ಅಸೌಖ್ಯ ಬಾಧಿಸಿ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹ ಪಡೆದುಕೊಳ್ಳಲು ಹಿಂಜರಿದ ಸಂಬಂಧಿಕರು; ಜಿಲ್ಲಾ ಪಂ. ಸದಸ್ಯೆ ಇರ್ಫಾನ ಇಕ್ಭಾಲ್ ನೇತೃತ್ವದಲ್ಲಿ ಅಂತ್ಯಸಂಸ್ಕಾರ
ಉಪ್ಪಳ: ಗಂಭೀರ ಅಸೌಖ್ಯ ಬಾಧಿಸಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದು, ಆದರಂ ಮೃತದೇಹವನ್ನು ಪಡೆದು ಕೊಳ್ಳಲು ಸಂಬಂಧಿಕರಾರೂ ತಲು ಪಿಲ್ಲ. ಇದರಿಂದ ಜಿಲ್ಲಾ ಪಂಚಾ ಯತ್ ಸದಸ್ಯೆ ಇರ್ಫಾನ ಇಕ್ಬಾಲ್‌ರ ನೇತೃತ್ವದಲ್ಲಿ ವ್ಯಕ್ತಿ ಯ ಮೃತದೇಹವನ್ನು ಚಿತೆಗೇರಿ ಸಲಾಯಿತು. ಮೀಂಜ ಪಂಚಾಯತ್‌ನ ಚಿಗುರುಪದವು ನಿವಾಸಿಯಾದ ನಾರಾಯಣ (64) ಎಂಬವರು ಮೃತಪಟ್ಟ ವ್ಯಕ್ತಿ. ಇವರಿಗೆ ಅರ್ಬುದ ಬಾಧಿಸಿತ್ತೆನ್ನಲಾಗಿದೆ. ಒಂದು ತಿಂಗಳ ಹಿಂದೆ ಊರಿನ ಅಂಗಡಿಯೊಂದರ ವರಾಂಡದಲ್ಲಿ ಹಲವು ದಿನಗಳಕಾಲ ಮಲಗಿದ ಸ್ಥಿತಿಯಲ್ಲಿದ್ದರು. ಆಹಾರ ಕೂಡಾ …