ನೈತಿಕ ಗೂಂಡಾಗಿರಿ ಬೆದರಿಕೆ: ನಗ-ನಗದು ಎಗರಿಸಿದ ಪ್ರಕರಣ; ಐವರ ಸೆರೆ

ಕಾಸರಗೋಡು: ನೈತಿಕ ಗೂಂಡಾಗಿರಿ ಬೆದರಿಕೆಯೊಡ್ಡಿ ಯುವತಿ ಹಾಗೂ ಆಕೆಯ ಸ್ನೇಹಿತನ ನಗ-ನಗದು ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ೫ ಮಂದಿಯನ್ನು ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಪ್ರಮೋದ್ ನೇತೃತ್ವದ  ಪೊಲೀಸರು ಬಂಧಿಸಿದ್ದಾರೆ. ಮುಳಿಯಾರು ಪೊವ್ವಲ್‌ನ ಬಿ. ಶರೀಫ್ (೪೨), ಚೆರ್ಕಳ ಸಂತೋಷ್‌ನಗರದ ಮುಹಮ್ಮದ್ ಸಾಲೀಖ್ (22),  ಆಲಂಪಾಡಿಯ ಅಬ್ದುಲ್ ರಶೀದ್ (36), ಚೆಂಗಳ ನಾಲ್ಕನೇ ಮೈಲು ನಿವಾಸಿಗಳಾದ ಉಮ್ಮರ್ ಮುಕ್ತಾರ್ (18), ಮುಹಮ್ಮದಲಿ ಶಿಹಾನ್ (20) ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿ ರಿಸಲಾಗಿದೆ. …

ನಕಲಿ ನಂಬ್ರಪ್ಲೇಟ್ : ಪೊಲೀಸರು ವಶಪಡಿಸಿದ  ಕಾರು ಮಳ್ಳಂಗೈ ನಿವಾಸಿಯದ್ದು

ಕುಂಬಳೆ: ನಕಲಿ ನಂಬ್ರಪ್ಲೇಟ್ ಲಗತ್ತಿಸಿದ ಕಾರು ವಶ ಪ್ರಕರಣದಲ್ಲಿ  ಪೊಲೀಸರು  ತನಿಖೆ ತೀವ್ರಗೊಳಿಸಿ ದ್ದಾರೆ. ಇದೇ ವೇಳೆ ವಶಕ್ಕೆ ತೆಗೆಯಲಾದ ಕಾರು ಮಳ್ಳಂಗೈ ನಿವಾಸಿಯಾದ ಅಲಿ ಮುಕ್ತಾದ್‌ರ ದ್ದೆಂದು ತಿಳಿದುಬಂದಿದೆ.  ವ್ಯಾಪಾರಿ ಯಾಗಿರುವ ಅಲಿ ಮುಕ್ತಾದ್‌ರನ್ನು ಅಗೋಸ್ತ್ ೩೧ರಂದು  ಬಂದ್ಯೋಡು ಬಳಿಯ ಅಡ್ಕ ಗುರ್ಮೆ ಎಂಬಲ್ಲಿ  ತಂಡವೊಂದು ತಡೆದು ನಿಲ್ಲಿಸಿ  ಹಲ್ಲೆಗೈದು  ಅವರ ಕಾರನ್ನು ಅಪಹರಿಸಿತ್ತು.  ಈ ಪ್ರಕರಣದಲ್ಲಿ ಪೊಲೀಸರು  ತನಿಖೆ ತೀವ್ರಗೊಳಿಸಿದ್ದು, ಇದೇ ವೇಳೆ ಮೊನ್ನೆ ಚೇವಾರು ರೆಸೋರ್ಟ್ ಬಳಿ ಶಂಕಾಸ್ಪದ ರೀತಿಯಲ್ಲಿ ಕಾರು ಪತ್ತೆಯಾಗಿತ್ತು. …

17ರ ಹರೆಯದ ಬಾಲಕಿಗೆ ಮದುವೆ : ತಂದೆ-ತಾಯಿ, ವರನ ವಿರುದ್ಧ ಕೇಸು

ಬದಿಯಡ್ಕ: ೧೭ರ ಹರೆಯದ ಬಾಲಕಿಗೆ  ಮದುವೆಮಾಡಿಸಿದ ಘಟನೆ ಬೆಳಕಿಗೆ ಬಂದಿದ್ದು, ಇದರಂತೆ ಬಾಲ್ಯವಿವಾಹ ನಿಷೇಧ ಕಾನೂನು ಪ್ರಕಾರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಉನ್ನತಿಯೊಂದರಲ್ಲಿ ವಾಸಿಸುವ  ಕುಟುಂಬದ ಸದಸ್ಯೆಯಾದ  17ರ ಹರೆಯದ  ಬಾಲಕಿಯನ್ನು ಮಂಗಳೂರು ನಿವಾಸಿಯಾದ  ಓರ್ವನಿಗೆ  ಕೆಲವು ದಿನಗಳ ಹಿಂದೆ  ಮದುವೆಮಾಡಿ ಕೊಡಲಾಗಿದೆ. ಈ ಬಗ್ಗೆ ಚೈಲ್ಡ್ ಡೆವಲಪ್‌ಮೆಂಟ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು  ಬಾಲಕಿಯ ತಂದೆ, ತಾಯಿ ಹಾಗೂ ವರನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.  …

100 ಅಡಿ ಆಳಕ್ಕೆ ಮಗುಚಿ ಬಿದ್ದ ಪೈಪ್ ಸಹಿತ ಸಾಗುತ್ತಿದ್ದ ಲಾರಿ : ಕ್ಯಾಬಿನ್‌ನೊಳಗೆ ಸಿಲುಕಿದ ಚಾಲಕನನ್ನು ಸಾಹಸಿಕವಾಗಿ ರಕ್ಷಣೆ

ಕಾಸರಗೋಡು: ಕರ್ನಾಟಕದಿಂದ ಕುಡಿಯುವ ನೀರು ವಿತರಣೆಗಾಗಿರುವ ಪೈಪ್‌ಗಳ ಸಹಿತ ಆಗಮಿಸುತ್ತಿದ್ದ ಲಾರಿ ಮಾಣಿಮೂಲ ಕುಳಿಂಜಾಲ್ ಎಂಬಲ್ಲಿಗೆ ಸಮೀಪ ನಿಯಂತ್ರಣ ತಪ್ಪಿ ನೂರು ಅಡಿ ಆಳಕ್ಕೆ ಮಗುಚಿದೆ. ನಿನ್ನೆ ರಾತ್ರಿ 10 ಗಂಟೆಗೆ ಈ ಅಪಘಾತ ಸಂಭವಿಸಿದೆ. ತಲೆಕೆಳಗಾಗಿ ಮಗುಚಿ ಬಿದ್ದ ಲಾರಿಯ ಕ್ಯಾಬಿನ್‌ನ ಒಳಗೆ ಚಾಲಕ ಸಿಲುಕಿಕೊಂಡಿದ್ದು, ಬಳಿಕ ಕ್ಯಾಬಿನ್ ಮುರಿದು ಚಾಲಕನನ್ನು ಮೇಲೆತ್ತಲಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಮತ್ತು ಸ್ಥಳೀಯರು ಜಂಟಿಯಾಗಿ ಅರ್ಧ ಗಂಟೆ ಕಾಲ ನಡೆಸಿದ ಸಾಹಸಿಕ ರಕ್ಷಣಾ ಕಾರ್ಯಾಚರಣೆ ಮೂಲಕ ಚಾಲಕನನ್ನು …

ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ: ಚಾಲಕ ಅಪಾಯದಿಂದ ಪಾರು

ಕಾಸರಗೋಡು: ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿಯಾಗಿದ್ದು ಚಾಲಕ ಸಂಭಾವ್ಯ ದುರಂತದಿಂದ ಅದೃಷ್ಟವಶಾತ್ ಪಾರಾದ ಘಟನೆ ನೆಲ್ಲಿಕಟ್ಟೆ ಬಳಿಯ ಅದ್ರುಕುಳಿಯಲ್ಲಿ ನಿನ್ನೆ ನಡೆದಿದೆ. ವಿನೋದ್ ಎಂಬವರ ಮಾಲಕತ್ವದಲ್ಲಿರುವ ಮಾರುತಿ 800 ಕಾರು ಬೆಂಕಿಗಾಹುತಿಯಾಗಿದೆ. ಘಟನೆ ವೇಳೆ ಈ ಕಾರನ್ನು ಅಶ್ರಫ್ ಎಂಬವರು ಚಲಾಯಿಸುತ್ತಿದ್ದರು. ಅದ್ರುಕುಳಿಯ ಏರು ರಸ್ತೆಯಲ್ಲಿ ಕಾರು ಸಂಚರಿಸುತ್ತಿದ್ದ ವೇಳೆ ಅದರ ಬ್ರೇಕ್ ವಿಫಲಗೊಂಡಿತ್ತು. ಈ ವೇಳೆ ಚಾಲಕ ಅದನ್ನು ಹಿಂದಕ್ಕೆ ಸರಿಸಿದಾಗ ಕಾಂಕ್ರೀಟ್ ಗೋಡೆಗೆ ಢಿಕ್ಕಿ ಹೊಡೆದು ನಿಂತಿತ್ತು. ಈ ವೇಳೆ ಕಾರಿನೊಳಗೆ ಬೆಂಕಿ ಕಾಣಿಸಿಕೊಂಡಿತ್ತೆನ್ನಲಾಗಿದೆ. ಅದನ್ನು …

ದಂಪತಿ ತೋಟದ ಕೆರೆಯಲ್ಲಿ ಸಾವನ್ನಪ್ಪಿದಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ದಂಪತಿ ತೋಟದ ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ವೆಳ್ಳರಿ ಕುಂಡ್ ಮಾಲೋಂ ಕಾರ್ಯೋಟ್ ಚಾಲ್ ತಡತ್ತಿಲ್ ವೀಟಿಲ್‌ನ ಸಾಬು (56) ಮತ್ತು ಅವರ ಪತ್ನಿ ಸಜಿ ಸಾಬು (52) ಸಾವನ್ನಪ್ಪಿದ ದುರ್ದೈವಿಗಳಾದ ದಂಪತಿ. ಇವರು ನಿನ್ನೆ ಬೆಳಿಗ್ಗೆ ತಮ್ಮ  ಕೃಷಿ ತೋಟಕ್ಕೆ ಹೋಗಿದ್ದರು. ಮಧ್ಯಾಹ್ನ ಕಳೆದರೂ ಮನೆಗೆ ಹಿಂತಿರುಗದೇ ಇರುವುದನ್ನು ಗಮನಿಸಿದ ಅವರ ಏಕ ಪುತ್ರ ಮೆಲ್ವಿನ್ ಕೃಷಿ ತೋಟಕ್ಕೆ ಹೋಗಿ ಹುಡುಕಾಟದಲ್ಲಿ ತೊಡಗಿದಾಗ ದಂಪತಿ ಅಲ್ಲಿನ ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. …

ಕೆಂಪು ಕಲ್ಲು ಅನಧಿಕೃತ ಸಾಗಾಟ: ಲಾರಿ ವಶ; ಚಾಲಕ ಸೆರೆ

ಕುಂಬಳೆ: ಅನಧಿಕೃತವಾಗಿ ಕೆಂಪು ಕಲ್ಲು ಹಾಗೂ ಮಣ್ಣು ಸಾಗಾಟ ದಂಧೆಯ ವಿರುದ್ಧ   ಪೊಲೀಸರು  ಕಾರ್ಯಾಚರಣೆ ಆರಂಭಿಸಿದ್ದಾರೆ. ಇದರಂತೆ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಅನೂಪ್‌ಕೃಷ್ಣ ಆರ್.ಪಿ, ಎಸ್‌ಐ ಕೆ.ಪಿ. ಗಣೇಶ್ ನೇತೃತ್ವದಲ್ಲಿ ನಿನ್ನೆ ರಾತ್ರಿ ನಡೆಸಿದ ಕಾರ್ಯಾಚ ರಣೆಯಲ್ಲಿ  ನಾಯ್ಕಾಪು ಬಳಿಯ ಪೆರ್ಣೆಯಿಂದ  ಕೆಂಪುಕಲ್ಲು ಸಹಿತ ಲಾರಿಯನ್ನು ವಶಕ್ಕೆ ತೆಗೆಯಲಾಗಿದೆ. ಈ ಸಂಬಂಧ ಲಾರಿಯ ಚಾಲಕ  ಕಲ್ಲಿಕೋಟೆ ಕರಿಪ್ಪೂರ್ ನಿವಾಸಿ ಕೃಷ್ಣದಾಸ್ (35) ಎಂಬಾತನನ್ನು  ಬಂಧಿಸಲಾಗಿದೆ.  ಕುಂಬಳೆ ಠಾಣೆ ವ್ಯಾಪ್ತಿ ಪ್ರದೇಶದಿಂದ   ಮಣ್ಣು ಹಾಗೂ ಕೆಂಪು ಕಲ್ಲುಗಳನ್ನು  ಇತರ …

ಕಾಲೇಜು ಯೂನಿಯನ್ ಚುನಾವಣೆ: ಕುಂಬಳೆಯಲ್ಲಿ ಘರ್ಷಣೆಯ ಹಂತಕ್ಕೆ ತಲುಪಿದ ವಿಜಯೋತ್ಸವ

ಕುಂಬಳೆ:  ಕಾಲೇಜು ಯೂನಿಯನ್ ಚುನಾವಣೆಯ ಬಳಿಕ ಕುಂಬಳೆಯಲ್ಲಿ ಎಬಿವಿಪಿ ಹಾಗೂ ಎಸ್‌ಎಫ್‌ಐ ನಡೆಸಿದ  ವಿಜಯೋತ್ಸವ ಮೆರವಣಿಗೆ ಸಂಘರ್ಷಾವಸ್ಥೆಯ ಸ್ಥಿತಿಗೆ ತಲುಪಿತ್ತು.  ಕೂಡಲೇ ಅಲ್ಲಿಗಾಗಮಿಸಿದ ಪೊಲೀಸರು  ಪರಿಸ್ಥಿತಿಯನ್ನು ಹತೋ ಟಿಗೆ ತಂದರು. ಕುಂಬಳೆ ಐಎಚ್‌ಆರ್‌ಡಿ ಕಾಲೇಜಿನ 15 ಸೀಟುಗಳ ಪೈಕಿ 9 ಸೀಟುಗಳನ್ನು ಎಬಿವಿಪಿ ಹಾಗೂ 5ರಲ್ಲಿ ಎಸ್‌ಎಫ್‌ಐ ಗೆಲುವು ಸಾಧಿಸಿತ್ತು. ಒಂದು ಸೀಟನ್ನು  ಕೆಎಸ್‌ಯು-ಎಂಎಸ್‌ಎಫ್ ಒಕ್ಕೂಟ ಗೆದ್ದುಕೊಂ ಡಿತ್ತು. ಫಲಿತಾಂಶ ಪ್ರಕಟಗೊಂಡ ಬಳಿಕ  ಗೆಲುವು ಸಾಧಿಸಿದ ಅಭ್ಯರ್ಥಿಗಳ ಸಹಿತ ವಿದ್ಯಾರ್ಥಿಗಳು  ವಿಜಯೋತ್ಸವ ಮೆರವಣಿಗೆ ನಡೆಸಿದ್ದಾರೆ. ಎಬಿವಿಪಿ ಹಾಗೂ …

ಮುಂಡೋಳ್ ಶ್ರೀ ಮಹಾವಿಷ್ಣು ದುರ್ಗಾ ಪರಮೇಶ್ವರಿ ಶಾಸ್ತಾ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಮಹಾಸಭೆ ನಾಳೆ

ಮುಳ್ಳೇರಿಯ: ಮುಂಡೋಳು ಶ್ರೀ ಮಹಾವಿಷ್ಣು ದುರ್ಗಾ ಪರಮೇಶ್ವರಿ ಶಾಸ್ತಾರ ಕ್ಷೇತ್ರದ ಪುನರುದ್ಧಾರ ಕಾಮಗಾರಿಗಳಿಗಾಗಿ ರಚಿಸಲಾದ ಸಮಿತಿಯ ವಿಸ್ತೃತ ಮಹಾ ಸಭೆ ನಾಳೆ (20-09-2026) ಬೆಳಿಗ್ಗೆ 10 ಗಂಟೆಗೆ ಕ್ಷೇತ್ರದ ಆಡಿಟೋರಿಯಂನಲ್ಲಿ ನಡೆಯಲಿದೆ. ಎಲ್ಲಾ ಭಕ್ತಾದಿಗಳು ಸರಿಯಾದ ಸಮಯಕ್ಕೆ ಸಭೆಗೆ ಆಗಮಿಸಿ ಯಶಸ್ವೀ ಗೊಳಿಸಬೇಕೆಂದು ಕ್ಷೇತ್ರ ಆಡಳಿತ ಮೊಕ್ತೇಸರರು ವಿನಂತಿಸಿದ್ದಾರೆ.

‘ಕಾರವಲ್’ ವರದಿ ಫಲಶ್ರುತಿ:  ಕುಂಬಳೆ ದೇವಿನಗರದಲ್ಲಿ ಹಾನಿಗೀಡಾದ ಸರ್ವೀಸ್ ರಸ್ತೆ ದುರಸ್ತಿ

ಕುಂಬಳೆ: ಇಲ್ಲಿನ ದೇವಿ ನಗರದಲ್ಲಿ ಹಾನಿಗೀಡಾದ ಸರ್ವೀಸ್ ರಸ್ತೆಯನ್ನು ಅಧಿಕಾರಿಗಳು ದುರಸ್ತಿಗೊ ಳಿಸಿದ್ದಾರೆ. ಒಂದು ವಾರ ಹಿಂದೆ ಸರ್ವೀಸ್ ರಸ್ತೆಯ ಚರಂಡಿ ಮೇಲೆ ಸ್ಥಾಪಿಸಿದ್ದ ಸ್ಲ್ಯಾಬ್ ಘನ ವಾಹನ ಸಂಚರಿಸಿ ಹಾನಿಗೀಡಾಗಿತ್ತು. ಇದರಿಂದ ಅಧಿಕಾರಿಗಳು ಅಲ್ಲಿ ಪ್ಲಾಸ್ಟಿಕ್ ಬಾರಿಕೇಡ್‌ಗಳನ್ನು  ಇರಿಸಿ  ವಾಹನಗಳಿಗೆ ನಿಯಂತ್ರಣ  ಏರ್ಪಡಿ ಸಿದ್ದರು. ಇದೇ ವೇಳೆ  ದುರಸ್ತಿ ಕಾರ್ಯಗಳನ್ನು ನಡೆಸಿ  ಸುಗಮ ವಾಹನ ಸಂಚಾರಕ್ಕೆ  ಕ್ರಮ ಕೈಗೊಳ್ಳಲು  ಅಧಿಕಾರಿಗಳು  ಮುಂದಾಗಿರಲಿಲ್ಲ. ಈ ಬಗ್ಗೆ  ‘ಕಾರವಲ್’  ಈ ತಿಂಗಳ ೧೪ರಂದು ವರದಿ ಪ್ರಕಟಿಸಿತ್ತು. ವರದಿ  ಗಮನಕ್ಕೆ …