ಕೇರಳ ಕರ್ನಾಟಕ ಜಾನಪದ ಉತ್ಸವ ಕೊಚ್ಚಿಯಲ್ಲಿ 27ರಂದು ಪದಗ್ರಹಣ, ಪ್ರಶಸ್ತಿ ಪ್ರದಾನ ಸಮಾರಂಭ, ಕೃತಿ ಬಿಡುಗಡೆ

ಕಾಸರಗೋಡು:ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಜಾನಪದ ಪರಿಷತ್ತು (ಕಜಾಪ) ಕೇರಳ ಗಡಿನಾಡ ಘಟಕದ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 27ರಂದು ಕೊಚ್ಚಿಯ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಷನ್ ಸೆಂಟರ್‌ನಲ್ಲಿ ‘ಕೇರಳ ಕರ್ನಾಟಕ ಜಾನಪದ ಉತ್ಸವ’, ಕಜಾಪ ಪದಾಧಿಕಾರಿಗಳ ಪದಗ್ರಹಣ, ಕೃತಿ ಬಿಡುಗಡೆ, ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮಾಜಿ ಸಚಿವ ಹಾಗೂ ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಉದ್ಘಾಟಿಸಲಿದ್ದಾರೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ …

ಬಾಣಂತಿಯ ಆರೈಕೆಗೆ ತಲುಪಿದ ಯುವತಿ ನಗ್ನ ದೃಶ್ಯ ಚಿತ್ರೀಕರಿಸಿ ಪ್ರಚಾರ: ಆರೋಪಿ ಸೆರೆ

ಕಾಸರಗೋಡು: ಬಾಣಂತಿಯ ಆರೈಕೆಗೆಂದು ತಲುಪಿ  ಯುವತಿಯ ನಗ್ನ ದೃಶ್ಯಗಳನ್ನು ಚಿತ್ರಿಸಿ ಪ್ರಚಾರಪಡಿಸಿರುವುದಾಗಿ ದೂರಲಾಗಿದೆ. ಘಟನೆಯಲ್ಲಿ ಕೇಸು ದಾಖಲಿಸಿದ ಕಾಸರಗೋಡು ನಗರ ಠಾಣೆ ಪೊಲೀಸರು ಆರೋಪಿಯಾದ 25ರ ಹರೆಯದ ಯುವತಿಯನ್ನು ಬಂಧಿಸಿದ್ದಾರೆ. ಕರ್ನಾಟಕ ನಿವಾಸಿಯಾದ ಸುಲೈಖ ರಾಸಿಯ ಸೆರೆಯಾದ ಯುವತಿ. ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 27ರ ಹರೆಯದ ಯುವತಿ ದೂರುದಾರೆಯಾಗಿದ್ದಾರೆ. ಯುವತಿಯ ಹೆರಿಗೆ ಆರೈಕೆಗಾಗಿ ಸುಲೈಖ ತಲುಪಿದ್ದಳು. ಈ ತಿಂಗಳ 7ರಿಂದ 20ರ ಮಧ್ಯೆಗಿನ ದಿನಗಳಲ್ಲಿ ಆರೈಕೆಯ ಮರೆಯಲ್ಲಿ ಯುವತಿಯ ದೃಶ್ಯಗಳನ್ನು ರಹಸ್ಯ ಕ್ಯಾಮರಾದಲ್ಲಿ …

ಹೊಳೆಯಿಂದ ಹೊಯ್ಗೆ ಸಂಗ್ರಹಕ್ಕೆ ಸರಕಾರದಿಂದ ಕ್ರಮ

ಕಾಸರಗೋಡು: ರಾಜ್ಯದ 17 ನದಿಗಳಿಂದ ಹೊಯ್ಗೆ ಸಂಗ್ರಹ ನಡೆಸಲು ಸರಕಾರ ಕ್ರಮ ಕೈಗೊಂಡಿದೆ. ಹೊಯ್ಗೆ ಆಡಿಟ್ ಪ್ರಕಾರ ಸಂಗ್ರಹಕ್ಕೆ ಯೋಗ್ಯವೆಂದು ಪತ್ತೆಹಚ್ಚಿದ 1.7 ಕೋಟಿ ಟನ್ ಹೊಯ್ಗೆ ನದಿಗಳಿಂದ ಡಿಸೆಂಬರ್ವರೆಗೆ ಸಂಗ್ರಹಿಸಲಿರುವ ಕ್ರಮ ಈಗ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಉಪ್ಪಳ, ಮೊಗ್ರಾಲ್, ಚಂದ್ರಗಿರಿ ಹೊಳೆಗಳಿಂದ ಹೊಯ್ಗೆ ಸಂಗ್ರಹಕ್ಕೆ ಅನುಮತಿ ಲಭಿಸಲಿದೆ. ಇದರೊಂದಿಗೆ ಜಿಲ್ಲೆಯ ಅನಧಿಕೃತ ಹೊಯ್ಗೆ ಸಾಗಾಟಕ್ಕೆ ಮೂಗುದಾರ ಹಾಕಬಹುದೆಂದು ನಿರೀಕ್ಷಿಸಲಾಗಿದೆ. ಹೊಳೆಗಳಲ್ಲಿ ಅಪರಿಮಿತವಾಗಿ ಹೊಯ್ಗೆ ಸಂಗ್ರಹ ರಾಶಿ ಬಿದ್ದಿರುವುದು ಸ್ವಾಭಾವಿಕ ಹರಿವಿಗೆ ತಡೆಯಾಗುತ್ತಿದೆ, ನದಿ ತಟದಲ್ಲಿ ಆಳ …

16ರ ಬಾಲಕಿಗೆ ಕಾಸರಗೋಡು ವಸತಿಗೃಹದಲ್ಲಿ ದೌರ್ಜನ್ಯ: ವ್ಲೋಗರ್ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಕೊಲ್ಲಂ ನಿವಾಸಿಯಾದ 16ರ ಹರೆಯದ ಬಾಲಕಿಗೆ ಕಾಸರಗೋಡು ನಗರದ ವಸತಿಗೃಹದಲ್ಲಿ ದೌರ್ಜನ್ಯಗೈದ ಬಗ್ಗೆ ನೀಡಿದ ದೂರಿನಂತೆ ವ್ಲೋಗರ್ ವಿರುದ್ಧ ನಗರ ಠಾಣೆ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ 36ರ ಹರೆಯದ ವ್ಯಕ್ತಿ ವಿರುದ್ಧ ಕೇಸು ದಾಖಲಿಸಲಾಗಿದೆ. ದೂರುದಾರೆಯಾದ ಬಾಲಕಿ ಮಂಗಳೂರಿನ ಒಂದು ಜಿಮ್‌ನಲ್ಲಿ ವ್ಲೋಗರ್ ಆದ ಈತನನ್ನು ಪರಿಚಯಗೊಂಡಿದ್ದಳು. ಬಳಿಕ ಇವರಿಬ್ಬರೂ ಗೆಳೆತನ ಹೊಂದಿದರು. ಅದರ ಬಳಿಕ ಬಾಲಕಿಯನ್ನು ಕಾಸರಗೋಡಿಗೆ ಕರೆತಂದು ವಸತಿಗೃಹದಲ್ಲಿ ದೌರ್ಜನ್ಯಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ತಂದೆಯ ಜೊತೆ ಹೊಳೆ ಬಳಿ ಹೋದ ಬಾಲಕ ನೀರಲ್ಲಿ ಮುಳುಗಿ ದಾರುಣ ಸಾವು

ಕಾಸರಗೋಡು: ತಂದೆ ಮತ್ತು ಸಹೋದರಿಯ ಜತೆಗೆ ಹೊಳೆ ಬಳಿಗೆ ಬಂದ ಬಾಲಕ ನೀರಲ್ಲಿ ಮುಳುಗಿ ಸಾವನ್ನ ಪ್ಪಿದ ದಾರುಣ ಘಟನೆ ಮುಟ್ಟತ್ತೋಡಿ ಬಳಿ ನಡೆದಿದೆ. ಮುಟ್ಟತ್ತೋಡಿ ಕಲ್ಲಕಟ್ಟ ಕೋಪ ಕಡಂಬ್ಬಟ್ಟಿ ಹೌಸ್‌ನ ಕೆ. ಅಬ್ದುಲ್ ರಹ್ಮಾನ್- ಆಯಿಷತ್ ಶಿಬೀನಾ ದಂಪತಿ ಪುತ್ರ, ಮಾನ್ಯ ಗ್ಲೋಬಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಎರಡನೇ ತರಗತಿ ವಿದ್ಯಾರ್ಥಿ ಕೆ.ಎ. ಅಬ್ದುಲ್ಲ (8) ಸಾವನ್ನಪ್ಪಿದ ದುರ್ದೈವಿ ಬಾಲಕ. ಗಲ್ಫ್ ಉದ್ಯೋಗಿಯಾಗಿರುವ ತಂದೆ ಅಬ್ದುಲ್ ರಹ್ಮಾನ್ ಮತ್ತು ಏಕ ಸಹೋದರಿ ಖದೀಜತ್ ಶೈಮಾ ಹಾಗೂ …

ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೈದ್ಯರ 1.19 ಕೋಟಿ ರೂ. ಲಪಟಾವಣೆ: ಆರೋಪಿ ಹೈದರಾಬಾದ್‌ನಿಂದ ಸೆರೆ

ಕಾಸರಗೋಡು: ಡಿಜಿಟಲ್ ಅರೆಸ್ಟ್‌ನ ಬೆದರಿಕೆಯೊಡ್ಡಿ 80ರ ಹರೆಯದ ವೈದ್ಯರಿಂದ   1.19 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಎಗರಿಸಿದ ಪ್ರಕಣದ ಆರೋಪಿಯನ್ನು ಹೈದರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾಸರಗೋಡು ಸೈಬರ್ ಪೊಲೀಸರ ತಂಡ ಬಂಧಿಸಿದೆ. ವಿದೇಶದಲ್ಲಿ ದುಡಿಯುತ್ತಿರುವ ಮಲಪ್ಪುರಂ ಮಲಟ್ಟೂರು ಎಡಯಾಟ್ಟೂರು ಚುರಕುತ್ ಹೌಸ್‌ನ ಶಮದ್ ಚುರಕುತ್ತ್ (34) ಬಂಧಿತ ಆರೋಪಿ. ನೀಲೇಶ್ವರ ನಿವಾಸಿಯಾಗಿರುವ ೮೦ರ ಹರೆಯದ ವೈದ್ಯರನ್ನು  ಫೋನ್ ಹಾಗೂ ವೀಡಿಯೋ  ಕಾಲ್ ಮೂಲಕ ಸಂಪರ್ಕಿಸಿ ಅವರಿಗೆ ಡಿಜಿಟಲ್ ಅರೆಸ್ಟ್ ಬೆದರಿಕೆಯೊಡ್ಡಿ 2025 ನವಂಬರ್ …

ಜೋಡುಕಲ್ಲಿನಲ್ಲಿ ಅನಧಿಕೃತ ಕಟ್ಟಡ ಮುರಿದು ತೆಗೆಯುವಂತೆ ಹೈಕೋರ್ಟ್ ಆದೇಶ

ಕುಂಬಳೆ: ಮಂಗಲ್ಪಾಡಿ ಪಂಚಾಯತ್‌ನ ಜೋಡುಕಲ್ಲಿನಲ್ಲಿ  ಲೋಕೋಪಯೋಗಿ ಇಲಾಖೆಯ ಸ್ಥಳದಲ್ಲಿ ನಿರ್ಮಿಸಿದ ಅನಧಿಕೃತ ಕಟ್ಟಡವನ್ನು  ಮುರಿದು ತೆಗೆಯುವಂತೆ  ಹೈಕೋರ್ಟ್ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದೆ. ಉಪ್ಪಳ-ಕನ್ಯಾನ ರಸ್ತೆಯ ಬೇಕೂರು ಗ್ರಾಮಕ್ಕೊಳಪಟ್ಟ ಲೋಕೋಪಯೋಗಿ ಇಲಾಖೆಯ ಸ್ಥಳದಲ್ಲಿ ಅನಧಿಕೃತ ನಿರ್ಮಾಣ ನಡೆಯುತ್ತಿದೆಯೆಂಬ  ಯೂತ್ ಲೀಗ್ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್‌ರ ದೂರಿನ ಮೇರೆಗೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ವಿಲ್ಲೇಜ್‌ನ 8/121 ಸರ್ವೇ ನಂಬ್ರದಲ್ಲಿ ಒಳಗೊಂಡ ಸ್ಥಳದಲ್ಲಿ ಕಾನೂನು ವಿರುದ್ಧವಾಗಿ ಅತಿಕ್ರಮಣ ನಡೆಯುತ್ತಿದೆಯೆಂದು ದೂರಿನಲ್ಲಿ ಆರೋಪಿಸಲಾಗಿದೆ. ಜೋಡುಕಲ್ಲು ಗ್ರಾಮೀಣ ಬ್ಯಾಂಕ್‌ನ …

ಎಸ್‌ಎನ್‌ಡಿಪಿ ಕಾಸರಗೋಡು ಯೂನಿಯನ್‌ನಿಂದ ಶ್ರೀ ನಾರಾಯಣಗುರು ಸಮಾಧಿ ದಿನಾಚರಣೆ

ಕಾಸರಗೋಡು: ಎಸ್‌ಎನ್‌ಡಿಪಿ ಕಾಸರಗೋಡು ಯೂನಿಯನ್‌ನ ಆಶ್ರ ಯದಲ್ಲಿ ಶ್ರೀ ನಾರಾಯಣ ಗುರುಗಳ 99ನೇ ಸಮಾಧಿ ದಿನಾಚರಣೆ ಕಾರ್ಯ ಕ್ರಮ ನಡೆಯಿತು. ಕಾಸರಗೋಡು ಯೂನಿಯನ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು  ಯೋಗಂ ಡೈರೆಕ್ಟರ್ ನ್ಯಾಯವಾದಿ ಪಿ.ಕೆ. ವಿಜಯನ್ ಉದ್ಘಾಟಿಸಿದರು. ಎಸ್‌ಎನ್‌ಡಿಪಿ ಯೂನಿಯನ್ ಸೆಕ್ರೆಟರಿ ಗಣೇಶ್ ಪಾರೆಕಟ್ಟೆ, ಉಪಾಧ್ಯಕ್ಷ  ಎ.ಟಿ. ವಿಜಯನ್, ಮೋಹನನ್ ಮೀಪುಗುರಿ, ನಾಗೇಶ್ ಕುಂಬಳೆ,  ಕೃಷ್ಣನ್ ಪಾರೆಕಟ್ಟೆ, ವಿಜಯನ್ ಮನ್ನಿಪ್ಪಾಡಿ, ಕೆ. ರಾಜೇಶ್ ಮಾತನಾಡಿದರು. 

ಬೀದಿ ನಾಯಿಗಳ ಹಾವಳಿ: ಮಂಜೇಶ್ವರ ಪಂ.ನಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ

ಮಂಜೇಶ್ವರ: ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಮುಕ್ತಿ ನೀಡಲು ಪಂಚಾ ಯತ್ ಆಡಳಿತ ಮಂಡಳಿ ಸೂಕ್ತ ಕ್ರಮಕ್ಕೆ ಮುಂದಾಗಿದೆ. ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಂ. ಅಧ್ಯಕ್ಷರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಹಾಗೂ ಸಂಬAಧಪಟ್ಟ ಹಿರಿಯ ಅಧಿಕಾರಿ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಇದರ ಫಲಶ್ರುತಿಯಾಗಿ, ಮಲಪ್ಪುರಂ ಜಿಲ್ಲೆಯಿಂದ ಆಗಮಿಸಿದ ‘ಅನಿಮಲ್ ರೆಸ್ಕ್ಯೂ ಫೋರ್ಸ್’ ತಂಡ ಪಂಚಾಯತ್‌ನ ವಾರ್ಡ್ಗಳಿಗೆ ತೆರಳಿ ಬೀದಿ ನಾಯಿಗಳಿಗೆ ರೇಬಿಸ್ ನಿರೋಧಕ ಚುಚ್ಚುಮದ್ದು ನೀಡುವ ಕಾರ್ಯವನ್ನು …

ಕಾಡು ಹಂದಿ ಸ್ಕೂಟಿಗೆ ಢಿಕ್ಕಿ ಹೊಡೆದು ನರ್ಸಿಂಗ್  ವಿದ್ಯಾರ್ಥಿನಿ ಸಹಿತ ಇಬ್ಬರಿಗೆ  ಗಾಯ

ಬೋವಿಕಾನ: ಇಲ್ಲಿಗೆ ಸಮೀಪದ ಮಂಜಕ್ಕಲ್ ಎಂಬಲ್ಲಿ ಕಾಡುಹಂದಿ ಸ್ಕೂಟಿಗೆ ಢಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ. ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿನಿ ಕರಿವೇಡಗಂ ತಂಗೆತಡ್ಕದ ಸಿ.ಎಂ. ಜಿತಿನ ಹಾಗೂ ವಾಹನ ಚಲಾಯಿಸುತ್ತಿದ್ದ ಆಲತ್ತುಂಕಡವ್‌ನ ಪಿ. ಅಮಲ್‌ರಾಜ್ ಗಾಯಗೊಂಡವರು. ನಿನ್ನೆ ಬೆಳಿಗ್ಗೆ ಮಂಜಕ್ಕಲ್‌ನಲ್ಲಿ ಕಾಡು ಹಂದಿ ಆಕ್ರಮಿಸಿದೆ. ಮನೆಯಿಂದ ಕಾಸರಗೋಡಿಗೆ ಆಗಮಿಸುತ್ತಿದ್ದಾಗ ರಸ್ತೆ ಅಡ್ಡ ದಾಟುತ್ತಿದ್ದ ಕಾಡು ಹಂದಿ ಸ್ಕೂಟಿಗೆ ಢಿಕ್ಕಿ ಹೊಡೆದಿದ್ದು, ಸವಾರರು ದೂರಕ್ಕೆಸೆಯಲ್ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಎದೆಗೆ ಗಾಯಗೊಂಡ ಜಿತಿನಳನ್ನು ಕಾಸರಗೋಡು ಆಸ್ಪತ್ರೆಗೂ, ಬಳಿಕ ಮಂಗಳೂರಿನ ಆಸ್ಪತ್ರೆಗೂ ದಾಖಲಿಸಲಾಗಿದೆ. …