ಕಟ್ಟೆಬಜಾರ್‌ನಲ್ಲಿ ಹಳೆ ಮನೆ ಕುಸಿದು ನಾಶ ನಷ್ಟ

ಮಂಜೇಶ್ವರ: ಜೋರಾಗಿ ಸುರಿದ ಮಳೆ, ಗಾಳಿಗೆ ಹಳೆಯ ಮನೆಯೊಂದು ಕುಸಿದು ಬಿದ್ದ ಘಟನೆ ನಡೆದಿದೆ. ಮಂಜೇಶ್ವರ ಪಂಚಾಯತ್‌ನ ಕಟ್ಟೆಬಜಾರ್ ನಿವಾಸಿ ಜಗದೀಶ ಎಂಬವರ ಮನೆ ಕುಸಿದು ಬಿದ್ದಿದೆ. ಮಣ್ಣಿನ ಗೋಡೆ ಹೊಂದಿರುವ ಹೆಂಚು ಹಾಸಿದ ಈ ಮನೆಗೆ ನೂರಕ್ಕೂ ಮಿಕ್ಕು ವರ್ಷಗಳು ಕಳೆದಿರುವುದಾಗಿ ಹೇಳಲಾಗುತ್ತಿದೆ.ಈ ಮನೆಯಲ್ಲಿ ಜಗದೀಶರವರ ಭಾವ ಮಾತ್ರವೇ ಇದ್ದು, ಇತರರು ಪಕ್ಕದಲ್ಲಿರುವ ಸಂಬAಧಿಕರ ಮನೆಗೆ ತೆರಳಿದ್ದರು. ಮನೆ ಕುಸಿತದಿಂದ ವಿವಿಧ ವಸ್ತುಗಳು ನಾಶಗೊಂಡಿದ್ದು, ವ್ಯಾಪಕ ನಷ್ಟ ಉಂಟಾಗಿರುವುದಾಗಿ ತಿಳಿಸಿದ್ದಾರೆ. ಕುಟುಂಬ ಈಗ ಪರಿಸರದ ಸಂಬAಧಿಕರ …

ಎಲ್‌ಐಸಿ ಏಜೆಂಟರುಗಳಿಗೆ ಇಎಸ್‌ಐ ಸೌಲಭ್ಯ ನೀಡಬೇಕು- ಎ.ಐ.ಎಲ್.ಐ.ಎ.ಎಫ್

ಕಾಸರಗೋಡು: ಎಲ್‌ಐಸಿ ಏಜೆಂ ಟರುಗಳಿಗೆ ಇಎಸ್‌ಐ ಸೌಲಭ್ಯಗಳನ್ನು ಲಭ್ಯಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯ ಲೈಫ್ ಇನ್ಶೂರೆನ್ಸ್ ಏಜೆಂಟ್ಸ್ ಫೆಡರೇಶನ್ ಕಾಸರಗೋಡು ಬ್ರಾಂಚ್ ಸಮ್ಮೇಳನ ಆಗ್ರಹಿಸಿದೆ. ಆರ್ಗನೈಸಿಂಗ್ ಸೆಕ್ರೆಟರಿ ಎಂ. ಶಶೀಂದ್ರನ್ ಉದ್ಘಾಟಿಸಿ ದರು. ಶಿವನಾರಾಯಣ ಶರ್ಮ ಅಧ್ಯಕ್ಷತೆ ವಹಿಸಿದರು. ಸಿ. ವತ್ಸರಾಜ್, ಟಿ. ಕುಂಞಿಕೃಷ್ಣನ್, ಸಿ.ಡಿ. ನಾಯರ್, ಕೆ. ಕುಂಞಿಕೃಷ್ಣನ್ ನಾಯರ್, ಕೆ. ವಸಂತಿ, ಪಿ.ಎ. ರಾಜೀವ್, ಎ. ಗಣೇಶ್, ರಾಘವೇಂದ್ರ ಅಮ್ಮಣ್ಣಾಯ ಮಾತನಾಡಿದರು. ಕೆ.ಪಿ. ಗಂಗಾಧರನ್ ಸ್ವಾಗತಿಸಿ, ಪಿ. ಭರತನ್ ವಂದಿಸಿದರು. ನೂತನ …

ಶಿವಗಿರಿಯಲ್ಲಿ ಅಪಾಯ ಆಹ್ವಾನಿಸುವ ವಿದ್ಯುತ್ ಕಂಬ: ಸ್ಥಳೀಯರಲ್ಲಿ ಆತಂಕ

ಪೆರ್ಲ: ವಿದ್ಯುತ್ ಕಂಬವೊಂದು ಯಾವುದೇ ಕ್ಷಣ ಉರುಳಿ ಬಿದ್ದು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ. ಇದು ಸ್ಥಳೀಯರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಪೆರ್ಲ ಗುಂಡ್ಯಡ್ಕ ಶಿವಗಿರಿ ಕನ್ಯಾರುಮೂಲೆ ಸಂಪರ್ಕ ರಸ್ತೆಯ ಅಪ್ಪಯಮೂಲೆ ಶಿವಗಿರಿ ಮಧ್ಯೆ ರಸ್ತೆ ಬದಿ ಈ ಕಂಬ ನಿಂತಿದೆ. ಕಂಬದ ಬುಡದಿಂದ ಮಣ್ಣು ಕುಸಿದಿದ್ದು, ಇನ್ನಷ್ಟು ಮಣ್ಣು ಕುಸಿಯುವ ಸಾಧ್ಯತೆ ಇದೆ. ವಿದ್ಯುತ್ ಕಂಬ ಕುಸಿದು ಬಿದ್ದರೆ ಕೆಳ ಭಾಗದಲ್ಲಿರುವ ಮನೆಗಳ  ಮೇಲೆ ವಿದ್ಯುತ್ ತಂತಿಗಳು ಬೀಳುವ ಅಪಾಯ ಕಂಡು ಬರುತ್ತಿದೆ. ದೊಡ್ಡ ದುರಂತ …

ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಿಲಾಮಯ ಗರ್ಭಗುಡಿಗೆ ಪಾದುಕಾನ್ಯಾಸ

ಕಾಸರಗೋಡು: ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶಿಲಾಮಯ ಗರ್ಭಗುಡಿಗೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪಾದುಕಾನ್ಯಾಸ ನೇರವೇರಿಸಿದರು. ಇದೇ ವೇಳೆ ಜೀರ್ಣೋದ್ಧಾರ ಸಮಿತಿಯ ನೂತನ ಕಾರ್ಯಾಲಯ ಉದ್ಘಾಟಿ ಲಾಯಿತು. ಈ ವೇಳೆ ಕ್ಷೇತ್ರ ತಂತ್ರಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಮುಕ್ತೇಸರ ಸುಧಾಕರ ಕೋಟೆ ಕುಂ ಜತ್ತಾಯ, ಅರ್ಚಕ ಪದ್ಮನಾಭ ಮನೋ ಳಿತ್ತಾಯ, ಕಾರ್ಯ ನಿರ್ವಾಹಣಾಧಿ ಕಾರಿ ಪಿ. ರಾಜೇಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಅನಂತ್ ಕಾಮತ್, ಉಪಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, …