ಮುಸ್ಲಿಂ ಲೀಗ್‌ನಿಂದ ಅವಕಾಶವಾದಿ ರಾಜಕೀಯ- ರವೀಶ ತಂತ್ರಿ ಕುಂಟಾರು

ಪೈವಳಿಕೆ: ದೇಶದಲ್ಲಿ ಬಿಜೆಪಿ ಅಲೆ ಕಾರ್ಯಗತವಾಗುತ್ತಿದೆ. ಕೇರಳದಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿದೆ. ಬಿಜೆಪಿಯಷ್ಟು ಮತ ಇಲ್ಲದ ಮುಸ್ಲಿಂ ಲೀಗ್ ಕೇರಳದಲ್ಲಿ ನಿರ್ಣಾಯಕ ಶಕ್ತಿಯಾಗಿರುವುದು ಅವರ ಅವಕಾಶವಾದಿ ರಾಜಕೀಯ ದಿಂದಾಗಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಮುಖಂಡ ಕುಂಟಾರು ರವೀಶ ತಂತ್ರಿ ನುಡಿದರು. ಸಜಂಕಿಲ ದಲ್ಲಿ ನಡೆದ ಮಂಜೇಶ್ವರ ಮಂಡಲ ಬಿಜೆಪಿ ಪ್ರಶಿಕ್ಷಣ ಶಿಬಿರ ಸಮಾ ರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಮುಸ್ಲಿಂ ಲೀಗ್ ತನ್ನದೇ ಶಕ್ತಿಯಿಂದಲ್ಲ, ಐಕ್ಯರಂಗದ ಹೆಸರಲ್ಲಿ ಕಾಂಗ್ರೆಸ್ ಹಾಗೂ ಕೇರಳ ಕಾಂಗ್ರೆಸ್ ಮತಗಳ ಜೊತೆಗೆ ಮುಸ್ಲಿಂ ಮತಗಳ ಧ್ರುವೀಕರಣ ಮಾಡಿ ಅಧಿಕಾರಕ್ಕೇರುತ್ತಿರುವುದಾಗಿ ಅವರು ಆರೋಪಿಸಿದರು. ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಹರೀಶ್ಚಂದ್ರ ಎಂ, ಪದ್ಮನಾಭ ಕಡಪ್ಪುರ, ಮಣಿಕಂಠ ರೈ, ಲೋಕೇಶ್ ನೋಂಡ, ಎ.ಕೆ. ಕಯ್ಯಾರ್, ಮನುಲಾಲ್ ಮೇಲತ್, ಪ್ರವೀಣ್‌ಚಂದ್ರ ಬಲ್ಲಾಳ್, ನವೀನ್‌ರಾಜ್, ಭಾಸ್ಕರ್ ಪೊಯ್ಯೆ, ಚಂದ್ರಾವತಿ ಶೆಟ್ಟಿ, ಯಾದವ ಬಡಾಜೆ ಭಾಗವಹಿಸಿದರು.

You cannot copy contents of this page