ಮನೆಗಳ ಮೇಲೆ ಗುಡ್ಡೆ ಕುಸಿದು ಮೂವರು ದಾರುಣ ಮೃತ್ಯು; ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು: ಮಂಗಳೂರು ಕಂಕನಾಡಿ ಗರೋಡಿ ಎಂಬಲ್ಲಿ ಇಂದು ಮುಂಜಾನೆ ದಾರುಣ ಘಟನೆ

ಮಂಗಳೂರು: ಧಾರಾಕಾರ ಮಳೆ ಸುರಿಯುತ್ತಿದ್ದಂತೆ  ಗುಡ್ಡೆ ಕುಸಿದು ಮನೆಗಳ ಮೇಲೆ ಬಿದ್ದು ಸಂಭವಿಸಿದ ದುರ್ಘಟನೆಯಲ್ಲಿ ಮೂರು ಮಂದಿ ಮೃತಪಟ್ಟ ಘಟನೆ ಕಂಕನಾಡಿ ನಾಗುರಿ ಬಳಿಯ ಗರೋಡಿ ಎಂಬಲ್ಲಿ ನಡೆದಿದೆ.  ಬಿಹಾರ ನಿವಾಸಿಗಳಾದ ಲಾಲ್ ಬಾಬು ಎಂಬವರ ಮಕ್ಕಳಾದ ಚೌರಸ್ಯ (8), ಪ್ಯಾರಿ (4), ನೆರೆಮನೆ ನಿವಾಸಿ  ಬಾಲಕೃಷ್ಣ ಎಂಬವರ ಪತ್ನಿ ಶಾಂತ (40) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇಂದು ಮುಂಜಾನೆ 5 ಗಂಟೆ ವೇಳೆ ದುರ್ಘಟನೆ ಸಂಭವಿಸಿದೆ. ಬಿಹಾರ ನಿವಾಸಿಗಳಾದ ಕುಟುಂಬಗಳು ವಾಸಿಸುವ ಎರಡು ಮನೆಗಳ ಮೇಲೆ …

ಮಳೆ: ಕೀಯೂರಿನಲ್ಲಿ ಮನೆ ಕುಸಿತ; ಕುಟುಂಬ ಅದೃಷ್ಟವಶಾತ್ ಅಪಾಯದಿಂದ ಪಾರು

ಕಾಸರಗೋಡು:  ತೀವ್ರ ಮಳೆ ಸುರಿಯುತ್ತಿದ್ದಂತೆ  ಹೆಂಚಿನ ಮನೆಯೊಂದು ಕುಸಿದುಬಿದ್ದ ಘಟನೆ ಇಂದು ಮುಂಜಾನ್ಗೆ ಕೀಯೂರಿನಲ್ಲಿ ಸಂಭವಿಸಿದೆ. ಈ ವೇಳೆ  ಮನೆಯೊಳಗೆ ನಿದ್ರಿಸುತ್ತಿದ್ದ  ರೋಗಿ ಸಹಿತ ೫ ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇಂದು ಮುಂಜಾನೆ ೪ ಗಂಟೆ ವೇಳೆ ದುರ್ಘಟನೆ ಸಂಭವಿಸಿದೆ.  ನಿದ್ದೆಯಲ್ಲಿದ್ದಾಗ ಮನೆಯ ಮೇಲ್ಛಾವಣಿ ಕುಸಿಯುವ ಸದ್ದು ಕೇಳಿದ್ದು, ಕೂಡಲೇ ಕುಟುಂಬ  ಹೊರಗೆ ಓಡಿದ್ದು ಇದರಿಂದ ಅಪಾಯದಿಂದ ಪಾರಾಗಿದ್ದಾರೆ.  ಕೀಯೂರು ಕಡಪ್ಪುರ ಶ್ರೀ ಸುಬ್ರಹ್ಮಣ್ಯ ಮಠ ಸಮೀಪದ ಕುಂಞಿಕೃಷ್ಣನ್ ಎಂಬವರ ಮನೆ ಕುಸಿದು ಬಿದ್ದಿದೆ.  ಈ …

ಹತ್ಯೆಯತ್ನ ಪ್ರಕರಣದಲ್ಲಿ ಆರೋಪಿಗಳಾದ ಯೂಟ್ಯೂಬರ್ ಖಾದರ್ ಕರಿಪ್ಪೊಡಿ, ತಂಡ ಕರ್ನಾಟಕಕ್ಕೆ ಪಲಾಯನಗೈದಿರುವುದಾಗಿ ಸೂಚನೆ

ಕಾಸರಗೋಡು: ಹತ್ಯೆಯತ್ನ ಪ್ರಕರಣ ದಾಖಲಾಗುವುದರೊಂದಿಗೆ ಯೂಟ್ಯೂಬರ್ ಖಾದರ್ ಕರಿಪ್ಪೊಡಿ ಹಾಗೂ ತಂಡ ಕರ್ನಾಟಕಕ್ಕೆ ಪಲಾಯನಗೈದಿರುವುದಾಗಿ ಸೂಚನೆಯಿದೆ. ಈ ಹಿನ್ನೆಲೆಯಲ್ಲಿ  ಪೊಲೀಸರು ತನಿಖೆಯನ್ನು ಕರ್ನಾಟಕಕ್ಕೆ ವಿಸ್ತರಿಸಿದ್ದಾರೆ. ಪಳ್ಳಿಕ್ಕೆರೆ ನಿವಾಸಿ ಅಬ್ದುಲ್ ಅಹದ್‌ರನ್ನು ಕೊಲೆಗೈಯ್ಯಲು  ಯತ್ನಿಸಲಾಯಿತೆಂಬುದಾಗಿ  ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಖಾದರನ ಸಹಚರರಾದ  ರಾಶಿದ್ ಹಾಗೂ ಅಶ್ರಫ್ ಎಂಬಿವರು ತಲೆಮರೆಸಿಕೊಂಡಿದ್ದಾರೆ. ಪಳ್ಳಿಕ್ಕರೆಯ ಅಹದ್‌ರ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಖಾದರ್ ಕರಿಪ್ಪೊಡಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.  ಗಲ್ಫ್‌ನಲ್ಲಿ ನಡೆದ ಹಣ ವ್ಯವಹಾರಕ್ಕೆ ಸಂಬಂಧಿಸಿ ಅಬ್ದುಲ್ ಅಹದ್‌ರನ್ನು ಖಾದರ್ ಕರಿಪ್ಪೊಡಿ ಹಾಗೂ …

ಮನೆಗೆ ನುಗ್ಗಿ ಯುವತಿ, ಯುವಕನ ವೀಡಿಯೋ ಚಿತ್ರೀಕರಿಸಿ ಬೆದರಿಕೆ: ಇಬ್ಬರು ಆರೋಪಿಗಳ ಬಂಧನ

ಮಂಜೇಶ್ವರ: ರಾತ್ರಿ ಹೊತ್ತಿನಲ್ಲಿ  ಮನೆಗೆ ನುಗ್ಗಿ  ಯುವತಿ ಹಾಗೂ ಆಕೆಯ ಸ್ನೇಹಿತನ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ  ಇಬ್ಬರು ಆರೋಪಿಗ ಳನ್ನು ಮಂಜೇಶ್ವರ ಪೊಲೀ ಸರು ಬಂಧಿಸಿದ್ದಾರೆ. ಮಂಜೇಶ್ವರ ನಿವಾಸಿ ಗಳಾದ ಸೆನೋಹರ್ (28), ಅನ್ವರ್ (46)  ಎಂಬಿವರು  ಬಂಧಿತ ಆರೋಪಿ ಗಳಾ ಗಿದ್ದಾರೆ.  ಜೂನ್ 23ರಂದು ರಾತ್ರಿ 10.30ಕ್ಕೆ  ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲ್ಲಿ ವಾಸಿಸುವ 27ರ ಹರೆಯದ ಯುವತಿಯ ಮನೆಗೆ ನುಗ್ಗಿದ ಆರೋಪಿಗಳು  ಯುವತಿ ಹಾಗೂ ಅಲ್ಲಿದ್ದ ಆಕೆಯ ಸ್ನೇಹಿತನ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿರುವುದಾಗಿ …

ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಲ್ಲಿ ಹಣಕಾಸು ವಂಚನೆ ನಡೆಸಿದ ಅಧ್ಯಾಪಕನ ಅಮಾನತು

ಕಾಸರಗೋಡು: ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಭಾರೀ ಆರ್ಥಿಕ ವಂಚನೆ ನಡೆಸಿದ ಪ್ರಭಾರ ಪ್ರಾಂಶುಪಾಲರಾಗಿದ್ದ  ಅನಿಲ್ ಕೆ ಎಂಬ ಅಧ್ಯಾಪಕನನ್ನು ಅಮಾನತು ಗೊಳಿಸಲಾಗಿದೆ. ಶಾಲಾ ಪಿಟಿಎ, ಮೊಗ್ರಾಲ್ ದೇಶೀಯವೇದಿ ಹಾಗೂ  ಫ್ರೆಂಡ್ಸ್ ಕ್ಲಬ್ ಸಂಘಟನೆ ಗಳು ನಿರಂತರವಾಗಿ ಈ ವಿಷಯಕ್ಕೆ ಸಂಬಂಧಿಸಿ ಸಂಬಂಧಪಟ್ಟ ವರಿಗೆ ದೂರು ಹಾಗೂ ಮನವಿಗಳನ್ನು ಸಲ್ಲಿಸಿದ್ದವು. ಜವಾಬ್ದಾರಿಯುತ ಸರಕಾರಿ  ಉದ್ಯೋಗಿಯೆಂಬ ನೆಲೆಯ ಲ್ಲಿ ಮಾದರಿಯುತವಾಗಿ ಕಾರ್ಯವೆಸಗಬೇಕಾದ ಅಧ್ಯಾಪಕನ ಭಾಗದಿಂದ ಉಂಟಾದ ಚಟುವಟಿಕೆಗಳು ಗಂಭೀರ ಆರ್ಥಿಕ ಅವ್ಯವಹಾರ, …

ಬಿಎಂಎಸ್ ಕುಂಬಳೆ ಪಂಚಾಯತ್ ಸಮ್ಮೇಳನ: ಪದಾಧಿಕಾರಿಗಳ ಆಯ್ಕೆ

ಕುಂಬಳೆ: ಬಿ.ಎಂ ಎಸ್ ಕುಂಬಳೆ ಪಂಚಾಯತ್ ಸಮ್ಮೇಳನ ಕುಂಬಳೆ ಜಯಮಾರುತಿ ವ್ಯಾಯಾಮ ಶಾಲೆಯಲ್ಲಿ ಜರಗಿತು. ಶಿವಾನಂದರಾವ್ ಅಧ್ಯಕ್ಷತೆ ವಹಿಸಿದರು. ಎನ್.ಜಿ.ಒ ಸಂಘ್ ಜಿಲ್ಲಾ ಅಧ್ಯಕ್ಷ ರಂಜಿತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಜತೆಕಾರ್ಯ ದರ್ಶಿ ದಿನೇಶ್ ಬಂಬ್ರಾಣ, ಶೋಭಾ ಬಾಲರಾಜ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಡಲ ಕಾರ್ಯವಾಹ ಜಿತೇಶ್ ನಾಯ್ಕಾಪು, ಬಿಜೆಪಿ ರಾಜ್ಯ ಸದಸ್ಯ ವಿ. ರವೀಂದ್ರನ್ ಶುಭಾಶಂಸನೆಗೈದರು. ಭೋಜರಾಜ ದಂಡೆಗೋಳಿ ವರದಿ ಮಂಡಿಸಿದರು. ಬಿಜೆಪಿ ಪಂಚಾಯತ್ ಸದಸ್ಯರಾದ ಕಾಂಚಾರ, ರಮೇಶ್ ಭಟ್, ಅಜಿತ್ ಕುಮಾರ್, …

ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ನೂತನ ಪದಾಧಿಕಾರಿಗಳ ಆಯ್ಕೆ

ಉಪ್ಪಳ: ಫ್ರೆಂಡ್ಸ್ ಕ್ಲಬ್ ಜೋಡು ಕಲ್ಲು ಇದರ ನೂತನ ಸಮಿತಿ ರಚನೆ ಫ್ರೆಂಡ್ಸ್ ಸಭಾಭವನದಲ್ಲಿ ನಡೆಯಿತು. ಸುರೇಶ್ ಶೆಟ್ಟಿ ನಿರೂಪಿಸಿದರು. ಪ್ರವೀಣ್ ಪಟ್ಲ ಸ್ವಾಗತಿಸಿದರು. ಲೋಕೇಶ್ ನೋಂಡ ವಂದಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ದಯಾನಂದ ಮಾಡ, ಅಧ್ಯಕ್ಷರಾಗಿ ಪ್ರೇಮ್ ಕಾಂತ್ ಶೆಟ್ಟಿ ದೇರಂಬಳ, ಉಪಾಧ್ಯಕ್ಷರಾಗಿ ಲೋಕೇಶ್ ನೋಂಡ, ಕೃಷ್ಣ ಕಯ್ಯಾರು, ಪ್ರಧಾನ ಕಾರ್ಯ ದರ್ಶಿಯಾಗಿ ಪ್ರದೀಪ್ ಅರಿಯಾಳ, ಜೊತೆ ಕಾರ್ಯದರ್ಶಿಗಳಾಗಿ ಸುರೇಶ್ ಶೆಟ್ಟಿ, ಜೀವನ್ ಪಟ್ಲ, ಕೋಶಾಧಿಕಾರಿ ಯಾಗಿ ಅರುಣ್ ಡಿ ಸೋಜಾ, ಸಾಂಸ್ಕೃತಿಕ …

ಬಾಲಗೋಕುಲ ಉತ್ತರ ಕೇರಳಂ ರಾಜ್ಯ ವಾರ್ಷಿಕ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಬಾಲಗೋಕುಲ ಉತ್ತರ ಕೇರಳಂ ಇದರ ರಾಜ್ಯ ವಾರ್ಷಿಕ ಸಮ್ಮೇಳನದ  ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯ ವರು ನಿನ್ನೆ ಬಿಡುಗಡೆಗೊಳಿಸಿದರು. ಜುಲೈ  1೦ರಿಂದ 13ರ ವರೆಗೆ ಕಾಸರಗೋಡು ವಿದ್ಯಾನಗರ ಚಿನ್ಮಯ ತೇಜಸ್ ಆಡಿಟೋರಿಯಂನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ  ಕೇಂದ್ರ ಸಚಿವ ಶ್ರೀಪಾದ್ ಯಶೋ ನಾಯ್ಕ್, ರಾಜ್ಯಸಭಾ ಸದಸ್ಯ ಸಿ.ಸದಾನಂದನ್ ಮಾಸ್ತರ್ ಸಹಿತ ಹಲವರು ಗಣ್ಯರು ಭಾಗವಹಿಸುವರು. ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಸ್ವಾಮೀಜಿ ಯವರು ಮಕ್ಕಳಲ್ಲಿ ಆರ್ಷಜ್ಞಾನ ಹಾಗೂ ದೇಶಪ್ರೇಮವನ್ನು ಬೆಳೆಸುವ, …

ಐತಿಹಾಸಿಕ ಕುಂಬಳೆ ಆರಿಕ್ಕಾಡಿ ಕೋಟೆಯನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸಬೇಕೆಂಬ ಬೇಡಿಕೆ:  ಸಚಿವರಿಗೆ ಮನವಿ

ಕುಂಬಳೆ:  ಪ್ರಸಿದ್ಧ ಕುಂಬಳೆ ಆರಿಕ್ಕಾಡಿ ಕೋಟೆಯನ್ನು ಸಾಂಸ್ಕೃತಿಕ  ಕೇಂದ್ರವಾಗಿ ಭಡ್ತಿಗೊಳಿಸಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಇಕ್ಕೇರಿ ನಾಯಕರ ರಾಜವಂಶದ ಆಡಳಿತ ವೇಳೆ ನಿರ್ಮಾಣಗೊಂಡಿದ್ದ  ಹಾಗೂ ಮೈಸೂರು  ರಾಜನಾಗಿದ್ದ ಟಿಪ್ಪು ಸುಲ್ತಾನ್ ಈ ಭಾಗಕ್ಕೆ ಬಂದಾಗ ತಂಗುತ್ತಿದ್ದ ಆರಿಕ್ಕಾಡಿ ಕೋಟೆಯನ್ನು ಸಾಂಸ್ಕೃತಿಕ ಕೇಂದ್ರವಾಗಿಸಬೇಕೆಂಬ ಬೇಡಿಕೆಯೊಂದಿಗೆ ನಾಗರಿಕರು ಹಾಗೂ ವಿವಿಧ ಸಂಘಟನೆಗಳು ರಂಗಕ್ಕಿಳಿದಿವೆ. ಕುಂಬಳೆ 1೦ನೇ ಶತಮಾನದಿಂದ 18ನೇ ಶತಮಾನದವರೆಗೆ ತುಳುವಂಶದ ಕೇಂದ್ರವಾಗಿತ್ತು.  ಇತಿಹಾಸಗಳ ಪುಟದಲ್ಲಿ ಸೇರಿಕೊಂಡು ಮಹತ್ವ ಪಡೆದಿರುವ  ಆರಿಕ್ಕಾಡಿಯ ಕೆಂಪುಕಲ್ಲು ಕೋಟೆಯು ಈಗ ಕೆಲವು ಭಾಗಗಳು ಮಾತ್ರ ಉಳಿದುಕೊಂಡಿವೆ. …

ಕುಂಬಳೆ ಪಂಚಾಯತ್ ಬಸ್ ತಂಗುದಾಣದಲ್ಲಿ ನೀರು ತಂಗಿ ನಿಂತು ಸಮಸ್ಯೆ

ಕುಂಬಳೆ: ಕುಂಬಳೆ ಪಂಚಾಯತ್ ಬಸ್ ತಂಗುದಾಣ ಶೆಲ್ಟರ್‌ನಲ್ಲಿ ನೀರು ತುಂಬಿಕೊಂಡಿರುವುದಾಗಿ ಸ್ಥಳೀಯರು, ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ತಂಗುದಾಣದಲ್ಲಿ ನೀರು ತಂಗಿನಿಲ್ಲುವ ಕಾರಣ ಪ್ರಯಾಣಿಕರಿಗೆ ಬಸ್‌ಗೆ ಹತ್ತಲು, ಇಳಿಯಲು ಸಮಸ್ಯೆಯಾಗು ತ್ತಿದೆ. ಜನರು ಅಂಟು ರೋಗ ಬೆದರಿಕೆ ಭೀತಿಯಲ್ಲಿರುವ ಮಧ್ಯೆ ಕೆಸರು ನೀರು ತಂಗಿ ನಿಲ್ಲುತ್ತಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ. ಶೀಘ್ರವೇ ಇದಕ್ಕೊಂದು ಪರಿಹಾರ ಕಾಣಬೇಕೆಂದು ಬಿಜೆಪಿ ಕುಂಬಳೆ ಸಮಿತಿ, ಪಂಚಾಯತ್ ಸದಸ್ಯರು ಆಗ್ರಹಿಸಿದ್ದಾರೆ. ಜಂಟಿಯಾಗಿ ಜರಗಿದ ಸಭೆಯಲ್ಲಿ ಈ ಅಭಿಪ್ರಾಯ ಕೇಳಿಬಂದಿದೆ. ಈ ಬಗ್ಗೆ ಪಂಚಾಯತ್ ಅಧ್ಯಕ್ಷ, ಕಾರ್ಯದರ್ಶಿಗೆ …