ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವ ಸಾಂಕ್ರಾಮಿಕ ರೋಗ : ಎಚ್1ಎನ್1 ಬಾಧಿಸಿ ಮಹಿಳೆ, ಹಳದಿಕಾಮಾಲೆ ಬಾಧಿಸಿ ಯುವಕ ಮೃತ್ಯು; ಅಮೀಬಿಕ್ ಮೆದುಳುಜ್ವರ ಬಾಧಿಸಿದ ಯುವಕನ ಸ್ಥಿತಿ ಗಂಭೀರ

ಕಾಸರಗೋಡು: ಜಿಲ್ಲೆಯಲ್ಲಿ ವಿವಿಧ ಜ್ವರಗಳು ವ್ಯಾಪಕಗೊಂಡಿದೆ.  ಎಚ್೧ಎನ್೧ ಬಾಧಿಸಿ ಮಹಿಳೆ, ಹಳದಿಕಾಮಾಲೆ ಬಾಧಿಸಿ ಯುವಕ ಮೃತಪಟ್ಟಿದ್ದಾರೆ. ಇದೇ ವೇಳೆ ಅಮೀಬಿಕ್ ಮೆದುಳುಜ್ವರ ಬಾಧಿಸಿದ ಯುವಕನ ಸ್ಥಿತಿ ಅತೀ ಗಂಭೀರವಾ ಗಿದೆಯೆಂದು ತಿಳಿದುಬಂದಿದೆ. ಅಜಾನೂರು ಮಾಣಿಕೋತ್ತ್‌ನ ಕರುಣಾಕರನ್ ಎಂಬವರ ಪತ್ನಿ ಯಶೋಧ ಎಚ್1ಎನ್1 ಬಾಧಿಸಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.  ತೀವ್ರ ಜ್ವರ ಹಾಗೂ ಕೆಮ್ಮ ಕಾಣಿಸಿಕೊಂಡ ಯಶೋಧರನ್ನು ಮೊದಲು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಎಚ್೧ಎನ್೧ನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ತಜ್ಞ ಚಿಕಿತ್ಸೆಗಾಗಿ  ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. …

ಅಯೋಧ್ಯೆ ಕ್ಷೇತ್ರ ದರ್ಶನಕ್ಕೆ ಹೋಗಿ ಹಿಂತಿರುಗುತ್ತಿದ್ದ ಮಧ್ಯೆ ಬದಿಯಡ್ಕದ ಯುವಕ ನಾಪತ್ತೆ

ಬದಿಯಡ್ಕ: ಅಯೋಧ್ಯೆ ಕ್ಷೇತ್ರ ದರ್ಶನಕ್ಕೆ ತೆರಳಿದ ಯುವಕ  ಮನೆಗೆ ತಲುಪದೆ ನಾಪತ್ತೆಯಾದ ಬಗ್ಗೆ ದೂರಲಾಗಿದೆ.  ಪೆರಡಾಲ ಪಂಜಿನಡ್ಕ ನಿವಾಸಿ ಕುಂಞಿರಾಮನ್ ಎಂಬವರ ಪುತ್ರ ರಾಜೇಶ್ (42) ನಾಪತ್ತೆಯಾದ ವ್ಯಕ್ತಿ. ಈ ಬಗ್ಗೆ  ಅವರ ಸಹೋದರ ಅನಿಲ್ ಕುಮಾರ್  ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರಾಜೇಶ್ ಅಯೋಧ್ಯೆಗೆ ಹೋಗಿದ್ದು ಅಲ್ಲಿಂದ ಅವರು ಊರಿಗೆ ಮರಳಿದ್ದರು. ಈ ಮಧ್ಯೆ ಜುಲೈ ೨೨ರಂದು ಸಂಜೆ ಮಧ್ಯಪ್ರದೇಶದ ಇಚ್ಚಾರ್ಸಿ ಎಂಬಲ್ಲಿ ಇಳಿದು ಅಲ್ಲಿಂದ ಬೇರೆ ಯಾವುದೋ ರೈಲಿಗೆ …

25 ವರ್ಷದಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಸೆರೆ

ಹೊಸದುರ್ಗ: 2001ರಲ್ಲಿ ನಡೆದ ವೇಟ್ಟುಮ್ಮಲ್ ರತೀಶ್ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿಯಾಗಿ ಘೋಷಿಸಿದ ಆರೋಪಿಯನ್ನು 25 ವರ್ಷದ ಬಳಿಕ ಪ್ರತ್ಯೇಕ ತನಿಖಾ ತಂಡ ಬಂಧಿಸಿದೆ. ಕದಿರೂರು ನಿವಾಸಿ ಸಿ.ಎಚ್. ಅಶ್ರಫ್ (58) ಸೆರೆಯಾದ ವ್ಯಕ್ತಿ. ಕೊಲೆ ಕೃತ್ಯದ ಬಳಿಕ ಈತ 10 ವರ್ಷ ಕಾಲ ಮೈಸೂರು, ಬೆಂಗಳೂರು, ಮುಂಬೈ ಎಂಬೆಡೆಗಳಲ್ಲಿ ಹೋಟೆಲ್ ಕಾರ್ಮಿಕನಾಗಿ ತಲೆಮರೆಸಿಕೊಂ ಡಿದ್ದನು. ಬಳಿಕ 15 ವರ್ಷದಿಂದ ಪಯ್ಯನ್ನೂರಿನ ಸಮೀಪ ವಾಸಮಾಡಿ ಇಲ್ಲಿ ಗೂಡಂಗಡಿ ನಡೆಸುತ್ತಿದ್ದನು. ಇಲ್ಲಿಗೆ ಪೊಲೀಸರ ಸಹಿತ ಹಲವಾರು ಮಂದಿ …

ಮಧ್ಯರಾತ್ರಿ ಅಪ್ರಾಪ್ತೆಯ ಕೊಠಡಿಗೆ ನುಗ್ಗಿದ ಯುವಕ: ಕೂಡಿಹಾಕಿದ ಮನೆಮಂದಿ; ಬಲವಂತದಿಂದ ಕೊಂಡೊಯ್ದ ಗೆಳೆಯರು

ಕಲ್ಲಿಕೋಟೆ: ಅಪ್ರಾಪ್ತೆಯ ಕೊಠಡಿಗೆ ಅತಿಕ್ರಮಿಸಿ ನುಗ್ಗಿದ ಯುವಕನನ್ನು ಮನೆ ಮಂದಿ ಕೋಣೆಯೊಳಗೆ ಕೂಡಿ ಹಾಕಿದರು. ಗೆಳೆಯರು ತಲುಪಿ ಮನೆಯವರನ್ನು ಆಕ್ರಮಿಸಿ ಯುವಕನನ್ನು ಕೊಂಡೊಯ್ದರು. ತಾಮರಶ್ಶೇರಿ ಈಂಙಾಪುಳದಲ್ಲಿ ಇಂದು ಮುಂಜಾನೆ ೨ ಗಂಟೆ ವೇಳೆ ಘಟನೆ ನಡೆದಿದೆ. ಅಡಿವಾರಂ ಪಳ್ಳಿಯಾಲ ನಿವಾಸಿ 19ರ ಹರೆಯದ ಮಿಸ್ಬಾಹುಲ್ ವಿರುದ್ಧ ಪೋಕ್ಸೋ ಪ್ರಕರಣವನ್ನು ತಾಮರಶ್ಶೇರಿ ಪೊಲೀಸರು ದಾಖಲಿಸಿದ್ದಾರೆ. ಬಾಲಕಿಯ ಕೊಠಡಿಯಲ್ಲಿ ಅಪರಿಚಿತನ ಶಬ್ದ ಕೇಳಿ ಮನೆಮಂದಿ ಎಚ್ಚರಗೊಂಡಿದ್ದಾರೆ. ಬಳಿಕ ಯುವಕನನ್ನು ಆ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಯುವಕ ಫೋನ್ …

ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ: ಯುವಕನ ವಿರುದ್ಧ ಇನ್ನೊಂದು ಕೇಸು

ಕುಂಬಳೆ: ಪ್ರಾಯಪೂರ್ತಿ ಯಾಗದ ಬಾಲಕಿಯನ್ನು ಹಿಂಬಾಲಿಸಿದ ಆರೋಪದಂತೆ  ಕೊಡ್ಯಮ್ಮೆಯ ಖಲಂದರ್ ಶಾನಿ (26) ಎಂಬಾತನ  ವಿರುದ್ಧ ಕುಂಬಳೆ ಪೊಲೀಸರು ಇನ್ನೊಂದು ಕೇಸು ದಾಖಲಿಸಿಕೊಂಡಿದ್ದಾರೆ. 16ರ ಹರೆಯದ ಬಾಲಕಿಯನ್ನು ಈತ ನಿರಂತರ ಹಿಂಬಾಲಿಸಿ ಕಿರುಕುಳ ನೀ ಡುತ್ತಿದ್ದನೆಂದು  ದೂರು ನೀಡಲಾಗಿತ್ತು 16ರ ಹರೆಯದ ಇನ್ನೋರ್ವೆ ಬಾಲಕಿಗೆ ಫೋನ್‌ನಲ್ಲಿ ಸಂದೇಶ ಗಳನ್ನು ಕಳುಹಿಸಿ ಅಲ್ಲದೆ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಲೆತ್ನಿಸಿದ ಆರೋಪದಂತೆ ಖಲಂದರ್‌ಶಾನಿ ವಿರುದ್ಧ  ಈ ಮೊದಲು ಕೇಸು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಆತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿರುವಾಗಲೇ …

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗೆ 40 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದ ಆರೋಪಿಗೆ ನ್ಯಾಯಾಲಯ ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು ೪೦ ವರ್ಷ ಕಠಿಣ ಸಜೆ ಹಾಗೂ 6೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಹೊಸದುರ್ಗ ಮಾಲೋಂ ಅದಿರುಮಾವು ಪಾಪ್ಪಿನಿ ವೀಟಿಲ್‌ನ ಪಿ.ಡಿ.ಸನೀಶ್ (33) ಎಂಬಾತನಿಗೆ ಹೊಸದುರ್ಗ ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ. ಸುರೇಶ್ ಈ ಶಿಕ್ಷೆ ವಿಧಿಸಿದ್ದಾರೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಹೆಚ್ಚುವರಿ ಸಜೆ ಅನಭವಿಸಬೇಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಚಿತ್ತಾರಿಕ್ಕಲ್ ಪೊಲೀಸ್ …

ಬದಿಯಡ್ಕ ಪಂ.ನಲ್ಲಿ ಹುದ್ದೆ ಖಾಲಿ: ಭರ್ತಿಗೆ ಸ್ಥಳೀಯಾಡಳಿತ ಸಚಿವರಿಗೆ ಅಧ್ಯಕ್ಷರಿಂದ ಮನವಿ

ತಿರುವನಂತಪುರ: ಬದಿಯಡ್ಕ ಪಂಚಾಯತ್ ಕಚೇರಿಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಇಂಜಿನಿಯರ್, ಓವರ್ಸಿಯರ್ ಹುದ್ದೆಗಳಿಗೆ ಕೂಡಲೇ ನೇಮಕಾತಿ ನಡೆಸಬೇ ಕೆಂದು ಪಂ. ಅಧ್ಯಕ್ಷ ಶಂಕರ.ಡಿ ಸ್ಥಳೀಯಾಡಳಿತ ಸಚಿವ ಕೆ.ಎಂ.ಶಾಜಿ ಅವರಲ್ಲಿ ವಿನಂತಿಸಿದರು. ತಿರುವನಂತಪುರ ಸೆಕ್ರೆಟರಿಯೇಟ್‌ನ ಕಚೇರಿಯಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಇಂಜಿನಿಯರ್, ಓವರ್ಸಿಯರ್ ಮೊದಲಾದ ಹುದ್ದೆಗಳು ಖಾಲಿಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಕಟ್ಟಡದ ನಂಬ್ರ, ಪರ್ಮಿಟ್, ವಾರ್ಷಿಕ ಯೋಜನೆಯ ಕೆಲಸಗಳು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ನಡೆಸಬೇಕು ಎಂದವರು ಒತ್ತಾಯಿಸಿದರು. ಈ ಬಗ್ಗೆ ಅಗತ್ಯದ ಕ್ರಮ ಕೈಗೊಳ್ಳಲಾಗುವುದು …

ಹೆತ್ತವರ ಜಗಳ ಮಕ್ಕಳಿಗೆ ತೊಂದರೆಯಾಗಿ ಪರಿಣಮಿಸುತ್ತಿದೆ- ಮಹಿಳಾ ಆಯೋಗ ಸದಸ್ಯೆ ಪಿ. ಕುಂಞಾಯಿಷ

ಕಾಸರಗೋಡು: ವಿವಾಹ ಸಂಬಂಧದಲ್ಲಿ ಕಂಡುಬರುವ ಸಮಸ್ಯೆಗಳು ವ್ಯಕ್ತಿಯ ಸಮಸ್ಯೆ ಮಾತ್ರವಲ್ಲದೆ ಸಾಮಾಜಿಕ ವಿಪತ್ತಾಗಿ ಬದಲಾಗುತ್ತಿದೆ ಎಂದು ಮಹಿಳಾ ಆಯೋಗದ ಸದಸ್ಯೆ ನ್ಯಾಯವಾದಿ ಪಿ. ಕುಂಞಾಯಿಷ ನುಡಿದರು. ಕಾಸರಗೋಡು ಕಲೆಕ್ಟ್ರೇಟ್ ನಲ್ಲಿ ಜರಗಿದ ಜಿಲ್ಲಾ ಮಟ್ಟದ ಸಿಟ್ಟಿಂಗ್‌ನಲ್ಲಿ ಅವರು ಮಾತನಾಡುತ್ತಿ ದ್ದರು. ಸಿಟ್ಟಿಂಗ್‌ನಲ್ಲಿ 36 ದೂರುಗಳನ್ನು ಪರಿಗಣಿಸಲಾಗಿದ್ದು, 8ಕ್ಕೆ ತೀರ್ಪು ಕಲ್ಪಿಸಲಾಗಿದೆ. 4 ದೂರುಗಳನ್ನು ಪೊಲೀಸ್ ವರದಿಗಾಗಿ ಕಳುಹಿಸಿಕೊಡ ಲಾಗಿದೆ. 24 ದೂರುಗಳನ್ನು ಮುಂದಿನ ಸಿಟ್ಟಿಂಗ್‌ನಲ್ಲಿ ಪರಿಗಣಿಸಲಾಗುವುದು. ತಂದೆ ಹಾಗೂ ತಾಯಿ ಮಧ್ಯೆಗಿನ ಜಗಳಗಳು ಮಕ್ಕಳ ಮಾನಸಿಕ ಆರೋಗ್ಯ …

ಚೆಂಗಳ ಬಂಟರ ಸಂಘದಿಂದ ಆಟಿಡೊಂಜಿ ದಿನ ಆಚರಣೆ

ಮುಳ್ಳೇರಿಯಾ : ಬಂಟರ ಸಂಘ ಚೆಂಗಳ ಪಂಚಾಯತ್ ಘಟಕದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ವೈವಿದ್ಯ ಮಯ ರೀತಿಯಲ್ಲಿ ಆಚರಿಸಲಾಯಿತು. ಮಳೆಗಾಲದ ಆಷಾಢ ಮಾಸದಲ್ಲಿ ತುಳುನಾಡಿನಲ್ಲಿ ಆಚರಿಸಲಾಗುವ ಆಟಿ ತಿಂಗಳು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಕೃಷಿಯನ್ನೇ ಮೂಲ ಕಸುಬನ್ನಾಗಿಸಿ ಕೊಂಡಿರುವ ಬಂಟ ಸಮುದಾಯದವರು ಮಳೆ ತೀವ್ರಗೊಳ್ಳುತ್ತಿರುವ ಈ ತಿಂಗಳು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಚೆಂಗಳ ಪಂಚಾಯತ್ ಬಂಟರ ಸಂಘದ ಅಧ್ಯಕ್ಷ ಸಂಜೀವ ರೈ ಬೀಜಂತಡ್ಕ, ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮಕ್ಕೆ ಗೌರವಾಧ್ಯಕ್ಷ ನಾರಂಪಾಡಿ ಗುತ್ತು ಬಾಲಕೃಷ್ಣ …

ಆವರಣಗೋಡೆ ಕುಸಿತ: ಮನೆ ಅಪಾಯಭೀತಿಯಲ್ಲಿ

ಬೆಳ್ಳೂರು: ಧಾರಾಕಾರ ಮಳೆಯಿಂದ ಮನೆಯೊಂದರ ಸಮೀಪದ   ಗೋಡೆ ಕುಸಿದುಬಿದ್ದು ಮನೆ ಅಪಾಯ ಭೀತಿಯನ್ನು ಎದುರಿಸುತ್ತಿದೆ. ಗೋಳಿಕಟ್ಟೆ ಬಳಿಯ ಕಜಮುಂಡ ಎಂಬಲ್ಲಿನ ಮೀನಾಕ್ಷಿ  ಎಂಬವರ ಕಾಂಕ್ರೀಟ್ ಮನೆ ಅಪಾಯಭೀತಿಯಲ್ಲಿದೆ. ನಿನ್ನೆ ಬೆಳಿಗ್ಗೆ ಸುರಿದ ಮಳೆ ವೇಳೆ ಮನೆಯ ಅಂಗಳದ ಕೆಳಭಾಗಕ್ಕೆ ಕಟ್ಟಿದ ಕೆಂಪುಕಲ್ಲಿನ ಗೋಡೆ ಸಂಪೂರ್ಣ ಕುಸಿದುಬಿದ್ದಿದೆ. ಇದರಿಂದ  ಮನೆಯ ಒಂದು ಭಾಗ ವಾಲಿ ನಿಂತಿದೆ.  ಇದ ರಿಂದ ಕುಟುಂಬ ಆತಂಕಕ್ಕೀಡಾಗಿದೆ.