ಉಪ್ಪಳ: ಸೋಂಕಾಲು ಕೊಡಂಗೆ ರಸ್ತೆಯ ಬಳಂಕುಡೆ ನಿವಾಸಿ, ಕಾಸರಗೋಡು ವಿವೇಕಾನಂದ ನಗರದಲ್ಲಿ ವಾಸವಾಗಿರುವ ಹಿರಿಯ ವ್ಯಾಪಾರಿ ನಾರಾಯಣ.ಎಂ (78) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತೆ್ಸಯಲ್ಲಿದ್ದರು. ಇವರು ಪ್ರತಾಪನಗರ ಹಾಗೂ ಕೊಡಂಗೆಯಲ್ಲಿ ಹಲವಾರು ವರ್ಷಗಳ ಕಾಲ ದಿನಸಿ ವ್ಯಾಪಾರಿಯಾಗಿದ್ದರು. ಬಿಜೆಪಿ ಹಿರಿಯ ಕಾರ್ಯಕರ್ತರಾಗಿದ್ದ ಇವರು ದಿವಂಗತರಾದ ಅಂಬು ವೈದ್ಯರ್ -ಕಲ್ಯಾಣಿ ಅಮ್ಮ ದಂಪತಿ ಪುತ್ರರಾಗಿದ್ದು, ಪತ್ನಿ ಪ್ರಮೀಳ, ಮಕ್ಕಳಾದ ನಿಶಾ, ನಿಮ್ಮಿ, ಸೌಮ್ಯ, ಅಳಿಯಂದಿರಾದ ಸಜಿತ್, ಸುಜಿತ್, ಸಹೋದರ -ಸಹೋದರಿಯರಾದ ಯಶೋದ, ಸುಲೋಚನ, ಶ್ರೀನಿವಾಸ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಹೋದರರಾದ ಕುಂಞÂರಾಮ ವೈದ್ಯರ್, ದಾಮೋದರ ವೈದ್ಯರ್, ಅಳಿಯ ಶ್ರೀಜಿತ್ ಈ ಹಿಂದೆ ನಿಧನ ಹೊಂದಿದ್ದಾರೆ.
ಕೇರಳ ವಣ್ಣಾನ್ ಸಮುದಾಯ ಸಂಘದ ಜಿಲ್ಲಾ ಕಮಿಟಿ ಅಧ್ಯಕ್ಷ ರಮೇಶ್ ವಿವೇಕಾನಂದ ನಗರ, ಕಾರ್ಯದರ್ಶಿ ರವಿ ಪಟ್ಲ, ರವೀಂದ್ರನ್ ವೈದ್ಯರ್ ಮುನ್ನಿಪ್ಪಾಡಿ, ಕುಮಾರನ್ ಬದಿಯಡ್ಕ, ಡಾ.ಕುಮಾರನ್ ಕಾಞಂಗಾಡ್ ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.




