ಹೊಸಂಗಡಿ ರೈಲ್ವೇ ಮೇಲ್ಸೇತುವೆ: ನಿರೀಕ್ಷೆಯಲ್ಲಿ ಸ್ಥಳೀಯರು: ದಶಕಗಳ ಕನಸು ನನಸಾದಿತೇ..!

ಮಂಜೇಶ್ವರ: ಮಂಜೇಶ್ವರ ತಾಲೂಕಿನ ಪ್ರಧಾನ ಪೇಟೆಯಾದ ಹೊಸಂಗಡಿಯಲ್ಲಿ ರೈಲ್ವೇ ಮೇಲ್ಸೇತುವೆಗಾಗಿ ಸ್ಥಳೀಯರು ನಿರೀಕ್ಷೆಯೊಂದಿಗೆ ಕಾಯುತ್ತಿದ್ದಾರೆ. ಕೇಂದ್ರದ ಯುಪಿಎ ಆಡಳಿತ ಕಾಲದಲ್ಲಿ ಇ. ಅಹಮ್ಮದ್ ಕೇಂದ್ರ ರೈಲ್ವೇ ಸಹ ಸಚಿವರಾಗಿದ್ದಾಗ ಹೊಸಂಗಡಿಯಲ್ಲಿ ರೈಲ್ವೇ ಮೇಲ್ಸೇತುವೆ ಮಂಜೂರು ಮಾಡಬೇಕೆಂದು ಆಗ್ರಹ ಕೇಳಿ ಬಂದಿತ್ತು. ಅಗತ್ಯದ ಮೊತ್ತ ಮಂಜೂರು ಮಾಡಿರುವುದಾಗಿಯೂ ಪ್ರಚಾರವಿತ್ತು. ಆದರೆ ಆ ಬಳಿಕ ಎರಡು ದಶಕಗಳು ಕಳೆದರೂ ಯಾವುದೇ ಕ್ರಮ ಉಂಟಾಗಿಲ್ಲ. ಮಂಜೇಶ್ವರ ತಾಲೂಕಿನಲ್ಲಿ ಮಾತ್ರವಾಗಿ ನಾಲ್ಕು ರೈಲ್ವೇ ಕ್ರಾಸಿಂಗ್ ವ್ಯವಸ್ಥೆಯಿದೆ. ಹೊಸಂಗಡಿಗೆ ಹೊರತಾಗಿ ಮಂಜೇಶ್ವರ, ಮುಟ್ಟಂ, ಉಪ್ಪಳ …

ಕುಂಬಳೆಯಲ್ಲಿ ಮಾದಕವಸ್ತು ಮಾರಾಟ ತೀವ್ರ: 0.75 ಗ್ರಾಂ ಎಂಡಿಎಂಎ ಸಹಿತ ಇಬ್ಬರ ಬಂಧನ

ಕುಂಬಳೆ: ಮಾದಕ ವಸ್ತುಗಳ ವಿರುದ್ಧ ಪೊಲೀಸರು ಆರಂಭಿಸಿರುವ ಆಪರೇಶನ್ ತೂಫಾನ್ ಕಾರ್ಯಾ ಚರಣೆ ತೀವ್ರಗೊಳಿಸಿದ್ದು, ಇದರಂತೆ ಮತ್ತಿಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಬ್ರಾಣ ಕಲ್ಲೆಟ್ಟಿ ಹೌಸ್‌ನ ಹಂಸ (40), ಕುಂಟಂಗೇರಡ್ಕ ವೆಲ್ಫೇರ್ ಶಾಲೆ ಬಳಿಯ ನಿವಾಸಿ ಅಬ್ದುಲ್ ನಿಸಾರ್ (32) ಎಂಬಿವರನ್ನು ಕುಂಬಳೆ ಎಸ್‌ಐ ಗಣೇಶನ್ ನೇತೃತ್ವದಲ್ಲಿ ಬಂಧಿಸಲಾಗಿದೆ. ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೊದಲು ಹಂಸನ ಕೈಯಿಂದ 0.61 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.  ಬಳಿಕ ಈತನನ್ನು ತನಿಖೆಗೊಳಪಡಿಸಿ ದಾಗ ಈತನಿಗೆ ಎಂಡಿಎಂಎ ನೀಡಿರು …

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮತ್ತೆ ಇ.ಡಿ ಮುಂದೆ ಹಾಜರಾದ ವೀಣಾ ವಿಜಯನ್

ಕೊಚ್ಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ವಿರೋಧಪಕ್ಷ ನಾಯಕ ಪಿಣರಾಯಿ ವಿಜಯನ್‌ರ ಪುತ್ರಿ ವೀಣಾ ವಿಜಯನ್ ಕೊಚ್ಚಿಯಲ್ಲಿರುವ ಎನ್‌ಫೋರ್ಸ್ ಮೆಂಟ್  ಡೈರೆಕ್ಟರೇಟ್ (ಇ.ಡಿ) ಕಚೇರಿ ಮುಂದೆ ಇಂದು ಮತ್ತೆ ಹಾಜರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ  ಜೂನ್ 29ರಂದು ಹಾಜರಾಗುವಂತೆ ವೀಣಾ ವಿಜಯನ್‌ರಿಗೆ ಇ.ಡಿ ಸಮನ್ಸ್ ಜ್ಯಾರಿಗೊಳಿಸಿತ್ತು. ಅದರ ಬದಲು ಅವರು ಇಂದು ಬೆಳಿಗ್ಗೆ 9.30ರ ವೇಳೆ ಹಾಜರಾಗಿದ್ದಾರೆ. ನಂತರ ಅವರಹೇಳಿಕೆ ದಾಖಲಿಸಿಕೊಳ್ಳುವ ಕ್ರಮದಲ್ಲಿ ಇ.ಡಿ ಅಧಿಕಾರಿಗಳು ತೊಡಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ ಹೊರಡಿಸಿದ  ಸಮನ್ಸ್‌ನಂತೆ …

ಹಳದಿ ರೇಶನ್ ಕಾರ್ಡ್‌ಗಳಿಗೆ 35 ಕಿಲೋ ಉಚಿತ ಅಕ್ಕಿ ವಿತರಣೆಯಲ್ಲಿ ಪರಿಷ್ಕರಣೆ

ತಿರುವನಂತಪುರ: ಅಂತ್ಯೋದಯ ಅನ್ನ ಯೋಜನೆ (ಎಎವೈ) ಪ್ರಕಾರ ಹಳದಿ ರೇಶನ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಗಳಿಗೆ ಇನ್ನು ಉಚಿತ ವಾಗಿ  35 ಕಿಲೋದಂತೆ ಅಕ್ಕಿ ಲಭಿ ಸದು. ಇದಕ್ಕೆ ಹೊಂದಿಕೊಂಡು 2023ರ ಆಹಾರ ಭದ್ರತಾ ಕಾನೂನಿನಲ್ಲಿ  ಅಗತ್ಯದ ತಿದ್ದುಪಡಿ ತರಲು ಕೇಂದ್ರ ಸರಕಾರ ಮುಂದಾಗಿದೆ. ಜ್ಯಾರಿಯಲ್ಲಿ ಹಳದಿ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರ ಸಂಖ್ಯೆ ಪರಿಗಣಿಸದೆ ತಲಾ 35 ಕಿಲೋದಂತೆ ಉಚಿತವಾಗಿ   ವಿತರಿಸಲಾಗುತ್ತಿದೆ. ಈ ರೀತಿ ಬದಲಾಯಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದರಂತೆ ಹಳದಿ ಕಾರ್ಡ್‌ನಲ್ಲಿ ಹೆಸರು …

ರಸ್ತೆ ಬದಿ ಬೆಳೆದ ಹುಲ್ಲು ತೆರವುಗೊಳಿಸಿ ಮಾದರಿಯಾದ ವಿಕಲಚೇತನ ವ್ಯಕ್ತಿ

ಕುಂಬಳೆ: ದಿನಂಪ್ರತಿ ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ನಡೆದು ಹೋಗುವ ರಸ್ತೆ ಬದಿ ಬೆಳೆದು ನಿಂತಿದ್ದ ಹುಲ್ಲು ಸಹಿತ ಕಸಕಡ್ಡಿಗಳನ್ನು ತೆರವುಗೊಳಿಸುವ ಮೂಲಕ ವಿಕಲಚೇತನ ವ್ಯಕ್ತಿ ಇತರರಿಗೆ ಮಾದರಿಯಾಗಿದ್ದಾರೆ. ಕುಂಬಳೆ ಹೋಲಿ ಫ್ಯಾಮಿಲಿ ಶಾಲೆ ಸಮೀಪದ ನಿವಾ ಸಿಯೂ, ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಳಿ ಅಂಗಡಿ ನಡೆಸುತ್ತಿರುವ ಉದಯ ಆಚಾರ್ಯ ತನ್ನ ಶ್ರಮದಾನ ಮೂಲಕ ರಸ್ತೆಯನ್ನು ಶುಚಿಗೊಳಿಸಿದ್ದಾರೆ. ಕುಂಬಳೆ ಹೋಲಿ ಫ್ಯಾಮಿಲಿ ಶಾಲೆ ಬಳಿಯಿಂದ ಕಂಚಿಕಟ್ಟೆ ಮಳಿ ಭಾಗಕ್ಕೆ ತೆರ ಳುವ ಪಂಚಾಯತ್ ರಸ್ತೆ ಬದಿ …

ಗಾಂಜಾ ಪ್ರಕರಣ: ಆರೋಪಿಗಳಿಗೆ ಸಜೆ, ದಂಡ

ಕಾಸರಗೋಡು: ಗಾಂಜಾ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ರಾಮುರಮೇಶ್ಚಂದ್ರಭಾನು ತಲಾ ಒಂದು ವರ್ಷ ಸಜೆ ಹಾಗೂ 20,000 ರೂ. ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕಯ್ಯಾರು ಕನ್ನಡಿಪ್ಪಾರ ಶಾಂತಿಯೋಡು ಕೆ.ಕೆ.ನಗರದ ಖಲಂದರ್ ಅಲಿಯಾಸ್ ಶಾಫಿ (34) ಮತ್ತು ದಕ್ಷಿಣಕನ್ನಡ ಜಿಲ್ಲೆಯ  ಪೆರಾಂಬೆ ಬೀರಂತ್ತಡ್ಕದ ಸಂದೇಶ್ ಬಿ (27) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. …

10ನೇ ತರಗತಿ ವಿದ್ಯಾರ್ಥಿಯ ನೀರಿನ ಬಾಟ್ಲಿಯಲ್ಲಿ ಸಾರಾಯಿ ಪತ್ತೆ: ಸಹಪಾಠಿಯ ಕೃತ್ಯ

ಕಲ್ಲಿಕೋಟೆ: ಶಾಲಾ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ನಾಡ ಸಾರಾಯಿ ಪತ್ತೆಯಾಗಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯನ್ನು ಪ್ರಶ್ನಿಸಿದಾಗ ಸಹಪಾಠಿಯಾದ ಇನ್ನೋರ್ವ ವಿದ್ಯಾರ್ಥಿ ನೀರಿನ ಬಾಟ್ಲಿಯಲ್ಲಿ ತುಂಬಿಸಿ ಬ್ಯಾಗ್‌ನಲ್ಲಿರಿಸಿರುವುದಾಗಿ ಬಹಿರಂಗಗೊಂಡಿದೆ. ವಿದ್ಯಾರ್ಥಿಯನ್ನು ಪ್ರಶ್ನಿಸಿದಾಗ ನಕಲಿ ಮದ್ಯ ಮಾರಾಟದ ವ್ಯಕ್ತಿಯ ಬಗ್ಗೆ ಮಾಹಿತಿ ಲಭಿಸಿದೆ. ವಿದ್ಯಾರ್ಥಿಯ ಮಲತಂದೆ ಹುಳಿರಸ ನೀಡಿದ್ದು, ಹಲವು ಮಕ್ಕಳಿಗೆ ಸಾರಾಯಿ ಈತ ತಂದು ನೀಡುತ್ತಿರುವುದಾಗಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಶಾಲಾ ಅಧಿಕಾರಿಗಳು ತಾಮರಶ್ಶೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಆ ವ್ಯಕ್ತಿಯ ಮನೆ ಹಾಗೂ ಸಮೀಪದಲ್ಲಿ ತಾಮರಶ್ಶೇರಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ …

ಪಿಎಂಶ್ರೀ ಯೋಜನೆ ರಾಜ್ಯದಲ್ಲಿ ಜ್ಯಾರಿಗೆ ಯತ್ನ :ಐಕ್ಯರಂಗ ಸರಕಾರದ ವಿರುದ್ಧ ಸಿಪಿಐ ಮಾರ್ಚ್

ಕಾಸರಗೋಡು: ಪಿಎಂಶ್ರೀ ಯೋ ಜನೆ ಕೇರಳದಲ್ಲಿ ಜ್ಯಾರಿಗೊಳಿಸಲಿರುವ ಐಕ್ಯರಂಗ ಸರಕಾರದ ತೀರ್ಮಾನದ ವಿರುದ್ಧ ಸಿಪಿಐ ಕಾಸರಗೋಡು ಮಂಡಲ ಸಮಿತಿ ನೇತೃತ್ವದಲ್ಲಿ ಕಾಸರಗೋಡು ತಾಲೂಕು ಕಚೇರಿಗೆ ಮಾರ್ಚ್, ಧರಣಿ ನಡೆಸಲಾಯಿತು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇರಳದಲ್ಲಿ ಹೇರಲು ನಡೆಸುವ ಯತ್ನದ ವಿರುದ್ಧ ತೀವ್ರ ವಿರೋಧ ಮಾರ್ಚ್‌ನಲ್ಲಿ ಕಂಡು ಬಂತು. ಸಿಪಿಐ ರಾಜ್ಯ ಕೌನ್ಸಿಲ್ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಮಂಡಲ ಅಸಿಸ್ಟೆಂಟ್ ಸೆಕ್ರೆಟರಿ ತುಳಸೀಧರನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಅಸಿಸ್ಟೆಂಟ್ ಸೆಕ್ರೆಟರಿ ವಿ. ರಾಜನ್ ಮಾತನಾಡಿದರು. ಮಂಡಲ ಕಾರ್ಯದರ್ಶಿ …

ಪನತ್ತಡಿಯಲ್ಲಿ ಕಾಡಾನೆ ಉಪಟಳ:ಕಾಡಿಗೆ ಓಡಿಸಿದ ಅರಣ್ಯಪಾಲಕರು

ಕಾಸರಗೋಡು: ಹಲವು ದಿನಗಳಿಂದಾಗಿ ಭೀತಿ ಸೃಷ್ಟಿಸಿದ್ದ ಕಾಡಾನೆ ಹಿಂಡನ್ನು ಅರಣ್ಯಪಾಲಕರು ಹಿಮ್ಮೆಟ್ಟಿಸಿದ್ದಾರೆ. ಪನತ್ತಡಿ ಸೆಕ್ಷನ್ ವ್ಯಾಪ್ತಿಯಲ್ಲಿ ಮಾಂಬಳಂ, ಪೆರುಮುಂಡ, ಕಮ್ಮಾಡಿ ಮೊದಲಾದ ಜನವಾಸ ವಲಯದಲ್ಲಿ ಕಾಡಾನೆಗಳ ಉಪಟಳ ತೀವ್ರವಾಗಿತ್ತು. ನಿನ್ನೆ ಪನತ್ತಡಿ ಸೆಕ್ಷನ್ ಫಾರೆಸ್ಟ್ ಆಫೀಸರ್ ಎಂ.ಪಿ. ರಾಜುರ ನೇತೃತ್ವದಲ್ಲಿ ಕಾಸರಗೋಡು ಆರ್‌ಆರ್‌ಟಿ ಟೀಮ್, ಸೆಕ್ಷನ್ ಸ್ಟಾಫ್, ಪಿಆರ್‌ಟಿ ಸದಸ್ಯ ಎಂಬಿವರು ಸೇರಿ ಸ್ಪೆಷಲ್ ಕಾಡಾನೆ ಡ್ರೈವ್ ನಡೆಸಿ ಹಿಂಡನ್ನು ಕಾಡಿನತ್ತ ಓಡಿಸಿದ್ದಾರೆ.

ಶಿರಿಯದ ಜನರ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ: ರೈಲ್ವೇ ಅಂಡರ್‌ಪಾಸ್‌ಗೆ 3 ಕೋಟಿ ರೂ. ಮಂಜೂರು

ಉಪ್ಪಳ: ಮಂಜೇಶ್ವರ ವಿಧಾನಸಭಾ ಮಂಡಲದ ಮಂಗಲ್ಪಾಡಿ ಪಂಚಾಯತ್‌ಗೊಳ ಪಟ್ಟ ಶಿರಿಯ ನಿವಾಸಿಗಳ ಹಲವು ಕಾಲದ ಸಂಚಾರ ಸಮಸ್ಯೆಗೆ ಪರಿಹಾರವಾಗುತ್ತಿದೆ. ಐಕ್ಯರಂಗ ಸರಕಾರದ ಮೊದಲ ಬಜೆಟ್‌ನಲ್ಲಿ ಶಿರಿಯ ರೈಲ್ವೇ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಮೂರು ಕೋಟಿ ರೂ. ಮಂಜೂರು ಮಾಡಲಾಗಿದೆ. ಶಾಸಕ ಎಕೆಎಂ ಅಶ್ರಫ್‌ರ ಪ್ರೊಪೋಸಲ್‌ನ ಆಧಾರದಲ್ಲಿ ರಾಜ್ಯ ಸರಕಾರ ಬಜೆಟ್‌ನಲ್ಲಿ ಈ ಮೊತ್ತ ಮೀಸಲಿರಿಸಿದೆ. ಹಲವಾರು ಮನೆಗಳು, ಶಿಕ್ಷಣ ಸಂಸ್ಥೆಗಳು, ಆರಾಧನಾಲಯಗಳು ನೆಲೆಗೊಂಡಿರುವ ಶಿರಿಯಕ್ಕೆ ಪ್ರಸ್ತುತ ಸಂಚಾರ ಸೌಕರ್ಯ ಬಹಳ ದುಸ್ತರವಾಗಿದೆ. ರೈಲ್ವೇ ಹಳಿ ಸಾಗುವ ಕಾರಣ ಮುಟ್ಟಂ …