ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ನೂತನ ಪದಾಧಿಕಾರಿಗಳ ಆಯ್ಕೆ

ಉಪ್ಪಳ: ಫ್ರೆಂಡ್ಸ್ ಕ್ಲಬ್ ಜೋಡು ಕಲ್ಲು ಇದರ ನೂತನ ಸಮಿತಿ ರಚನೆ ಫ್ರೆಂಡ್ಸ್ ಸಭಾಭವನದಲ್ಲಿ ನಡೆಯಿತು. ಸುರೇಶ್ ಶೆಟ್ಟಿ ನಿರೂಪಿಸಿದರು. ಪ್ರವೀಣ್ ಪಟ್ಲ ಸ್ವಾಗತಿಸಿದರು. ಲೋಕೇಶ್ ನೋಂಡ ವಂದಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ದಯಾನಂದ ಮಾಡ, ಅಧ್ಯಕ್ಷರಾಗಿ ಪ್ರೇಮ್ ಕಾಂತ್ ಶೆಟ್ಟಿ ದೇರಂಬಳ, ಉಪಾಧ್ಯಕ್ಷರಾಗಿ ಲೋಕೇಶ್ ನೋಂಡ, ಕೃಷ್ಣ ಕಯ್ಯಾರು, ಪ್ರಧಾನ ಕಾರ್ಯ ದರ್ಶಿಯಾಗಿ ಪ್ರದೀಪ್ ಅರಿಯಾಳ, ಜೊತೆ ಕಾರ್ಯದರ್ಶಿಗಳಾಗಿ ಸುರೇಶ್ ಶೆಟ್ಟಿ, ಜೀವನ್ ಪಟ್ಲ, ಕೋಶಾಧಿಕಾರಿ ಯಾಗಿ ಅರುಣ್ ಡಿ ಸೋಜಾ, ಸಾಂಸ್ಕೃತಿಕ …

ಬಾಲಗೋಕುಲ ಉತ್ತರ ಕೇರಳಂ ರಾಜ್ಯ ವಾರ್ಷಿಕ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಬಾಲಗೋಕುಲ ಉತ್ತರ ಕೇರಳಂ ಇದರ ರಾಜ್ಯ ವಾರ್ಷಿಕ ಸಮ್ಮೇಳನದ  ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯ ವರು ನಿನ್ನೆ ಬಿಡುಗಡೆಗೊಳಿಸಿದರು. ಜುಲೈ  1೦ರಿಂದ 13ರ ವರೆಗೆ ಕಾಸರಗೋಡು ವಿದ್ಯಾನಗರ ಚಿನ್ಮಯ ತೇಜಸ್ ಆಡಿಟೋರಿಯಂನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ  ಕೇಂದ್ರ ಸಚಿವ ಶ್ರೀಪಾದ್ ಯಶೋ ನಾಯ್ಕ್, ರಾಜ್ಯಸಭಾ ಸದಸ್ಯ ಸಿ.ಸದಾನಂದನ್ ಮಾಸ್ತರ್ ಸಹಿತ ಹಲವರು ಗಣ್ಯರು ಭಾಗವಹಿಸುವರು. ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಸ್ವಾಮೀಜಿ ಯವರು ಮಕ್ಕಳಲ್ಲಿ ಆರ್ಷಜ್ಞಾನ ಹಾಗೂ ದೇಶಪ್ರೇಮವನ್ನು ಬೆಳೆಸುವ, …

ಐತಿಹಾಸಿಕ ಕುಂಬಳೆ ಆರಿಕ್ಕಾಡಿ ಕೋಟೆಯನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸಬೇಕೆಂಬ ಬೇಡಿಕೆ:  ಸಚಿವರಿಗೆ ಮನವಿ

ಕುಂಬಳೆ:  ಪ್ರಸಿದ್ಧ ಕುಂಬಳೆ ಆರಿಕ್ಕಾಡಿ ಕೋಟೆಯನ್ನು ಸಾಂಸ್ಕೃತಿಕ  ಕೇಂದ್ರವಾಗಿ ಭಡ್ತಿಗೊಳಿಸಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಇಕ್ಕೇರಿ ನಾಯಕರ ರಾಜವಂಶದ ಆಡಳಿತ ವೇಳೆ ನಿರ್ಮಾಣಗೊಂಡಿದ್ದ  ಹಾಗೂ ಮೈಸೂರು  ರಾಜನಾಗಿದ್ದ ಟಿಪ್ಪು ಸುಲ್ತಾನ್ ಈ ಭಾಗಕ್ಕೆ ಬಂದಾಗ ತಂಗುತ್ತಿದ್ದ ಆರಿಕ್ಕಾಡಿ ಕೋಟೆಯನ್ನು ಸಾಂಸ್ಕೃತಿಕ ಕೇಂದ್ರವಾಗಿಸಬೇಕೆಂಬ ಬೇಡಿಕೆಯೊಂದಿಗೆ ನಾಗರಿಕರು ಹಾಗೂ ವಿವಿಧ ಸಂಘಟನೆಗಳು ರಂಗಕ್ಕಿಳಿದಿವೆ. ಕುಂಬಳೆ 1೦ನೇ ಶತಮಾನದಿಂದ 18ನೇ ಶತಮಾನದವರೆಗೆ ತುಳುವಂಶದ ಕೇಂದ್ರವಾಗಿತ್ತು.  ಇತಿಹಾಸಗಳ ಪುಟದಲ್ಲಿ ಸೇರಿಕೊಂಡು ಮಹತ್ವ ಪಡೆದಿರುವ  ಆರಿಕ್ಕಾಡಿಯ ಕೆಂಪುಕಲ್ಲು ಕೋಟೆಯು ಈಗ ಕೆಲವು ಭಾಗಗಳು ಮಾತ್ರ ಉಳಿದುಕೊಂಡಿವೆ. …

ಕುಂಬಳೆ ಪಂಚಾಯತ್ ಬಸ್ ತಂಗುದಾಣದಲ್ಲಿ ನೀರು ತಂಗಿ ನಿಂತು ಸಮಸ್ಯೆ

ಕುಂಬಳೆ: ಕುಂಬಳೆ ಪಂಚಾಯತ್ ಬಸ್ ತಂಗುದಾಣ ಶೆಲ್ಟರ್‌ನಲ್ಲಿ ನೀರು ತುಂಬಿಕೊಂಡಿರುವುದಾಗಿ ಸ್ಥಳೀಯರು, ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ತಂಗುದಾಣದಲ್ಲಿ ನೀರು ತಂಗಿನಿಲ್ಲುವ ಕಾರಣ ಪ್ರಯಾಣಿಕರಿಗೆ ಬಸ್‌ಗೆ ಹತ್ತಲು, ಇಳಿಯಲು ಸಮಸ್ಯೆಯಾಗು ತ್ತಿದೆ. ಜನರು ಅಂಟು ರೋಗ ಬೆದರಿಕೆ ಭೀತಿಯಲ್ಲಿರುವ ಮಧ್ಯೆ ಕೆಸರು ನೀರು ತಂಗಿ ನಿಲ್ಲುತ್ತಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ. ಶೀಘ್ರವೇ ಇದಕ್ಕೊಂದು ಪರಿಹಾರ ಕಾಣಬೇಕೆಂದು ಬಿಜೆಪಿ ಕುಂಬಳೆ ಸಮಿತಿ, ಪಂಚಾಯತ್ ಸದಸ್ಯರು ಆಗ್ರಹಿಸಿದ್ದಾರೆ. ಜಂಟಿಯಾಗಿ ಜರಗಿದ ಸಭೆಯಲ್ಲಿ ಈ ಅಭಿಪ್ರಾಯ ಕೇಳಿಬಂದಿದೆ. ಈ ಬಗ್ಗೆ ಪಂಚಾಯತ್ ಅಧ್ಯಕ್ಷ, ಕಾರ್ಯದರ್ಶಿಗೆ …

ಮುಸ್ಲಿಂ ಲೀಗ್‌ನಿಂದ ಅವಕಾಶವಾದಿ ರಾಜಕೀಯ- ರವೀಶ ತಂತ್ರಿ ಕುಂಟಾರು

ಪೈವಳಿಕೆ: ದೇಶದಲ್ಲಿ ಬಿಜೆಪಿ ಅಲೆ ಕಾರ್ಯಗತವಾಗುತ್ತಿದೆ. ಕೇರಳದಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿದೆ. ಬಿಜೆಪಿಯಷ್ಟು ಮತ ಇಲ್ಲದ ಮುಸ್ಲಿಂ ಲೀಗ್ ಕೇರಳದಲ್ಲಿ ನಿರ್ಣಾಯಕ ಶಕ್ತಿಯಾಗಿರುವುದು ಅವರ ಅವಕಾಶವಾದಿ ರಾಜಕೀಯ ದಿಂದಾಗಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಮುಖಂಡ ಕುಂಟಾರು ರವೀಶ ತಂತ್ರಿ ನುಡಿದರು. ಸಜಂಕಿಲ ದಲ್ಲಿ ನಡೆದ ಮಂಜೇಶ್ವರ ಮಂಡಲ ಬಿಜೆಪಿ ಪ್ರಶಿಕ್ಷಣ ಶಿಬಿರ ಸಮಾ ರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಮುಸ್ಲಿಂ ಲೀಗ್ ತನ್ನದೇ ಶಕ್ತಿಯಿಂದಲ್ಲ, ಐಕ್ಯರಂಗದ ಹೆಸರಲ್ಲಿ ಕಾಂಗ್ರೆಸ್ ಹಾಗೂ ಕೇರಳ ಕಾಂಗ್ರೆಸ್ ಮತಗಳ ಜೊತೆಗೆ …

ಕಂಚಿಕಟ್ಟೆ ಸೇತುವೆ ಬಳಿ ಗುಡ್ಡೆ ಕುಸಿತ ಭೀತಿ: ಪ್ರಯಾಣಿಕರು ಆತಂಕದಲ್ಲಿ

ಕುಂಬಳೆ: ಅಪಘಾತ ಬೆದರಿಕೆ ಎದುರಿಸುವ ಕಂಚಿಕಟ್ಟೆ ಸೇತುವೆ ಬಳಿ ರಸ್ತೆ ಹಾನಿಗೊಳ್ಳುವ ಸ್ಥಿತಿಗೆ ತಲುಪಿದೆಯೆಂದು ಸ್ಥಳೀಯರು ಮುನ್ನೆಚ್ಚರಿಕೆ ನೀಡಿದ್ದಾರೆ. ಸೇತುವೆಯಿಂದ ೨೫೦ ಮೀಟರ್ನಷ್ಟು ದೂರದಲ್ಲಿ ರಸ್ತೆಗೆ ಹೊಂದಿಕೊಂಡು ಕಲ್ಲಿನ ಗೋಡೆ ಆಂಶಿಕವಾಗಿ ಕುಸಿದು ನಿಂತಿದೆ. ರಸ್ತೆಗೆ ಹೊಂದಿಕೊಂಡು ಬೆಳೆಯುವ ಮರದ ಬುಡದ ಬಳಿಯಲ್ಲೇ ಕಲ್ಲು ಬಿರುಕು ಬಿಟ್ಟು ಕೆಳಗೆ ಬಿದ್ದಿದೆ. ಇನ್ನು ಕೂಡ ಈ ರೀತಿ ಮುಂದುವರಿದರೆ ಮರ ಹಾಗೂ ಅದರೊಂದಿಗಿರುವ ಕಲ್ಲಿನ ಗೋಡೆ ರಸ್ತೆಗೆ ಬೀಳುವ ಸ್ಥಿತಿಯಿದೆಯೆಂದು ಪ್ರಯಾಣಿಕರು ತಿಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ದಾರಿಯಾಗಿ …