ಪ್ರಧಾನಮಂತ್ರಿ ಹುಟ್ಟುಹಬ್ಬ: ಬಿಜೆಪಿಯಿಂದ  ಗೋಸಾಡ ಕ್ಷೇತ್ರದಲ್ಲಿ ವಿಶೇಷ ಪೂಜೆ

ಬದಿಯಡ್ಕ: ಪ್ರಧಾನಮಂತ್ರಿ ನರೇಂದ್ರಮೋದಿಯವರ ೭೬ನೇ ಜನ್ಮ ದಿನಾಚರಣೆಯಂಗವಾಗಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಗೋಸಾಡ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ವಿಶೇಷ ಹೂವಿನ ಪೂಜೆ ನಡೆಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾ ಯಿತು.  ಬಿಜೆಪಿ ಕಲ್ಲಿಕೋಟೆ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ ನಾರಂಪಾಡಿ, ಬದಿಯಡ್ಕ ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ, ಪ್ರಧಾನ ಕಾರ್ಯದರ್ಶಿ ಪ್ರಮೋದ್ …

ಬಿ ಸಿ ರೋಡ್ ಕಾಲುದಾರಿಯಲ್ಲಿ ಕೇಬಲ್ ವಯರ್ ತುಂಬಿಕೊಂಡು ಪಾದಚಾರಿಗಳಿಗೆ ಅಪಾಯ ಭೀತಿ

ಕಾಸರಗೋಡು: ಎಷ್ಟೇ ಅನುಭವ ಉಂಟಾದರೂ ಅಧಿಕಾರಿ ವರ್ಗ ಕಲಿಯದು ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದೆ ಕಾಲುದಾರಿಯಲ್ಲಿ ಬೇಕಾಬಿಟ್ಟಿ ತುಂಬಿಕೊಂಡಿರುವ ಕೇಬಲ್ ವಯರ್‌ಗಳು. ಇದು ಬೇರೆಲ್ಲೋ ಅಧಿಕಾರಿ ವರ್ಗಗಳ ಕಣ್ಣಿಗೆ ಕಾಣದ ಸ್ಥಳವಲ್ಲ. ವಿದ್ಯಾನಗರದಿಂದ ಬಿ ಸಿ ರೋಡ್‌ನತ್ತ ಸಾಗುವ ಸರ್ವೀಸ್ ರಸ್ತೆಯ ಬದಿಯ ಕಾಲುದಾರಿಯಲ್ಲಿ ಕೇಬಲ್ ವಯರ್ ಎಲ್ಲೆಂದರಲ್ಲಿ ಬಿದ್ದುಕೊಂಡು, ಜೋತಾಡಿಕೊಂಡು ಕಂಬಗಳಲ್ಲಿ ಸುತ್ತಿ ಇಟ್ಟ ಸ್ಥಿತಿಯಲ್ಲಿ ಕಂಡು ಬರುತ್ತಿದೆ. ಕಾಲುದಾರಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವವರು ಹೆಚ್ಚುತ್ತಿದ್ದು, ಇದರ ಮಧ್ಯೆ ನುಸುಳಿ ತೆರಳುವ ವೇಳೆ ಕೇಬಲ್ ವಯರ್‌ಗಳು ಸಿಲುಕಿಕೊಳ್ಳುತ್ತಿದ್ದು, ಜನರಿಗೆ …

ಇ.ಎಂ. ಇಬ್ರಾಹಿಂ ನಿಧನ

ಕಾಸರಗೋಡು: ತಳಂಗರೆ ಖಾಸಿಲೈನ್ ನಿವಾಸಿ ಹಾಗೂ ಹೊನ್ನೆಮೂಲೆಯಲ್ಲಿ ವಾಸಿಸುತ್ತಿದ್ದ ಇ.ಎಂ. ಇಬ್ರಾಹಿಂ (64) ನಿಧನ ಹೊಂದಿದರು. ಈ ಹಿಂದೆ ಕೊಲ್ಲಿಯಲ್ಲಿದ್ದರು. ಮುಸ್ಲಿಂಲೀಗ್‌ನ ಸಕ್ರಿಯ ಕಾರ್ಯಕರ್ತನಾಗಿದ್ದರು. ಮೃತರು ಪತ್ನಿ ಖದೀಜ, ಪುತ್ರಿ ಫೌಸಿಯಾ, ಅಳಿಯ ಸಮೀರ್ ಬಂಗಾರಗುಡ್ಡೆ, ಸಹೋದರರಾದ ಹನೀಫ್, ರಜಾಕ್, ಅಬ್ದುಲ್ ರಹ್ಮಾನ್, ಸಹೋದರಿಯರಾದ ಆಮಿನ, ಸಫಿಯಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಪಾಕತಜ್ಞ ಧರ್ಮತ್ತಡ್ಕ ನಿವಾಸಿ ನಿಧನ

ಪೆರ್ಮುದೆ: ಈ ಹಿಂದೆ ಧರ್ಮತ್ತಡ್ಕದಲ್ಲಿ ಹೋಟೆಲ್ ನಡೆಸುತ್ತಿದ್ದ ಧರ್ಮತ್ತಡ್ಕ ನಿವಾಸಿ, ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ಕರ್ವಜೆ ವಂಕಟರಮಣ ಭಟ್ (73) ನಿನ್ನೆ ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಹೋಟೆಲ್ ವೆಂಕಟ್ರಮಣ ಭಟ್ರು ಎಂದೆ ಪ್ರಚಾರದಲ್ಲಿದ್ದ ಇವರು ಪಾಕ ತಜ್ಞರಾಗಿದ್ದರು. ರುಚಿಕರ ಹೋಳಿಗೆ ತಯಾರಿಯಲ್ಲಿ ಸಿದ್ಧಹಸ್ತರಾಗಿದ್ದರು. ಮೃತರು ಪತ್ನಿ ದೇವಕಿ, ಪುತ್ರ ಗಣೇಶ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಯುವಕ ಸಂಘ ಧರ್ಮತ್ತಡ್ಕ ಸಂತಾಪ ಸೂಚಿಸಿದೆ.