ನಕಲಿ ನಂಬ್ರ ಪ್ಲೇಟ್ ಲಗತ್ತಿಸಿದ ಕಾರು ಪತ್ತೆ: ಇಬ್ಬರ ಸೆರೆ

ಕುಂಬಳೆ: ನಕಲಿ ನಂಬ್ರ ಪ್ಲೇಟ್ ಲಗತ್ತಿಸಿದ ಕಾರು ಸಹಿತ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಯ್ಯಾರು ಮೇರ್ಕಳ ಕಯ್ಯಾರು ಹೌಸ್‌ನ ಮೂಸಾ ಅಫ್ಸಲ್ (26) ಮತ್ತು ಇಚ್ಲಂಪಾಡಿ ಗ್ರಾಮದ ಪಚ್ಚಂಬಳ ಪಳ್ಳತ್ತೊಟ್ಟಿ ನಿಜಾಮ್ ಮಂಜಿಲ್‌ನ ನಿಜಾಮುದ್ದೀನ್ (19) ಬಂಧಿತ ಆರೋಪಿಗಳು. ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಗಣೇಶನ್ ಕೆ.ಪಿ.ಯವರ ನೇತೃತ್ವದ ಪೊಲೀಸರ ತಂಡ ನಿನ್ನೆ ಸಂಜೆ ತಮ್ಮ ವಾಹನದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಕಯ್ಯಾರು ಗ್ರಾಮದ ಚೇವಾರಿನ ರೆಸೋರ್ಟ್‌ನ ಬಳಿ ಶಂಕಾಸ್ಪದ ರೀತಿಯಲ್ಲಿ ಕಾರನ್ನು …

ಕೇರಳದಲ್ಲಿ ಅಕ್ರಮವಾಗಿ ಠಿಕಾಣಿ ಹೂಡಿದ ಬಾಂಗ್ಲಾದೇಶೀಯರು: ಕೇಂದ್ರ ತನಿಖಾ ತಂಡದಿಂದ ಕಾಸರಗೋಡಿನಲ್ಲೂ ತನಿಖೆ

ಕಾಸರಗೋಡು:  ಬಾಂಗ್ಲಾ ದೇಶದಿಂದ ಅಕ್ರಮವಾಗಿ ಭಾರತದೊ ಳಗೆ ನುಸುಳಿ ದೇಶದ ವಿವಿಧ ರಾಜ್ಯ ಗಳಲ್ಲಿ ಅಕ್ರಮವಾಗಿ ನೆಲೆಯೂರ ತೊಡಗಿರುವ ಬಾಂಗ್ಲಾ ದೇಶಿಯರು ಈಗ ಕೇರಳಕ್ಕೂ ಪ್ರವೇಶಿಸಿ ಭಾರೀ ಸಂಖ್ಯೆಯಲ್ಲಿ ನೆಲೆಯೂರತೊಡಗಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಕೇಂದ್ರ ಗುಪ್ತಚರ ವಿಭಾಗಕ್ಕೆ ಲಭಿಸಿದೆ. ಇದರಂತೆ ಅದರ ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸಲಾಗಿದೆ. ಭಾರತದ ಗಡಿ ಪ್ರದೇಶಗಳಲ್ಲಿ ನೆಲೆಸಿರುವ ಅಕ್ರಮ ವಿದೇಶಿ ವಲಸಿಗರನ್ನು ಪತ್ತೆಹಚ್ಚಲು  ಕೇಂದ್ರ ಚುನಾವಣಾ ಆಯೋಗ ಎಸ್‌ಐಆರ್ ಕ್ರಮ ಆರಂಭಿಸಿದ್ದು, ಇದರಿಂದಾಗಿ ಅಂತಹ ರಾಜ್ಯಗಳಲ್ಲಿ ಅಕ್ರಮವಾಗಿ  ನೆಲೆಸಿರುವ ಬಾಂಗ್ಲಾದೇಶದವರು  ಹೆದರಿ …

ಅಪಘಾತದಿಂದ ಆಟೋ ರಿಕ್ಷಾದೊಳಗೆ ಸಿಲುಕಿಕೊಂಡ ಚಾಲಕನನ್ನು ರಕ್ಷಿಸಿದ ಅಗ್ನಿಶಾಮಕದಳ: ಪ್ರಯಾಣಿಕರಿಗೂ ಗಾಯ

ಕಾಸರಗೋಡು: ಕಾರು ಮತ್ತು ಆಟೋ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದೊಳಗೆ ಸಿಲುಕಿಕೊಂಡ ಚಾಲಕನನ್ನು  ಅಗ್ನಿಶಾಮಕದಳ  ರಕ್ಷಿಸಿದ ಘಟನೆ  ಕಲ್ಲಕಟ್ಟ ಎಂಬಲ್ಲಿ ನಿನ್ನೆ ನಡೆದಿದೆ. ಚೆಂಗಳ ಬಾರಿಕ್ಕಾಡಿನ ಪಿ.ಬಿ. ದಾಮೋದರನ್ (63) ಗಾಯ ಗೊಂಡು ಆಸ್ಪತ್ರೆಯಲ್ಲಿ ದಾಖಲಾದ ಆಟೋ ಚಾಲಕನಾಗಿದ್ದಾರೆ. ಇದೇ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಕಲ್ಲಕಟ್ಟ ನಿವಾಸಿಗಳಾದ ರಾಜೇಶ್ವರಿ (48) ಮತ್ತು  ಎಂಡೋಸಲ್ಫಾನ್ ಸಂತ್ರಸ್ತೆಯಾಗಿರುವ ಪುತ್ರಿ ಅಂಜಲಿ (23)  ಕೂಡಾ ಗಾಯಗೊಂಡಿದ್ದು, ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರಾಜೇಶ್ವರಿ ಹಾಗೂ ಅಂಜಲಿ  ಅಣಂಗೂರಿನ …

ಲೀಗ್ ನೇತಾರ ನಿಧನ

ಕುಂಬಳೆ: ಲೀಗ್ ನೇತಾರ ನಾದ  ಕುಂಬಳೆ ಬದ್ರಿಯಾನಗರದ ಸೈನುದ್ದೀನ್ (68) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನಹೊಂದಿದರು.  ಇವರಿಗೆ ಅಲ್ಪಕಾಲದಿಂದ ಅಸೌಖ್ಯ ಬಾಧಿಸಿದ್ದು,  ಚಿಕಿತ್ಸೆ ಪಡೆಯುತ್ತಿ ದ್ದರು.  ಮುಸ್ಲಿಂ ಲೀಗ್ ಬದ್ರಿಯಾ ನಗರ ವಾರ್ಡ್ ಮಾಜಿ ಅಧ್ಯಕ್ಷ, ಮಂಡಲ ಕಾರ್ಯದರ್ಶಿಯಾಗಿದ್ದ   ಇವರು ರಿಯಾದ್ ಕೆಎಂಸಿಸಿಯ  ಮಾಜಿ ನೇತಾರನಾಗಿದ್ದಾರೆ. ಮೃತರು ಪತ್ನಿ ಆತಿಕ, ಮಕ್ಕಳಾದ ಅಸೀಂ, ಸಮೀರ, ತಾಹಿರ, ಮುನೀರ, ಅಳಿಯಂದಿ ರಾದ ದಾವೂದ್, ಆಶಿಫ್, ಮುಕ್ತಾರ್, ಸಹೋದರ-ಸಹೋ ದರಿಯರಾದ  ಮೊಹಮ್ಮದ್, ಇಬ್ರಾಹಿಂ, ಅಂದಾನಿ, ಆಯಿಶಾಬಿ ಹಾಗೂ ಅಪಾರ ಬಂಧು-ಮಿತ್ರರನ್ನು …

ಜ್ವರ ಉಲ್ಬಣಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ನಿಧನ

ಕುರುಡಪದವು: ಜ್ವರ ಉಲ್ಬಣಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೇಕರಿ ನೌಕರ ಮೃತಪಟ್ಟ ಘಟನೆ ನಡೆದಿದೆ. ಕುರುಡಪದವು ಬಳಿಯ ಬಂಡಿಮಾರ್ ಕುರಿಯ ನಿವಾಸಿ ದಿ| ರಾಮಣ್ಣ ಭಂಡಾರಿಯವರ ಪುತ್ರ ಮನೋಜ್ ಕುಮಾರ್ (43) ಮೃತಪಟ್ಟವರು. ಇವರು ಮಂಗಳೂರಿನ ಬಿ.ಸಿ ರೋಡ್‌ನಲ್ಲಿ ಸಹೋದರ ಪ್ರಶಾಂತ್‌ರ ಬೇಕರಿಯಲ್ಲಿ ದುಡಿಯುತ್ತಿದ್ದರು. ಹಲವು ದಿನಗಳ ಹಿಂದೆ ಜ್ವರ ತಗಲಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಉಲ್ಬಣಗೊಂಡಿದ್ದು, ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆ ದಿದ್ದರು. ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಕುರುಡಪದವು ಶ್ರೀರಾಮ್ ಫ್ರೆಂಡ್ಸ್ ಕ್ಲಬ್, ಶ್ರೀರಾಮ …

ಹೊಯ್ಗೆ ಕೊಳ್ಳೆ ವಿರುದ್ಧ ಕಠಿಣ ಕ್ರಮ ತೀವ್ರಗೊಳಿಸಿದ ಕುಂಬಳೆ ಪೊಲೀಸ್ : ಮೊಗ್ರಾಲ್, ಶಿರಿಯದಲ್ಲಿ ಮೂರು ದೋಣಿ, ಎರಡು ಕಡವುಗಳ ನಾಶ

ಕುಂಬಳೆ: ಅನಧಿಕೃತ ಹೊಯ್ಗೆ ಸಂಗ್ರಹ, ಸಾಗಾಟದ ವಿರುದ್ಧ ಕುಂಳೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ನಿನ್ನೆ ಎರಡು ಕಡೆಗಳಲ್ಲಿ ನಡೆಸಿದ ದಾಳಿಯಲ್ಲಿ ಪೊಲೀಸರು ಎರಡು ಅನಧಿಕೃತ ಕಡವುಗಳನ್ನು ಹಾಗೂ ಹೊಯ್ಗೆ ಸಂಗ್ರಹಕ್ಕೆ ಬಳಸಿದ ಮೂರು ದೋಣಿಗಳನ್ನು ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ. ಮೊಗ್ರಾಲ್ ಕೆಕೆ ಪುರದಲ್ಲಿ ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆ ವೇಳೆ ಕಾಂಡ್ಲಾ ಕಾಡುಗಳ ಮಧ್ಯೆ ಬಚ್ಚಿಟ್ಟ ಸ್ಥಿತಿಯಲ್ಲಿ ಎರಡು ದೋಣಿಗಳು ಪತ್ತೆಯಾಗಿವೆ. ಅವುಗಳನ್ನು ದಡಕ್ಕೆ ತಲುಪಿಸಿ  ಜೆಸಿಬಿಯಿಂದ ನಾಶಗೊಳಿ ಸಲಾಗಿದೆ. ಅಲ್ಲದೆ ಅಲ್ಲಿನ ಅನಧಿಕೃತ ಕಡವನ್ನು ಕೂಡಾ  …

ಕರ್ನಾಟಕ ಮದ್ಯ ಮಾರಾಟಕ್ಕೆ  ಯತ್ನಿಸಿದ  ವ್ಯಕ್ತಿ ಸೆರೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಕರ್ನಾಟಕ ಮದ್ಯ ಮಾರಾಟಗೈಯ್ಯಲು ತಲುಪಿದ ವ್ಯಕ್ತಿ ಸೆರೆಗೀಡಾಗಿದ್ದಾನೆ. ಉಳ್ಳಾಲ ನಿವಾಸಿಯಾದ  ನವೀನ್ ಕುಮಾರ್ (59) ಎಂಬಾತನನ್ನು ಕುಂಬಳೆ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಎ.ಬಿ. ಅಬ್ದುಲ್ಲ, ಸಿವಿಲ್ ಎಕ್ಸೈಸ್ ಆಫೀಸರ್ ಟಿ. ಕಣ್ಣನ್ ಕುಂಞಿ ನೇತೃತ್ವದಲ್ಲಿ ಬಂಧಿಸಲಾಗಿದೆ. ಬಂಧಿತನ ಕೈಯಿಂದ ೪.೧೪ ಲೀಟರ್  ಕರ್ನಾಟಕ ಮದ್ಯವನ್ನು ವಶಪಡಿಸಲಾಗಿದೆ. ನಿನ್ನೆ ಬೆಳಿಗ್ಗೆ ಕಂಚಿಕಟ್ಟೆಗೆ ತೆರಳುವ ರಸ್ತೆಯಲ್ಲಿ  ನಿಂತಿದ್ದ  ನವೀನ್‌ಕುಮಾರ್‌ನನ್ನು ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಚೀಲದಲ್ಲಿ ಮದ್ಯ ಪತ್ತೆಯಾಗಿದೆ.

ಡಾಕ್ಟರ್ ಇಲ್ಲದ ವೇಳೆ ಚಾಲಕನಿಂದ ತಪಾಸಣೆ

ಕಾನ್ಪುರ: ಡಾಕ್ಟರ್ ಇಲ್ಲದಿರುವಾಗ ಸರಕಾರಿ ಆಸ್ಪತ್ರೆಗೆ ತಲುಪಿದ ರೋಗಿಗಳನ್ನು ಚಾಲಕ ಪರಿಶೀಲಿಸಿ ಚಿಕಿತ್ಸೆ ನಿರ್ದೇಶಿಸಿದ ಘಟನೆ ನಡೆದಿದೆ. ಈತ ಔಷಧಿ ಖರೀದಿಸಲು ಹೊರಗೆ ಚೀಟಿ ಬರೆದು ನೀಡಿದ ಬಗ್ಗೆಯೂ ತಿಳಿದು ಬಂದಿದೆ. ಉತ್ತರಪ್ರದೇಶದ ಕಾನ್ಪುರದ ಪ್ರಸಿದ್ಧ ಸರಕಾರಿ ಆಸ್ಪತ್ರೆಯಾದ ಕಾನ್ಶಿರಾಮ್ ಜೋಯಿಂಟ್ ಹಾಸ್ಪಿಟಲ್ ಆಂಟ್ ಟ್ರೋಮಾ ಸೆಂಟರ್‌ನಲ್ಲಿ ಘಟನೆ ನಡೆದಿದೆ. ಒಂದು ಕೇಸಿನ ವಿಷಯದಲ್ಲಿ ನ್ಯಾಯಾಲಯಕ್ಕೆ ಡಾಕ್ಟರ್ ತೆರಳಿದ್ದಾಗ ಅವರ ಚಾಲಕ ಡಾಕ್ಟರ್‌ರ ಕೊಠಡಿಗೆ ಪ್ರವೇಶಿಸಿ ಔಷಧಿ ನಿರ್ದೇಶಿಸಿರುವುದಾಗಿ ತಿಳಿದು ಬಂದಿದೆ. ಆಸ್ಪತ್ರೆಗೆ ತಲುಪಿದ ರೋಗಿಗಳನ್ನು ಒಳಗೆ …

ವಳಯಂ ಗ್ರಾಮದ ಮೊದಲ ವೈದ್ಯ ಅಬ್ಸರ್ ಫವಾಸ್

ಕುಂಬಳೆ: ಎಂಬಿಬಿಎಸ್ ಪರೀಕ್ಷೆಯಲ್ಲಿ ಮಂಗಲ್ಪಾಡಿಯ ವಳಯಂ ನಿವಾಸಿಯಾದ ಅಬ್ಸರ್ ಪವಾಸ್ ಹೆಚ್ಚು ಅಂಕಗಳಿಸಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ವಳಯಂ ಗ್ರಾಮದ ಮೊದಲ ವೈದ್ಯರಾಗಿ ಅಬ್ಸರ್ ಪವಾಸ್ ಗುರುತಿಸಲ್ಪ ಟ್ಟಿದ್ದಾರೆ. ಇವರು ಮುಂಬೈಯ  ಅಬೂಬಕ್ಕರ್ ಹಾಗೂ ಫೌಸಿಯಾ ಅಬೂಬಕ್ಕರ್ ದಂಪತಿಯ ಪುತ್ರನಾಗಿದ್ದಾರೆ.  ಫವಾಸ್‌ರ ಪ್ರಾಥಮಿಕ ಶಿಕ್ಷಣ ಮುಂಬೈಯಲ್ಲಿ ನಡೆದಿತ್ತು. ಅನಂತರ ಮುಟ್ಟಂ, ಕುಂಬಳೆ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಶಿಕ್ಷಣ ಪೂರ್ತಿಗೊಳಿಸಿದ್ದಾರೆ. ಪ್ಲಸ್‌ಟು  ಬಳಿಕ ನೀಟ್ ಪರೀಕ್ಷೆಗಾಗಿ ಪಾಲಾದ ಕೋಚಿಂಗ್ ಸೆಂಟರ್‌ಗೆ ಸೇರಿದ್ದಾರೆ.  ಪರೀಕ್ಷೆಯಲ್ಲಿ ಉತ್ತೀರ್ಣನಾದ ಬಳಿಕ ತಿರುವನಂತಪುರ ಮೆಡಿಕಲ್ …

ಗಿಳಿವಿಂಡು: ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಾಳೆ

ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಇದರ ಆಶ್ರಯದಲ್ಲಿ ನೂತನ ವರ್ಷದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಾಳೆ ಅಪರಾಹ್ನ 2.30ಕ್ಕೆ ಮಂಜೇಶ್ವರ ಗಿಳಿವಿಂಡುನಲ್ಲಿ ನಡೆಯಲಿದೆ. ಟ್ರಸ್ಟ್‌ನ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಉದ್ಘಾಟಿಸು ವರು. ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಸೈಫುಲ್ಲ ತಂಙಳ್, ಪಂ. ಅಧ್ಯಕ್ಷ ಬಶೀರ್ ಕನಿಲ, ಜಿ.ಪಂ. ಸದಸ್ಯ ಹರ್ಷಾದ್ ವರ್ಕಾಡಿ, ಟ್ರಸ್ಟ್‌ನ ಟ್ರಸ್ಟಿ ಡಾ. ಎಂ. …