ಬಳ್ಳೂರು- ಮರ್ಕತ್ತಡ್ಕ ಸೇತುವೆ ಸಂಪರ್ಕ ರಸ್ತೆ ಬಿರುಕು

ಪೈವಳಿಕೆ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬಿರುಕುಬಿಟ್ಟಿದ್ದು ಇದರಿಂದ ವಾಹನ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಪೈವಳಿಕೆ ಪಂಚಾಯತ್‌ನ ೭ನೇ ವಾರ್ಡ್ ಬಳ್ಳೂರು- ಮರ್ಕತ್ತಡ್ಕ ಸೇತುವೆಗೆ ಸಂಪರ್ಕಿಸುವಲ್ಲಿ ರಸ್ತೆ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಸೃಷ್ಟಿಸಿದೆ. 25 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಇದಾಗಿದೆ. ಶಾಲಾ ವಾಹನಗಳ ಸಹಿತ ಹಲವಾರು ವಾಹನಗಳು ದಿನನಿತ್ಯ ಈ ರಸ್ತೆ ಮೂಲಕ ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ರಸ್ತೆ ಇನ್ನಷ್ಟು ಕುಸಿದರೆ ಈ ಮೂಲಕ ಸಂಚಾರಕ್ಕೆ …

ರಾಮ ಕೆ.ಎನ್ ನಿಧನ

  ಕಳತ್ತೂರು: ಕಿದೂರು ನಿವಾಸಿ ರಾಮ ಕೆ.ಎನ್ (50) ನಿನ್ನೆ ನಿಧನಹೊಂದಿದರು. ಮೃತರು ಪತ್ನಿ ಜಯಂತಿ, ಮಕ್ಕಳಾದ ಶಾನು, ಯಶಸ್ವಿನಿ, ಸುರಕ್ಷಿತ್, ಸಹೋದರ-ಸಹೋದರಿಯರಾದ ಕೇಶವ, ನಾರಾಯಣ, ಚಂದ್ರಹಾಸ, ಜಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹಾಜಿ ಚೆರ್ಕಳ ಮೊಹಮ್ಮದ್ ನಿಧನ

ಚೆರ್ಕಳ: ಸುನ್ನಿ ಮುಖಂಡ ಹಾಜಿ ಚೆರ್ಕಳ ಮೊಹಮ್ಮದ್ (66) ನಿಧನ ಹೊಂದಿದರು. ಚೆರ್ಕಳ ಮುಹಿಯಿ ದ್ದೀನ್ ಜಮಾಯತ್ ಮಸೀದಿ ಸಮಿತಿ ಅಧ್ಯಕ್ಷ, ಸುನ್ನಿ ಮಹಲ್ ಫೆಡರೇಶನ್ ಮಂಡಲ ಸಮಿತಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಅಬ್ದುಲ್ಲ, ಫಾಸಿಲ್ ಫಿರೋಸ್, ಶಾಸಿನ್ ಶಾಹಿದ್, ರಿಸ್ವಾನ ತಸ್ನೀಂ,  ಅಳಿಯಂದಿ ರಾದ ಶೆರೀನ್, ಶೆರೀಫ್, ಸೊಸೆ ಫಸ್ನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇಬ್ರಾಹಿಂ ನಿಧನ

ನೀರ್ಚಾಲು: ನೀರ್ಚಾಲು ಮೇಲಿನ ಪೇಟೆಯಲ್ಲಿ ವಾಸಿಸುವ ಇಬ್ರಾಹಿಂ (64) ನಿಧನಹೊಂ ದಿದರು. ಇವರು ಅಡುಗೆ ಕಾರ್ಮಿಕ ನಾಗಿದ್ದರು. ಮೃತರು ಪತ್ನಿ ನಬೀಸ, ಮಕ್ಕಳಾದ ರಂಸೀನ, ಮರಿಯಮ್ಮ, ಸಫೀರ, ರಶೀದ, ನೌಫಲ್, ಅಳಿಯ-ಸೊಸೆಯಂದಿರಾದ ಅಶ್ರಫ್, ಶರೀಫ್, ಸಿದ್ದಿಕ್, ಶಾನಿಬ, ಸಹೋದರ-ಸಹೋದರಿಯರಾದ ಅಬ್ಬಾಸ್ ಕಲ್ಲಕಟ್ಟ, ಅಬ್ದುಲ್ಲ ಆಲಂಪಾಡಿ, ಮುಹಮ್ಮದ್ ಉರ್ಮಿ, ಫಾತಿಮ, ಮೈಮೂನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇಂಜಿನಿಯರ್ ಪಾಂಡ್ಯಾಲ ಶರೀಫ್ ನಿಧನ

ಕುಂಬಳೆ: ಶಿರಿಯ ಮುಟ್ಟಂ ನಿವಾಸಿ ಇಂಜಿನಿಯರ್ ಶರೀಫ್ ಯಾನೆ ಪಾಂಡ್ಯಾಲ ಶರೀಫ್ (58) ನಿಧನ ಹೊಂದಿದರು.  ಕರ್ನಾಟಕ ಪೊಲೀಸ್‌ನ ನಿವೃತ್ತ ಡಿವೈಎಸ್ಪಿ ಮುಹಮ್ಮದ್ ಕುಂಞಿಯವರ ಪುತ್ರನಾಗಿದ್ದಾರೆ. ಅಸೌಖ್ಯ ಬಾಧಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಧ್ಯೆ ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಮೃತರು ಪತ್ನಿ  ಕುಂಬಳೆಯ ಉದ್ಯಮಿ ಮೊಹಮ್ಮದ್ ಅರಬಿಯವರ ಮಗಳಾದ ಶಕೀಲ, ಮಕ್ಕಳಾದ ರುಮ, ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.