ಕಾಸರಗೋಡು: ನಗರದ ಮೊದಲ ಪೆಟ್ರೋಲ್ ಬಂಕ್ಗಳಲ್ಲಿ ಒಂದಾದ ಸಿಟಿಎಂ ಪೆಟ್ರೋಲ್ ಬಂಕ್ನ ಮಾಲಕ ಪಿಲಿಕುಂಜೆ ಮಸೀದಿ ಸಮೀಪದ ನಿವಾಸಿ ಸಿ.ಟಿ. ಅಮೀರ್ ಅಲಿ (73) ನಿಧನ ಹೊಂದಿದರು. ಇವರ ಪತ್ನಿ ಬೀವಿ ಏರ್ಲೈನ್ಸ್ ಈ ಹಿಂದೆ ನಿಧನ ಹೊಂದಿದ್ದಾರೆ.
ಮೃತರು ಮಕ್ಕಳಾದ ಸಿ.ಟಿ ಮೆಹನಾಸ್, ಸಿ.ಟಿ. ರಿಟ್ಟಾರ್, ಸಪ್ನಾಸ್, ಯೂನಸ್, ಅಳಿಯಂದಿರಾದ ಯೂನುಸ್, ಮೆಹ್ ಜಬೀನ್, ಹಾಮದ್, ಸಹೋದರರಾದ ಮುಸ್ತಫ, ಮುನೀರ್, ಮನ್ಸೂರ್, ಸಹೋದರಿ ಯರಾದ ಜಮೀಲ, ಮರಿಯಾಂಬಿ, ತಾಹಿರ, ಅಫೀದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







