ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಕಳವು ಆರೋಪಿ ಪೊಲೀಸ್ ಕಸ್ಟಡಿಯಲ್ಲಿ : ಕಿನ್ನಿಂಗಾರಿನಲ್ಲಿ ರಬ್ಬರ್ ಶೀಟ್ ಕಳವು ಪ್ರಕರಣ ಬೆಳಕಿಗೆ

ಮುಳ್ಳೇರಿಯ: ಬೆಳ್ಳೂರು ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಿಂದ ಕಾಣಿಕೆ ಹುಂಡಿಗಳನ್ನು ಕಳವುಗೈದ ಪ್ರಕರಣದಲ್ಲಿ  ಆರೋಪಿ ಯನ್ನು ಆದೂರು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಿನ್ನಿಂಗಾರು ಬಳಯ ಮದಕ್ಕ ನಿವಾಸಿ ಸತೀಶ್ (26) ಎಂಬಾತನನ್ನು ಆದೂರು ಪೊಲೀಸರು ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ.  ಪುತ್ತೂರು ಬಳಿಯ ಬೆಟ್ಟಂಪಾಡಿ ಕ್ಷೇತ್ರವೊಂದ ರಿಂದ ಕಳವುಗೈದ ಪ್ರಕರಣದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಸತೀಶನನ್ನು ಬಂಧಿಸಿದ್ದರು.  ಬಳಿಕ ಈತನನ್ನು ತನಿಖೆಗೊಳಪಡಿಸಿದಾಗ ಕಳೆದ ಅಗೋಸ್ತ್ ೨೪ರಂದು ರಾತ್ರಿ ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಕಾಣಿಕೆ  ಹುಂಡಿಗಳನ್ನು ಕಳವು ನಡೆಸಿರುವುದು …

ನರೇಂದ್ರಮೋದಿಯವರ ಜನ್ಮ ದಿನ: ಮಧೂರು ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ

ಕಾಸರಗೋಡು: ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ 25 ವರ್ಷ ಪೂರ್ಣಗೊಳಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರಮೋ ದಿಯವರ ಆಯು ರಾರೋಗ್ಯ ಹಾಗೂ ಸುಖಕ್ಕಾಗಿ ಅವರ ಜನ್ಮ ದಿನವಾದ ಇಂದು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಉದಯಾಸ್ತಮಾನ ಪೂಜೆ ಸಲ್ಲಿಸಲಾಯಿತು. ಇದರೊಂದಿಗೆ ಒಂದು ತಿಂಗಳ ಕಾಲ ನಡೆಯಲಿರುವ ‘ಸೇವಾ ಸಂಕಲ್ಪ ಅಭಿಯಾನ್’ ಕಾರ್ಯಕ್ರಮಗಳಿಗೆ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಕಾರ್ಯದರ್ಶಿ ಪ್ರಮೀಳಾ ಮಜಲ್, ಮಧೂರು  ಗ್ರಾಮ …

ಯುವಕ ಮನೆಯ ಬೆಡ್ ರೂಂನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಮನೆಯವರು ಸಂಬಂಧಿಕರ ಮನೆಗೆ  ಹೋದ ಸಂದರ್ಭದಲ್ಲಿ ಯುವಕ ಬೆಡ್‌ರೂಂನ ಫ್ಯಾನ್‌ಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಕನ್ಯಪ್ಪಾಡಿ ಬಳಿಯ ಪಟ್ಟಾಜೆ ನಿವಾಸಿ ಚನಿಯಪ್ಪ ನಾಯ್ಕ ಎಂಬವರ ಪುತ್ರ ರಂಜಿತ್ (29) ಸಾವಿಗೀಡಾದ ವ್ಯಕ್ತಿ. ನಿನ್ನೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8.30ರ ಮಧ್ಯೆಗಿನ ಸಮಯದಲ್ಲಿ  ಘಟನೆ ನಡೆದಿದೆ. ಮನೆಯವರು ಬೆಳಿಗ್ಗೆ ಸಂಬಂಧಿಕರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ರಂಜಿತ್ ಮಾತ್ರವೇ ಮನೆಯಲ್ಲಿದ್ದರು. ರಾತ್ರಿ ಮನೆಯವರು ಮರಳಿ ತಲುಪಿದಾಗ ಮನೆಯ ಬಾಗಿಲು ಒಳಗಿನಿಂದ …

ಅಕ್ರಮ ಮರಳುಗಾರಿಕೆ: ಇಬ್ಬರ ವಿರುದ್ಧ ಕೇಸು, ಲಾರಿ ಸಹಿತ ಚಾಲಕ ಸೆರೆ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಗಣೇಶನ್ ಒ.ಎಂ ನೇತೃತ್ವದ ಪೊಲೀ ಸರು ನಿನ್ನೆ ಕಿದೂರು ಮಯಂ ರಳಂನಲ್ಲಿ  ನಡೆಸಿದ ಕಾರ್ಯಾಚರಣೆ   ಉಳುವಾರು ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ತೆಗೆದು ಸಾಗಿಸುತ್ತಿದ್ದ  ಲಾರಿಯನ್ನು  ಮಾಲು ಸಹಿತ   ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಪ್ರಸ್ತುತ ಲಾರಿ ಚಾಲಕ ನೆಕ್ರಾಜೆ ಸಾಲತ್ತಡ್ಕದ ಮುಹಮ್ಮದ್ ಸಾಬಿತ್ (22) ಮತ್ತು ಪ್ರಸ್ತುತ ಲಾರಿಯ ಆರ್.ಸಿ ಮಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಚಾಲಕನನ್ನು ಪೊಲೀಸರು ಬಂಧಿ ಸಿದ್ದು, ನಂತರ ಆತನನ್ನು …

ಮನೆಯಲ್ಲಿ ಮದ್ಯ ಸಂಗ್ರಹ ಪತ್ತೆ: ರಿಪೋರ್ಟರ್ ಟಿವಿ ಮಾಲಕ ಸೆರೆ

ಕೊಚ್ಚಿ:  ಮನೆಯಲ್ಲಿ ಮದ್ಯ ಸಂಗ್ರಹಿಸಿಟ್ಟ ಘಟನೆಗೆ ಸಂಬಂಧಿಸಿ ರಿಪೋರ್ಟರ್ ಟಿ.ವಿ ಮಾಲಕ  ಆಂಟೋ ಅಗಸ್ಟಿನ್‌ರನ್ನು ಅಬಕಾರಿ ತಂಡ ಬಂಧಿಸಿದೆ. ಮನೆಯಿಂದ 64 ಲೀಟರ್ ಮದ್ಯ  ವಶಪಡಿಸಲಾಗಿದೆ. ವಯನಾಡ್ ವಾಳಮಟ್ಟ ಎಂಬಲ್ಲಿ ರುವ ಮನೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯ ಸಂಗ್ರಹಿಸಿಟ್ಟಿರುವುದು ಪತ್ತೆಹಚ್ಚಲಾ ಗಿದೆ.  ಎಕ್ಸೈಸ್ ಎ.ಸಿ ಬೈಜು ನೇತೃತ್ವದ ತಂಡ ಆಂಟೋ ಅಗಸ್ಟಿನ್‌ರನ್ನು ಕೊಚ್ಚಿಯ ಕಚೇರಿಗೆ ತಲುಪಿಸಿ  ಬಂಧನ ದಾಖಲಿಸಿದೆ. ಅನಂತರ ವೈದ್ಯಕೀಯ ತಪಾಸಣೆಗಾಗಿ ಆಲುವಾದ ಜಿಲ್ಲಾಸ್ಪತ್ರೆಗೆ ಕೊಂಡೊ ಯ್ಯಲಾಯಿತು. ಆಂಟೋರನ್ನು ವಯನಾಡಿಗೆ ಕರೆದೊಯ್ಯುವುದಾಗಿ ಎಕ್ಸೈಸ್ ಎಸಿ  …

ವಿದೇಶದಲ್ಲಿ ಕೆಲಸ ನೀಡುವುದಾಗಿ ನಂಬಿಸಿ 4.84 ಲಕ್ಷ ರೂ. ಪಡೆದು ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು: ವಿದೇಶದಲ್ಲಿ ಕೆಲಸ ನೀಡುವುದಾಗಿ ನಂಬಿಸಿ 4,84,200 ರೂ. ಪಡೆದು ಬಳಿಕ ವಂಚನೆಗೈದ ಬಗ್ಗೆ ನೀಡಲಾದ ದೂರಿನಂತೆ ವಿದ್ಯಾನಗರ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಮಧೂರು ಹಿದಾಯತ್ ನಗರದ ರಿಶಾದ್ ಮಂಜಿಲ್‌ನ ಅಬ್ದುಲ್ ರೌಫ್ (45) ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಕೊಲ್ಲಂ ಸಿಟಿಯ ಚಾಲಕುಡಿ ನಿವಾಸಿಗಳಾದ ಶ್ಯಾಮ ಸುಕುಮಾರನ್ ನಾಯರ್ ಮತ್ತು ಗೈಸ್ ಬೋಬಿ ಎಂಬಿವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.ಯು.ಕೆಯಲ್ಲಿ ಬಾರ್ ಚೆಸ್ಟರ್ ಹೆಲ್ತ್ ಕೇರ್ ಲಿಮಿಟೆಡ್ …

ನರೇಂದ್ರಮೋದಿಯವರ ಸಾರ್ವಜನಿಕ ಜೀವನದ 25 ವರ್ಷಗಳು ಇಂದಿನಿಂದ ಒಂದು ತಿಂಗಳ ಕಾಲ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮ

ಕಾಸರಗೋಡು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ 25 ವರ್ಷಗಳು ಪೂರ್ಣ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀ ಯ ಮಟ್ಟದಲ್ಲಿ ಆಯೋಜಿಸಲಾ ಗುತ್ತಿರುವ ‘ಸೇವಾ ಸಂಕಲ್ಪ ಅಭಿಯಾನ್’ದ ಅಂಗ ವಾಗಿ ಇಂದಿ ನಿಂದ ಅಕ್ಟೋಬರ್ 17ರವರೆಗೆ ಕಾಸರ ಗೋಡು ಜಿಲ್ಲೆಯಲ್ಲಿ ವಿವಿಧ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುವುದು.ನರೇಂದ್ರ ಮೋದಿಯವರ ಜನ್ಮದಿನವಾದ ಇಂದು ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಆಯುರಾರೋಗ್ಯ ಕ್ಕಾಗಿ ಪೂಜೆ ಹಾಗೂ ವಿಶೇಷ ಹರಕೆಗಳನ್ನು ಸಲ್ಲಿಸಲಾಗುತ್ತಿದೆ. ‘ಆಶೀರ್ವಾದ್ ಕಾ ದಿಯಾ’ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ …

ಪ್ರಾಯಪೂರ್ತಿಯಾಗದ ಬಾಲಕಿಯನ್ನು ದೌರ್ಜನ್ಯಗೈದು ಗರ್ಭಿಣಿಯನ್ನಾಗಿಸಿ ತಲೆಮರೆಸಿಕೊಂಡಿದ್ದ ಯೂಟ್ಯೂಬರ್ ಸೆರೆ

ತೃಶೂರು: ಪ್ರಾಯ ಪೂರ್ತಿಯಾಗದ ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದು ದೌರ್ಜನ್ಯಗೈದು ಗರ್ಭಿಣಿಯನ್ನಾಗಿ ಮಾಡಿದ ಪ್ರಕರಣದಲ್ಲಿ ಯೂಟ್ಯೂಬರ್ ಸೆರೆಯಾಗಿದ್ದಾನೆ. ಅಂಬಿಳಿ ಎಂದು ಕರೆಯಲ್ಪಡುವ ಕುಂಬಳಂಙಾಡ್ ನಿವಾಸಿ ಪಳ್ಳಿಯೆತ್ ಪರಂಬಿಲ್ ವಿಘ್ನೇಶ್‌ಕೃಷ್ಣ (24)ನನ್ನು ವಡಂಕಾಜೇರಿ ಪೊಲೀಸರು ಸೆರೆಹಿಡಿದಿದ್ದಾರೆ. ತಮಿಳುನಾಡು ಸೆಲಂನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಡಂಕಾಚೇರಿ ಇನ್‌ಸ್ಪೆಕ್ಟರ್ ಅನೂಪ್‌ರ ನೇತೃತ್ವದಲ್ಲಿರುವ ತಂಡ ಬಂಧಿಸಿದೆ. 2021ರಲ್ಲೂ ಆರೋಪಿ ಪ್ರಾಯಪೂರ್ತಿಯಾಗದ ಇನ್ನೋರ್ವೆ ಬಾಲಕಿಯನ್ನು ದೌರ್ಜನ್ಯಗೈದ ಪ್ರಕರಣದಲ್ಲಿಯೂ ಒಳಗೊಂಡಿದ್ದನು. ಫೋನ್ ಮೂಲಕ ಪರಿಚಯಗೊಂಡ ಬಾಲಕಿಗೆ ವಿವಾಹ ಭರವಸೆ ನೀಡಿ ದೌರ್ಜನ್ಯಗೈದಿರುವುದಾಗಿ ೨೦೨೧ರಲ್ಲಿ ಕೇಸು ದಾಖಲಿಸಲಾಗಿತ್ತು. ಬಾಲಕಿಯ …

ಬಾಯಾರು ಗಣೇಶಗಿರಿ ಶ್ರೀ ಗಣೇಶೋತ್ಸವ ಶೋಭಾಯಾತ್ರೆ

ಬಾಯಾರು: ಮುಳಿಗದ್ದೆ ಗಣೇಶಗಿರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ   43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಇದೇ ವೇಳೆ ನೂತನ ಗಣೇಶಮಂದಿರ ಲೋಕಾರ್ಪಣೆ ಜರಗಿದ್ದು, ಗಣೇಶೋತ್ಸವದಂಗವಾಗಿ ಗಣೇಶ ವಿಗ್ರಹದ ಶೋಭಾಯಾತ್ರೆ ನಡೆಯಿತು. ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಳಿಯಲ್ಲಿ ಗಣೇಶ ವಿಗ್ರಹದ ಜಲಸ್ತಂಭನೆ ಕಾರ್ಯಕ್ರಮ ಜರಗಿತು.

ನಾಳೆ ಮಂಗಳೂರಿನಲ್ಲಿ ಕರ್ನಾಟಕ ವಿಧಾನಸಭಾ ಸಮಾವೇಶ:ತುಳು ಅಧಿಕೃತ ದ್ವಿತೀಯ ಭಾಷೆ ಘೋಷಣೆಗೆ ಮನವಿ

 ಬದಿಯಡ್ಕ: ಮಂಗಳೂರಿನಲ್ಲಿ ನಾಳೆ ನಡೆಯಲಿರುವ ಕರ್ನಾಟಕ ವಿಧಾನಸಭಾ ಸಮಾವೇಶದಲ್ಲಿ ತುಳುವನ್ನು ಅಧಿಕೃತ ದ್ವಿತೀಯ ಭಾಷೆಯಾಗಿ ಘೋಷಿಸಬೇಕೆಂದು ಒತ್ತಾಯಿಸುವ ಪೂರ್ವಭಾವಿಯಾಗಿ ವಿಶ್ವ ತುಳುವೆರೆ ಆಯನಕೂಟ ಮತ್ತು ತುಳು ಅಕಾಡಮಿ ನೇತೃತ್ವದಲ್ಲಿ ಇಂದು ಬದಿಯಡ್ಕದಲ್ಲಿ ಸಭೆ ನಡೆಸಲಾಯಿತು. ನಾಳೆ ನಡೆಯಲಿರುವ ಸಮಾವೇಶದಲ್ಲಿ ಕಾಸರಗೋಡಿನ ಸಮಸ್ತ ತುಳುವರ ಪರವಾಗಿ ತುಳುವನ್ನು ಅಧಿಕೃತವಾಗಿ ಭಾಷೆಯಾಗಿ ಘೋಷಿಸಬೇಕು ಹಾಗೂ ಸಂವಿಧಾನದ ೮ನೇ ಪರಿಚ್ಛೇಧದಲ್ಲಿ ಸೇರಿಸಲು ಕರ್ನಾಟಕ ಸರಕಾರ ಮುತುವರ್ಜಿ ವಹಿಸಬೇಕೆಂದು ಮನವಿ ಮಾಡಲಾಯಿತು. ತುಳು ಸಾಂಸ್ಕೃತಿಕ ರಂಗದಲ್ಲಿ ಕಾಸರಗೋಡಿನ ಹಲವಾರು ಗಣ್ಯರು ತಮ್ಮ ಸಾಧನೆ …