ಜಿಲ್ಲಾ ಪಂಚಾಯತ್ ಸದಸ್ಯನ ಹೆಸರು ಶಾಲಾ ಶಿಲಾಫಲಕದಿಂದ ಅಳಿಸಿದ ಪ್ರಕರಣ: ಅಂಗಡಿಮೊಗರುನಲ್ಲಿ ವಿಶಿಷ್ಟ ವಿದ್ಯಮಾನ
ಪುತ್ತಿಗೆ: ಜಿಲ್ಲಾ ಪಂಚಾಯತ್ ಸದಸ್ಯನ ಹೆಸರನ್ನು ಸರಕಾರಿ ಕಾರ್ಯಕ್ರಮದ ಶಿಲಾಫಲಕದಿಂದ ಅಳಿಸಲಾಗಿದೆ ಎಂದು ದೂರಲಾಗಿದೆ. ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಕಟ್ಟಡ ಉದ್ಘಾಟನೆ ಶಿಲಾಫಲಕದಿಂದ ಜಿಲ್ಲಾ ಪಂಚಾ ಯತ್ ಸದಸ್ಯ ಹಾಗೂ ಡಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಸೋಮಶೇಖರ ಜೆ.ಎಸ್.ರ ಹೆಸರನ್ನು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಅಳಿಸಿ ಹಾಕಲಾಗಿದೆ. ಫಲಕದಲ್ಲಿನ ಇನ್ಯಾ ರದೇ ಹೆಸರಿಗೆ ಯಾವುದೇ ಹಾನಿ ಉಂಟಾಗದಂತೆ ಸೋಮಶೇಖರರ ಹೆಸರನ್ನು ಉಜ್ಜಲಾಗಿದೆ. ಕಾಸರ ಗೋಡು ಪ್ಯಾಕೇಜ್‌ನಲ್ಲಿ ಒಳಪಡಿಸಿ ಸರಕಾರದ ನಿಧಿ ಉಪಯೋಗಿಸಿ ನಿರ್ಮಿ ಸಿದ ಕಟ್ಟಡದ …