ಬದಿಯಡ್ಕ ಶ್ರೀ ಗಣೇಶೋತ್ಸವ ವಿಗ್ರಹ ಶೋಭಾಯಾತ್ರೆಯೊಂದಿಗೆ ಸಮಾಪ್ತಿ

ಬದಿಯಡ್ಕ: 55ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ 7ನೇ ವರ್ಷದ ಪ್ರತಿಷ್ಠಾದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಜರಗಿದ್ದು, ನಿನ್ನೆ ಶ್ರೀಗಣೇಶ ವಿಗ್ರಹ ಜಲಸ್ತಂಭನ ದೊಂದಿಗೆ ಸಮಾಪ್ತಿಗೊಂಡಿತು. ಸಹಸ್ರಾರು ಮಂದಿ ಪಾಲ್ಗೊಂಡರು. ವೇದಮೂರ್ತಿ ಶಿವಶಂಕರ ಭಟ್ ಪಳ್ಳತ್ತಡ್ಕ ಇವರ ಪೌರೋಹಿತ್ಯದಲ್ಲಿ ಶ್ರೀಗಣೇಶ ವಿಗ್ರಹ ಪ್ರತಿಷ್ಠೆ, ಪೂಜಾದಿ ಕಾರ್ಯಗಳು ಜರಗಿತು. ಶಿವಾಜಿ ಗಲ್ಲಿ, ಯುವಶಕ್ತಿ, ಛತ್ರಪತಿ, ಓಂಕಾರ್, ಆರ್‌ಸಿಬಿ, ದಿsÃರಾಸ್, ಅಗ್ನಿ, ಶಕ್ತಿ ಕುಣಿತ ಭಜನೆಯ ತಂಡಗಳಿAದ ವಿವಿಧ ಸಾಂಸ್ಕೃತಿಕ ಕಲಾಕೃತಿಗಳು ಜರಗಿತು. ಮುತ್ತುಕೊಡೆ, ಸಿಂಗಾರಿಮೇಳ, ಚೆಂಡೆ …

ಕ.ಸಾ.ಪದಿಂದ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ: ಕನ್ನಡ ಪತ್ರಕರ್ತರೊಂದಿಗೆ ಸೌಹಾರ್ದ ಸಂವಾದ

ಕಾಸರಗೋಡು:  ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪಕರಲ್ಲೊಬ್ಬರಾದ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಹಾಗೂ ಕನ್ನಡ ಪತ್ರಕರ್ತ ರೊಂದಿಗೆ ಸೌಹಾರ್ದ ಸಂವಾದ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಅಡ್ಕತ್ತಬೈಲ್ ನಲ್ಲಿರುವ ಹೋಟೆಲ್ ಉಡುಪಿ ಗಾರ್ಡನ್‌ನ ಸಭಾಂಗಣದಲ್ಲಿ ನಡೆಯಿ ತು.  ಹಿರಿಯ ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸರ್ ಎಂ. ವಿಶ್ವೇಶ್ವರಯ್ಯ ನವರ ಬದುಕು, ವ್ಯಕ್ತಿತ್ವ, ಸಾಧನೆಗಳ ಕುರಿತು ಮಾತನಾಡಿದರು. ಕ.ಸಾ.ಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ| …

ಕೆಎಸ್‌ಆರ್‌ಟಿಸಿ ಬಸ್‌ಗಳ ಸುರಕ್ಷತೆ ಖಚಿತಪಡಿಸಲು ತುರ್ತು ಕ್ರಮ ಅಗತ್ಯ- ಎಂ.ಎಲ್. ಅಶ್ವಿನಿ

ಕಾಸರಗೋಡು: ನೀಲೇಶ್ವರ ಬಳಿ ಪಡನಕ್ಕಾಡ್ ಕೆಎಸ್‌ಆರ್‌ಟಿಸಿ ಪ್ರಿಯ ದರ್ಶಿನಿ ಬಸ್‌ನ ಪ್ಲಾಟ್‌ಫಾರ್ಮ್ ಕುಸಿದು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಸರ ಗೋಡಿನಲ್ಲಿ ಸರ್ವೀಸ್ ನಡೆಸುವ ಎಲ್ಲಾ ಸರಕಾರಿ ಬಸ್‌ಗಳ ಫಿಟ್‌ನೆಸ್ ಹಾಗೂ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ನುಡಿದಿದ್ದಾರೆ. ಪ್ರಯಾಣಿಕರು ಮತ್ತು ಉದ್ಯೋಗಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಬಸ್‌ಗಳ ತುರ್ತು ಸುರಕ್ಷತಾ ಪರಿಶೀಲನೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಕೇರಳದ ಅನೇಕ ಹಳೆಯ ಸರಕಾರಿ ಬಸ್‌ಗಳು ಕಾಸರಗೋಡು ಜಿಲ್ಲೆಯಲ್ಲಿ ಸೇವೆ …

ಪ್ರತಾಪನಗರ ಶ್ರೀ ಗಣೇಶೋತ್ಸವ ಸಮಾಪ್ತಿ

ಮಂಗಲ್ಪಾಡಿ: ಪ್ರತಾಪನಗರದಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದ 43ನೇ ವರ್ಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ ನಿನ್ನೆ ಸಮಾಪ್ತಿಗೊಂಡಿತು. ಗಣಪತಿ ವಿಗ್ರಹದ ಶೋಭಯಾತ್ರೆಯಲ್ಲಿ ಭಜನೆ, ಕುಣಿತ ಭಜನೆ, ಚೆಂಡೆ, ವಾದ್ಯಘೋಷ, ಮುತ್ತುಕೊಡೆ ಹಾಗೂ ಮಕ್ಕಳು, ಮಾತೆಯರ ಸಹಿತ ಹಿರಿಯರು ಪಾಲ್ಗೊಂಡಿದ್ದರು. ಮೆರವಣಿಗೆ ಉತ್ಸವಾಂಗಣದಿAದ ಹೊರಟು ಸೋಂಕಾಲು, ಕೈಕಂಬ, ಐಲ ದ್ವಾರದ ಮೂಲಕ ಸಾಗಿ ಪಾರಕಟ್ಟೆ ರಸ್ತೆಯಿಂದ ಐಲ ಶಿವಾಜಿನಗರದ ಸಿಂಧೂ ಮಹಾಸಾಗರದಲ್ಲಿ ಜಲಸ್ತಂಭನ ನೆರವೇರಿತು. ಶ್ರೀ ಗಣೇಶೋತ್ಸವ ಮತ್ತು ಶ್ರೀ ಶಾರದೋತ್ಸವ ವಿಸರ್ಜನಾ ಸ್ವಾಗತ …

ನೀಲಮ್ಮ ನಿಧನ

ನಾರಂಪಾಡಿ: ಇಲ್ಲಿನ ನಿವಾಸಿ ದಿ| ಈಶ್ವರ ರೈಯವರ ಪತ್ನಿ ನೀಲಮ್ಮ (88) ನಿಧನ ಹೊಂದಿ ದರು. ಅಲ್ಪ ಕಾಲದಿಂದ ಅನಾರೋಗ್ಯ ತಗಲಿ ಚಿಕಿತ್ಸೆಯಲ್ಲಿದ್ದ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಮೃತರು ಮಕ್ಕಳಾದ ರತಿದೇವಿ, ಪದ್ಮಾವತಿ, ಸರೋಜಿನಿ, ಅಶೋಕ್ ರೈ ನಾರಂಪಾಡಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಸೌಖ್ಯ: ಮಹಿಳೆ ನಿಧನ

ಪೆರ್ಲ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಮಹಿಳೆ ನಿಧನಹೊಂ ದಿದರು. ಖಂಡಿಗೆ ಚಾಕೊಟೆ ನಿವಾಸಿ ದಿವಂಗತರಾದ ಕೊರಗ-ಪಾರ್ವತಿ ದಂಪತಿ ಪುತ್ರಿ ನೀಲ (53) ಸ್ವ-ಗೃಹದಲ್ಲಿ ನಿಧನಹೊಂದಿದ್ದಾರೆ. ಅವಿವಾಹಿತೆಯಾಗಿದ್ದರು.  ಮೃತರು ಸಹೋದರರಾದ ಕೃಷ್ಣ ನಾಯ್ಕ, ರಾಮ ನಾಯ್ಕ, ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.