ಗಾಳಿ ಮಳೆಕುಂಬಳೆಯಲ್ಲಿ ಎರಡು ಮನೆಗಳ ಮೇಲೆ ಮರಗಳು ಬಿದ್ದು ಹಾನಿ; ಕಾಞಂಗಾಡ್‌ನಲ್ಲಿ ಹಾರಿಹೋದ ಶಾಲೆಯ ಮೇಲ್ಛಾವಣಿ

ಕುಂಬಳೆ: ನಿನ್ನೆ ಸಂಜೆ ಬೀಸಿದ ಬಲವಾದ ಗಾಳಿ ಮಳೆಗೆ ವಿವಿಧೆಡೆಗಳಲ್ಲಿ ವ್ಯಾಪಕ ನಾಶನಷ್ಟ ಉಂಟಾಗಿದೆ. ಕುಂಬಳೆಯಲ್ಲಿ  ಎರಡು ಮನೆಗಳ  ಮೇಲೆ ಮರಗಳು ಬಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಕುಂಬಳೆ ಪಂಚಾಯತ್‌ನ 12ನೇ ವಾರ್ಡ್ ಕೋಟೆಕ್ಕಾರ್‌ನಲ್ಲಿ ರಾಧಾಕೃಷ್ಣ ಪೂಜಾರಿ ಎಂಬವರ ಹೆಂಚಿನ ಮನೆಗೆ ತೆಂಗಿನ ಮರ ಬುಡದಿಂದ ಮುರಿದು ಬಿದ್ದಿದೆ.  ಇದೇ ರೀತಿ 24ನೇ ವಾರ್ಡ್ ಶೇಡಿಕಾವಿನಲ್ಲಿ  ಮುತ್ತುಕೋಯ ತಂಙಳ್ ಎಂಬವರ ಹೆಂಚಿನ ಮನೆ ಮೇಲೆ ಸಮೀಪದ ಹಿತ್ತಿಲಿನ  ಮರದ ರೆಂಬೆ ಮುರಿದು ಬಿದ್ದಿದೆ.  ಈ ಎರಡೂ ಘಟನೆಗಳಿಂದ …

ಪೆಟ್ರೋಲ್, ಡೀಸೆಲ್ ಬೆಲೆ  ಶೀಘ್ರ ಇಳಿಕೆ ಸಾಧ್ಯತೆ

ನವದೆಹಲಿ: ದೇಶದಲ್ಲಿ ಈ ತಿಂಗಳ 20ರೊಳಗಾಗಿ ಪೆಟ್ರೋಲ್ ಮತ್ತು  ಡೀಸೆಲ್ ಬೆಲೆ ಇಳಿಸುವ ಪೂರ್ವ ಸುಳಿವನ್ನು ಕೇಂದ್ರ ಸರಕಾರ ನೀಡಿದೆ. ಮಳೆಗಾಲದ ಸಂಸತ್ ಅಧಿವೇಶನ ಆರಂಭಗೊಳ್ಳುವ ಮೊದಲೇ ಬೆಲೆ ಇಳಿಕೆ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಅಮೆರಿಕ-ಇರಾನ್ ನಡುವಿನ ಯುದ್ಧ ದಿಂದ ಜಾಗತಿಕ ತೈಲ ಮತ್ತು ಎಲ್‌ಪಿಜಿ ಅನಿಲದ  ಪೂರೈಕೆ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಭಾರತ ಮಾತ್ರವಲ್ಲ ಇತರ ಹಲವು ದೇಶಗಳು ಇಂಧನಗಳ ಭಾರಿ ಕೊರತೆ ಎದುರಿಸತೊಡಗಿತ್ತು. ಮಾತ್ರವಲ್ಲ ಅದರ ಹೆಸರಲ್ಲಿ ಇಂಧನಗಳ ಬೆಲೆ ಪದೇ ಪದೇ ಆಗಸಕ್ಕೇರುತ್ತಾ …

ಕಾಸರಗೋಡು ಹೊಸ ನಿಲ್ದಾಣದಲ್ಲಿ ಯುವಕರ ಮಧ್ಯೆ ಘರ್ಷಣೆ: 13 ಮಂದಿ ವಿರುದ್ಧ ಕೇಸು

ಕಾಸರಗೋಡು: ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಯುವಕರು ಗುಂಪುಸೇರಿ ಘರ್ಷಣೆಯಲ್ಲಿ ತೊಡಗಿದ ಘಟನೆ ನಡೆದಿದೆ. ಮಾಹಿತಿ ತಿಳಿದು ತಲುಪಿದ ಟೌನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ. ನಳಿನಾಕ್ಷನ್‌ರ ನೇತೃತ್ವದಲ್ಲಿ ಪೊಲೀಸ್ ತಂಡ ಮೂರು ಮಂದಿಯನ್ನು ಕಸ್ಟಡಿಗೆ ತೆಗೆದಿದೆ. ಬೋವಿಕಾನ, ಕೋಟೂರು, ಪಾತನಡ್ಕ ಹೌಸ್‌ನ ಕೆ. ಅನಿಲ್ ಕುಮಾರ್ (38), ಆದೂರು ಕುಂಟಾರು ಮಿಂಚಿಪದವು ಹೌಸ್‌ನ ಎಂ. ನಿದಿನ್‌ರಾಜ್ (24), ಪಾತನಡ್ಕ ಹೌಸ್‌ನ ಲಿನೀಶ್ ಕುಮಾರ್ (41) ಎಂಬಿವರನ್ನು ಕಸ್ಟಡಿಗೆ ತೆಗೆದು ನೋಟೀಸು ನೀಡಿದ ಬಳಿಕ ಬಿಡುಗಡೆ ಗೊಳಿಸಲಾಗಿದೆ.  …

ಏಳ್ಕಾನದಲ್ಲಿ ರಬ್ಬರ್ ಶೀಟ್ ಯಂತ್ರ ಕಳವು

ಬದಿಯಡ್ಕ: ಶೇಣಿ ಏಳ್ಕಾನದಲ್ಲಿ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ರಬ್ಬರ್ ಶೀಟ್ ಯಂತ್ರ ಕಳವಿಗೀಡಾಗಿದೆ.  ಜೂನ್ 22ರಿಂದ  ೨೮ರ ಮಧ್ಯೆ  ಕಳವು ನಡೆದಿರುವುದಾಗಿ ಕಂಪೆನಿಯ ಮಾಲಕ ಕನ್ನಾಟಿಕಾನದ  ಸೋಜನ್ ಜೋರ್ಜ್ ಬದಿಯಡ್ಕ ಪೊಲೀಸರಿಗೆ  ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.  ದೂರುಗಾರ, ಅವರ  ಅಣ್ಣನ ಪತ್ನಿ ಹಾಗೂ ಸಹೋದರಿ ಸೇರಿ ಏಳ್ಕಾನದಲ್ಲಿ  ಪಿ.ವಿ.ರಬ್ಬರ್ಸ್ ಎಂಬ ವ್ಯಾಪಾರ ಸಂಸ್ಥೆಯನ್ನು ಆರಂಭಿಸಿದ್ದರು.  ಸ್ವಂತ ತೋಟದಿಂದ ಸಂಗ್ರಹಿಸಿದ ಹಾಗೂ ಕೃಷಿಕರಿಂದ  ಲ್ಯಾಟೆಕ್ಸ್ ಖರೀದಿಸಿ ಕಂಪೆನಿ ಕಾರ್ಯಾಚರಿಸುತ್ತಿತ್ತು.    ಇತ್ತೀಚೆಗೆ ಸಮೀಪದ ಗುಡ್ಡೆ ಕುಸಿದು ಸಂಸ್ಥೆಯ ಮೇಲೆ …

ಬುಲ್ಲೆಟ್‌ನಲ್ಲಿ ಎಂಡಿಎಂಎ ಸಾಗಾಟ: ಇಬ್ಬರು ಸೆರೆ : ಓರ್ವ ಜಿಲ್ಲೆಯ ಮಾದಕ ಸಾಗಾಟದ ಪ್ರಧಾನ ಕೊಂಡಿ

ಕಾಸರಗೋಡು: ಆಪರೇಶನ್ ತೂಫಾನ್‌ನಂಗವಾಗಿ ಚಂದೇರ ಪೊಲೀಸರು ತೃಕರಿಪುರದಲ್ಲಿ ನಡೆಸಿದ ದಾಳಿಯಲ್ಲಿ 1.20 ಗ್ರಾಂ ಎಂಡಿಎಂಎ ಸಹಿತ ಇಬ್ಬರು ಯುವಕರನ್ನು ಸೆರೆ ಹಿಡಿದಿದ್ದಾರೆ. ಮಾಡಕ್ಕಲ್ ನಿವಾಸಿ ಎಂ.ಕೆ. ಮುನೀರ್ (39), ಪಯ್ಯನ್ನೂರು ಕವ್ವಾಯಿ ನಿವಾಸಿ ಮೊಹಮ್ಮದ್ ಸಾಜಿದ್ (೩೫) ಎಂಬಿವರು ಸೆರೆಯಾದವರು. ಎಸ್‌ಐ ಎಂ. ಅಜ್ಮಲ್‌ನ ನೇತೃತ್ವದಲ್ಲಿ ನಿನ್ನೆ ರಾತ್ರಿ  10 ಗಂಟೆ ವೇಳೆ ನಡೆಸಿದ ವಾಹನ ತಪಾಸಣೆಯಲ್ಲಿ ಇವರು ಸೆರೆಯಾಗಿದ್ದಾರೆ. ತೃಕರಿಪುರ ಶಾಬೋ ಶೆಟ್ಟಿ ರಸ್ತೆ ಜಂಕ್ಷನ್‌ನಲ್ಲಿ ಬುಲ್ಲೆಟ್‌ನಲ್ಲಿ ಸಂಚರಿಸುತ್ತಿದ್ದಾಗ ಆರೋಪಿಗಳು ಪೊಲೀಸರನ್ನು ಕಂಡು ಹಿಂತಿರುಗಿ ಪರಾರಿಯಾಗಲು …

ಮದ್ಯ ಸೇವಿಸಿ ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿದ ಸೋಶ್ಯಲ್ ಮೀಡಿಯಾ ಇನ್‌ಫ್ಲುವನ್ಸರ್‌ಳ  ಡ್ರೈವಿಂಗ್ ಲೈಸನ್ಸ್ ಅಮಾನತಿಗೆ ಕ್ರಮ

ಕುಂಬಳೆ: ಮದ್ಯ ಸೇವಿಸಿ ಅಪಾಯ ಕಾರಿ ರೀತಿಯಲ್ಲಿ  ವಾಹನ ಚಲಾಯಿ ಸಿದ  ಹೆಲನ್ ಆಫ್ ಸ್ಪಾರ್ಟ್ ಎಂಬ ಸೋಶ್ಯಲ್ ಮೀಡಿಯಾ ಇಫ್ಲೂವೆನ್ಸರ್ ಧನ್ಯಾಳ ಡ್ರೈವಿಂಗ್ ಲೈಸನ್ಸ್ ಅಮಾನ ತುಗೊಳಿಸಲು ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಕಳೆದ ಮಂಗಳವಾರ ಮುಂಜಾನೆ 2 ಗಂಟೆ ವೇಳೆ ಯುವತಿ ಮದ್ಯ ಸೇವಿಸಿ ಚಲಾಯಿಸು ತ್ತಿದ್ದ ಕಾರನ್ನು ಪೊಲೀಸರು ವಶಪಡಿಸಿದ್ದರು. ಅಣಂಗೂರಿನ ರಸ್ತೆ ಮಧ್ಯೆ ನಿಲ್ಲಿಸಿದ್ದ ಕಾರನ್ನು ತಪಾಸಣೆ ನಡೆಸಲು ಪೊಲೀಸರು ತಲುಪಿದಾಗ  ಕಾರನ್ನು  ತಕ್ಷಣ ಚಲಾಯಿಸಿಕೊಂ ಡೊಯ್ಯ ಲಾಗಿದೆ. ಬಳಿಕ ಕುಂಬಳೆ ಪೊಲೀಸ್ …

ಗ್ರಾಮೀಣ ಸಡಕ್ ರಸ್ತೆ ಕಾಮಗಾರಿ ಕಳಪೆ: ಕುಸಿದ ಬದಿ; ಅಡ್ಕ-ಮುಳ್ಳೇರಿಯ ರಸ್ತೆ ಶೋಚನೀಯದತ್ತ

ಮುಳ್ಳೇರಿಯ: ಸುಮಾರು ೨.೬೧ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯೊಂದು ಕಳಪೆ ಕಾಮಗಾರಿಯಿಂದ ಕೂಡಿದ್ದಾಗಿದೆ ಎಂದು ಈಗ ಸಾಬೀತಾ ಗಿದೆ. ನಿರ್ಮಾಣ ಸಮಯದಲ್ಲೇ ಸ್ಥಳೀಯರು ಹಾಗೂ ಸಾರ್ವಜನಿಕರು ರಸ್ತೆಯ ಲೋಪದೋಷಗಳ ಬಗ್ಗೆ ಸ್ವರವೆತ್ತಿದ್ದರು. ಆದರೂ ಅದಕ್ಕೆ ಯಾವುದೇ ಮನ್ನಣೆ ನೀಡದೆ ರಸ್ತೆ ಕಾಮಗಾರಿ ಮುಗಿಸಿದ ಒಂದು ವರ್ಷದಲ್ಲಿಯೇ ರಸ್ತೆ ವಿವಿಧ ಸಮಸ್ಯೆಗಳಿಗೆ ತುತ್ತಾಗಿದೆ. ಮುಳ್ಳೇರಿಯ ಪೈಕ ರಸ್ತೆಯ ನೀರೋಳಿಪಾರದಿಂದ ಅಡ್ಕ ಮೂಲಕ ಮುಳ್ಳೇರಿಯಕ್ಕೆ ಸಾಗುವ ರಸ್ತೆಯನ್ನು ಕಳೆದ ವರ್ಷ ಕೇಂದ್ರದ ಗ್ರಾಮೀಣ ಸಡಕ್ ಯೋಜನೆಯಲ್ಲಿ ನಿರ್ಮಿಸಲಾಗಿತ್ತು. ಮುಂಡೋಳು …

ಆನೆಬಾಗಿಲು ವಲಿಯವೀಡು ತರವಾಡು ಶ್ರೀ ವಯನಾಟುಕುಲವನ್ ಆಡಳಿತ ಸಮಿತಿ ಮಹಾಸಭೆ

ಕಾಸರಗೋಡು: ಆನೆಬಾಗಿಲು ವಲಿಯವೀಡು ತರವಾಡು ಶ್ರೀ ವಯನಾಟುಕುಲವನ್ ಧರ್ಮದೈವ ಆಡಳಿತ ಸಮಿತಿ ಮಹಾಸಭೆ ಇತ್ತೀಚೆಗೆ ತರವಾಡು ಮನೆಯಲ್ಲಿ ಜರಗಿತು. ಸಮಿತಿ ಅಧ್ಯಕ್ಷ ಕುಮಾರನ್ ತಿರುವಕ್ಕೋಳಿ ಅಧ್ಯಕ್ಷತೆ ವಹಿಸಿದರು. ಕಾರ್ನವರ್ ದಾಸನ್ ಕಂಡತ್ತಿಲ್ ಉದ್ಘಾಟಿಸಿದರು. ಕಾರ್ಯದರ್ಶಿ ಸುಕುಮಾರ್ ಕುದ್ರೆಪ್ಪಾಡಿ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ವಿನಯನ್ ಕೇಳುಗುಡ್ಡೆ ಲೆಕ್ಕಪತ್ರ ಮಂಡಿಸಿದರು. ತರವಾಡಿನಲ್ಲಿ ಮುಂದೆ ನಡೆಯಲಿರುವ ಕ್ಷೇತ್ರ ನವೀಕರಣ ಪುನರ್‌ಪ್ರತಿಷ್ಠೆಯ ಬಗ್ಗೆ ಚರ್ಚೆ ನಡೆಸಲಾಯಿತು. ಕೆಎಸ್‌ಇಬಿಯಲ್ಲಿ 36 ವರ್ಷ ಓವರ್‌ಸಿಯರ್ ಆಗಿದ್ದು ನಿವೃತ್ತರಾದ ತರವಾಡು ಆಡಳಿತ ಸಮಿತಿ ಉಪಾಧ್ಯಕ್ಷ ಅರವಿಂದಾಕ್ಷನ್ …

ತಲೆ ಹಾಗೂ ಕುತ್ತಿಗೆ ಓಂಕಾಲಜಿ ವಿಭಾಗ ಕಾಸರಗೋಡು ಆಸ್ಟರ್ ಮಿಮ್ಸ್‌ನಲ್ಲಿ ಆರಂಭ

ಕಾಸರಗೋಡು: ತಲೆ ಹಾಗೂ ಕುತ್ತಿಗೆಯ ಕ್ಯಾನ್ಸರ್ ಬಾಧಿತರಿಗೆ ಕಾಸರಗೋಡು ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ತಜ್ಞ ಚಿಕಿತ್ಸೆಗೆ ಅತ್ಯಾಧುನಿಕ ಓಂಕಾಲಜಿ ವಿಭಾಗ ಆರಂಭಗೊಂಡಿದೆ. ಡಿಪಾರ್ಟ್‌ಮೆಂಟ್ ಮುಖ್ಯಸ್ಥ ಡಾ| ಶೋನ್ ಟಿ. ಜೋಸೆಫ್ ಉದ್ಘಾಟಿಸಿದರು. ಚೀಫ್ ಆಪರೇಟಿಂಗ್ ಅಧಿಕಾರಿ ಸುಧೀರ್ ಬಾಸುರಿ, ಕ್ರಿಟಿಕಲ್ ಕೇರ್ ಮೇಧಾವಿ ಡಾ| ಸಾಜಿದ್ ಸಲಾಹುದ್ದೀನ್, ಸರ್ಜಿಕಲ್ ಓಂಕಾಲಜಿ ಆಸೋಸಿಯೇಟ್ ಕನ್ಸಲ್‌ಟೆಂಟ್ ಡಾ| ಅರವಿಂದ್ ಎನ್., ಹೆಡ್ ಆಂಡ್ ನೆಕ್ ಓಂಕಾಲಜಿ ಅಸೋಸಿಯೇಟ್ ಕನ್ಸಲ್‌ಟೆಂಟ್ ಡಾ| ಸೌರಭ್ ಪದ್ಮನಾಭನ್ ಭಾಗವಹಿಸಿದರು. ಅಂತಾರಾಷ್ಟ್ರ ಗುಣಮಟ್ಟವಿರುವ ರೋಗ ನಿರ್ಣಯದಿಂದ …

ಎಡ-ಐಕ್ಯರಂಗ ಯಾರೇ ಆಡಳಿತ ನಡೆಸಿದರೂ ಮೀನು ಕಾರ್ಮಿಕರಿಗೆ ಟ್ರೋಲಿಂಗ್ ಕಾಲದಲ್ಲಿ ಉಪವಾಸ- ಎಂ.ಎಲ್. ಅಶ್ವಿನಿ

ಕಾಸರಗೋಡು: ಎಡರಂಗ ಆಡಳಿತ ನಡೆಸಿದರೂ ಐಕ್ಯರಂಗ ಆಡಳಿತ ನಡೆಸಿದರೂ ಕೇರಳದ ಮೀನುಕಾರ್ಮಿಕರಿಗೆ ಟ್ರೋಲಿಂಗ್ ನಿಷೇಧವಿರುವ ತಿಂಗಳುಗಳು ಉಪವಾಸದ ದಿನಗಳಾಗಿವೆ, ಪೆನ್ಶನ್, ರೇಶನ್ ನೀಡುವುದು ವಿಳಂಬವಾಗುತ್ತಿರುವುದು ಸಾಮಾನ್ಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಆಯೋಜಿಸಿದ ಕಾಸರಗೋಡು ಫಿಶರೀಸ್ ಕಚೇರಿ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆಧುನಿಕ ವಿಜ್ಞಾನ ತಾಂತ್ರಿಕ ವಿದ್ಯೆಯ ಸಹಾಯದೊಂದಿಗೆ ನರೇಂದ್ರ ಮೋದಿ ಸರಕಾರ ಮೀನು ಕಾರ್ಮಿಕರ ಭದ್ರತೆ, ಕ್ಷೇಮವನ್ನು ಜ್ಯಾರಿಗೊಳಿಸುತ್ತಿರುವಾಗ ಅರ್ಹವಾದ ಸೌಲಭ್ಯ ಕೂಡಾ ಖಚಿತಪಡಿಸಲು ರಾಜ್ಯ …