ಹೋಟೆಲ್ ಮಾಲಕ ನಿಧನ

ಮಂಗಲ್ಪಾಡಿ: ಪ್ರತಾಪನಗರ ನಿವಾಸಿ ವಿಶ್ವನಾಥ ಶೆಟ್ಟಿ (61) ಹೃದಯÁಘಾತದಿಂದ ನಿಧನ ಹೊಂದಿದರು. ಮಂಗಳೂರಿನ ಕಂಕನಾಡಿಯ ಗರಡಿ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಐಸಿರಿ ಹೋಟೆಲ್‌ನ ಮಾಲಕರಾಗಿದ್ದರು. ಇವರು ನಿನ್ನೆ ರಾತ್ರಿ ೮ಗಂಟೆ ವೇಳೆ ಹೋಟೆಲ್‌ನಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾಗಿದ್ದಾರೆ. ದಿ| ಬಟ್ಟು ಶೆಟ್ಟಿ -ದಿ| ದೇಂಞÂ ದಂಪತಿ ಪುತ್ರರಾಗಿದ್ದು, ಪ್ರತಾಪನಗರ ಶಿವ ಶಕ್ತಿ ಫ್ರೆಂಡ್ಸ್ ಕ್ಲಬ್‌ನ ಹಿರಿಯ ಸದಸ್ಯರಾಗಿದ್ದರು.
ಮೃತರು ಪತ್ನಿ ನಳಿನಿ, ಮಕ್ಕಳಾದ ನವೀನ್ ಶೆಟ್ಟಿ, ನಯನ, ಅಳಿಯ ಸುದರ್ಶನ ಶೆಟ್ಟಿ, ಸಹೋದರ ಜಯಕರ ಶೆಟ್ಟಿ, ಸಹೋದರಿ ಕುಸುಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರಿ ರತ್ನ ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page