ಅಂಗಡಿ ಜಗಲಿಯಲ್ಲಿ ಮಲಗಿದ್ದ ಹಸುವನ್ನು ಕಳವುಗೈದು ಸಾಗಿಸಿದ ಇಬ್ಬರು ಆರೋಪಿಗಳ ಬಂಧನ

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ಯಪ್ಪಾಡಿಯಲ್ಲಿ ಅಂಗಡಿ ಜಗಲಿಯಲ್ಲಿ ಮಲಗಿದ್ದ ಹಸುವನ್ನು ಕಳವುಗೈದು ಕಾರಿನಲ್ಲಿ ಸಾಗಿಸಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಹಸು ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಲಾಗಿದೆ.  ಇತರ ಮೂವರು ಆರೋಪಿಗಳಿಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮಂಗಳೂರು ಜೋಕಟ್ಟೆ ಬಜ್ಪೆಯ ರಾಸಿಕ್ (21),ಉಳ್ಳಾಲ ಅಳಿಕೆಯ ಮುಹಮ್ಮದ್ ಇಬ್ರಾಸ್ (26) ಎಂಬಿವರನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 16ರಂದು  ಮುಂಜಾನೆ 1.30ರ ವೇಳೆ ಕನ್ಯಪ್ಪಾಡಿ ರಹ್ಮತ್ ಮಂಜಿಲ್‌ನ ಕೆ.ಎಂ. ಮುಹಮ್ಮದ್‌ರ ಮನೆಯ ಮುಂಭಾಗದಲ್ಲಿರುವ ಅಂಗಡಿಯ  ಜಗಲಿಯಲ್ಲಿ ಮಲಗಿದ್ದ ಹಸುವನ್ನು …

ಕಾರಿನಲ್ಲಿ ಸಾಗಿಸುತ್ತಿದ್ದ 30 ಕಿಲೋ ಗಾಂಜಾ ಸಹಿತ ಅಂತಾರಾಜ್ಯ ಆರೋಪಿ ಲಾಲಾಕಬೀರ್, ಸಹಚರನ ಬಂಧನ

ಕುಂಬಳೆ: ಆಪರೇಶನ್ ತೂಫಾನ್ ಯೋಜನೆಯಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅಧೀನದಲ್ಲಿರುವ ಡಾನ್ಸಾಫ್ ಟೀಂ ಹಾಗೂ  ಕುಂಬಳೆ  ಪೊಲೀಸರು ಸಂಯುಕ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ  ಅಂತಾರಾಜ್ಯ ಆರೋಪಿ ಲಾಲಾ ಕಬೀರ್ ಹಾಗೂ ಆತನ ಸಹಚರರನ್ನು ಬಂಧಿಸಲಾಗಿದೆ. ಇವರು ಸಂಚರಿಸುತ್ತಿದ್ದ ಹೋಂಡಾ ಸಿಟಿ ಕಾರಿನಿಂದ ೩೧ ಕಿಲೋ ಗಾಂಜಾ ವಶಪಡಿಸಲಾಗಿದೆ. ಕಾಞಂಗಾಡ್ ನಿವಾಸಿಯಾದ ಲಾಲಾ ಕಬೀರ್‌ನೊಂದಿಗೆ ಸಹಚರನಾದ ಮುಹಮ್ಮದ್ ನಿಹಾಲ್ ಎಂಬಾತನೂ ಸೆರೆಗೀಡಾಗಿದ್ದಾನೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರಿಕ್ಕಾಡಿ ಟೋಲ್ ಪ್ಲಾಸಾ ಸಮೀಪದಿಂದ …

ಜುಲೈ 6ರಂದು ಖಾಸಗಿ ಬಸ್ ಮುಷ್ಕರ

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಿಯದರ್ಶಿನಿ ಯೋಜನೆ ಪ್ರಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿರುವು ದರಿಂದ ಖಾಸಗಿ ಬಸ್‌ಗಳಿಗೆ ಉಂಟಾಗುತ್ತಿರುವ ನಷ್ಟ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಸರಕಾರ ಪರಿಹಾರ ಕಂಡುಕೊಳ್ಳದೇ ಇರುವುದನ್ನು ಪ್ರತಿಭಟಿಸಿ ಜುಲೈ.೬ರಂದು ಖಾಸಗಿ ಬಸ್‌ಗಳ ಸೇವೆಯನ್ನು ಮೊಟಕುಗೊಳಿಸಿ ಸೂಚನಾ ಮುಷ್ಕರ ಹಾಗೂ ಮಾರ್ಚ್ ನಡೆಸಲಾಗು ವುದೆಂದು ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಸಂಯುಕ್ತ ಟ್ರೇಡ್ ಯೂನಿಯನ್ ಪದಾಧಿ ಕಾರಿಗಳು ತಿಳಿಸಿದ್ದಾರೆ. ಖಾಸಗಿ ಬಸ್‌ಗಳ ದೈನಂದಿನ ಗಳಿಕೆಯಲ್ಲಿ ಕನಿಷ್ಠ 3000 …

ಗೃಹಿಣಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ:  ಗೃಹಿಣಿಯೋರ್ವೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ನಲ್ಕ ನಿವಾಸಿ ನಾರಾಯಣ ಎಂಬವರ ಪತ್ನಿಯೂ ಕಳೆದ ಕೆಲವು ವರ್ಷಗಳಿಂದ ಬೀಜದಕಟ್ಟೆಯ ತಾಯಿ ಮನೆಯಲ್ಲಿ ವಾಸಿಸುತ್ತಿದ್ದ ಲಕ್ಷ್ಮಿ ಯಾನೆ ನಳಿನಿ (60) ಎಂಬವರು ಮೃತಪಟ್ಟ ಮಹಿಳೆ. ನಿನ್ನೆ ರಾತ್ರಿ ಲಕ್ಷ್ಮಿ ಊಟಮಾಡಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ಮನೆ ಸಮೀಪದ ಕೊಟ್ಟಿಗೆಯಲ್ಲಿ ಇವರು ನೇಣುಬಿಗಿದು ಸಾವಿಗೀಡಾ ಗಿರುವುದು ಕಂಡುಬಂದಿದೆ. ಈ ಬಗ್ಗೆ ಮನೆಯವರು ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತದೇಹ ವನ್ನು ಮರಣೋತ್ತರ ಪರೀಕ್ಷೆಗಾಗಿ …

ಬಾಲಕಿಗೆ ಕಿರುಕುಳ: ಕುಂಬಳೆ ಆಟೋ ಚಾಲಕ ಪೋಕ್ಸೋ ಪ್ರಕಾರ ಬಂಧನ

ಕುಂಬಳೆ: 17ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆಟೋ ಚಾಲಕನನ್ನು ಪೋಕ್ಸೋ ಪ್ರಕಾರ ಬಂಧಿಸಲಾಗಿದೆ. ಕುಂಬಳೆಯ ಆಟೋ ಚಾಲಕ ಬಾವಲಿಮನ ಅಮೀರ್ ಮಂಜಿಲ್‌ನ ಅಬುತಾಹಿರ್ (22) ಎಂಬಾತನನ್ನು ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಪಿ. ವಿಜೀಶ್ ಬಂಧಿಸಿದ್ದಾರೆ.  ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ೧೭ರ ಹರಯದ ಬಾಲಕಿಗೆ 2022-2023ನೇ ಕಾಲಾವಧಿಯಲ್ಲಿ ಕಿರುಕುಳ ನೀಡಿದ ಪ್ರಕರಣದಲ್ಲಿ ಅಬುತಾಹಿರ್ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈತ ಎರಡು ದಿನಗಳೊಳಗೆ ಗಲ್ಫ್‌ಗೆ ತೆರಳಲಿರುವ ಸಿದ್ಧತೆಯಲ್ಲಿದ್ದನೆಂದೂ ಹೇಳಲಾಗುತ್ತಿದೆ. ಇತ್ತೀಚೆಗೆ ಬಾಲಕಿಗೆ ಅಸ್ವಸ್ಥತೆ ಕಂಡುಬಂದಿತ್ತೆನ್ನಲಾಗಿದೆ.  …

ಮದ್ಯದಮಲಿನಲ್ಲಿ ಗಲಾಟೆ ನಡೆಸಿದ ಇಬ್ಬರ ಬಂಧನ: ಬಂಧಿತರ ಪೈಕಿ ಓರ್ವ ಗಾಂಜಾ ಪ್ರಕರಣದಲ್ಲಿ ವಾರಂಟ್ ಆರೋಪಿ

ಉಪ್ಪಳ: ಮದ್ಯದ ಅಮಲಿನಲ್ಲಿ ಗಲಾಟೆ ನಡೆಸಿದ ಇಬ್ಬರು ಯುವಕ ರನ್ನು ಮಂಜೇಶ್ವರ ಪೊಲೀಸರು  ಬಂಧಿಸಿದ್ದಾರೆ. ಬಾಯಾರುಪದವು ಕ್ಯಾಂಪ್ಕೋ ಸಮೀಪದ ಫಯಾಸ್ (33), ರಾಜಸ್ಥಾನ ನಿವಾಸಿ ಶ್ರೀ ಓಂ ಮೀನಾ (26) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ನಿನ್ನೆ ಸಂಜೆ ೬ ಗಂಟೆಗೆ ಈ ಇಬ್ಬರು ಬಾಯಾರು ಆವಳದಲ್ಲಿ ಮದ್ಯ ಸೇವಿಸಿ ಗಲಾಟೆ ನಡೆಸಿದ್ದಾರೆ. ಇದರಿಂದ ಸಮಸ್ಯೆಗೀ ಡಾದ ಸ್ಥಳೀಯರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲ್ಲಿಗೆ ತಲುಪಿದ ಪೊಲೀಸರು ಫಯಾಸ್ ಹಾಗೂ ಶ್ರೀ ಓಂ ಮೀನಾನನ್ನು ಕಸ್ಟಡಿಗೆ …

ವಿಕಲ ಚೇತನ ಬಾಲಕಿಗೆ ಕಿರುಕುಳ: ಇಬ್ಬರು ಆಟೋ ಚಾಲಕರ ಸಹಿತ ಮೂವರು ಆರೋಪಿಗಳ ಬಂಧನ

ಕಾಸರಗೋಡು: ವಿಕಲ ಚೇತನಳಾದ 17ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೋಟಿಕುಳಂ ರೈಲ್ವೇ ನಿಲ್ದಾಣ ಸಮೀಪದ ಸಾಲಿ ಯಾನೆ ಮುಹಮ್ಮದ್ ಸಾಲಿಹ್ (29), ಪೆರುಂಬಳ ಕೋಳಿಯಡ್ಕದ ಶೆರೀಫ್ ಕಡಪ್ಪಳ್ಳಂ ಯಾನೆ ಕೆ.ಪಿ. ಶರೀಫ್ (40),ಮೈಲಾಟಿ ಕುಟ್ಟಪ್ಪುನ್ನ ಕುರುಕನ್‌ಕುನ್ನು ನಿವಾಸಿಯೂ ಪ್ರಸ್ತುತ ತಚ್ಚಂಗಾಡ್ ಅರಬಿಪಳ್ಳಿ ಸಮೀಪ ವಾಸಿಸುವ ಎ.ಟಿ. ಮುಹಮ್ಮದ್ ನೌಶಾದ್ (39) ಎಂಬಿವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಇವರ ಪೈಕಿ ನೌಶಾದ್ ಹಾಗೂ ಶೆರೀಫ್ ಆಟೋ ಚಾಲಕರಾಗಿದ್ದಾರೆ. ಮುಹಮ್ಮದ್ ಸಾಲಿಹ್ ತರಕಾರಿ …

ಆರಿಕ್ಕಾಡಿಯಲ್ಲಿ ಸ್ವಂತ ಹಣದಿಂದ ತಂಗುದಾಣ ನಿರ್ಮಿಸಿ ಮಾದರಿಯಾದ ಸಾಮಾಜಿಕ ಕಾರ್ಯಕರ್ತ

ಕುಂಬಳೆ:  ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ತೆರವುಗೊ ಳಿಸಿದ  ಆರಿಕ್ಕಾಡಿ ಬಸ್ ಪ್ರಯಾಣಿಕರ ತಂಗುದಾಣವನ್ನು ಮರು ಸ್ಥಾಪಿಸಬೇಕೆಂಬ  ನಾಗರಿಕರು ಹಾಗೂ ಪ್ರಯಾಣಿಕರು ಹಲವು ಕಾಲದಿಂದ  ಒತ್ತಾಯಿಸುತ್ತಾ ಬಂದರೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಧಿಕಾರಿಗಳು ಹಾಗೂ ಪಂಚಾಯತ್ ನಿರ್ಲಕ್ಷ್ಯ ನಿಲುವು ತೋರಿಸಿದ ಹಿನ್ನೆಲೆಯಲ್ಲಿ ಮೀನು ಕಾರ್ಮಿಕನೂ, ಸಾಮಾಜಿಕ ಕಾರ್ಯಕರ್ತನೂ ಆದ ಆರಿಫ್ ಕಡವತ್ ಸ್ವಂತ ಹಣ ಖರ್ಚುಮಾಡಿ ತಂಗುದಾಣ ನಿರ್ಮಿಸಿ ದ್ದಾರೆ.  ಬಿಸಿಲು ಹಾಗೂ ಮಳೆಗೆ ಆರಿಕ್ಕಾಡಿಯಲ್ಲಿ ಬಸ್‌ಗಾಗಿ ಕಾದು ನಿಲ್ಲಲು ತಂಗುದಾಣವಿಲ್ಲದಿರುವುದು ಪ್ರಯಾಣಿಕರಿಗೆ ಭಾರೀ ಸಮಸ್ಯೆ ಯಾಗಿ ಪರಿಣಮಿಸಿತ್ತು. …

ಕೊಂಡೆವೂರಿನಲ್ಲಿ ಉಚಿತ ಪಿಎಸ್‌ಸಿ ಮಾಹಿತಿ ಶಿಬಿರ

ಉಪ್ಪಳ: ಸರ್ಕಾರಿ ಉದ್ಯೋಗದ ಕನಸು ಹೊತ್ತ ಯುವಜನರಿಗೆ ಮಾರ್ಗ ದರ್ಶನ ನೀಡುವ ಉದ್ದೇಶದಿಂದ ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆ ವೂರು ಇವರ ಆಯೋಜನೆಯಲ್ಲಿ ಪಿ.ಎಸ್.ಸಿ ಉಚಿತ ಮಾಹಿತಿ ಶಿಬಿರ ಉದ್ಘಾಟನೆಗೊಂಡಿತು. ಅವೇಕ್ ಕಾಸರಗೋಡು ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ಈ ಉಚಿತ ತರಬೇತಿ ಶಿಬಿರಕ್ಕೆ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು. ಶಿಬಿರವು ಪ್ರತಿ ಭಾನುವಾರ ಬೆಳಗ್ಗೆ ೧೦ ರಿಂದ – ಮಧ್ಯಾಹ್ನ ೧ ಗಂಟೆಯವರೆಗೆ ಶ್ರೀ ಸದ್ಗುರು ನಿತ್ಯಾನಂದ ವಿದ್ಯಾಪೀಠದಲ್ಲಿ ಜರುಗುವುದು. ಶ್ರೀ ಯೋಗಾನಂದ ಸರಸ್ವತಿ …

ಕಂಚಿಕಟ್ಟೆ ಸೇತುವೆಯ ದುರವಸ್ಥೆ ಪ್ರತಿಭಟಿಸಿ ಎಸ್‌ಡಿಪಿಐಯಿಂದ ಫುಟ್ಭಾಲ್ ಶೂಟೌಟ್

ಕುಂಬಳೆ:  ಕಂಚಿಕಟ್ಟೆ ಸೇತುವೆಯ ಶೋಚನೀಯಾವಸ್ಥೆಯನ್ನು ಪರಿಹರಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮುಂದುವರಿಸುತ್ತಿರುವ ನಿರ್ಲಕ್ಷ್ಯವನ್ನು ಪ್ರತಿಭಟಿಸಿ ಎಸ್‌ಡಿಪಿಐ ಕುಂಬಳೆ ಪಂಚಾಯತ್ ಸಮಿತಿ  ಸೇತುವೆ ಮೇಲೆ ಫುಟ್ಭಾಲ್ ಶೂಟೌಟ್ ಹಮ್ಮಿಕೊಂಡಿತು. ಮಂಜೇಶ್ವರ ಮಂಡಲ ಅಧ್ಯಕ್ಷ ನಾಸರ್ ಬಂಬ್ರಾಣ ಉದ್ಘಾಟಿಸಿದರು.  ಕಂಚಿಕಟ್ಟೆ ಸೇತುವೆಯ ದುರವಸ್ಥೆಯಿಂದ ಪ್ರಯಾಣಿಕರು ಸಂಚರಿಸಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ದೂರುಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದು ಅಲ್ಲದೆ  ಪ್ರತಿಭಟನೆ ನಡೆಸಿದರೂ ಸಂಬಂಧಪಟ್ಟ ಇಲಾಖೆಗಳು ಸೇತುವೆ ನವೀಕರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದು ಖಂಡನೀಯ ವೆಂದು ನಾಸರ್ ಬಂಬ್ರಾಣ ತಿಳಿಸಿದ್ದಾರೆ. ಪಂಚಾಯತ್ ಸಮಿತಿ …