ಪೈವಳಿಕೆ: ನಿರಂತರ ವಿದ್ಯುತ್ ಮೊಟಕು ಉಂಟಾಗುತ್ತಿರುವುದನ್ನು ಪ್ರತಿಭಟಿಸಿ ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಕೆಎಸ್‌ಇಬಿಗೆ ದೊಂದಿ ಮೆರವಣಿಗೆ ನಡೆಸಲಾಯಿತು. ಜಿಲ್ಲಾ ಕಾರ್ಯ ದರ್ಶಿ ಲೋಕೇಶ್ ನೋಂಡ ಉದ್ಘಾಟಿಸಿದರು. ಸತ್ಯಶಂಕರ ಭಟ್ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಮಾತನಾಡಿದರು.
ವಿದ್ಯುತ್ ಕಡಿತದಿಂದ ಅಡಿಕೆ, ತೆಂಗು ಕೃಷಿಕರು, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ಎಲ್ಲಾ ಉಚಿತ ನೀಡುತ್ತೇವೆ ಎಂದು ಅಧಿಕಾರಕ್ಕೇರಿದ ಸರಕಾರ ಪವರ್‌ಕಟ್ ಕೂಡಾ ಉಚಿತವಾಗಿ ನೀಡುತ್ತಿದೆ ಎಂದು ಅಪಹಾಸ್ಯ ಮಾಡಿದರು. ಮುಖಂಡರಾದ ಸಲೀಲ್ ಮಾಸ್ತರ್, ಸದಾಶಿವ ಚೇರಾಲ್, ಪ್ರವೀಣ್ ರೈ ಪಟ್ಲ, ಕೀರ್ತಿ ಭಟ್, ಬಾಲಕೃಷ್ಣ ಗಾಣಿಗ, ಶ್ರೀಧರ ಬದಿಯಾರ್, ಪಿ.ಕೆ. ಬಲ್ಲಾಳ್, ಸನತ್ ರೈ, ರಮೇಶ್ ಅಟ್ಟೆಗೋಳಿ, ರಾಮ ಏದಾರ್, ಮನೋಹರ ಆಚಾರ್ಯ, ಗಣೇಶ್ ಕಲ್ಲಗದ್ದೆ, ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ, ಗಣೇಶ್ ಪ್ರಸಾದ್ ಭಾಗವಹಿಸಿ ಮಾತನಾಡಿದರು.






