ಮೀನುಗಾರರ ಕಾಯುವಿಕೆಗೆ ವಿರಾಮ: ಮಂಜೇಶ್ವರ ಮೀನುಗಾರಿಕಾ ಬಂದರು ನವೀಕರಣೆಗೆ 57.84 ಕೋಟಿ ರೂ.ಮಂಜೂರು

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಮಂಡಲದ ಮೀನುಗಾರಿಕಾ ವಲಯದ ಪ್ರಧಾನ ಆಶಯವಾದ ಮಂಜೇಶ್ವರ ಫಿಶ್ಶಿಂಗ್ ಹಾರ್ಬರ್‌ಗೆ 1೦ ವರ್ಷದ ಬಳಿಕ ಮತ್ತೆ ಸರಕಾರದ ಪರಿಗಣನೆ ಉಂಟಾಗಿದೆ. ಹಾರ್ಬರ್‌ನ ಸಮಗ್ರ ನವೀಕರಣೆಗಾಗಿ ನಬಾರ್ಡ್ ಯೋಜನೆಯಲ್ಲಿ ಒಳಪಡಿಸಿ 57.84 ಕೋಟಿ ರೂ.ವನ್ನು ಸರಕಾರ ಮಂಜೂರು ಮಾಡಿದೆ. ಕಳೆದ ಉಮ್ಮನ್‌ಚಾಂಡಿ ಸರಕಾರದ ಕಾಲದಲ್ಲಿ ಮಂಜೇಶ್ವರ ಮೀನುಗಾರಿಕಾ ಬಂದರನ್ನು ಮಂಜೂರು ಮಾಡಲಾಗಿತ್ತು. ಆ ಬಳಿಕ ಅಗತ್ಯದ ಮೊತ್ತ ಮೀಸಲಿರಿಸಿ ನಿರ್ಮಾಣ ಆರಂಭಿಸಲಾಗಿದ್ದು, ಆದರೆ ಆ ಬಳಿಕದ ಹತ್ತು ವರ್ಷದಲ್ಲಿ ಬಂದರಿಗೆ ಅಗತ್ಯದ ಮೊತ್ತ ಲಭ್ಯವಾಗದಿರುವುದು …

ಆರ್. ಜಯಚಂದ್ರನ್ ನಿಧನ

ಕಾಸರಗೋಡು: ಮತ್ಸ್ಯ ತೊಯಿಲಾಳಿ ಕಾಂಗ್ರೆಸ್ ಅಖಿಲ ಭಾರತ ಕಾರ್ಯದರ್ಶಿ ಆರ್. ಗಂಗಾಧ ರನ್‌ರ ಸಹೋದರ ಕಾಸರಗೋಡು ಕಸಬಾ ಕಡಪ್ಪುರ ನಿವಾಸಿ ಆರ್. ಜಯಚಂದ್ರನ್ (58) ನಿಧನ ಹೊಂದಿದರು. ಮೃತರು ಪತ್ನಿ ಪ್ರಮೀಳ, ಮಕ್ಕಳಾದ ಸುದರ್ಶನ್, ಅಶ್ವಿನಿ, ಅಳಿಯ ದೀಪು, ಇತರ ಸಹೋದರರಾದ ಯತೀಂತ್ರನ್, ಪ್ರದೀಪನ್, ಭೌಮಿಕ್‌ಚಂದ್ರನ್, ಉಮೇಶನ್, ಸಹೋದರಿ ಜಯಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹೃದಯಾಘಾತ: ನಿರ್ಮಾಣ ಕಾರ್ಮಿಕ ನಿಧನ

 ಹೊಸದುರ್ಗ: ಚಾಲಿಂಗಾಲ್ ನಿವಾಸಿ ನಿರ್ಮಾಣ ಕಾರ್ಮಿಕ ಹೃದಯಾಘಾತದಿಂದ ಮೃತಪಟ್ಟರು. ಪಿ.ಕೆ. ಜಯಕುಮಾರ್ (55) ಮೃತಪಟ್ಟವರು. ಮಂಗಳವಾರ ರಾತ್ರಿ ಅಸ್ವಸ್ಥಗೊಂಡ ಇವರನ್ನು ಮಾವುಂಗಾಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ತಂದೆ ಪಿ.ಕೆ. ರಾಘವನ್, ಪತ್ನಿ ಬಿಂದು, ಮಕ್ಕಳಾದ ರಾಹುಲ್, ಅಮೃತ, ಸಹೋದರರಾದ ರಾಜನ್, ರಾಜೀವನ್, ಸಹೋದರಿಯ ರಾದ ಲೀಲ, ನಿರ್ಮಲ, ಮಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಧುರವರಿಗೆ ಮಾತೃ ವಿಯೋಗ

ಹೊಸದುರ್ಗ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಮಧುರವರ ತಾಯಿ ರಾಜಪುರಂ ಪೂಡಂಗಲ್ಲು ಅಯ್ಯಂಗಾವ್ ಪುಲಿಕೋಡನ್ ನಿವಾಸಿ ಎನ್. ಯಶೋಧ (80) ನಿಧನ ಹೊಂದಿದರು. ಇವರ ಪತಿ ವಳಪ್ಪಿಲ್ ನಾರಾಯಣ ಗುರುಸ್ವಾಮಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಇತರ ಮಕ್ಕಳಾದ ತಂಬಾಯಿ, ರಾಜನ್, ಇಂದಿರಾ, ಸೊಸೆಯಂದಿರಾದ ಸುಜ, ನಿತ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಳಿಯ ಗೋವಿಂದನ್ ಈ ಹಿಂದೆ ನಿಧನರಾಗಿದ್ದಾರೆ.

ನಗರದ ಸಿಟಿಎಂ ಪೆಟ್ರೋಲ್ ಬಂಕ್ ಮಾಲಕ ನಿಧನ

ಕಾಸರಗೋಡು: ನಗರದ ಮೊದಲ ಪೆಟ್ರೋಲ್ ಬಂಕ್‌ಗಳಲ್ಲಿ ಒಂದಾದ ಸಿಟಿಎಂ ಪೆಟ್ರೋಲ್ ಬಂಕ್‌ನ ಮಾಲಕ ಪಿಲಿಕುಂಜೆ ಮಸೀದಿ ಸಮೀಪದ ನಿವಾಸಿ ಸಿ.ಟಿ. ಅಮೀರ್ ಅಲಿ (73) ನಿಧನ ಹೊಂದಿದರು. ಇವರ ಪತ್ನಿ ಬೀವಿ ಏರ್‌ಲೈನ್ಸ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಸಿ.ಟಿ ಮೆಹನಾಸ್, ಸಿ.ಟಿ. ರಿಟ್ಟಾರ್, ಸಪ್ನಾಸ್, ಯೂನಸ್, ಅಳಿಯಂದಿರಾದ ಯೂನುಸ್, ಮೆಹ್ ಜಬೀನ್, ಹಾಮದ್, ಸಹೋದರರಾದ ಮುಸ್ತಫ, ಮುನೀರ್, ಮನ್ಸೂರ್, ಸಹೋದರಿ ಯರಾದ ಜಮೀಲ, ಮರಿಯಾಂಬಿ, ತಾಹಿರ, ಅಫೀದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.