ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ: 51ನೇ ವಾರ್ಷಿಕಾಚರಣೆ ಆರಂಭ

ಕಾಸರಗೋಡು: ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದ 51ನೇ ವಾರ್ಷಿಕಾಚರಣೆಯ ಅಂಗವಾಗಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ  ಬಿಜೆಪಿ ಜಿಲ್ಲಾ ಕಚೇರಿಯಾದ ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿ ಮಂದಿರದಲ್ಲಿ  ತುರ್ತು ಪರಿಸ್ಥಿತಿ ವಿರೋಧಿ ಸಮ್ಮೇಳನ ಇಂದು ನಡೆಯುತ್ತಿದೆ.  ಬಿಜೆಪಿ ರಾಜ್ಯ ವಕ್ತಾರ ಪಿ.ಪಿ. ಜಯಚಂದ್ರನ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಹಲವರು ನೇತಾರರು ಉಪಸ್ಥಿತರಿದ್ದಾರೆ. ಈ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟಗಾರರನ್ನು ಸನ್ಮಾನಿಸಲಾಗುವುದು.

ಗೃಹಿಣಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಗೃಹಿಣಿಯೋರ್ವೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪೈಕ ಚಾಮುಂಡಿಮೂಲೆ ನಿವಾಸಿಯೂ ನೆಲ್ಲಿಕಟ್ಟೆಯಲ್ಲಿ ಅಡಿಕೆ ವ್ಯಾಪಾರಿಯಾಗಿರುವ  ಶಂಕರ ಎಂಬವರ ಪತ್ನಿ ಚಿತ್ರಕಲಾ (41) ಸಾವಿಗೀಡಾದ ಮಹಿಳೆ. ನಿನ್ನೆ ಮಧ್ಯಾಹ್ನ ವೇಳೆ ಇವರು ಮನೆಯ ಬಚ್ಚಲು ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲವೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರ ಗೋಡು ಜನರಲ್ ಆಸ್ಪತ್ರೆಯಲ್ಲಿ  ನಡೆಸಲಾಯಿತು. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.  ಗೋಸಾಡ …

ಪದವಿ ವಿದ್ಯಾರ್ಥಿನಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪದವಿ ವಿದ್ಯಾರ್ಥಿನಿಯೋರ್ವೆ ಮನೆಯ  ಬೆಡ್‌ರೂಂನಲ್ಲಿ ಫ್ಯಾನ್‌ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಪುಗುರಿ ಶೆಟ್ಟಿಗದ್ದೆಯ ಗಿರೀಶ್-ದೀಪಿಕಾ ದಂಪತಿಯ ಪುತ್ರಿ ಪ್ರತ್ಯೂಕ (19) ಸಾವಿಗೆ ಶರಣಾದ ವಿದ್ಯಾರ್ಥಿನಿ. ನಿನ್ನೆ ಮಧ್ಯಾಹ್ನ ವೇಳೆ ಪ್ರತ್ಯೂಕ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಪ್ಲಸ್‌ಟು ಬಳಿಕ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಮೂರು ದಿನಗಳ ಹಿಂದೆಯಷ್ಟೇ ಈಕೆ ಪದವಿ ಶಿಕ್ಷಣಕ್ಕೆ ಸೇರಿದ್ದಳು. ನಿನ್ನೆ ಈಕೆ ಕಾಲೇಜಿಗೆ …

ಕಾರು ಢಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ: ಚಾಲಕನ ವಿರುದ್ಧ ಕೇಸು

ಮುಳ್ಳೇರಿಯ:   ಕಾರು ಢಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆಗೆ ಸಂಬಂಧಿಸಿ ಕಾರು ಚಾಲಕನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ನಿರ್ಲಕ್ಷ್ಯ ಹಾಗೂ ಅಜಾಗ್ರತೆಯಿಂದ ಅಪರಿಮಿತ ವೇಗದಲ್ಲಿ, ಮನುಷ್ಯ ಜೀವಕ್ಕೆ  ಅಪಾಯ ಉಂಟಾಗುವ  ರೀತಿಯಲ್ಲಿ ಕಾರು ಚಲಾಯಿಸಿರು ವುದಾಗಿ ಪ್ರಕರಣ ದಾಖಲಿಸಲಾಗಿದೆ.  ಕಳೆದ ಮಂಗಳವಾರ ಸಂಜೆ 4 ಗಂಟೆ ವೇಳೆ ಅಪಘಾತ ಸಂಭವಿಸಿದೆ. ಮುಳ್ಳೇರಿಯ ವಿವೇಕಾನಂದನಗರದ ಶ್ರೀಯಾನ್ (5), ದೀಕ್ಷಾ (17) ಎಂಬಿವರು ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ದೀಕ್ಷಾ ಮುಳ್ಳೇರಿಯ …

ಯುವತಿ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಓರ್ವ ಆರೋಪಿ ಬಂಧನ: ಇನ್ನೋರ್ವನಿಗಾಗಿ ಶೋಧ

ಹೊಸಂಗಡಿ: ಹೊಸಂಗಡಿ ಪೇಟೆಯಲ್ಲಿ ಹಾಡಹಗಲೇ ಯುವತಿಯ ಕುತ್ತಿಗೆಯಿಂದ ಎರಡೂಕಾಲು ಪವನ್ ಚಿನ್ನದ ಸರ ಕಸಿದು ಪರಾರಿಯಾದ ಆರೋಪಿಗಳ ಪೈಕಿ ಓರ್ವ ಸೆರೆಗೀಡಾಗಿದ್ದಾನೆ. ಬಂಬ್ರಾಣ ಕಳತ್ತೂರು ಚೆಕ್‌ಪೋಸ್ಟ್ ಬಳಿಯ ನಿವಾಸಿ ಸಂದೀಪ್ ಎ ಯಾನೆ ಸಂತು (31) ಎಂಬಾತನನ್ನು ಮಂಜೇಶ್ವರ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಸರ ಎಗರಿಸಲು ಈತನೊಂದಿಗಿದ್ದ ಇನ್ನೋರ್ವನ ಪತ್ತೆಗಾಗಿ ಶೋಧ ಮುಂದುವರಿಸಿರುವುದಾಗಿ  ಪೊಲೀಸರು ತಿಳಿಸಿದ್ದಾರೆ. ಯುವತಿಯ ಕುತ್ತಿಗೆಯಿಂದ ಕಸಿದ ಚಿನ್ನದ ಸರವನ್ನು ಆರೋಪಿಗಳು ಕಾಸರಗೋಡಿನ ಜ್ಯುವೆಲ್ಲರಿ ಯೊಂದರಲ್ಲಿ ಅಡವಿರಿಸಿದ್ದು, ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂ ಡಿದ್ದಾರೆ. …

ಹಲವು ಮಕ್ಕಳಿಗೆ ಕಿರುಕುಳ ನೀಡಿದ ಪ್ರಕರಣ: ಬೇಕಲದಿಂದ ತಲೆಮರೆಸಿಕೊಂಡಿದ್ದ ಮದ್ರಸ ಅಧ್ಯಾಪಕ ಬಿಹಾರದಲ್ಲಿ ಸೆರೆ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪೋಕ್ಸೋ ಪ್ರಕರಣಗಳಲ್ಲಿ ಆರೋಪಿ ಯಾದ  ಮದ್ರಸ ಅಧ್ಯಾಪಕ ಸೆರೆಗೀಡಾಗಿದ್ದಾನೆ.  ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ ಮಲಪ್ಪುರಂ  ಆದವನಾಡ್ ನಿವಾಸಿ ಯಾದ ಎಂ.ಕೆ.ಮೊಹಮ್ಮದ್ ಎಂಬಾತನನ್ನು ವಳಾಂಜೇರಿ ಪೊಲೀಸರು ಬಂಧಿಸಿದ್ದಾರೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಹಮ್ಮದ್ ಮದ್ರಸ ಅಧ್ಯಾಪಕನಾಗಿದ್ದನು.  ಪ್ರಾಯಪೂರ್ತಿ ಯಾಗದ ಇಬ್ಬರು ಮಕ್ಕಳಿಗೆ ಕಿರುಕುಳ ನೀಡಿದ ಘಟನೆಯಲ್ಲಿ ಈತನ ವಿರುದ್ಧ ಬೇಕಲ ಪೊಲೀಸರು ಎರಡು ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿದ್ದರು.  ಅಷ್ಟರಲ್ಲಿ ಈತ ತಲೆಮರೆಸಿಕೊಂಡಿ ದ್ದನು. ಇದೇ ವೇಳೆ ಮಲಪ್ಪುರದ ಮದ್ರಸವೊಂದರ ೧೪ …

ಕರ್ನಾಟಕ ಮದ್ಯ ಸಹಿತ ಹಲವು ಅಬಕಾರಿ ಪ್ರಕರಣಗಳ ಆರೋಪಿ ಸೆರೆ

ಕುಂಬಳೆ: ಕರ್ನಾಟಕ ನಿರ್ಮಿತ ಮದ್ಯ ಸಹಿತ ಓರ್ವನನ್ನು ಬಂಧಿಸಲಾಗಿದೆ. ಕಡಂಬಾರು ಅಂಗಡಿಪದವು ನಿವಾಸಿ ಬಿ.ಎಂ. ಅನಿಲ್ ಕುಮಾರ್ ಎಂಬಾತನನ್ನು ಕುಂಬಳೆ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಎ.ಬಿ. ಅಬ್ದುಲ್ಲ ನೇತೃತ್ವದ ತಂಡ ಬಂಧಿಸಿದೆ. ನಿನ್ನೆ ಬೆಳಿಗ್ಗೆ ಅಂಗಡಿಪದವಿನಿಂದ ಈತನನ್ನು ಬಂಧಿಸಲಾಗಿದೆ. ಆರೋಪಿಯ ಕೈಯಿಂದ 1.35 ಲೀಟರ್ ಕರ್ನಾಟಕ ಮದ್ಯ ವಶಪಡಿಸಿಕೊಂಡಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈತನ ವಿರುದ್ಧ ಕುಂಬಳೆ ರೇಂಜ್‌ನಲ್ಲಿ ೫ ಅಬಕಾರಿ ಪ್ರಕರಣಗಳು ದಾಖಲಾ ಗಿರುವುದಾಗಿ  ತಿಳಿಸಲಾಗಿದೆ. ಸಿವಿಲ್ ಎಕ್ಸೈಸ್ ಅಫೀಸರ್‌ಗಳಾದ ವಿ.ಜಿ ತಿನ್, ಪಿ. …

ಪೈವಳಿಕೆಯಲ್ಲಿ ತ್ಯಾಜ್ಯ ಸಮಸ್ಯೆ:ಡಿವೈಎಫ್‌ಐಯಿಂದ 29ರಂದು ಪಂಚಾಯತ್ ಧರಣಿ

ಪೈವಳಿಕೆ: ಪೈವಳಿಕೆ ಪಂಚಾ ಯತ್‌ನ ಅವೈಜ್ಞಾನಿಕ ತ್ಯಾಜ್ಯ ವಿಲೇ ವಾರಿ ಕ್ರಮದ ವಿರುದ್ಧ, ವಿಲೇವಾರಿ ಕೇಂದ್ರಗಳಲ್ಲಿ ತಿಂಗಳುಗಳಿAದ ಶೇಖರಣೆಗೊಂಡಿರುವ ತ್ಯಾಜ್ಯವನ್ನು ತುರ್ತಾಗಿ ತೆರವುಗೊಳಿಸಬೇಕು, ಮುಂಗಾರು ಪೂರ್ವ ಸ್ವಚ್ಛತಾ ಕಾರ್ಯಗಳಲ್ಲಿ ಅಧಿಕಾರಿಗಳು ತೋರಿದ ತೀವ್ರ ನಿರ್ಲಕ್ಷ್ಯವನ್ನು ಖಂಡಿಸಿ ಡಿಪಿs ಮಂಜೇಶ್ವರ ಬ್ಲಾಕ್ ಸಮಿತಿಯ ನೇತೃತ್ವದಲ್ಲಿ ಪಂಚಾಯತ್ ಕಚೇರಿ ಧರಣಿ ಹಮ್ಮಿಕೊಳ್ಳಲಾಗಿದೆ. ಜೂನ್ 29ರಂದು ಬೆಳಗ್ಗೆ ೧೦ಕ್ಕೆ ಪೈವಳಿಕೆ ವಿಲೇಜ್ ಕಚೇರಿ ಆವರಣದಿಂದ ಯುವಜನ ಮೆರ ವಣಿಗೆ ಆರಂಭವಾಗಲಿದೆ. ಹಸಿರು ಕ್ರಿಯÁ ಸೇನೆ ಸಂಗ್ರಹಿಸುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಯಾವುದೇ ಸಂಸ್ಕರಣೆ …

ಕಣ್ಣೂರು ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಉಚಿತ ರೋಗ ನಿರ್ಣಯ ಶಿಬಿರ 28ರಂದು

ಕಣ್ಣೂರು: ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನ ಜನರಲ್ ಸರ್ಜರಿ ವಿಭಾಗದ ನೇತೃತ್ವದಲ್ಲಿ ಉಚಿತ ರೋಗ ನಿರ್ಣಯ ಶಿಬಿರ ನಡೆಸಲಾಗುವುದು. ಜೂನ್ ೨೮ರಂದು ಬೆಳಿಗ್ಗೆ 10ರಿಂದ 2 ಗಂಟೆವರೆಗೆ ಶಿಬಿರ ನಡೆಯಲಿದೆ. ಹರ್ನಿಯ, ಗುಧ ಸಂಬಂಧವಾದ ರೋಗಗಳು, ಥೈರೋಯ್ಡ್ ಗಡ್ಡೆಗಳು, ಸ್ತನದಲ್ಲಿನ ಗಡ್ಡೆಗಳು, ಡಯಾಬಿಟಿಕ್ ಫೂಟ್ ಮೊದಲಾದ ಸಮಸ್ಯೆಗಳಿರುವವರಿಗೆ ಶಿಬಿರದಲ್ಲಿ ಭಾಗವಹಿಸಬಹುದು. ರೇಡಿಯೋಲಜಿ, ಲ್ಯಾಬ್ ಸೇವೆಗಳಲ್ಲಿ ರಿಯಾಯಿತಿ ಅಲ್ಲದೆ ಶಿಬಿರಗಳಲ್ಲಿ ಭಾಗವಹಿಸುವವರಿಗೆ ಮುಂದಿನ ಚಿಕಿತ್ಸೆಗಳಲ್ಲಿ ರಿಯಾಯಿತಿಗಳು ಲಭಿಸುವುದು. ಮೊದಲಾಗಿ ನೋಂದಾಯಿಸುವ ನೂರು ಮಂದಿಗೆ ಮಾತ್ರವೇ ಉಚಿತ ತಪಾಸಣೆ ಲಭಿಸುವುದು. ಮುಂಗಡವಾಗಿ …

ಬಿಆರ್‌ಪಿಎಂಎಸ್ ಜಿಲ್ಲಾ ಸಮ್ಮೇಳನ, ಕುಟುಂಬ ಸಂಗಮ

ಕಾಸರಗೋಡು: ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘ್ (ಬಿಆರ್‌ಪಿಎಂಎಸ್) ಕಾಸರಗೋಡು ಜಿಲ್ಲಾ ಸಮ್ಮೇಳನ ಹಾಗೂ ಕುಟುಂಬ ಸಂಗಮ ಚಟ್ಟಂಚಾಲ್ ತೈರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಂಘಟನೆಯ ರಾಜ್ಯಾಧ್ಯಕ್ಷ ಎಂ. ವಿಜಯ ಕುಮಾರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಆರ್‌ಎಸ್‌ಎಸ್ ಹಿರಿಯ ಪ್ರಚಾರಕ್ ಎ.ಸಿ. ಗೋಪಿನಾಥ್ ಪ್ರಧಾನ ಭಾಷಣ ಮಾಡಿದರು. ಬಿಆರ್‌ಪಿಎಂಎಸ್ ರಾಜ್ಯ ಮುಖಂಡರಾದ ಸಿ.ಎಚ್. ಸುರೇಶ್, ಕೆ. ದಯಾನಂದ, ರಾಜಲಕ್ಷ್ಮಿ, ಕುಂಞಮ್ಮ, ಪಿ.ಆರ್. ಮುರಳೀಧರನ್, ಎಸ್.ಎಸ್. ಸುರೇಶ್ ಕುಮಾರ್, ರಘು ಕುಮಾರ್ ನಾಯರ್, …