ಅಭಿಭಾಷಕ ಪರಿಷತ್ ಕುಟುಂಬ ಸಂಗಮ

ಕಾಸರಗೋಡು: ಅಭಿಭಾಷಕ ಪರಿಷತ್ ಕುಟುಂಬ ಸಂಗಮವನ್ನು ಚಿನ್ಮಯ ಮಿಷನ್ ಬ್ರಹ್ಮಚಾರಿಣಿ ದಿಶಾ ಚೈತನ್ಯ ಉದ್ಘಾಟಿಸಿದರು. ಪರಿಷತ್ ಜಿಲ್ಲಾಧ್ಯಕ್ಷ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವೆಯಲ್ಲಿ ೫೦ ವರ್ಷ ಪೂರ್ತಿಗೊಳಿಸಿದ ನ್ಯಾಯವಾದಿ ಸಿ. ದಾಮೋದರನ್‌ರನ್ನು ಗೌರವಿಸಲಾಯಿತು. ವಿವಿಧ ಪರೀಕ್ಷೆಗಳಲ್ಲಿ ಉನ್ನತ ಜಯಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪರಿಷತ್ ರಾಜ್ಯ ಉಪಾಧ್ಯಕ್ಷ ಬಿ. ರವೀಂದ್ರನ್, ಕಾಞಂಗಾಡ್ ಘಟಕ ಅಧ್ಯಕ್ಷ ಕೆ.ಜಿ. ಅನಿಲ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಕೆ.ಜೆ. ನವೀನ್‌ರಾಜ್ ಸ್ವಾಗತಿಸಿ, ಘಟಕ ಅಧ್ಯಕ್ಷ …

ಹೊಸ ಬಸ್ ನಿಲ್ದಾಣದ ಶಾಪಿಂಗ್ ಕಾಂಪ್ಲೆಕ್ಸ್ ಸನ್‌ಶೇಡ್‌ನಲ್ಲಿ ಬೆಳೆಯುತ್ತಿರುವ ಆಲದ ಮರ: ಕಟ್ಟಡಕ್ಕೆ ಬೆದರಿಕೆ

ಕಾಸರಗೋಡು: ಕೋಟ್ಯಂತರ ರೂ. ಉಪಯೋಗಿಸಿ ನಿರ್ಮಿಸಿದ ಹಾಗೂ ನಗರಸಭೆಗೆ ಪ್ರತೀ ತಿಂಗಳು ಆದಾಯ ತರುತ್ತಿರುವ ಕಾಸರಗೋಡು ಹೊಸ ಬಸ್ ನಿಲ್ದಾಣದ ಶಾಪಿಂಗ್ ಕಾಂಪ್ಲೆಕ್ಸ್ ಅಪಾಯಕರವಾದ ಸ್ಥಿತಿಗೆ ಸಾಗುತ್ತಿದೆ. ಶಾಪಿಂಗ್ ಕಾಂಪ್ಲೆಕ್ಸ್‌ನ ಮೇಲಿನ ಮಹಡಿಯ ಸನ್‌ಶೇಡ್‌ಗೆ ಹೊಂದಿಕೊಂಡು ಆಲದಮರವೊಂದು ಬೆಳೆಯುತ್ತಿದೆ. ಕಳೆದ ೧೦ ವರ್ಷಕ್ಕಿಂತ ಹೆಚ್ಚಾಗಿ ಈ ಮರ ಇಲ್ಲಿ ಬೆಳೆಯುತ್ತಿದೆ. ಈ ರೀತಿಯ ಸಂದರ್ಭಗಳಲ್ಲಿ ಅದನ್ನು ಚಿತ್ರ ಸಹಿತ ‘ಕಾರವಲ್’ ಪ್ರಕಟಿಸಿತ್ತು. ಪತ್ರಿಕೆಯ ಸುದ್ದಿಯ ಬೆನ್ನಲ್ಲೇ ನಗರಸಭೆ ಮರವನ್ನು ಅದರ ಬುಡದಿಂದಲೇ ಕಡಿದು ತೆರವುಗೊಳಿಸಿದ್ದರು. ಈ ರೀತಿಯಲ್ಲಿ …

ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಸರಕಾರಿ ಬಾವಿಗಳ ದುರಸ್ತಿ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್‌ನ ವಿವಿಧ ವಾರ್ಡ್ಗಳಲ್ಲಿರುವ ಸರಕಾರಿ ಬಾವಿಯನ್ನು ಅಭಿವೃದ್ದಿ ಗೊಳಿಸಲು ಕ್ರಮಕೈಗೊಳ್ಳಲಾಗಿದೆ. ವಿವಿಧೆಡೆ ಬಾವಿಗಳು ಶೋಚನೀಯÁ ವಸ್ಥೆಯಲ್ಲಿದ್ದು, ಸ್ಥಳೀಯರಿಗೆ ನೀರು ಉಪಯೋಗಿಸಲು ಸಾಧ್ಯವಾಗದ ಸ್ಥಿತಿ ಯಲ್ಲಿತ್ತು. ಈಗಾಗಲೇ ಪುಳಿಕುತ್ತಿ, ಪ್ರತಾಪನಗರ ಸಹಿತ ಹಲವಾರು ವಾರ್ಡ್ಗಳಲ್ಲಿ ಬಾವಿಗಳ ಅಭಿವೃದ್ದಿ ಕಾರ್ಯಗಳು ನಡೆದಿವೆ. ಬಾವಿಯ ಸುತ್ತುಗೋಡೆ, ನೆಲಕ್ಕೆ ಸಾರಣೆ, ಮೇಲ್ಭಾಗಕ್ಕೆ ಕಬ್ಬಿಣದ ಜಾಲಿಯನ್ನು ಅಳವಡಿಸಿ ನವೀಕರಿಸಲಾಗಿದೆ. ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದ ಪರಿಸರ ದಲ್ಲಿರುವ ಬಾವಿಯ ಶೋಚನೀ ಯÁವಸ್ಥೆಯ ಬಗ್ಗೆ ಕಾರವಲ್ 2024 ಮಾರ್ಚ್ನಲ್ಲಿ …

ಹೊಳೆಯಿಂದ ಹೊಯ್ಗೆ ಸಂಗ್ರಹಕ್ಕೆ ಸರಕಾರದಿಂದ ಕ್ರಮ

ಕಾಸರಗೋಡು: ರಾಜ್ಯದ 17 ನದಿಗಳಿಂದ ಹೊಯ್ಗೆ ಸಂಗ್ರಹ ನಡೆಸಲು ಸರಕಾರ ಕ್ರಮ ಕೈಗೊಂಡಿದೆ. ಹೊಯ್ಗೆ ಆಡಿಟ್ ಪ್ರಕಾರ ಸಂಗ್ರಹಕ್ಕೆ ಯೋಗ್ಯವೆಂದು ಪತ್ತೆಹಚ್ಚಿದ 1.7 ಕೋಟಿ ಟನ್ ಹೊಯ್ಗೆ ನದಿಗಳಿಂದ ಡಿಸೆಂಬರ್ ವರೆಗೆ ಸಂಗ್ರಹಿಸಲಿರುವ ಕ್ರಮ ಈಗ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಉಪ್ಪಳ, ಮೊಗ್ರಾಲ್, ಚಂದ್ರಗಿರಿ ಹೊಳೆಗಳಿಂದ ಹೊಯ್ಗೆ ಸಂಗ್ರಹಕ್ಕೆ ಅನುಮತಿ ಲಭಿಸಲಿದೆ. ಇದರೊಂದಿಗೆ ಜಿಲ್ಲೆಯ ಅನಧಿಕೃತ ಹೊಯ್ಗೆ ಸಾಗಾಟಕ್ಕೆ ಮೂಗುದಾರ ಹಾಕಬಹುದೆಂದು ನಿರೀಕ್ಷಿಸಲಾಗಿದೆ. ಹೊಳೆಗಳಲ್ಲಿ ಅಪರಿಮಿತವಾಗಿ ಹೊಯ್ಗೆ ಸಂಗ್ರಹ ರಾಶಿ ಬಿದ್ದಿರುವುದು ಸ್ವಾಭಾವಿಕ ಹರಿವಿಗೆ ತಡೆಯಾಗುತ್ತಿದೆ, ನದಿ ತಟದಲ್ಲಿ …

ಎನ್. ಭಾಸ್ಕರನ್ ನಿಧನ

 ಕೋಟೂರು: ಇಲ್ಲಿಗೆ ಸಮೀಪದ ಚೀರಂಕೋಡ್ ನಿವಾಸಿ ಎನ್. ಭಾಸ್ಕರನ್ (66) ನಿಧನ ಹೊಂದಿದರು. ಮೃತರು ಪತ್ನಿ ಸುಜಾತ, ಮಕ್ಕಳಾದ ಕವಿತ, ಅಜಯ್ ಕೃಷ್ಣನ್, ಅಳಿಯ ಡಾ. ಅಶೋಕನ್, ಸಹೋದರರಾದ ಕುಂಞಿಕಣ್ಣನ್ ಮಣಿಯಾಣಿ, ಕಮ್ಮಾರನ್, ಸುಧಾಮನ್, ಸಹೋದರಿ ಯರಾದ ರಾಜೀವಿ, ಭಾರ್ಗವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪಿ. ರಾಮಚಂದ್ರ ಬಲ್ಲಾಳ್ ನಿಧನ

ಪೆರ್ಲ: ಮೂಲತಃ ಬೆಳ್ಳೂರು ಅಡ್ವಳ ನಿವಾಸಿಯಾಗಿದ್ದ, ಈಗ ಶೇಣಿಯಲ್ಲಿ ವಾಸವಾಗಿದ್ದ ಪಿ. ರಾಮಚಂದ್ರ ಬಲ್ಲಾಳ್ (60) ನಿಧನ ಹೊಂದಿದರು. ಅಲ್ಪ ಸಮಯದಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿನ್ನೆ ನಿಧನ ಸಂಭವಿಸಿದೆ. ಮೃತರು ಪತ್ನಿ ಸುಕನ್ಯಾ, ಮಕ್ಕಳಾದ ಮಂಜುಶ್ರೀ, ನೇತ್ರಾ, ಸಹೋದರ ಗೋಪಾಲಕೃಷ್ಣ ಪಿ, ಸಹೋದರಿಯರಾದ ಪದ್ಮಾವತಿ, ಲಲಿತಾ, ಗಿರಿಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.