ರೈಲ್ವೇ ನಿಲ್ದಾಣದಲ್ಲಿ ಮರೆತುಹೋದ ಹಣ ಒಳಗೊಂಡ ಬ್ಯಾಗ್ ಪ್ರಯಾಣಿಕೆಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಶುಚೀಕರಣ ಸಿಬ್ಬಂದಿ

ಕಾಸರಗೋಡು: ರೈಲ್ವೇ ನಿಲ್ದಾಣದಲ್ಲಿ ಮರೆತುಹೋದ  ೬೩ ಸಾವಿರ ರೂಪಾಯಿಗಳಿದ್ದ ಬ್ಯಾಗನ್ನು ಮುಖ್ಯೋಪಾಧ್ಯಾಯಿನಿಗೆ ಮರಳಿ ತಲುಪಿಸಿ ರೈಲ್ವೇ ಶುಚೀಕರಣ ಸಿಬ್ಬಂದಿ ಸಜಿನಿ ಎಂಬವರು ಪ್ರಾಮಾಣಿಕತೆ ಮೆರೆದಿದ್ದಾರೆ. ತಳಂಗರೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋ ಪಾಧ್ಯಾಯಿನಿ ಬಿಂದು ಈ ತಿಂಗಳ ೧೫ರಂದು ಬೆಳಿಗ್ಗೆ 11 ಗಂಟೆಗೆ ಕಾಸರಗೋಡು ರೈಲು ನಿಲ್ದಾಣದಿಂದ ರೈಲಿನಲ್ಲಿ ಪ್ರಯಾಣಿಸಿದ್ದರು.  ಅನಂತರವೇ ಅವರಿಗೆ ಹಣವಿದ್ದ ಬ್ಯಾಗ್ ರೈಲ್ವೇ ನಿಲ್ದಾಣದಲ್ಲಿ ಮರೆತು ಹೋಗಿರುವುದು ನೆನಪಾಗಿದೆ. ಇನ್ನು ಆ ಬ್ಯಾಗ್ ಮರಳಿ ಲಭಿಸಲಾರದೇ  ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. …

ಪ್ರೇಮ ಭಂಡಾರಿ ನಿಧನ

ಮಂಜೇಶ್ವರ: ಪಾವೂರು ಕೋಡಿ ದಿ| ಬಿರ್ಮಣ ಭಂಡಾರಿ ಅವರ ಪತ್ನಿ, ಕಾಸರಗೋಡು ಅಂಚೆ ಕಚೇರಿಯ ನಿವೃತ್ತ ಉದ್ಯೋಗಿ ಪ್ರೇª೧ÀÄ ಭಂಡಾರಿ (70) ನಿಧನ ಹೊಂದಿದರು. ಮೃತರು ಮಕ್ಕಳಾದ ಹರಿಕಿರಣ್, ಶಿವಪ್ರಸಾದ್, ಪ್ರಕಾಶ್ ಅಲ್ಲದೆ ಸೊಸೆಯಂದಿರು, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮುಹಮ್ಮದ್ ಎಂ.ಎಸ್ ನಿಧನ

ಮಂಜೇಶ್ವರ: ವರ್ಕಾಡಿ ಸುಂಕದ ಕಟ್ಟೆ ನಿವಾಸಿ ಮುಹಮ್ಮದ್ ಎಂ.ಎಸ್ (85) ನಿಧನ ಹೊಂದಿದರು. ಮೃತರು ಪತ್ನಿ, ಐಸಮ್ಮ, ಮಕ್ಕಳಾದ ಸಿದ್ದಿಕ್ (ಮಂಜೇಶ್ವರ ತಾಲೂಕು ಕಚೇರಿ ಉದ್ಯೋಗಿ), ಇಬ್ರಾಹಿಂ, ಅಬ್ದುಲ್ ಖಾದರ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಹೃದಯಾಘಾತ: ನಿಧನ

ಬದಿಯಡ್ಕ: ಉಂಡೆಮನೆ ದಿ| ಸತ್ಯಶಂಕರ ಭಟ್‌ರ ಪತ್ನಿ ಯು. ರತ್ನಾವತಿ (59) ನಿಧನ ಹೊಂದಿದರು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು ಬಿಜೆಪಿ ಅಭ್ಯರ್ಥಿಯಾಗಿ ಪಂಚಾಯತ್‌ಗೆ ಸ್ಪರ್ಧಿಸಿದ್ದರು. ಮೃತರು ಮಕ್ಕಳಾದ ಲಕ್ಷ್ಮೀ, ಶಂಕರ ತೇಜಸ್ವಿ, ನವನೀತಕೃಷ್ಣ, ಅಳಿಯ ಶ್ರೀನಿಧಿ ರಾವ್, ಸೊಸೆಯಂದಿರಾದ ರಕ್ಷಿತ, ಸೀಮಾ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

ನೆಲ್ಕಳದ ಲಲಿತ ನಿಧನ

ಕಾಸರಗೋಡು: ವಿದ್ಯಾನಗರ ಬಳಿಯ ಉದಯಗಿರಿ ನೆಲ್ಕಳ ನಿವಾಸಿ ದಿ| ರಾಮನ್ ಕೆ.ಎನ್. ಎಂಬವರ ಪತ್ನಿ ಲಲಿತ (9೦) ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ವಿಜಯನ್ ಕೆ.ಎನ್, ಬೇಬಿ ಕೆ.ಎನ್, ವೇಣು ಕೆ.ಎನ್, ರಾಜೇಂ ದ್ರನ್ ಕೆ.ಎನ್, ಅಳಿಯ ಸೊಸೆಯಂದಿ ರಾದ ಕುಂಞಿಕಣ್ಣನ್, ಪ್ರಮೀಳ, ಬೇಬಿ, ರೇವತಿ, ರೇಶ್ಮಾ, ಶ್ರೀವಿದ್ಯಾ, ಸಹೋದ ರರಾದ ಜಯಕರನ್, ರವಿ, ಸಹೋದರಿ ಪ್ರೇಮ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.  ಇನ್ನಿಬ್ಬರು ಮಕ್ಕಳಾದ ಮಹೇಶ್, ಜಯಪ್ರಕಾಶ್, ಅಳಿಯ ಬಾಬು, ಸಹೋದರರಾದ …