಸಂಸ್ಥೆಯ ನೌಕರಾಗಿ ದ್ದರು. ಕಳೆದ ಬುಧವಾರ ಬೆಳಿಗ್ಗೆ ಇರಿಯಾ ಮಸೀದಿ ಮುಂಭಾಗದ ರಸ್ತೆಯಲ್ಲಿ ಅಪಘಾತವುಂಟಾಗಿತ್ತು. ಕಾಞಂಗಾಡ್‌ಗೆ ಬರುತ್ತಿದ್ದ ಬಸ್‌ಗೆ ಫಾರೂಕ್ ಪ್ರಯಾಣಿಸುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಫಾರೂಕ್ ನಿನ್ನೆ ರಾತ್ರಿ ಮೃತಪಟ್ಟರು

ಸಮಸ್ತ ಕೇಂದ್ರ ಮುಶಾವರ ಸದಸ್ಯ ತ್ವಾಖ ಅಹಮ್ಮದ್ ಮೌಲವಿ ಅಲ್ ಅಸ್ಹರಿ ನಿಧನ

ಕಾಸರಗೋಡು: ಸಮಸ್ತ ಮುಶಾವರ ಸದಸ್ಯ ಹಾಗೂ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ  ತ್ವಾಖ ಅಹಮ್ಮದ್ ಮೌಲವಿ ಅಲ್ ಅಸ್ಹರಿ ನಿಧನ ಹೊಂದಿದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಈ ಮಧ್ಯೆ ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಇವರು ಮಂಗಳೂರು-ಕೀಳೂರು ಸಂಯುಕ್ತ ಖಾಝಿಯಾಗಿದ್ದರು.

ಅಸೌಖ್ಯ ಬಾಧಿಸಿದ್ದ ಯುವಕ ನಿಧನ

ನೀರ್ಚಾಲು: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಪುದುಕೋಳಿ ಪರಿಶಿಷ್ಟ ಜಾತಿ ಉನ್ನತಿಯ ಉಮೇಶ್ (34) ಮೃತ ವ್ಯಕ್ತಿ.  ಅಸೌಖ್ಯ ಬಾಧಿಸಿದ್ದ ಇವರು ಹಲವು ತಿಂಗಳುಗಳಿಂದ ತಲಶ್ಶೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಬಾಲಕೃಷ್ಣ-ಲಕ್ಷ್ಮಿ ದಂಪತಿಯ ಪುತ್ರನಾದ ಮೃತರು ಸಹೋದರ ಅಭಿಲಾಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿ ಬಸ್ ನಿಲ್ದಾಣಕ್ಕೆ ನುಗ್ಗಿ ವಿದ್ಯಾರ್ಥಿ ಸಹಿತ 3 ಮಂದಿ ಮೃತ್ಯು

ಕೊಲ್ಲಂ: ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿ ಬಸ್ ನಿಲ್ದಾಣಕ್ಕೆ ನುಗ್ಗಿ ವಿದ್ಯಾರ್ಥಿ ಸಹಿತ ಮೂರು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಗಾಯಗೊಂಡ ಐದು ಮಂದಿಯನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವೆನ್ನಲಾಗಿದೆ. ಟಿಪ್ಪರ್ ಲಾರಿ ಚಾಲಕನಿಗೂ ಗಾಯವುಂಟಾಗಿದೆ. ಇಂದು ಬೆಳಿಗ್ಗೆ 7 ಗಂಟೆಗೆ ಕೊಟ್ಟಾರಕ್ಕರ ನೀಲೇಶ್ವರ ಎಂಬಲ್ಲಿ ಅಪಘಾತ ಸಂಭವಿಸಿದೆ. ಮೃತಪಟ್ಟವರು ಹರಿಲಾಲ್ (54), ಕಾರ್ಮಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಪಾರ್ತಿಪ್ (15), ಕೆಎಸ್‌ಆರ್‌ಟಿಸಿ ನೌಕರ ಅಜಯ್ ಕುಮಾರ್ (45) ಎಂದು  ಗುರುತುಹಚ್ಚ ಲಾಗಿದೆ. …

ನಾಯಮ್ಮಾರಮೂಲೆ, ಶಿರಿಯದಲ್ಲಿ ವಾಹನ ಅಪಘಾತ: ಮೂವರು ಯುವಕರ ದಾರುಣ ಮೃತ್ಯು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ  ಎರಡು ಕಡೆಗಳಲ್ಲಿ ನಿನ್ನೆ ಸಂಭವಿಸಿದ ವಾಹನ ಅಪಘಾತಗ ಳಲ್ಲಾಗಿ ಮೂವರು ಯುವಕರು ಸಾವನ್ನಪ್ಪಿದ್ದಾರೆ. ನಾಯಮ್ಮಾರಮೂಲೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ಬೈಕ್‌ಗೆ ಮೀನು ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಅದೇ ರೀತಿ ಕುಂಬಳೆ ಬಳಿ ನಿನ್ನೆ ಬೈಕ್ ನಿಯಂ ತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಢಿಕ್ಕಿ ಹೊಡೆದು ಅದರಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರು ಪ್ರಾಣಕಳೆದುಕೊಂಡಿದ್ದಾರೆ. ನಾಯಮ್ಮಾರಮೂಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ವಾಹನ ಅಪಘಾತದಲ್ಲಿ ನಾಯಮ್ಮಾ ರಮೂಲೆ ಮಿನಿ …

ಸ್ಕೂಟರ್‌ನಲ್ಲಿ ತಲುಪಿದ ತಂಡ ಯುವತಿ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿ

ಉಪ್ಪಳ: ಸ್ಕೂಟರ್‌ನಲ್ಲಿ ತಲುಪಿದ ಇಬ್ಬರು ಯುವಕರು ಯುವತಿಯ ಕುತ್ತಿಗೆಯಿಂದ ಎರಡೂಕಾಲು ಪವನ್‌ನ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ನಿನ್ನೆ ಅಪರಾಹ್ನ 3.10ರ ವೇಳೆ ಹೊಸಂಗಡಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್  ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪೈವಳಿಕೆ ಬಾಯಿಕಟ್ಟೆಯ ಕೆ.ನಯನ (30) ಎಂಬವರ ಚಿನ್ನದ ಸರವನ್ನು ತಂಡ ಎಗರಿಸಿದೆ. ಹೊಸಂಗಡಿ ಸ್ಟೇಟ್ ಬ್ಯಾಂಕ್ ಸಮೀಪದ ಸರ್ವೀಸ್ ರಸ್ತೆ ಮೂಲಕ ನಯನ ನಡೆದು ಹೋಗುತ್ತಿದ್ದಾಗ ಹೆಲ್ಮೆಟ್ ಹಾಗೂ ರೈನ್‌ಕೋಟ್ ಧರಿಸಿದ್ದ ಇಬ್ಬರು ಕಡಂಬಾರ್‌ಗೆ ತೆರಳುವ ರಸ್ತೆ ಯಾವುದೆಂದು ಕೇಳಿದ್ದಾರೆನ್ನಲಾಗಿದೆ. ನಯನ …

ಕುಂಬಳೆಯಲ್ಲಿ ಯುವಕ, ಸ್ನೇಹಿತೆಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ ಅಪಹರಿಸಿ ಹಲ್ಲೆ: 50 ಸಾವಿರ ರೂ.ಗಾಗಿ ಬೇಡಿಕೆ; ಕೊಲೆ ಪ್ರಕರಣದ ಆರೋಪಿ ಸಹಿತ ಇಬ್ಬರ ಬಂಧನ

ಕುಂಬಳೆ: ಕಾರಿನಲ್ಲಿ ಕುಳಿತು ಮಾತನಾಡುತ್ತಿದ್ದ ಯುವಕ ಹಾಗೂ  ಸ್ನೇಹಿತೆಗೆ ತಂಡವೊಂದು  ಚಾಕು ತೋ ರಿಸಿ ಬೆದರಿಕೆಯೊಡ್ಡಿ ಅಪಹರಿಸಿಕೊಂ ಡೊಯ್ದ ಬಳಿಕ ಅವರಿಗೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಈ ಘಟನೆಗೆ ಸಂಬಂ ಧಿಸಿ ಕೇಸು ದಾಖಲಿಸಿಕೊಂಡ ಕುಂಬಳೆ ಪೊಲೀಸರು ಕೊಲೆ ಪ್ರಕರಣದ ಆರೋಪಿ ಸಹಿತ ಇಬ್ಬರನ್ನು ಬಂಧಿಸಿದ್ದಾರೆ. ಇನ್ನೋರ್ವನಿಗಾಗಿ ಹುಡುಕಾಟ ನಡೆಯುತ್ತಿದೆ. ಮೊಗ್ರಾಲ್ ಮೈಮೂನ್‌ನಗರ ನೀರೋಳಿ ಹೌಸ್‌ನ ಅಪ್ಸಲ್ (29), ಕುನ್ನಿಲ್ ಹೌಸ್‌ನ ಮುಹಮ್ಮದ್ ಮನ್ಸೂರ್ ಯಾನೆ ಜಿನ ಯಾನೆ ಫೈಸಿ (27) ಎಂಬಿವರನ್ನು ಕುಂಬಳೆ  ಎಸ್ ಐ …

ಸೆಂಟ್ರಲ್ ಜೈಲಿನೊಳಗೆ ಮೊಬೈಲ್ ಫೋನ್ ಬಾಟ್ಲಿಯಲ್ಲಿ ತುಂಬಿಸಿ ಹೂತು ಹಾಕಿದ ಸ್ಥಿತಿಯಲ್ಲಿ ಪತ್ತೆ

ಕಣ್ಣೂರು: ಕಣ್ಣೂರು ಸೆಂಟ್ರಲ್ ಜೈಲಿನೊಳಗೆ ಮೊಬೈಲ್ ಪೋನ್ ಬಾಟ್ಲಿಂiiಲ್ಲಿ ತುಂಬಿಸಿ ಹೂತು ಹಾಕಿರುವುದು ಪತ್ತೆಯಾಗಿದೆ.ಐದನೇ ಬ್ಲಾಕ್‌ನಲ್ಲಿ ನೂತನ ಶೌಚಾಲಯ ಸಮೀಪ ಹೊಂಡತೋಡಿ ಮೊಬೈಲ್ ಫೋನ್ ಹೂತು ಹಾಕಲಾಗಿತ್ತು. ಇದರ ಹೊರತು ಬಾಟ್ಲಿಯೊಳಗೆ ಪವರ್ ಬ್ಯಾಂಕ್, ಸಿಮ್ ಕಾರ್ಡ್, ಚಾರ್ಜಿಂಗ್ ವಯರ್, ಹೆಡ್‌ಸೆಟ್ ಮೊದಲಾದವುಗಳು ಪತ್ತೆಯಾಗಿದೆ. ಜೈಲು ನೌಕರರು ನಡೆಸಿದ ತಪಾಸಣೆಯಲ್ಲಿ ಇವು ಪತ್ತೆಯಾಗಿವೆ.ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಮೊಬೈಲ್ ಪೋನ್, ಮಾದಕ ವಸ್ತುಗಳು, ಇಲೆಕ್ಟ್ರಾನಿಕ್ ಉಪಕರಣ ಗಳನ್ನು ಈ ಹಿಂದೆಯೂ ಪತ್ತೆಹಚ್ಚಲಾಗಿತ್ತು. ಇತ್ತೀಚೆಗಷ್ಟೇ ಜೈಲಿನ ಗೋಡೆಯ ಮೇಲೇರಿ ಮಾದಕವಸ್ತು …

ಬೋವಿಕ್ಕಾನದಲ್ಲಿ ಟೌನ್ ಬ್ಯಾಂಕ್ ಶಾಖೆ ಉದ್ಘಾಟನೆ

ಬೋವಿಕ್ಕಾನ: ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಬೋವಿಕ್ಕಾನ ಬಿ.ಕೆ. ಕಾಂಪ್ಲೆಕ್ಸ್‌ನಲ್ಲಿ  ಆರಂಭಿಸಿದ ಶಾಖೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಬ್ಯಾಂಕ್‌ನ ಅಧ್ಯಕ್ಷ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಅಧ್ಯಕ್ಷತೆ ವಹಿಸಿದರು. ಮುಳಿಯಾರು ಪಂ. ಅಧ್ಯಕ್ಷ ಬಿ.ಕೆ. ಮೊಹಮ್ಮದ್ ಕುಂಞಿ ಕೌಂಟರ್ ಉದ್ಘಾಟಿಸಿದರು. ಕಾಸರಗೋಡು ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್ ಸೊಸೈಟಿ (ಜನರಲ್) ವಿನೋದ್ ಕುಮಾರ್ ಭದ್ರತಾ ಕೊಠಡಿ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಮುಳಿಯಾರು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿಸಾ ಮನ್ಸೂರ್, …

ವಾಟ್ಸಾಪ್‌ನಲ್ಲಿ  ಸಚಿವರನ್ನು ನಿಂದಿಸಿ ಸಂದೇಶ ರವಾನೆ: ಎಸ್‌ಪಿಗೆ ಅಶ್ರಫ್ ಕಾರ್ಳೆ ದೂರು

ಕಾಸರಗೋಡು: ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿ ಅವರನ್ನು ನಿಂದಿಸಿ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಸರಗೋಡು ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ‘ಕುಂಬಳೆ-ಅಳಿಮತಿ ವಿರುದ್ಧ’ ಎಂಬ ವಾಟ್ಸಾಪ್  ಗ್ರೂಪ್ ವೊಂದರಲ್ಲಿ ಪ್ರತ್ಯೇಕ ಪ್ರೊಫೈಲ್‌ನಿಂದ ಸಚಿವರನ್ನು ಅವಮಾನಗೈಯ್ಯುವ ರೀತಿಯಲ್ಲಿ ಅವಾಚ್ಯವಾಗಿ ನಿಂದಿಸಿ ಶಬ್ದ ಸಂದೇಶ ಕಳುಹಿಸಲಾಗಿದೆಯೆಂದು ದೂರ ಲಾಗಿದೆ. ಈ ಸಂಬಂಧ ಸ್ಕ್ರೀನ್ ಶಾಟ್‌ಗಳು ಹಾಗೂ ವಾಯ್ಸ್ ಕ್ಲಿಪ್ ಸಹಿತ ಪುರಾವೆಗಳನ್ನು …