ಸಾರ್ವಜನಿಕರ ಸಮಸ್ಯೆಗೆ ಪರಿಹಾರವಿಲ್ಲ: ಕುಂಬಳೆಯಲ್ಲಿ ಪ್ರತಿಭಟನೆಯೊಂದಿಗೆ ವ್ಯಾಪಾರಿಗಳು ರಂಗಕ್ಕೆ

ಕುಂಬಳೆ: ಕುಂಬಳೆ ಪೇಟೆಗೆ ಆಗಮಿ ಸುವ ಪ್ರಯಾಣಿಕರು ಸಹಿತ ಸಾರ್ವ ಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊ ಳ್ಳಲು  ಮುಂದಾ ಗದ ಪಂಚಾಯತ್ ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿ  ಕುಂಬಳೆಯ ವ್ಯಾಪಾರಿಗಳು ರಂಗಕ್ಕಿಳಿದಿದ್ದಾರೆ. ಪ್ರಯಾಣಿಕರು ಹಾಗೂ ವ್ಯಾಪಾರಿಗಳು ಎದುರಿಸುತ್ತಿ ರುವ ಸಮಸ್ಯೆಗಳನ್ನು ಮುಂದಿರಿಸಿ ಬೀದಿಗಿಳಿದ ವ್ಯಾಪಾರಿಗಳು ಪಂ ಚಾಯತ್‌ನ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಕುಂಬಳೆ ಪೇಟೆಗೆ ಆಗಮಿಸುವ ಪ್ರಯಾಣಿಕರು ಹಲವು ತಿಂಗಳು ಗಳಿಂದ ಎದುರಿಸುತ್ತಿರುವ ಸಮಸ್ಯೆಗ ಳನ್ನು ಕಂಡು ಸಹನೆಗೆಟ್ಟ ವ್ಯಾಪಾರಿಗಳು ಕುಂಬಳೆ ಪಂ ಚಾಯತ್ ಹಾಗೂ ಪೊಲೀಸರ …

ಮೇಸ್ತ್ರಿ ನಿಧನ

ಮುಳ್ಳೇರಿಯ: ಆದೂರು ಮಂಟಮೆ ನಿವಾಸಿ ಹಿರಿಯ ಮೇಸ್ತ್ರಿ ಸುರೇಂದ್ರ (68) ನಿಧನ ಹೊಂದಿದರು. ದಿವಂಗತರಾದ ಅಪ್ಪುಟ್ಟಿ- ವೆಳ್ಳಚ್ಚಿ ದಂಪತಿ ಪುತ್ರನಾಗಿರುವ ಇವರು ಪತ್ನಿ ಶ್ಯಾಮಲ, ಮಕ್ಕಳಾದ ಸೌಮ್ಯ, ಸೌಜ, ಸುಜಿತ್, ಸೊಸೆ ರಶ್ಮಿತ, ಅಳಿಯಂದಿ ರಾದ ಸುನಿಲ್ ಕುಮಾರ್, ಸುಧೀಶ್, ಸಹೋದರ ಗಂಗಾಧರ, ಸಹೋದರಿ ಪದ್ಮಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿವೃತ್ತ ಬ್ಯಾಂಕ್ ಮೆನೇಜರ್ ನಿಧನ

ವರ್ಕಾಡಿ: ವಿಜಯಾ ಬ್ಯಾಂಕ್‌ನ ನಿವೃತ್ತ ಮೆನೇಜರ್ ಸೇನ್ಯ ಕಲ್ಲಾಡಿಗುತ್ತು ಎನ್. ತಿಮ್ಮಪ್ಪ ರೈ ನಾಣಿಲ್ತಡಿ (69) ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಆನೆಕಲ್ಲು ಛತ್ರ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ರಾಗಿದ್ದರು. ಅಲ್ಲದೆ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮಂಜೇಶ್ವರ, ಕುಂಬಳೆ, ಉಪ್ಪಿನಂಗಡಿ ಸಹಿತ ವಿವಿಧ ಕಡೆಗಳ ವಿಜಯಾ ಬ್ಯಾಂಕ್ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಕಲ್ಪನ, ಪುತ್ರಿ ಶರಣ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹೋಟೆಲ್ ಮಾಲಕ ನಿಧನ

ಮಂಗಲ್ಪಾಡಿ: ಪ್ರತಾಪನಗರ ನಿವಾಸಿ ವಿಶ್ವನಾಥ ಶೆಟ್ಟಿ (61) ಹೃದಯÁಘಾತದಿಂದ ನಿಧನ ಹೊಂದಿದರು. ಮಂಗಳೂರಿನ ಕಂಕನಾಡಿಯ ಗರಡಿ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಐಸಿರಿ ಹೋಟೆಲ್‌ನ ಮಾಲಕರಾಗಿದ್ದರು. ಇವರು ನಿನ್ನೆ ರಾತ್ರಿ ೮ಗಂಟೆ ವೇಳೆ ಹೋಟೆಲ್‌ನಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾಗಿದ್ದಾರೆ. ದಿ| ಬಟ್ಟು ಶೆಟ್ಟಿ -ದಿ| ದೇಂಞÂ ದಂಪತಿ ಪುತ್ರರಾಗಿದ್ದು, ಪ್ರತಾಪನಗರ ಶಿವ ಶಕ್ತಿ ಫ್ರೆಂಡ್ಸ್ ಕ್ಲಬ್‌ನ ಹಿರಿಯ ಸದಸ್ಯರಾಗಿದ್ದರು.ಮೃತರು ಪತ್ನಿ ನಳಿನಿ, ಮಕ್ಕಳಾದ ನವೀನ್ ಶೆಟ್ಟಿ, ನಯನ, ಅಳಿಯ ಸುದರ್ಶನ ಶೆಟ್ಟಿ, ಸಹೋದರ …