ಆಸ್ಟರ್ ಮಿಮ್ಸ್‌ನಲ್ಲಿ ಹೃದಯ ರೋಗ ನಿರ್ಣಯ ಶಿಬಿರ

ಕಾಸರಗೋಡು: ವಿಶ್ವ ಹೃದಯ ದಿನಾಚರಣೆಯಂಗವಾಗಿ ಕಾಸರಗೋಡು ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ಈ ತಿಂಗಳ 29ರವರೆಗೆ ಹೃದಯರೋಗ ನಿರ್ಣಯ ಶಿಬಿರದಲ್ಲಿ ಇಸಿಜಿ ಹಾಗೂ ಡಾಕ್ಟರ್ ತಪಾಸಣೆ ಶುಲ್ಕರಹಿತ ಮಾಡಲಾಗಿದೆ. ಆದಿತ್ಯವಾರಗಳಂದು ಈ ಸೇವೆ ಲಭ್ಯವಿದೆ. ಅಲ್ಲದೆ ಹೃದಯರೋಗ ತಜ್ಞರಿಂದ ತಪಾಸಣೆ, ಇಸಿಜಿ, ಎಕ್ಕೊ ಸ್ಕ್ರೀನಿಂಗ್, ಟಿಎಂಟಿ ತಪಾಸಣೆ, ಹಿಮೋಗ್ಲೋಬಿನ್ ಸಹಿತ ವಿವಿಧ ತಪಾಸಣೆಗಳು ಒಳಗೊಂಡ ೯೫೦ ರೂ.ಗಳ ಯೋಜನೆಯನ್ನು ಜ್ಯಾರಿಗೊಳಿಸಲಾಗಿದೆ. 

ನೇಶನಲ್ ವಿಶ್ವಕರ್ಮ ಫೆಡರೇಶನ್ ಜಿಲ್ಲಾ ಸಮಿತಿಯಿಂದ ವಿಶ್ವಕರ್ಮ ದಿನಾಚರಣೆ

ಕಾಸರಗೋಡು: ನೇಶನಲ್ ವಿಶ್ವಕರ್ಮ ಫೆಡರೇಶನ್ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕರಂದಕ್ಕಾಡ್ ಜಿಲ್ಲಾ ಸಮಿತಿ ಕಚೇರಿಯಲ್ಲಿ ವಿಶ್ವಕರ್ಮ ದಿನಾಚರಣೆ ಹಾಗೂ ವಿಶೇಷ ಪೂಜೆ ನಡೆಯಿತು. ಕಾರ್ಯಕ್ರಮವನ್ನು ರಾಷ್ಟ್ರೀಯ ಅಧ್ಯಕ್ಷ ಸೀತಾರಾಮ ಆಚಾರ್ಯ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಸಿ.ಕೆ. ಅಂಬಿ ಅಧ್ಯಕ್ಷತೆ ವಹಿಸಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಘವನ್ ಕೊಳತ್ತೂರು, ರಾಜನ್ ಮನ್ನಿಪ್ಪಾಡಿ, ಓಮನ ಅಂಬಿ, ಎ.ಕೆ. ರಾಮಕೃಷ್ಣನ್, ವಿನಿತಾ ನೀರ್ಚಾಲ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ನಿಶಾಚಂದ್ರನ್ ಸ್ವಾಗತಿಸಿ, ಕೋಶಾಧಿಕಾರಿ ವಿಷ್ಣು ಆಚಾರ್ಯ ವಂದಿಸಿದರು.ವಿಶ್ವಕರ್ಮ ದಿನದಂದು ಸಾರ್ವತ್ರಿಕ ರಜೆ ಘೋಷಿಸಬೇಕೆಂದು …

ವಿಶ್ವಕರ್ಮ ಜಯಂತಿ: ಬಿಎಂಎಸ್‌ನಿಂದ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ

ಕಾಸರಗೋಡು: ವಿಶ್ವಕರ್ಮ ಜಯಂತಿ ದಿನವಾದ ನಿನ್ನೆ ಬಿಎಂಎಸ್ ನೇತೃತ್ವದಲ್ಲಿ ರಾಷ್ಟ್ರೀಯ ಕಾರ್ಮಿಕರ ದಿನ ಆಚರಿಸಲಾಯಿತು. ಕಾಸರಗೋಡು ಹಾಗೂ ಮಧೂರು ವಲಯಗಳ ಸಂಯುಕ್ತ ಆಶ್ರಯದಲ್ಲಿ ಮೆರವಣಿಗೆ ಮತ್ತು ಸಾರ್ವಜನಿಕ ಸಭೆ ಜರಗಿತು.  ಬಿಎಂಎಸ್ ಜಿಲ್ಲಾ ಜಂಟಿ ಕಾರ್ಯದರ್ಶಿ ಗುರುದಾಸ್ ಮಧೂರು ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ಉಪೇಂದ್ರನ್ ಕೋಟೆಕಣಿ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಪ್ರಧಾನ ಭಾಷಣ ಮಾಡಿದರು. ಬಿಎಂಎಸ್ ಮಧೂರು ವಲಯ ಅಧ್ಯಕ್ಷ ವಸಂತ ನಾಯಕ್ ಶುಭ ಹಾರೈಸಿದರು. ಜಿಲ್ಲಾ ಕೋಶಾಧಿಕಾರಿ ಮನೀಶ್, ಜಂಟಿ ಕಾರ್ಯದರ್ಶಿಗಳಾದ ಭಾಸ್ಕರನ್ …

ಬದಿಯಡ್ಕ ಪಂ.ನಿಂದ ಫಲಾನುಭವಿಗಳ ಸಭೆ,: ಪ್ರಧಾನಿ ನರೇಂದ್ರಮೋದಿಯವರ ಜನ್ಮ ದಿನಾಚರಣೆ

ಬದಿಯಡ್ಕ: ಕೇಂದ್ರ ಸರಕಾರದ ಫಲಾನುಭವಿಗಳ ಸಭೆ ಹಾಗೂ ಪ್ರಧಾನಮಂತ್ರಿ ನರೇಂದ್ರಮೋದಿಯವರ ಜನ್ಮ ದಿನಾಚರಣೆ ಪ್ರಯುಕ್ತ ದೀಪ ಪ್ರಜ್ವಲನೆ ಕಾರ್ಯಕ್ರಮ ನಿನ್ನೆ ಬದಿಯಡ್ಕ ಪಂಚಾಯತ್ ಸಿಡಿಎಸ್ ಹಾಲ್‌ನಲ್ಲಿ ನಡೆಯಿತು. ನಿವೃತ್ತ ಪ್ರಾಂಶುಪಾಲ ನಾರಾಯಣ ಭಟ್ ಮೈರ್ಕಳ ದೀಪ ಪ್ರಜ್ವಲನೆಗೈದು ಮಾತನಾಡಿ ಕೇಂದ್ರ ಸರಕಾರದ ವಿವಿಧ ಜನಪರ ಯೋಜನೆಗಳು ಸಮಾಜದ ವಿವಿಧ ವರ್ಗಗಳ ಜನರಿಗೆ ನೆರವಾಗು ತ್ತಿದ್ದು ಅರ್ಹ ಫಲಾನುಭವಿಗಳು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಬದಿಯಡ್ಕ ಪಂಚಾಯತ್ ಅಧ್ಯಕ್ಷ ಶಂಕರ ಡಿ ಉದ್ಘಾಟಿಸಿ ಮಾತನಾಡಿದರು.  ಯುಪಿಐ, ಆಧಾರ್ …

ಡಾ| ವಿದ್ಯಾಮೋಹನ್‌ದಾಸ್ ರೈ ಅವರಿಗೆ ಪ್ರಥಮ ಡಾ| ಸಾಲಿಹ್ ಮುಂಡೋಳ್ ಪುರಸ್ಕಾರ

ಕಾಸರಗೋಡು: ಜನಪ್ರಿಯ ವೈದ್ಯ ಹಾಗೂ ಪರಿಸರ ಜೀವವೈವಿಧ್ಯ ಸಂರಕ್ಷಣಾ ಹೋರಾಟಗಾರರಾಗಿದ್ದ ದಿ| ಡಾ| ಸಾಲಿಹ್ ಮುಂಡೋಳ್  ಅವರ ಸ್ಮರಣಾರ್ಥ ನೀಡುವ  ಪ್ರಥಮ ಡಾ| ಸಾಲಿಹ್ ಮುಂ ಡೋಳ್ ಪುರಸ್ಕಾರಕ್ಕೆ  ಬೆಳ್ಳೂರು ನಾಟೆಕಲ್ಲಿನಲ್ಲಿ ಆಯುರ್ವೇದ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಡಾ| ವಿದ್ಯಾಮೋಹನ್‌ದಾಸ್ ರೈ ಆಯ್ಕೆಯಾಗಿದ್ದಾರೆ. ೪೦ ವರ್ಷ ಗಳಿಗೂ ಹೆಚ್ಚು ಕಾಲ ವೈದ್ಯಕೀಯ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ    ಈ ಪುರಸ್ಕಾರ ನೀಡಲಾಗುತ್ತಿದೆ.  ಪ್ರೊ| ಎಂ.ಎ. ರೆಹಮಾನ್, ಮುಕುಂದನ್ ಪಿ.ಕೆ, ಮೋಹನನ್ ಮಾಂಙಾಡ್, ಶ್ರೀಜಾ ಪುರುಷೋತ್ತಮನ್, …