ಆಪರೇಶನ್ ತೂಫಾನ್:  ಜಿಲ್ಲಾ ಮಟ್ಟದ ಕಾರ್ಯಾಚರಣೆಗೆ ಚಾಲನೆ ನೀಡಿದ ಗೃಹ ಸಚಿವ ಚೆನ್ನಿತ್ತಲ

ಕಾಸರಗೋಡು: ಕಾಸರಗೋಡು ಜಿಲ್ಲಾ ಪೊಲೀಸ್ ನೇತೃತ್ವದಲ್ಲಿ ನಡೆದ ಆಪರೇಶನ್ ತೂಫಾನ್ ದಿ ನಾರ್ಕೋ ಹಂಟ್  ಜಾಗರಣ್ ಇದರ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ನಾಯಮ್ಮಾರಮೂಲೆಯ ತನ್‌ಬೀಹುಲ್ ಇಸ್ಲಾಂ ಹೈಯರ್ ಸೆಕಂಡರಿ ಶಾಲೆಯಲ್ಲಿ ಇಂದು ಬೆಳಿಗ್ಗೆ  ರಾಜ್ಯ ಗೃಹ ಮತ್ತು ವಿಜಿಲೆನ್ಸ್ ಖಾತೆ ಸಚಿವ ರಮೇಶ್ ಚೆನ್ನಿತ್ತಲ ನೆರವೇರಿಸಿದರು.  ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದರು.  ಕಾರ್ಯಕ್ರಮದ ಮುಂಚಿತ ವಿದ್ಯಾನಗರದಿಂದ ನಾಯಮ್ಮಾರಮೂಲೆ ಟಿಐಎಚ್‌ಎಸ್‌ಎಸ್‌ಗೆ ಬಹುಜನ ರ‍್ಯಾಲಿ ನಡೆಯಿತು.  ಗೃಹ ಸಚಿವ ರಮೇಶ್ ಚೆನ್ನಿತ್ತಲ,ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್,ಶಾಸಕರಾದ ಕಲ್ಲಟ್ರ ಮಾಹಿನ್, ಎಕೆಎಂ …

ಗೃಹಿಣಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಬಂದಡ್ಕ: ಬೇತೂರುಪಾರದಲ್ಲಿ ಗೃಹಿಣಿ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಿ. ನಾರಾಯಣನ್‌ರ ಪತ್ನಿ ಎನ್. ಶೋಭಾ (50) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ೬ ಗಂಟೆಗೆ ಮನೆ ಸಮೀಪದ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆಗೆ ನಿಧನ ಸಂಭವಿಸಿತ್ತು. ಬೇಡಗಂ ಪೊಲೀಸರು  ಮಹಜರು ನಡೆಸಿದರು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಮನೆಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮೃತರು ಪತಿ, ಮಕ್ಕಳಾದ ಶೋಭಿತ, ನಿಖಿತ, ನಿಶಿತ, …

ಬಾಲಕಿಗೆ ಸಂದೇಶ ಕಳುಹಿಸಿ ಕಿರುಕುಳ : ಯುವಕನ ವಿರುದ್ಧ ಕೇಸು ದಾಖಲು

ಕುಂಬಳೆ: ೧೬ರ ಹರೆಯದ ಬಾಲಕಿಗೆ  ಫೋನ್‌ನಲ್ಲಿ ಸಂದೇಶಗಳನ್ನು ಕಳುಹಿಸಿ, ಅನಂತರ ಆಕೆಯನ್ನು ಹಿಂಬಾಲಿಸಿ  ಕಿರುಕುಳ ನೀಡಲೆತ್ನಿಸಿದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ವಾಸಿಸುವ ಬಾಲಕಿ ನೀಡಿದ ದೂರಿನಂತೆ ಕೊಡ್ಯಮ್ಮೆಯ ಖಲಂದರ್ ಶಾನಿ (26) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ.  ಬಾಲಕಿಯ ಫೋನ್‌ನಂಬ್ರವನ್ನು ಎಲ್ಲಿಂದಲೋ ಸಂಗ್ರಹಿಸಿದ ಆರೋಪಿ ಬಳಿಕ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡತೊಡಗಿದ್ದಾನೆನ್ನ  ಲಾಗಿದೆ. ಆದರೆ ಬಾಲಕಿ ಸಂದೇಶ ಗಳಿಗೆ  ಪ್ರತಿಕ್ರಿಯಿಸಲಿಲ್ಲ. ಇದರಿಂದ  ಆರೋಪಿ ಆಕೆಯನ್ನು ಹಿಂಬಾಲಿಸಿ ಉಪಟಳ ನೀಡಲು …

ಎಂಡಿಎಂಎ ಮಾರಾಟ, ಆರ್ಥಿಕ ವ್ಯವಹಾರ ಪ್ರಕರಣ; ಬಂಧಿತ ಅಧ್ಯಾಪಿಕೆಯರ ವಜಾ

ಕಲ್ಲಿಕೋಟೆ: ಎಂಡಿಎಂಎ ಮಾರಾಟ ಹಾಗೂ ಆರ್ಥಿಕ ವ್ಯವಹಾರದಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಅಧ್ಯಾಪಿಕೆ ಯರನ್ನು ರಾಜ್ಯಶಿಕ್ಷಣ ಇಲಾಖೆ  ಹುದ್ದೆಯಿಂದ ತಕ್ಷಣ ವಜಾಗೈದಿದೆ. ಪೇರಾಂಬ್ರ ಮರುತ್ತೊರಗದ ನಿವಾಸಿ ಕೀರ್ತನ (28) ಮತ್ತು ಕೂರಾಚುಂಡು ಚೆರುಕ್ಕಾಡಿನ  ಕಾವ್ಯ(29) ಎಂಬವರು ವಜಾಗೈಯ್ಯಲ್ಪಟ್ಟ ಅಧ್ಯಾಪಿಕೆಯರು.  ಸಮಗ್ರಶಿಕ್ಷಾ ಕೇರಳ ಯೋಜನೆಯಂತೆ ಈ ಇಬ್ಬರು ಪೇರಾಂಬ್ರ ಬಿಅರ್‌ಸಿ  ಸ್ಪೆಷಲಿಸ್ಟ್ ಎಜ್ಯುಕೇಟರ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಇತ್ತೀಚೆಗೆ ನೇಮಕಗೊಂ ಡಿದ್ದರು.  ಎಂಡಿಎಂಎಯೊಂದಿಗೆ ಪೊಲೀಸರು ದಿನಗಳ ಹಿಂದೆ ವಡಗರ ನಿವಾಸಿಯಾದ ಯುವಕನನ್ನು ಬಂಧಿಸಿದ್ದರು. ಪೊಲೀಸರು ಆತನನ್ನು  ವಿಚಾರಣೆಗೊಳಪಡಿಸಿದಾಗ  …

ಜೋಡುಕಲ್ಲಿನಿಂದ ಎಂಡಿಎಂಎ ವಶ ಪ್ರಕರಣದಲ್ಲಿ ಇನ್ನೋರ್ವ ಬಂಧನ

ಮಂಜೇಶ್ವರ: ಆಪರೇಶನ್ ತೂಫಾನ್‌ನಂಗವಾಗಿ ಮಂಜೇಶ್ವರ ಪೊಲೀಸರು ಜೋಡುಕಲ್ಲಿನಿಂದ೧ 12 ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಇನ್ನೋರ್ವ ಸೆರೆಗೀಡಾಗಿ ದ್ದಾನೆ. ಕಯ್ಯಾರು ನಿವಾಸಿ ಅಬ್ದುಲ್ ಸಮದ್ (31) ಎಂಬಾನನ್ನು ಇನ್ ಸ್ಪೆಕ್ಟರ್ ಪಿ.ಕೆ. ಜಿಜೀಶ್ ಬಂಧಿಸಿದ್ದಾರೆ.  ಈತ ಸೋಂಕಾಲಿನಲ್ಲಿದ್ದಾನೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು  ಅಲ್ಲಿಗೆ ತೆರಳಿ  ಬಂಧಿಸಿದ್ದಾರೆ. ಎಂಡಿಎಂಎ ತರಲು ಹಣ ನೀಡಿರುವುದು ಅಬ್ದುಲ್ ಸಮದ್ ಆಗಿದ್ದಾನೆನ್ನಲಾಗಿದೆ.  ಕಳೆದ ಗುರುವಾರ ಬೆಳಿಗ್ಗೆ ಪೊಲೀಸರು ಮಾದಕವಸ್ತು ವಶಪಡಿಸಿಕೊಂಡಿದ್ದರು. ಜೋಡುಕಲ್ಲು ಆದರ್ಶ್‌ನಗರದ  ಮೈದಾನದಲ್ಲಿ ನಿಲ್ಲಿಸಿದ್ದ ಕಾರನ್ನು ಕೇಂದ್ರೀಕರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ …

ನ್ಯುಮೋನಿಯ ಬಾಧಿಸಿ ಅಧ್ಯಾಪಕ ಮೃತ್ಯು

ಕಾಸರಗೋಡು: ನ್ಯುಮೋ ನಿಯ ಬಾಧಿಸಿ ಅಧ್ಯಾಪಕ ಮೃತಪಟ್ಟ ಘಟನೆ ನಡೆದಿದೆ. ಬಂದಡ್ಕ ಕರಿವೇಡಗಂ  ಸೈಂಟ್ ಮೇರಿಸ್ ಯುಪಿ ಶಾಲೆ ಅಧ್ಯಾಪಕನೂ ಕಣ್ಣೂರು ಆಲಕ್ಕೋಡ್ ಚಾಣೋ ಕುಂಡ್ ವರಿವೇಡನ್‌ಕುಂಡ್ ನಿವಾಸಿಯಾದ ಕಾಂಞಿರತ್ತು ಮುಟ್ಟಿಲ್ ಸಿಜೋ ಕೆ ಡೊಮಿನಿಕ್ (39) ಮೃತಪಟ್ಟ ದುರ್ದೈವಿ. ನ್ಯುಮೋನಿಯ ಬಾಧಿಸಿದ್ದ ಇವರನ್ನು ಕಣ್ಣೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ದಿವಂಗತ ಡೊಮಿನಿಕ್-ಆಲಿಸ್ ದಂಪತಿಯ ಪುತ್ರನಾದ ಮೃತರು ಪತ್ನಿ ಜೋಯ್ಸಿ, ಮಕ್ಕಳಾದ  ಅನ್ಸ, ಅನ್ಶ್, ಸಹೋದರಿ ಜಿಷಾಸಾಶ್ ಹಾಗೂ ಅಪಾರ ಬಂಧು-ಮಿತ್ರರನ್ನು …

ಕಾವುಗೋಳಿಯಲ್ಲಿ ತೀವ್ರಗೊಂಡ ಕಡಲ್ಕೊರೆತ ಅಧಿಕಾರಿಗಳ ಉದಾಸೀನತೆ ವಿರುದ್ಧ ಬಿಜೆಪಿ ಆಕ್ರೋಶ

ಕಾಸರಗೋಡು: ಕಾವುಗೋಳಿ ಯಲ್ಲಿ ಕಡಲ್ಕೊರೆತ ಹಾಗೂ ಸಮುದ್ರದ ಅಬ್ಬರ ತೀವ್ರಗೊಂಡು ರಸ್ತೆಗಳು ಮತ್ತು ಕರಾವಳಿ ಪ್ರದೇ ಶಗಳು ಹಾನಿಗೊಳಗಾಗಿದ್ದರೂ, ಸಾರ್ವಜನಿಕರ ಜೀವ ಮತ್ತು ಸ್ವತ್ತಿನ ರಕ್ಷಣೆಗೆ ರಾಜ್ಯ ಸರಕಾರ ಹಾಗೂ ಸಂಬAಧಪಟ್ಟ ಇಲಾಖೆಗಳು ಉದಾಸೀನತೆ ತೋರಿಸುತ್ತಿದೆ ಎಂದು ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಆರೋಪಿಸಿದ್ದಾರೆ.ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಕಾವುಗೋಳಿ ಕಡಲತೀರದಲ್ಲಿ ವರ್ಷಗಳಿಂದ ಜನರು ಎದುರಿ ಸುತ್ತಿರುವ ಕಡಲ್ಕೊರೆತದ ಭೀತಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಕಡಲಬ್ಬರಕ್ಕೆ ರಸ್ತೆಗಳು ಸಮುದ್ರದ ಪಾಲಾಗಿ …

ಸೈನಿಕರಲ್ಲಷ್ಟೇ ನಿಕ್ಷಿಪ್ತವಾಗದೆ ರಾಷ್ಟ್ರರಕ್ಷಣೆ ಪ್ರತೀ ಪ್ರಜೆಯ ಆದ್ಯ ಕರ್ತವ್ಯವಾಗಬೇಕು- ಕ್ಯಾಪ್ಟನ್ ಯೋಗೇಂದ್ರ ಸಿಂಗ್

ಉಪ್ಪಳ: ರಾಷ್ಟç ಸಂರಕ್ಷಣೆ ಸೈನಿಕರಲ್ಲಷ್ಟೇ ನಿಕ್ಷಿಪ್ತವಾಗದೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾದಾಗ ಸಂತುಷ್ಟ ರಾಷ್ಟç ನಿರ್ಮಾಣವಾಗುತ್ತದೆ. ದೇಶ ವಿಭಜನೆಯ ಬಳಿಕ ಗಡಿಗಳಲ್ಲಿ ಉಂಟಾಗುವ ವಿಧ್ವಂಸಕ ಕೃತ್ಯ, ಭಯೋತ್ಪಾದನೆ ಮತ್ತು ಧಾಳಿಗಳಿಗೆ ಭಾರತದ ಸೇನೆ ಸಮರ್ಥ ಉತ್ತರಗಳನ್ನು ನೀಡಿದೆ. ಕಾರ್ಗಿಲ್ ವಿಜಯ ಭಾರತದ ಸೇನಾ ವಲಯದಲ್ಲಿ ಅತ್ಯುನ್ನತ ವಿಜಯ ಮಾಲೆ ಎಂದು ಪರಮ ವೀರ ಚಕ್ರ ಸುಬೇದಾರ್ ಮೇಜರ್ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ತಿಳಿಸಿದರು. ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಗಾಯತ್ರೀ ಮಂಟಪದಲ್ಲಿ ನಿನ್ನೆ ನಡೆದ ಕಾರ್ಗಿಲ್ ವಿಜಯ …

ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ  ಬಿ. ವಿಕ್ರಮ್ ಪೈಗೆ ಅಭಿನಂದನೆ

ಕುಂಬಳೆ: ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷರಾಗಿ ಆಯ್ಕೆ ಯಾದ ಬಿ. ವಿಕ್ರಮ್ ಪೈಯವರನ್ನು ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಸ್ವಾಗತಿಸಲಾಯಿತು. ಪಂಚಾಯತ್ ಸಮಿತಿ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ವಿಕ್ರಮ್ ಪೈಯವರನ್ನು ಅಭಿನಂದಿಸಲಾ ಯಿತು. ಡಿಜಿಟಲ್ ಪ್ರಾಮುಖ್ಯತೆಯ ಬಗ್ಗೆ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ವಿವರಿಸಿದರು. ಜಿಲ್ಲಾ ಕಾರ್ಯದರ್ಶಿ ಯು. ಲೋಕೇಶ್ ನೋಂಡಾ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಎಸ್., ಬಿಜೆಪಿ ಉತ್ತರ ಸಮಿತಿ ಅಧ್ಯಕ್ಷ ಶಿವದಾಸ …

ಕೆವಿವಿಇಎಸ್  ರಾಜ್ಯಾಧ್ಯಕ್ಷರಾಗಿ ರಾಜು ಅಪ್ಸರ,  ಪ್ರಧಾನ ಕಾರ್ಯದರ್ಶಿಯಾಗಿ ಎಸ್. ದೇವರಾಜನ್ ಆಯ್ಕೆ

ತಿರುವನಂತಪುರ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ರಾಜ್ಯ ಅಧ್ಯಕ್ಷರಾಗಿ ರಾಜು ಅಪ್ಸರ, ಪ್ರಧಾನ ಕಾರ್ಯದರ್ಶಿ ಯಾಗಿ  ಎಸ್. ದೇವರಾಜನ್‌ರನ್ನು ಆಯ್ಕೆ ಮಾಡಲಾಗಿದೆ.  ರಾಜ್ಯ ಕೋಶಾಧಿಕಾರಿಯಾಗಿ ಪಿ.ಸಿ.ಜೇಕಬ್‌ರನ್ನು ಅರಿಸಲಾಗಿದೆ. ತಿರುವನಂತಪುರದಲ್ಲಿ ನಡೆದ ರಾಜ್ಯ ಕೌನ್ಸಿಲ್ ಸಭೆಯಲ್ಲಿ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು. ಇತರ ಪದಾಧಿಕಾರಿಗಳಾಗಿ ಪಿ.ಕೆ. ಬಾಪು ಹಾಜಿ (ಕಾರ್ಯಾಧ್ಯಕ್ಷ), ಎ.ಜೆ.ಶಾಜಹಾನ್, ಸಿ. ಧನೇಶ್‌ಚಂದ್ರನ್, ಜೋಜಿನ್ ಟಿ.ಜೋಯ್, ಸಣ್ಣಿ ಪೈಂಬಿಳ್ಳಿಲ್, ದೇವಸ್ಯ ಮೇಚೇರಿ, ಪಿ. ಕುಂಞಾವು ಹಾಜಿ, ಕೆ.ವಿ. ಅಬ್ದುಲ್ ಹಮೀದ್, ಬಾಬು ಕೋಟಯಿಲ್ (ಉಪಾಧ್ಯ ಕ್ಷರು), …