ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ವಿಷಯದಲ್ಲಿ ಸರಕಾರದ ನಿಲುವಿಗೆ ಹೊಂದಿಕೊಂಡು ಕ್ರಮ-ನೂತನ ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್  

ಕಾಸರಗೋಡು:  ಕಾಸರಗೋಡು  ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ವಿಷಯ ದಲ್ಲಿ  ಸರಕಾರದ ನಿಲುವಿಗೆ ಹೊಂದಿ ಕೊಂಡು ಮುಂದಿನ ಕ್ರಮ ಕೈಗೊಳ್ಳುವು ದಾಗಿ  ನೂತನ ಜಿಲ್ಲಾಧಿಕಾರಿಯಾಗಿ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದ ಶ್ರೀಧನ್ಯಾಸುರೇಶ್ ಹೇಳಿದ್ದಾರೆ. ಸಪ್ತಭಾಷಾ ಸಂಗಮ ಭೂಮಿ ಹಾಗೂ  ಕರ್ನಾಟಕ ಗಡಿಪ್ರದೇಶವನ್ನು ಹೊಂದಿರುವ ಕಾಸರಗೋಡು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸೇರಿದಂತೆ ಹಲವು ವಲಯಗಳಲ್ಲಿ ಭಾರೀ ಅಭಿವೃದ್ಧಿ ಯೋಜನೆಗಳ ಸಾಧ್ಯತೆ ಇದೆ. ಅದನ್ನೆಲ್ಲಾ ಕೂಲಂಕುಷವಾಗಿ ಪರಿಶೀಲಿಸಿ ಅಗತ್ಯದ ಅಭಿವೃದ್ಧಿ ಯೋಜನೆಗೆ ರೂಪು ನೀಡಲು ಪ್ರಯತ್ನಿಸಲಾಗು ವುದು.  ಇದಕ್ಕಾಗಿ ಕಾಸರಗೋಡಿನ  ಎಲ್ಲಾ ವಿಭಾಗದವರ …

ಒಂದೇ ನಂಬ್ರಪ್ಲೇಟ್ ಅಳವಡಿಸಿದ ಎರಡು ವಾಹನಗಳ ವಶ : ತನಿಖೆ ಆರಂಭಿಸಿದ ಪೊಲೀಸ್

ಉಪ್ಪಳ: ಒಂದೇ ರಿಜಿಸ್ಟರ್ ನಂಬ್ರ ಹೊಂದಿರುವ ಎರಡು ಥಾರ್ ಜೀಪುಗಳನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ಕೆ.ಎಲ್. 14ಎಜೆ3008 ನಂಬ್ರದ ಎರಡು ಥಾರ್ ಜೀಪುಗಳು ಉಪ್ಪಳ ಕೈಕಂಬದಲ್ಲಿ ಕಂಡುಬಂದಿದ್ದು, ಈ ಮಾಹಿತಿಯನ್ನು ಸ್ಥಳೀಯರು  ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಸ್ಟೇಶನ್ ಹೌಸ್ ಆಫೀಸರ್  ವಿಷ್ಣು, ಎಸ್‌ಐ ಶಬರಿಕೃಷ್ಣ ಎಂಬಿವರು ಅಲ್ಲಿಗೆ ತಲುಪಿ ವಾಹನಗಳನ್ನು ಕಸ್ಟಡಿಗೆ ತೆಗೆದಿದ್ದಾರೆ. ಬಳಿಕ ನಡೆಸಿದ ತನಿಖೆಯಲ್ಲಿ ಯಥಾರ್ಥ ನಂಬ್ರ ಹೊಂದಿರುವ ವಾಹನದ ಮಾಲಕ ನೆಲ್ಲಿಕುಂಜೆ ನಿವಾಸಿಯೆಂದು ತಿಳಿದುಬಂದಿದೆ. ಇವರನ್ನು  ಪೊಲೀಸರು ಠಾಣೆಗೆ …

ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸವಾರಿ: ಇಬ್ಬರ ವಿರುದ್ಧ ಕೇಸು

ಮಂಜೇಶ್ವರ: ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಪೊಲೀಸರ ಆದೇಶ ಉಲ್ಲಂ ಘಿಸಿ ಮುಂದಕ್ಕೆ ಸಾಗಿದ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ತಿರುವನಂತ ಪುರ ಕುಂಜೀರಂಕುಳಂ ಕಲ್ಲುವಿಳ ಪುತ್ತನ್ ವೀಡ್‌ನ ಅನೀಶ್ ಕುಮಾರ್ ಕೆ.ಎ. (36), ತಾಯನ್ನೂರು ಶಾಸ್ತಾಂಪಾರದ ರವೀಂದ್ರನ್ ಎ. (50) ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಸಂಜೆ ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜೇಶ್ವರ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ಹೆಲ್ಮೆಟ್ ಧರಿಸದೆ ಇಬ್ಬರು …

ಹಿರಿಯ ಯಕ್ಷಗಾನ ಕಲಾವಿದ ಎಂ.ಟಿ. ಸುಂದರ ಕುಲಾಲ್ ನಿಧನ

ಪೈವಳಿಕೆ: ಕಟೀಲು, ಧರ್ಮಸ್ಥಳ ಸಹಿತ ವಿವಿಧ ಯಕ್ಷಗಾನ ಮೇಳಗಳಲ್ಲಿ ಆರು ದಶಕಗಳ ಕಾಲ ಕಲಾವಿಧರಾಗಿ ತಿರುಗಾಟ ನಡೆಸಿದ್ದ ಮುಳಿಗದ್ದೆ ತಾಳ್ತಜೆ ನಿವಾಸಿ ಸುಂದರ ಕುಲಾಲ್ (79) ನಿಧನ ಹೊಂದಿದರು. ಬೇಡಗುಡ್ಡೆಯ ಲ್ಲಿರುವ ಸ್ವ-ಗೃಹದಲ್ಲಿ ನಿನ್ನೆ ನಿಧನ ಸಂಭವಿಸಿದೆ. ಇವರು ಯಕ್ಷಗಾನ ಮಾತ್ರ ವಲ್ಲದೆ, ಕೋಟಿಚೆನ್ನಯ, ಸಾವಿರೊ ಡೊರ್ತಿ ಸಾವಿತ್ರಿ ಸೇರಿದಂತೆ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ತಮ್ಮ ಮಾವನವರಿಂದ ಯಕ್ಷಗಾನದ ಹೆಜ್ಜೆಗಾರಿಕೆ ಅಭ್ಯಸಿಸಿ ಧರ್ಮಸ್ಥಳ ಮೇಳ ಸೇರಿಕೊಂಡು ಕೋಡಂಗಿ ವೇಷದಿಂದ ಯಕ್ಷವೃತ್ತಿ ಆರಂಭಿಸಿದ್ದಾರೆ. ಬಾಲಗೋಪಾಲ, ಮುಖ್ಯ ಸ್ತ್ರೀವೇಷಗಳನ್ನು ಮಾಡಿದ …

ಕಟ್ಟಿ ಹಾಕಿದ್ದ ಕೋಳಿಯನ್ನು ಹಗ್ಗ ಸಹಿತ ನುಂಗಿದ ಹೆಬ್ಬಾವು

ಕಾಸರಗೋಡು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ  ಕೋಳಿಯನ್ನು  ಹೆಬ್ಬಾವು ಹಗ್ಗ ಸಹಿತ  ನುಂಗಿದ ಘಟನೆ ನಡೆದಿದೆ.  ಪೆರಿಯ ಆಯಂಬಾರ  ಕಾನತ್ತಿಲ್‌ನ ಮಾಲತಿ ಎಂಬವರ ಮನೆಯ ಹುಂಜಮನ್ನು ಹೆಬ್ಬಾವು  ನುಂಗಿದೆ.  ಎಂದಿನಂತೆ ಇಂದು ಬೆಳಿಗ್ಗೆ ಕೋಳಿಗೆ ಆಹಾರ ಕೊಡಲು ಮಾಲತಿ ಹೋದಾಗ ಕೋಳಿ  ಅಲ್ಲಿರಲಿಲ್ಲ. ಬಳಿಕ ಹುಡುಕಾಡಿದಾಗ  ಕೊಟ್ಟಿಗೆಯ  ಒಂದು ಮೂಲೆಯಲ್ಲಿ ಹೆಬ್ಬಾವು  ಕಂಡುಬಂದಿದೆ.  ಅದನ್ನು ಕಂಡ ಮಾಲತಿ ಬೊಬ್ಬೆ ಹಾಕಿದ್ದು,  ಕೂಡಲೇ ಇತರರು ತಲುಪಿ ನೋಡಿದಾಗ ಹೆಬ್ಬಾವು  ಕೋಳಿಯನ್ನು ಹಗ್ಗ ಸಹಿತ ನುಂಗಿರುವುದು ತಿಳಿದುಬಂದಿದೆ.  ಇದೇ ವೇಳೆ ಹಗ್ಗ …

ಅನಧಿಕೃತ ಮೀನುಗಾರಿಕೆ: ಕರ್ನಾಟಕ ಬೋಟ್ ವಶಕ್ಕೆ; 2 ಲಕ್ಷ ರೂ. ದಂಡ ವಸೂಲಿ

ಕಾಸರಗೋಡು: ಕೇರಳದ ವ್ಯಾಪ್ತಿಗೊಳಪಟ್ಟ ಸಮುದ್ರ ಪ್ರದೇಶದಲ್ಲಿ ಅನಧಿಕೃತವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದ ಕರ್ನಾಟಕ ರಾಜ್ಯದ ನೋಂದಾವಣೆ ಹೊಂದಿರುವ ನೂರ್ ಇ ಬಹಾರ್ ಎಂಬ ಹೆಸರಿನ ಯಾಂತ್ರೀಕೃತ ಬೋಟನ್ನು ಮೀನುಗಾರಿಕಾ ಇಲಾಖೆಯ ಕಾಸರಗೋಡು ಸಹ ನಿರ್ದೇಶಕ ಕೆ. ಶ್ರೀಜೇಶ್‌ರ ನೇತೃತ್ವದ ತಂಡ ವಶಕ್ಕೆ ತೆಗೆದುಕೊಂಡಿದೆ. ಚೆರುವತ್ತೂರಿನ ಮಡಕ್ಕರ ಸಮುದ್ರ ಕಿನಾರೆಯಿಂದ ಸುಮಾರು ಒಂಭತ್ತು ನೋಟಿಕ್ಕಲ್ ಮೈಲು ದೂರದ ಸಮುದ್ರದಿಂದ ನಿನ್ನೆ ಬೋಟ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಹ ನಿರ್ದೇಶನ ನೇತೃತ್ವದಲ್ಲಿ ಮೀನುಗಾರಿಕಾ ಇಲಾಖೆಯ ಸಿವಿಲ್ ಆಫೀಸರ್ ಅರ್ಜುನ್ ಬಿ. ಪೊದುವಾಳ್, ಸಮುದ್ರ …

ಅಂಗಡಿಯಿಂದ ಮೋಟಾರ್ ಕಳವುಗೈದ ಆರೋಪಿ ಸೆರೆ

ಕಾಸರಗೋಡು: ದುರಸ್ತಿ ಕೆಲಸಕ್ಕಾಗಿ ಅಂಗಡಿಯಲ್ಲಿ ಇರಿಸಿದ್ದ ಮೋಟಾರ್ ಪಂಪನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಪೊಲೀಸರು ಕಾಸರಗೋಡು ನಿವಾಸಿಯನ್ನು ಬಂಧಿಸಿದ್ದಾರೆ. ಜಿಲ್ಲೆಯ ಚಿಟ್ಟಾರಿಕಲ್ ಕಡುಮೇನಿ ನಿವಾಸಿ ಥೋಮಸ್ (52) ಬಂಧಿತ ಆರೋಪಿ. ಕಣ್ಣೂರು ತೆಕ್ಕಿಬಜಾರ್‌ನಲ್ಲಿ ಅಂಗಡಿಯಲ್ಲಿ ದುರಸ್ತಿ ಕೆಲಸಕ್ಕಾಗಿ ಸಲಾಂ ಎಂಬವರು ತಂದಿರಿಸಿದ್ದ 18,೦೦೦ ರೂ. ಮೌಲ್ಯದ ಮೋಟಾರ್ ಪಂಪನ್ನು ಸೆ. 6ರಂದು ಕಳವುಗೈದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದರು.  ಇದಕ್ಕೆ ಸಂಬಂಧಿಸಿ ಪೊಲೀಸರು ನಡೆಸಿದ ತನಿಖೆಯಲ್ಲಿ ಆ ಪರಿಸರದ ಸಿಸಿ ಟಿವಿಯಲ್ಲಿ ಆರೋ ಪಿಯ …

ಅವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ: ವಿವಿಧೆಡೆಗಳಿಂದ ದಂಡ ವಸೂಲಿ

ಕಾಸರಗೋಡು: ತ್ಯಾಜ್ಯ ಸಂಸ್ಕರಣೆ ವಲಯದಲ್ಲಿ ಕಾನೂನುಗಳ ಉಲ್ಲಂಘನೆ ಪರಿಶೀಲಿಸುವ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ಮಂಜೇಶ್ವರ ಪಂಚಾಯತ್‌ನ ಹೊಸಂಗಡಿಯಲ್ಲಿರುವ ಯಾಫ್ಕೋ ಇಂಡಸ್ಟ್ರೀಸ್ ಎಂಬ ಫ್ಲೈವುಡ್ ಕಂಪೆನಿಯ ಅನ್ಯರಾಜ್ಯ ಕಾರ್ಮಿಕರು ಮಲಿನಜಲವನ್ನು ಬಹಿರಂಗವಾಗಿ ಹರಿಯಬಿಟ್ಟ ಹಿನ್ನೆಲೆಯಲ್ಲಿ ಮಾಲಕನಿಂದ 15,000 ರೂ. ದಂಡ ವಸೂಲಿ ಮಾಡಿ ಸೋಕ್‌ಪಿಟ್ ಸ್ಥಾಪಿಸಲು ನಿರ್ದೇಶ ನೀಡಲಾಯಿತು. ಮೀಂಜದ  ಇಂಗ್ಲಿಷ್ ಮಾಧ್ಯಮ ಶಾಲೆ, ವರ್ಕಾಡಿಯ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಪ್ರತ್ಯೇಕವಾಗಿ ಸಿದ್ಧಪಡಿಸಿದ ಹೊಂಡಗಳಲ್ಲಿ ಪ್ಲಾಸ್ಟಿಕ್ ಸಹಿದ ತ್ಯಾಜ್ಯಗಳನ್ನು ಉರಿಸಿರುವುದು ಪತ್ತೆಹಚ್ಚಿದ್ದು, ಈ ಹಿನ್ನೆಲೆಯಲ್ಲಿ 5,000 …

ಕುಂಬಳೆ ಪ್ರೆಸ್ ಫಾರಂ ಸೋಶ್ಯಲ್  ಮೀಡಿಯಾ ಪ್ಲಾಟ್ ಫಾರಂಗಳ ಉದ್ಘಾಟನೆ

ಕುಂಬಳೆ: ಕುಂಬಳೆ ಪ್ರೆಸ್ ಫಾರಂ ಡಿಜಿಟಲೈಸೇಶನ್‌ನಂಗವಾಗಿ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಪೇಜ್‌ಗಳ ಉದ್ಘಾಟ ನೆಯನ್ನು  ಶಾಸಕ ಎಕೆಎಂ ಅಶ್ರಫ್, ಕಾಸರಗೋಡು ಬ್ಲೋಕ್ ಪಂಚಾ ಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ಎಂಬಿವರು ಸೇರಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ  ಶಾಸಕ ಎಕೆಎಂ ಅಶ್ರಫ್‌ರಿಗೆ ಲೇಖಕ ಕೆ.ಎಂ. ಅಬ್ಬಾಸ್ ಹಾಗೂ ಕಾಸರ ಗೋಡು ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ ಅವರಿಗೆ ಶಾಸಕ ಎಕೆಎಂ ಅಶ್ರಫ್  ಪಾರಿತೋಷಕ ನೀಡಿ ಗೌರ ವಿಸಿದರು.  ಕಾರ್ಯಕ್ರಮದ ಪೂರ್ವ ಭಾವಿಯಾಗಿ  ಶಾಸಕ …

ವಿದ್ಯುತ್ ನಿಯಂತ್ರಣ :ಸಿಪಿಎಂನಿಂದ ದೊಂದಿ ಮೆರವಣಿಗೆ

ಬೆಳ್ಳೂರು: ವಿದ್ಯುತ್ ನಿಯಂತ್ರಣವನ್ನು ಪ್ರತಿಭಟಿಸಿ ಸಿಪಿಎಂ ಬೆಳ್ಳೂರು ಲೋಕಲ್ ಕಮಿಟಿ ನೇತೃತ್ವದಲ್ಲಿ ನಿನ್ನೆ ರಾತ್ರಿ ದೊಂದಿ ಮೆರವಣಿಗೆ ನಡೆಸಲಾಯಿತು. ನಾಟೆಕಲ್ಲು ಪೇಟೆಯಲ್ಲಿ ನಡೆದ ಪ್ರತಿಭಟನೆಗೆ ಸಿಪಿಎಂ ಬೆಳ್ಳೂರು ಸೆಕ್ರೆಟರಿ ಸೂಫಿ ಕೆ.ಎಚ್. ನೇತೃತ್ವ ನೀಡಿದರು. ಕಾರಡ್ಕ ಬ್ಲಾಕ್ ಪಂ. ಉಪಾಧ್ಯಕ್ಷೆ ಉಷಾ, ನೇತಾರರಾದ ಶಶಿಧರ ಗೋಳಿಕಟ್ಟೆ, ಸುನಿತಾ, ಎ.ಕೆ. ಕುಶಲ ಮೊದಲಾದವರು ಭಾಗವಹಿಸಿದರು.