ಪೈವಳಿಕೆ ಕೆಎಸ್‌ಇಬಿ ಕಚೇರಿಗೆ ಬಿಜೆಪಿ ದೊಂದಿ ಮೆರವಣಿಗೆ

ಪೈವಳಿಕೆ: ನಿರಂತರ ವಿದ್ಯುತ್ ಮೊಟಕು ಉಂಟಾಗುತ್ತಿರುವುದನ್ನು ಪ್ರತಿಭಟಿಸಿ ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಕೆಎಸ್‌ಇಬಿಗೆ ದೊಂದಿ ಮೆರವಣಿಗೆ ನಡೆಸಲಾಯಿತು. ಜಿಲ್ಲಾ ಕಾರ್ಯ ದರ್ಶಿ ಲೋಕೇಶ್ ನೋಂಡ ಉದ್ಘಾಟಿಸಿದರು. ಸತ್ಯಶಂಕರ ಭಟ್ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಮಾತನಾಡಿದರು. ವಿದ್ಯುತ್ ಕಡಿತದಿಂದ ಅಡಿಕೆ, ತೆಂಗು ಕೃಷಿಕರು, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ಎಲ್ಲಾ ಉಚಿತ ನೀಡುತ್ತೇವೆ ಎಂದು ಅಧಿಕಾರಕ್ಕೇರಿದ ಸರಕಾರ ಪವರ್‌ಕಟ್ ಕೂಡಾ ಉಚಿತವಾಗಿ ನೀಡುತ್ತಿದೆ ಎಂದು ಅಪಹಾಸ್ಯ ಮಾಡಿದರು. ಮುಖಂಡರಾದ …

ಪ್ರಾಕೃತಿಕ ಸಂಪನ್ಮೂಲಗಳ ಶೋಷಣೆ ತಡೆಯಲು ಆಪರೇಶನ್ ತೂಫಾನ್ ಮಾದರಿಯಲ್ಲಿ ಕಾರ್ಯಾಚರಣೆ ನಡೆಯಬೇಕು-ಕೇಶವ ನಾಯಕ್

ಕುಂಬಳೆ: ಮಂಜೇಶ್ವರ ತಾಲೂಕಿನ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ  ಅನಧಿಕೃತ ಪ್ರಾಕೃತಿಕ ಸಂಪನ್ಮೂಲಗಳ ಕೊಳ್ಳೆ ಹೊಡೆಯುವುದರ ವಿರುದ್ಧ ಮೈನಿಂಗ್ ಆಂಡ್ ಜಿಯೋಲಜಿ ಇಲಾಖೆ ಆಪರೇಶನ್ ತೂಫಾನ್ ಮಾದರಿಯಲ್ಲಿ  ಕಾರ್ಯಾಚರಣೆ ಆರಂಭಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಕೇಶವ ನಾಯಕ್ ಕುಂಬಳೆ ಪ್ರೆಸ್ ಫಾರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.  ಕೊಯಿಪ್ಪಾಡಿ, ಪುತ್ತಿಗೆ, ಬಾಯಾರು ಗ್ರಾಮಗಳ ಅನಂತಪುರ, ಪಾದೆಕಲ್ಲು, ಪೈವಳಿಕೆ ಮೊದಲಾದ ಪ್ರದೇಶಗಳಿಂದ ಮಣ್ಣು, ಕೆಂಪುಕಲ್ಲು ಸಹಿತ ಪ್ರಕೃತಿ ಸಂಪನ್ಮೂಲಗಳನ್ನು ಕಾನೂನು ವಿರುದ್ಧವಾಗಿ  ಕೊಳ್ಳೆಹೊಡೆಯುತ್ತಿ ರುವುದು ಮುಂದುವರಿಯುತ್ತಿದೆ. ಕರ್ನಾಟಕ ಸಹಿತ ನೆರೆ ರಾಜ್ಯಗಳಿಗೆ  …

ಮಂಗಳೂರು- ಕಾಸರಗೋಡು ರೂಟ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ :ಉಪ್ಪಳ, ಹೊಸಂಗಡಿ, ಮಂಜೇಶ್ವರದವರಿಗೆ ನಿತ್ಯವೂ ಪರದಾಟ

ಹೊಸಂಗಡಿ: ಕಾಸರಗೋಡು- ಮಂಗಳೂರು ರೂಟ್‌ನಲ್ಲಿ ಸಂಚರಿಸುವ ಕೇರಳ ರಾಜ್ಯ ಸಾರಿಗೆ ಬಸ್‌ಗಳಿಂದ ಪ್ರಯಾಣಿಕರಿಗೆ ಸಂಕಷ್ಟ ಹೆಚ್ಚುತ್ತಿದ್ದು, ಪ್ರಯೋಜನ ಕಡಿಮೆಯಾಗುತ್ತಿದೆ ಎಂದು ಪ್ರಯಾಣಿಕರು ದೂರುತ್ತಾರೆ. ಒಂದೆರಡಲ್ಲ ಹಲವಾರು ಸಮಸ್ಯೆಗಳ ಸುಳಿಯಿಂದ ಬಸ್ ಪ್ರಯಾಣಿಕರು ಸುಸ್ತಾಗುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರವೇ ಸಂಚರಿಸುವ ಈ ರೂಟ್‌ನಲ್ಲಿ ಇತರ ಬಸ್‌ಗಳನ್ನು ಆಶ್ರಯಿಸಿ ಸಂಚರಿಸಲು ಸಾಧ್ಯವಿಲ್ಲದ ಕಾರಣ ಕೆಲವೊಮ್ಮೆ ಗಂಟೆಗಳ ಕಾಲ ಬಸ್‌ಗಾಗಿ ಕಾಯಬೇಕಾಗುತ್ತದೆ. ಬಸ್‌ಗಳು ಸರ್ವೀಸ್ ರಸ್ತೆಯನ್ನು ಬಿಟ್ಟು ಹೆದ್ದಾರಿಯಲ್ಲಿ  ಸಂಚರಿಸುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಬೆಳಗ್ಗಿನ ಹೊತ್ತು ಕಾಸರಗೋಡಿನಿಂದ ಮಂಗಳೂರಿಗೆ ಸಂಜೆ …